ಐಪಿಎಲ್ 2024 : ಗುಜರಾತ್‌ ಟೈಟಾನ್ಸ್‌ಗೆ ಶುಭಮನ್‌ ಗಿಲ್‌ ನಾಯಕ

IPL 2024 Shubman Gill is the captain for Gujarat Titans : ಹಾರ್ದಿಕ್‌ ಪಾಂಡ್ಯ ಮುಂಬೈ ಇಂಡಿಯನ್ಸ್‌ ತಂಡ ಸೇರಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಗುಜರಾತ್‌ ಟೈಟಾನ್ಸ್‌ ತಂಡಕ್ಕೆ ಶುಭಮನ್‌ ಗಿಲ್‌ ನಾಯಕರಾಗಿ ಆಯ್ಕೆಯಾಗಿದ್ದಾರೆ

IPL 2024 Shubman Gill  : ಗುಜರಾತ್‌ ಟೈಟಾನ್ಸ್‌ (Gujarat Titans) ತಂಡದ ನಾಯಕ ಹಾರ್ದಿಕ್‌ ಪಾಂಡ್ಯ (Hardik Pandya) ಮುಂಬೈ ಇಂಡಿಯನ್ಸ್‌ ತಂಡ ಸೇರಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಗುಜರಾತ್‌ ಟೈಟಾನ್ಸ್‌ ತಂಡಕ್ಕೆ ಶುಭಮನ್‌ ಗಿಲ್‌ (Shuban Gill) ನಾಯಕರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಗುಜರಾತ್‌ ತಂಡ ಹೊಸ ನಾಯಕನೊಂದಿಗೆ ಐಪಿಎಲ್‌ 2024ಕ್ಕೆ ಕಣಕ್ಕೆ ಇಳಿಯಲಿದೆ.

IPL 2024 Shubman Gill is the captain for Gujarat Titans
Image Credit to Original Source

ಕಳೆದ ಎರಡು ವರ್ಷಗಳಿಂದಲೂ ಐಪಿಎಲ್‌ನಲ್ಲಿ ಅದ್ಬುತ ಪ್ರದರ್ಶನ ನೀಡಿರುವ ಹಾರ್ದಿಕ್‌ ಪಾಂಡ್ಯ ನಾಯಕತ್ವದ ಗುಜರಾತ್‌ ಟೈಟಾನ್ಸ್‌ ತಂಡ ಒಂದು ಬಾರಿ ಐಪಿಎಲ್‌ ಟ್ರೋಫಿಯನ್ನು ಜಯಿಸಿದ್ದರೆ, ಒಂದು ಬಾರಿ ರನ್ನರ್ಸ್‌ ಅಪ್‌ ಪ್ರಶಸ್ತಿಯನ್ನು ಮುಡಿಗೇರಿಸಿ ಕೊಂಡಿತ್ತು. ಆದರೆ ಮುಂದಿನ ಬಾರಿ ಹಾರ್ದಿಕ್‌ ಪಾಂಡ್ಯ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಶುಭಮನ್‌ ಗಿಲ್‌ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಮಾತ್ರವಲ್ಲ ಐಪಿಎಲ್‌ ಟ್ರೋಫಿ ಗೆಲುವಿನಲ್ಲಿಯೂ ಶುಭಮನ್‌ ಗಿಲ್‌ ಪ್ರಮುಖ ಪಾತ್ರವಹಿಸಿದ್ದರು. ಗುಜರಾತ್‌ ಟೈಟಾನ್ಸ್‌ ತಂಡ ಶುಭಮನ್‌ ಗಿಲ್‌ ಅವರನ್ನು 7 ಕೋಟಿ ರೂ.ಗೆ ಖರೀದಿ ಮಾಡಿತ್ತು.

ಇದನ್ನೂ ಓದಿ : IPL 2024 : ಲಕ್ನೋ ಸೂಪರ್‌ ಜೈಂಟ್ಸ್‌ಗೆ ರಾಹುಲ್‌ ದ್ರಾವಿಡ್‌ ಮೆಂಟರ್‌ ? ಐಪಿಎಲ್‌ನತ್ತ ಟೀಂ ಇಂಡಿಯಾ ಕೋಚ್‌ ಚಿತ್ತ

ಐಪಿಎಲ್‌ ಹರಾಜಿಗೂ ಮೊದಲೇ ಮುಂಬೈ ಇಂಡಿಯನ್ಸ್‌ ತಂಡದಲ್ಲಿದ್ದ ಹಾರ್ದಿಕ್ ಪಾಂಡ್ಯ ಮತ್ತು ರಶೀದ್ ಖಾನ್‌ ಅವರನ್ನು ಗುಜರಾತ್ ಟೈಟಾನ್ಸ್ ತಂಡ ತಲಾ 15 ಕೋಟಿ ರೂ.ಗೆ ಖರೀದಿ ಮಾಡಿತ್ತು. ಟೀಂ ಇಂಡಿಯಾದಲ್ಲಿ ಖಾಯಂ ಸದಸ್ಯನಾಗಿರುವ ಶುಭಮನ್‌ ಗಿಲ್‌ ಏಕದಿನ ಕ್ರಿಕೆಟ್ ರಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

24ರ ಹರೆಯದ ಶುಭಮನ್ ಗಿಲ್ ಐಪಿಎಲ್‌ನ ಅತ್ಯಂತ ಕಿರಿಯ ನಾಯಕ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿರಾಟ್‌ ಕೊಹ್ಲಿ ತನ್ನ 22 ವರ್ಷಕ್ಕೆ 2011ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿ ಆಯ್ಕೆಯಾಗಿದ್ದರು. ಇದೀಗ ಶುಭಮನ್‌ ಗಿಲ್‌ ಎರಡನೇ ಅತ್ಯಂತ ಕಿರಿಯ ನಾಯಕ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ : ಆರ್‌ಸಿಬಿ ಅಲ್ಲ ಕನ್ನಡಿಗರ ತಂಡವಾಯ್ತು ಲಕ್ನೋ ಸೂಪರ್‌ ಜೈಂಟ್ಸ್‌ : ರಾಹುಲ್‌ ಜೊತೆ 4 ಮಂದಿ ಕರ್ನಾಟಕದ ಆಟಗಾರರು

ಗುಜರಾತ್‌ ತಂಡಕ್ಕೆ ಸದ್ಯ ಆಶಿಶ್‌ ನೆಹ್ರಾ ಮುಖ್ಯ ಕೋಚ್‌ ಆಗಿದ್ರೆ, ಶುಭಮನ್‌ ಗಿಲ್‌ ನಾಯಕರಾಗಿ ಕಾಣಿಸಿ ಕೊಳ್ಳಲಿದ್ದಾರೆ. ನಾಯಕನಾಗಿ ಆಯ್ಕೆಯಾದ ಬೆನ್ನಲ್ಲೇ ಶುಭಮನ್‌ ಗಿಲ್‌ ಸಂತಸ ವ್ಯಕ್ತಪಡಿಸಿದ್ದಾರೆ. ಗುಜರಾತ್‌ ಟೈಟಾನ್ಸ್‌ ತಂಡದ ನಾಯಕತ್ವ ವಹಿಸಿಕೊಳ್ಳಲು ನಾನು ಸಂತೋಷ ಪಡುತ್ತೇನೆ. ಮತ್ತು ಹೆಮ್ಮೆ ಪಡುತ್ತೇನೆ ಎಂದಿದ್ದಾರೆ.

IPL 2024 Shubman Gill is the captain for Gujarat Titans
Image Credit to Original Source

ನನ್ನ ಮೇಲೆ ನಂಬಿಕೆ ಇಟ್ಟು ನಾಯಕತ್ವ ನೀಡಿದ ಪ್ರಾಂಚೈಸಿಗೆ ನಾನು ಧನ್ಯವಾದ ಹೇಳುತ್ತೇನೆ. ಉತ್ತಮ ತಂಡವನ್ನು ಮುನ್ನೆಡೆಸಲು ನಾನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ. ಗುಜರಾತ್‌ ಟೈಟಾನ್ಸ್‌ ತಂಡದಿಂದ ಹಾರ್ದಿಕ್‌ ಪಾಂಡ್ಯ ಹೊರ ನಡೆಯುತ್ತಲೇ ರಶೀದ್‌ ಖಾನ್‌ ನಾಯಕರಾಗುತ್ತಾರೆ ಎಂಬ ಮಾತು ಕೇಳಿಬಂದಿತ್ತು.

ಇದನ್ನೂ ಓದಿ : ಮುಂಬೈ ಇಂಡಿಯನ್ಸ್‌ ಸೇರಿದ ಗುಜರಾತ್‌ ಟೈಟಾನ್ಸ್‌ ನಾಯಕ ಹಾರ್ದಿಕ್‌ ಪಾಂಡ್ಯ

ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡದಲ್ಲಿದ್ದ ವೇಳೆಯಲ್ಲಿ ಶುಭಮನ್‌ ಗಿಲ್‌ 400 ರನ್‌ಗಳಿಗಿಂತ ಅಧಿಕ ರನ್‌ ಗಳಿಸಿದ್ದರು. ಅಲ್ಲದೇ ನಂತರ ಗುಜರಾತ್‌ ಟೈಟಾನ್ಸ್‌ ತಂಡಕ್ಕೆ ಸೇರ್ಪಡೆಯಾದ ನಂತರದಲ್ಲಿ ಶುಭಮನ್‌ ಗಿಲ್‌, 2023 ರ ಋತುವಿನಲ್ಲಿ ಶುಭಮನ್ ಗಿಲ್ 3 ಶತಕ ಬಾರಿಸಿದ್ದರು. ಶುಭಮನ್‌ ಗಿಲ್‌ ಕಳೆದ ಎರಡು ವರ್ಷಗಳಿಂದಲೂ ಗುಜರಾತ್‌ ತಂಡದ ಪ್ರಮುಖ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ.

IPL 2024 Shubman Gill is the captain for Gujarat Titans

Comments are closed.