₹ 20,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಿ ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್‌ಫೋನ್‌ : Samsung Galaxy M34 5G, iQOO Z7s

ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್‌ಪೋನ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿವೆ. ಅದ್ರಲ್ಲೂ OnePlus Nord CE 3 Lite 5G ಯಿಂದ Poco X5 5G ಸ್ಮಾರ್ಟ್‌ ಪೋನ್‌ಗಳು ₹20,000ಕ್ಕೀಮತಲೂ ಕಡಿಮೆ ಬೆಲೆಯಲ್ಲಿ ದೊರೆಯುತ್ತಿದೆ.

Best Camera Samrtphone Under ₹ 20,000  : ಸ್ಮಾರ್ಟ್‌ಪೋನ್‌ ಖರೀದಿ ಮಾಡಲು ಪ್ಲ್ಯಾನ್‌ ಮಾಡಿಕೊಂಡಿದ್ದವರಿಗೆ ಇದು ಬೆಸ್ಟ್‌ ಟೈಮ್.‌ ಹಲವು ಕಂಪೆನಿಗಳು ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್‌ಪೋನ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿವೆ. ಅದ್ರಲ್ಲೂ OnePlus Nord CE 3 Lite 5G ಯಿಂದ Poco X5 5G ಸ್ಮಾರ್ಟ್‌ ಪೋನ್‌ಗಳು ₹20,000ಕ್ಕೀಮತಲೂ ಕಡಿಮೆ ಬೆಲೆಯಲ್ಲಿ ದೊರೆಯುತ್ತಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ (Samsung Galaxy M34 5G Exynos 1280) ಆಕ್ಟಾ-ಕೋರ್ ಪ್ರೊಸೆಸರ್‌ನಿಂದ ಕರ್ಯನಿರ್ವಹಿಸಲಿದೆ. ಈ ಮೊಬೈಲ್‌ ಪೋನ್‌ 20,000 ಕ್ಕಿಂತಲೂ ಕಡಿಮೆ ಬೆಲೆಗೆ ದೊರೆಯುತ್ತಿದೆ. ಗ್ರಾಹಕರು ಸಹ ಕಾರ್ಯಕ್ಷಮತೆಯಲ್ಲಿ ರಾಜಿ ಮಾಡಿಕೊಳ್ಳದೆ ನಿಮ್ಮ ಬಜೆಟ್‌ನಲ್ಲಿಯೇ ಉತ್ತಮ ಕ್ಯಾಮೆರಾ ಸ್ಮಾರ್ಟ್‌ಫೋನ್ ಖರೀದಿ ಮಾಡಬಹುದಾಗಿದೆ.

₹20,000ಕ್ಕಿಂತ ಕಡಿಮೆ ಬೆಲೆಯ ಟಾಪ್ 5 ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲಿದೆ:

Best Camera Samrtphone Under 20000 rupess Samsung Galaxy vivo
Image Credit : One plus

ಒನ್‌ಪ್ಲಸ್‌ ನೋರ್ಡ್‌ ಸಿಇ (OnePlus Nord CE 3 Lite 5G:
ಒನ್‌ಪ್ಲಸ್‌ ನೋರ್ಡ್‌ ಸಿಇ (OnePlus Nord CE 3 Lite) ಅತ್ಯುತ್ತಮ ಸ್ಮಾರ್ಟ್‌ಪೋನ್‌ ಆಗಿದ್ದು, 67W SuperVOOC ವೇಗದ ಚಾರ್ಜಿಂಗ್‌ ಸೌಲಭ್ಯವನ್ನು ಒಳಗೊಂಡಿದೆ. ಅದ್ರಲ್ಲೂ 5,000mAh ಬ್ಯಾಟರಿ ಹೊಂದಿರುವುದರಿಂದ ದೀರ್ಘ ಅವಧಿಯ ವರೆಗೆ ಮೊಬೈಲ್‌ ಬಳಕೆ ಮಾಡಬಹುದಾಗಿದೆ.

ಇದನ್ನೂ ಓದಿ : ಗುಡ್​ ನ್ಯೂಸ್​ : ಶೀಘ್ರದಲ್ಲೇ ಮಾರುಕಟ್ಟೆಗೆ ಬರ್ತಿದೆ 15 ಸಾವಿರಕ್ಕೂ ಕಡಿಮೆ ದರದ ಜಿಯೋ ಲ್ಯಾಪ್​ಟಾಪ್

108ಮೆಗಾ ಫಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೊಂದಿದ್ದು, 2MP ಮ್ಯಾಕ್ರೋ ಲೆನ್ಸ್ ಮತ್ತು 2MP ಡೆಪ್ತ್ ಕ್ಯಾಮೆರಾ ಇದ್ದು, ಅದ್ಬುತ ಚಿತ್ರಗಳನ್ನು ಸೆರೆ ಹಿಡಿಯಬಹುದಾಗಿದೆ. ಅಲ್ಲದೇ ಸೆಲ್ಪಿ ಪ್ರಿಯರಿಗಾಗಿ ಮುಂಭಾಗದಲ್ಲಿ 16MP ಕ್ಯಾಮೆರಾ ಅಳವಡಿಸಲಾಗಿದೆ.

OnePlus Nord CE 3 Lite 5G (ಪಾಸ್ಟಲ್ ಲೈಮ್, 8GB RAM, 128GB ಸಂಗ್ರಹಣೆ) ಹೊಂದಿದೆ. ಮಾರುಕಟ್ಟೆಯಲ್ಲಿ ಸದ್ಯ ₹ 19999ಕ್ಕೆ ಲಭ್ಯವಿದೆ. ಒನ್‌ ಪ್ಲಸ್‌ ಮೊಬೈಲ್‌ ಖರೀದಿ ಮಾಡಬೇಕು ಎಂಬ ಆಲೋಚನೆಯಲ್ಲಿದ್ದವರು, ಸ್ಮಾರ್ಟ್‌ಪೋನ್‌ ಖರೀದಿ ಮಾಡಲು ಇದು ಬೆಸ್ಟ್‌ ಟೈಮ್.‌

ಪೋಕೋ ಎಕ್ಸ್‌5 5ಜಿ (Poco X5 5G):
ಪೋಕೋ ಎಕ್ಸ್‌5 5ಜಿ (Poco X5 5G) 8GB RAM ಮತ್ತು 256GB ವರೆಗಿನ ಆಂತರಿಕ ಸಂಗ್ರಹಣಾ ಸಾಮರ್ಥ್ಯ ಒಳಗೊಂಡಿದೆ. 8MP ಅಲ್ಟ್ರಾ-ವೈಡ್ ಮತ್ತು 2MP ಮ್ಯಾಕ್ರೋ ಸಂವೇದಕ ಹೊಂದಿರುವ 48MP ಕ್ಯಾಮೆರಾ ಒಳಗೊಂಡಿದೆ. HDR, ನೈಟ್ ಮೋಡ್ ಮತ್ತು AI ದೃಶ್ಯ ಪತ್ತೆ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.

ಇದನ್ನೂ ಓದಿ : ಹೊಸ ಸ್ಮಾರ್ಟ್​ ವಾಚ್​ನ ಹುಡುಕಾಟದಲ್ಲಿದ್ದೀರೇ..? ಅಮೆಜಾನ್​ನಲ್ಲಿದೆ ಬಿಗ್ಗೆಸ್ಟ್​ ಆಫರ್​

ಇನ್ನು ಸೆಲ್ಪಿಪ್ರಿಯರಿಗಾಗಿಯೇ Poco X5 5G ಹ್ಯಾಂಡ್‌ಸೆಟ್ ಮುಂಭಾಗದಲ್ಲಿ 13MP ಕ್ಯಾಮೆರಾ ಅಳವಡಿಸಲಾಗಿದೆ. ಸ್ಮಾರ್ಟ್‌ಪೋನ್‌ IP53 ರೇಟಿಂಗ್‌ ಹೊಂದಿದ್ದು, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಒಳಗೊಂಡಿದೆ. 5,000mAh ಬ್ಯಾಟರಿ ಹೊಂದಿದ್ದು, 33 ವ್ಯಾಟ್ ವೇಗದ ಚಾರ್ಜಿಂಗ್ ಮೂಲಕ ಕೇವಲ 22 ನಿಮಿಷಗಳಲ್ಲಿ 0 ರಿಂದ 100% ವರೆಗೆ ಚಾರ್ಜಿಂಗ್‌ ಮಾಡಬಹುದಾಗಿದೆ.

POCO X5 5G (ಸೂಪರ್ನೋವಾ ಗ್ರೀನ್, 128 GB) ಮೊಬೈಲ್‌ ಪೋನ್‌ ಸದ್ಯ ಮಾರುಕಟ್ಟೆಯಲ್ಲಿ ಬಾರೀ ರಿಯಾಯಿತಿ ದರದಲ್ಲಿ ಲಭ್ಯವಿದ್ದು, ₹ 18999ಕ್ಕಿಂತಲೂ ಕಡಿಮೆ ಬೆಲೆಗೆ ಈ ಸ್ಮಾರ್ಟ್‌ಪೋನ್‌ ಖರೀದಿ ಮಾಡಬಹುದಾಗಿದೆ.

Best Camera Samrtphone Under 20000 rupess Samsung Galaxy vivo
Image Credit : IQOO

ಐಕ್ಯೂ Z7ಎಸ್ (iQOO Z7s):
ಐಕ್ಯೂ‌ ಕಂಪೆನಿಯ ಸ್ಮಾರ್ಟ್‌ಪೋನ್‌ಗಳು ಈಗಾಗಲೇ ಗ್ರಾಹಕರ ಗಮನ ಸೆಳೆದಿವೆ. ಅದ್ರಲ್ಲೂ ಐಕ್ಯೂ Z7ಎಸ್‌ 2400 x 1080 ಪಿಕ್ಸೆಲ್‌ ರೆಸೆಲ್ಯೂಷನ್‌ ಒಳಗೊಂಡಿದೆ. 6.38-ಇಂಚಿನ ಪೂರ್ಣ-HD+ ಡಿಸ್‌ಪ್ಲೇ ಒಳಗೊಂಡಿದೆ. ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್ ಜೊತೆಗೆ ಫನ್‌ಟಚ್ ಓಎಸ್ 13 ನೊಂದಿಗೆ ಕಾರ್ಯನಿರ್ವಹಿಸಲಿದೆ.

ಇನ್ನು ಕ್ಯಾಮೆರಾ ವಿಚಾರಕ್ಕೆ ಬಂದ್ರೆ. iQoo Z7s 5G 64-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಒಳಗೊಂಡಿದ್ದು, 2-ಮೆಗಾಪಿಕ್ಸೆಲ್ ಮ್ಯಾಕ್ರೋ ಸಂವೇದಕದೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಮತ್ತು ವೀಡಿಯೊ ಕರೆಗಳನ್ನು ಸೆರೆಹಿಡಿಯಲು 16-ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ.

ಇದನ್ನೂ ಓದಿ : ಕೇವಲ 35,000 ರೂ.ಗೆ ನಿಮ್ಮದಾಗಬಹುದು ಐಫೋನ್​ : ಈ ಚಾನ್ಸ್​ ಮಿಸ್​ ಮಾಡಿಕೊಳ್ಳಬೇಡಿ..!

iQOO Z7s ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 695 5G SoC ಮತ್ತು Adreno 619L GPU ಹೊಂದಿದೆ. 8GB ವರೆಗೆ LPDDR4x RAM ಮತ್ತು 128GB UFS 2.2 ಆಂತರಿಕ ಸಂಗ್ರಹಣೆ ಹೊಂದಿದೆ. ಅಲ್ಲದೇ ಮೈಕ್ರೋ SD ಕಾರ್ಡ್ ಬಳಸಿ 1TBವರೆಗೆ ಸಂಗ್ರಹಣಾ ಸಾಮರ್ಥ್ಯವನ್ನು ವಿಸ್ತರಣೆ ಮಾಡಬಹುದಾಗಿದೆ.

iQOO Z7s 5G (ಪೆಸಿಫಿಕ್ ನೈಟ್, 6GB RAM, 128GB ಸಂಗ್ರಹಣೆ) | ಅಲ್ಟ್ರಾ ಬ್ರೈಟ್ AMOLED ಡಿಸ್ಪ್ಲೇ | ಸ್ನಾಪ್‌ಡ್ರಾಗನ್ 695 5G 6nm ಪ್ರೊಸೆಸರ್ | 64 MP OIS ಅಲ್ಟ್ರಾ ಸ್ಟೇಬಲ್ ಕ್ಯಾಮೆರಾ | 44WFlash Charge ಮೊಬೈಲ್‌ ಇದೀಗ 29% ರಿಯಾಯಿತಿ ದರದಲ್ಲಿ ಲಭ್ಯವಿದೆ. ಹೀಗಾಗಿ ಈ ಮೊಬೈಲ್‌ ಅನ್ನು ಮಾರುಕಟ್ಟೆಯಲ್ಲಿ ಕೇವಲ ₹ 16999ಕ್ಕೆ ಖರೀದಿ ಮಾಡಬಹುದಾಗಿದೆ.

Best Camera Samrtphone Under 20000 rupess Samsung Galaxy vivo
Image Credit : Samsung

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಂ34 5ಜಿ(Samsung Galaxy M34 5G)

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಂ34 5ಜಿ 6.6-ಇಂಚಿನ ಸೂಪರ್ AMOLED ಡಿಸ್ಪ್ಲೇ ಹೊಂದಿದೆ. 120Hz ರಿಫ್ರೆಶ್ ದರ, ಪೂರ್ಣ-HD+ ರೆಸಲ್ಯೂಶನ್ (1,080×2,408 ಪಿಕ್ಸೆಲ್‌ಗಳು) ಮತ್ತು 1,000 nits ನ ಗರಿಷ್ಠ ಹೊಳಪನ್ನು ಹೊಂದಿದೆ. ಗೊರಿಲ್ಲಾ ಗ್ಲಾಸ್ 5 ಹೊಂದಿದ್ದು, ಗರಿಷ್ಠ ರಕ್ಷಣೆಯನ್ನು ನೀಡುತ್ತದೆ. ಸ್ಮಾರ್ಟ್‌ಫೋನ್ 5nm Exynos 1280 SoC ನಿಂದ ಚಾಲಿತವಾಗಿದ್ದು, 8GB ಯ RAM ಒಳಗೊಂಡಿದೆ.

ಮೊಬೈಲ್‌ ಹಿಂಭಾಗದಲ್ಲಿ ಒಟ್ಟು ಟ್ರಿಪಲ್‌ ಕ್ಯಾಮೆರಾ ಒಳಗೊಂಡಿದೆ. 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಒಳಗೊಂಡಿದೆ. ಕ್ಯಾಮರಾ ಮಾಡ್ಯೂಲ್ 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಜೊತೆಗೆ ಮೂರನೇ ಸಂವೇದಕದೊಂದಿಗೆ ವಿಶಾಲವಾದ 120-ಡಿಗ್ರಿ ಫೀಲ್ಡ್ ಆಫ್ ವ್ಯೂ ಒಳಗೊಂಡಿದೆ. ಈ ಸ್ಮಾರ್ಟ್‌ಪೋನ್‌ ಅನ್ನು ಬಜೆಟ್‌ನಲ್ಲಿ ಖರೀದಿ ಮಾಡಬಹುದಾಗಿದೆ.

ವಿವೋ ಟಿ2 ( Vivo T2 5G) :
ವಿವೋ ಟಿ2 5ಜಿ ( Vivo T2 5G) ಸ್ಮಾರ್ಟ್‌ಪೋನ್‌ ಈಗಾಗಲೇ ಗ್ರಾಹಕರ ಗಮನ ಸೆಲೆದಿದೆ. ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 695 ಆಕ್ಟಾ-ಕೋರ್ ಪ್ರೊಸೆಸರ್‌ ಒಳಗೊಂಡಿದೆ. ಅಲ್ಲದೇ 1080×2400 ಪಿಕ್ಸೆಲ್ ರೆಸಲ್ಯೂಶನ್ ಮತ್ತು 90Hz ರಿಫ್ರೆಶ್ ದರದೊಂದಿಗೆ 6.38-ಇಂಚಿನ ಪೂರ್ಣ HD+ ಡಿಸ್ಪ್ಲೇ ಹೊಂದಿದೆ. ಎರಡು ಮಾಡೆಲ್‌ಗಳಲ್ಲಿ ಲಭ್ಯವಿದ್ದು, 6GB+128GB ಮತ್ತು 8GB+128GB ಮಾದರಿಯನ್ನು ₹18,999 ಮತ್ತು ₹20,999ಕ್ಕೆ ಖರೀದಬಹುದಾಗಿದೆ.

Vivo T2 5G Android 13 ಆಪರೇಟಿಂಗ್ ಸಿಸ್ಟಮ್ ಆಧಾರಿತ FunTouch OS 13ನಲ್ಲಿ ಕಾರ್ಯನಿರ್ವಹಣೆ ಮಾಡುತ್ತದೆ. ಸ್ಮಾರ್ಟ್ಫೋನ್ f/1.79 ದ್ಯುತಿರಂಧ್ರದೊಂದಿಗೆ 64MP ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. ಇದು 2MP ಡೆಪ್ತ್ ಸೆನ್ಸರ್‌ನೊಂದಿಗೆ ಜೋಡಿಸಲ್ಪಟ್ಟಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗೆ ಅನುಕೂಲವಾಗಲಿದೆ. ಇದಕ್ಕಾಗಿಯೇ Vivo T2 5G ಮುಂಭಾಗದಲ್ಲಿ 16MP ಕ್ಯಾಮೆರಾವನ್ನು ಹೊಂದಿದೆ.

Best Camera Samrtphone Under ₹ 20,000 Samsung Galaxy vivo

Comments are closed.