ದಿನಭವಿಷ್ಯ 29 ಡಿಸೆಂಬರ್‌ 2023 : ಪುಷ್ಯ ನಕ್ಷತ್ರದ ಪ್ರಭಾವ ಯಾವರಾಶಿಗೆ ಶುಭ

Horoscope Today : ದಿನಭವಿಷ್ಯ 29 ಡಿಸೆಂಬರ್‌ 2023 ಶುಕ್ರವಾರ. ಜ್ಯೋತಿಷ್ಯದ ಪ್ರಕಾರ. ಪುಷ್ಯ ನಕ್ಷತ್ರವು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಅಲ್ಲದೇ ಕರ್ಕಾಟಕ ರಾಶಿಗೆ ಇಂದು ಚಂದ್ರನು ಸಂಚಾರ ನಡೆಸಲಿದ್ದಾನೆ. ಇದರಿಂದಾಗಿ ಮಿಥುನ ರಾಶಿ ಮತ್ತು ತುಲಾರಾಶಿಯವರು ಹಣಕಾಸಿನ ನೆರವು ಪಡೆಯಲಿದ್ದಾರೆ.

Horoscope Today : ದಿನಭವಿಷ್ಯ 29 ಡಿಸೆಂಬರ್‌ 2023 ಶುಕ್ರವಾರ. ಜ್ಯೋತಿಷ್ಯದ ಪ್ರಕಾರ. ಪುಷ್ಯ ನಕ್ಷತ್ರವು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಅಲ್ಲದೇ ಕರ್ಕಾಟಕ ರಾಶಿಗೆ ಇಂದು ಚಂದ್ರನು ಸಂಚಾರ ನಡೆಸಲಿದ್ದಾನೆ. ಇದರಿಂದಾಗಿ ಮಿಥುನ ರಾಶಿ ಮತ್ತು ತುಲಾರಾಶಿಯವರು ಹಣಕಾಸಿನ ನೆರವು ಪಡೆಯಲಿದ್ದಾರೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದವರಿಗೆ ಶುಭಸುದ್ದಿ. ಸರಕಾರಿ ಕಾರ್ಯಗಳನ್ನು ಮುಂದೂಡಿದ್ರೆ ಭವಿಷ್ಯದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ. ಮಕ್ಕಳ ವಿಚಾರದಲ್ಲಿ ಉತ್ತಮ. ವೃತ್ತಿ ಜೀವನವು ಸಂತೋಷಮಯವಾಗಿ ಇರುತ್ತದೆ. ದೂರದ ಬಂಧುಗಳ ಆಗಮನದಿಂದ ಸಂತಸ.

ವೃಷಭರಾಶಿ ದಿನಭವಿಷ್ಯ
ಸಂಗಾತಿಯೊಂದಿನ ವಾದಗಳಿಂದ ನೀವು ಒತ್ತಡವನ್ನು ಅನುಭವಿಸಲಿದೀರಿ. ಆರೋಗ್ಯದ ದೃಷ್ಟಿಯಿಂದ ಇಂದು ನೆಮ್ಮದಿ. ಧಾರ್ಮಿಕ ಕ್ಷೇತ್ರಗಳ ಭೇಟಿ, ಹಳೆಯ ಸ್ನೇಹಿತರಿಂದ ಆರ್ಥಿಕ ಸಹಾಯ ದೊರೆಯಲಿದೆ.

ಮಿಥುನರಾಶಿ ದಿನಭವಿಷ್ಯ
ವ್ಯವಹಾರ ಕ್ಷೇತ್ರದಲ್ಲಿ ಪ್ರಗತಿ. ಎದುರಾಳಿಗಳ ವಿರುದ್ದ ಎಚ್ಚರವಾಗಿರಿ. ಕುಟುಂಬದ ಸದಸ್ಯರು ನಿಮ್ಮ ಸಹಾಯಕ್ಕೆ ನಿಲ್ಲಲಿದ್ದಾರೆ. ಯಾರ ಜೊತೆಗೂ ಇಂದು ಹಣಕಾಸಿನ ವ್ಯವಹಾರ ಮಾಡಬೇಡಿ. ಸಂಬಂಧಿಕರಿಂದ ಆರ್ಥಿಕ ಲಾಭ.

ಕರ್ಕಾಟಕರಾಶಿ ದಿನಭವಿಷ್ಯ
ರಾಜಕಾರಣಿಗಳಿಗೆ ಇಂದು ಶುಭ ಸುದ್ದಿ. ಒಪ್ಪಂದವನ್ನು ಅಂತಿಮಗೊಳಿಸಲು ಅವಕಾಶ ದೊರೆಯಲಿದೆ. ಹೊಸ ಸ್ನೇಹಿತರಿಂದ ಸಹಾಯ ದೊರೆಯಲಿದೆ. ದೂರದ ಬಂಧುಗಳ ಭೇಟಿಯಿಂದ ಹೊಸ ವ್ಯವಹಾರದ ಆಲೋಚನೆ ಹೊಳೆಯಲಿದೆ.

ಸಿಂಹರಾಶಿ ದಿನಭವಿಷ್ಯ
ಭೂಮಿ ಮತ್ತು ವಾಹನ ಖರೀದಿ ಯೋಗವಿದೆ. ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ವಿಚಾರದಲ್ಲಿ ಕಾಳಜಿ ವಹಿಸಿ. ಯಾವುದೇ ಕೆಲಸ ಕಾರ್ಯಗಳಲ್ಲಿಯೂ ನೀವಿಂದು ಯಶಸ್ವಿ ಆಗುತ್ತೀರಿ. ಕಠಿಣ ಪರಿಶ್ರಮ ನಿಮಗೆ ಫಲವನ್ನು ನೀಡಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿ.

ಇದನ್ನೂ ಓದಿ: ಯುವನಿಧಿ ಯೋಜನೆ ಇಂದಿನಿಂದ ಜಾರಿ : ಅರ್ಜಿ ಸಲ್ಲಿಸುವುದು ಹೇಗೆ ? ಯಾರೆಲ್ಲ ಅರ್ಹರು ?

ಕನ್ಯಾರಾಶಿ ದಿನಭವಿಷ್ಯ
ವ್ಯವಹಾರಿಕವಾಗಿ ಯಾವುದೇ ನಿರ್ಧಾರ ಕೈಗೊಂಡರೂ ಕೂಡ ಅದು ನಿಮಗೆ ಫಲವನ್ನು ನೀಡಲಿದೆ. ಸಂಜೆ ಸ್ನೇಹಿತರ ಜೊತೆಗೆ ವಿಹಾರಕ್ಕೆ ತೆರಳುವಿರಿ. ಆದಾಯವು ಹೆಚ್ಚಳವಾಗಲಿದೆ. ಖರ್ಚು ವೆಚ್ಚಗಳ ಮೇಲೆ ನಿಯಂತ್ರಣವನ್ನು ಹೇರಿ.

Horoscope Today 29 December 2023 Zodiac Sign 
Image Credit to Original Source

ತುಲಾರಾಶಿ ದಿನಭವಿಷ್ಯ
ಸಹೋದರರ ನಡುವೆ ವಿವಾದ ಉಂಟಾಗಲಿದೆ. ಸಣ್ಣ ವ್ಯಾಪಾರ ಮಾಡುವವರು ಕೆಲವೊಂದು ಸಮಸ್ಯೆಯನ್ನು ಎದುರಿಸಲಿದ್ದಾರೆ. ಕುಟುಂಬದ ಹಿರಿಯ ಸದಸ್ಯರ ಸಲಹೆಯನ್ನು ಪಡೆಯಿರಿ. ಸಂಬಂಧಿಕರಿಂದ ಹಣಕಾಸಿನ ಸಹಕಾರ ಸಿಗಲಿದೆ.

ವೃಶ್ಚಿಕರಾಶಿ ದಿನಭವಿಷ್ಯ
ಹಳೆಯ ಸ್ನೇಹಿತರ ಭೇಟಿಯಿಂದ ಮನಸಿಗೆ ನೆಮ್ಮದಿ. ಹಿರಿಯ ಸದಸ್ಯರ ಸಹಕಾರಿಂದ ಸಮಸ್ಯೆಗಳು ಪರಿಹಾರವಾಗಲಿದೆ. ಕುಟುಂಬ ಸದಸ್ಯರ ಜೊತೆಗೆ ಶುಭ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಅವಿವಾಹಿತರಿಗೆ ಯೋಗ್ಯ ವಿವಾಹ ಸಂಬಂಧಗಳು ಕೂಡಿಬರಲಿದೆ.

ಧನಸ್ಸುರಾಶಿ ದಿನಭವಿಷ್ಯ
ಬಾಕಿ ಉಳಿದಿರುವ ಕೆಲಸ ಕಾರ್ಯಗಳನ್ನು ಇಂದು ಪೂರ್ಣಗೊಳಿಸುವಿರಿ. ಆದಾಯಕ್ಕಿಂತ ಅಧಿಕ ಖರ್ಚು ನಿಮ್ಮನ್ನು ಕಂಗೆಡಿಸಲಿದೆ. ಯಾವುದೇ ವ್ಯಕ್ತಿಯಿಂದ ಸಾಲವನ್ನು ಪಡೆದುಕೊಳ್ಳಲು ಯೋಚಿಸುತ್ತಿದ್ದರೆ ಅದು ನಿಮಗೆ ಸುಲಭವಾಗಿ ದೊರೆಯಲಿದೆ. ಹಣಕಾಸಿನ ಹೂಡಿಕೆ ಲಾಭವನ್ನು ತಂದುಕೊಡಲಿದೆ.

ಇದನ್ನೂ ಓದಿ : Bank Holidays January 2024: ಹೊಸ ವರ್ಷ- ಜನವರಿ ತಿಂಗಳಲ್ಲಿ ಬ್ಯಾಂಕುಗಳು ಓಪನ್‌ ಇರೋದು ಕೇವಲ 15 ದಿನಗಳು ಮಾತ್ರ

ಮಕರರಾಶಿ ದಿನಭವಿಷ್ಯ
ವ್ಯವಹಾರಿಕವಾಗಿ ವಿರೋಧಿಗಳಿಂದ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ. ಯಾವುದೇ ಹೊಸ ಕಾರ್ಯವನ್ನು ಮಾಡಿದ್ರೆ ನಿಮ್ಮ ಆತ್ಮವಿಶ್ವಾಸ ಹೆಚ್ಚಲಿದೆ. ಸಂಗಾತಿಯು ನಿಮ್ಮ ಪ್ರಗತಿಯನ್ನು ಕಂಡು ಸಂತೋಷ ಪಡುತ್ತಾರೆ. ದೂರ ಪ್ರಯಾಣ ನಿಮಗೆ ಆರ್ಥಿಕ ಲಾಭವನ್ನು ತಂದುಕೊಡಲಿದೆ.

ಕುಂಭರಾಶಿ ದಿನಭವಿಷ್ಯ
ಮೇಲಾಧಿಕಾರಿಗಳಿಂದ ನೀವು ಉತ್ತಮ ಸುದ್ದಿಯನ್ನು ಕೇಳುತ್ತೀರಿ. ಕುಟುಂಬ ಜೀವನವು ನಿಮಗೆ ಖುಷಿಯನ್ನು ಕೊಡಲಿದೆ. ತಂದೆಯ ಜೊತೆಗೆ ಜಗಳವಾಗುವ ಸಾಧ್ಯತೆಯಿದೆ. ಯಾವುದೇ ಕೆಲಸ ಕಾರ್ಯಗಳಲ್ಲಿಯೂ ಇಂದು ನೀವು ಮಿಶ್ರಫಲವನ್ನು ಪಡೆಯಲಿದ್ದೀರಿ.

ಇದನ್ನೂ ಓದಿ: ನಟಿ ರಮ್ಯ Vs ಸಂಸದೆ ಸುಮಲತಾ Vs ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ನಡುವೆ ಫೈಟ್ : ಲೋಕಸಭಾ ವಾರ್ ಗೆ ಸಿದ್ಧವಾಗ್ತಿದೆ ಮಂಡ್ಯ

ಮೀನರಾಶಿ ದಿನಭವಿಷ್ಯ
ಆರ್ಥಿಕ ಸಮಸ್ಯೆಗಳು ಎದುರಾಗಲಿದೆ. ಇಂದು ಮನೆಗೆ ಅತಿಥಿಗಳ ಆಗಮನವಾಗಲಿದೆ. ವಾಹನ ಖರೀದಿಯ ಯೋಗವಿದೆ. ರಿಯಲ್‌ ಎಸ್ಟೇಟ್‌ ವ್ಯವಹಾರದಿಂದ ಅಧಿಕ ಲಾಭ ದೊರೆಯಲಿದೆ. ಖರ್ಚು ವೆಚ್ಚಗಳ ಮೇಲೆ ನಿಯಂತ್ರಣ ಹೇರಿ. ಧಾರ್ಮಿಕ ಪುಣ್ಯ ಕ್ಷೇತ್ರಕ್ಕೆ ಭೇಟಿಯನ್ನು ನೀಡಿ.

Horoscope Today 29 December 2023 Zodiac Sign 

Comments are closed.