ದಿನಭವಿಷ್ಯ : ಈ ರಾಶಿಗೆ ಶುಭತರಲಿದೆ ಸ್ವಾತಿ ನಕ್ಷತ್ರ

ದಿನಭವಿಷ್ಯ ಇಂದು ಗುರುವಾರ ಅಕ್ಟೋಬರ್ 30 2025. ದ್ವಾದಶ ರಾಶಿಗಳ ಮೇಲೆ ಸ್ವಾತಿ ನಕ್ಷತ್ರ ಪ್ರಭಾವ ಬೀರಲಿದೆ. ಹೇಗಿದೆ 12 ರಾಶಿಗಳ ಇಂದಿನ ರಾಶಿಭವಿಷ್ಯ ತಿಳಿಯೋಣಾ
ಮೇಷರಾಶಿ (Aries)
ವೃತ್ತಿಜೀವನದಲ್ಲಿರುವ ಅವಕಾಶಗಳನ್ನು ಬಳಸಿಕೊಳ್ಳಿ. ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ. ಹಿರಿಯರ ಆರೋಗ್ಯದ ಬಗ್ಗೆ ಚಿಂತಿಸುವಂತಾಗಬಹುದು. ಅವಿವಾಹಿತರಿಗೆ ಕಾಯುವ ಸಮಯ ಮುಗಿಯಲಿದೆ.
ವೃಷಭರಾಶಿ (Taurus)
ಬೇರೆಯವರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬೇಡಿ. ಹಿತ ಶತ್ರುಗಳು ವಿವಾದದಲ್ಲಿ ಸಿಲುಕಿಸಬಹುದು. ಎಲ್ಲವೂ ಚೆನ್ನಾಗಿದ್ದರೂ ಮನಸ್ಸಿನಲ್ಲಿ ನಿರುತ್ಸಾಹವಿರುತ್ತದೆ. ಅತಿಮಾನುಷರಂತೆ ನಿಮ್ಮ ವರ್ತನೆ ಇರಲಿದ್ದು, ಎಲ್ಲರ ಕಂಗಣ್ಣಿಗೆ ಗುರಿಯಾಗುವಿರಿ.
ಮಿಥುನರಾಶಿ (Gemini)
ನಿಮ್ಮ ಮಾತು ಬೇರೆಯದೇ ಅರ್ಥವನ್ನು ಕೊಟ್ಟು, ಸಂಬಂಧವನ್ನು ಕೆಡಿಸಬಹುದು. ಹಣಕಾಸಿನ ವಿಷಯದಲ್ಲಿ ಎಚ್ಚರವಿರಲಿ. ಕೌಟುಂಬಿಕವಾಗಿ ಬಂಧುಗಳು ನಿಮ್ಮ ಮೇಲೆ ಪ್ರಸನ್ನರಾಗಿರುತ್ತಾರೆ.
ಕರ್ಕಾಟಕರಾಶಿ (Cancer)
ರಾಹು, ಶನಿಯ ಪ್ರತಿಕೂಲ ಪರಿಣಾಮದಿಂದಾಗಿ ಪ್ರತಿಯೊಂದು ವಿಚಾರದಲ್ಲಿಯೂ ಹೆಚ್ಚಿನ ಎಚ್ಚರಿಕೆ ಅಗತ್ಯ. ನಿರುದ್ಯೋಗಿಗಳಿಗೆ ಒಳ್ಳೆಯ ಉದ್ಯೋಗ ಪ್ರಾಪ್ತಿ ಯೋಗವಿದೆ. ಶುಭ ಕಾರ್ಯಗಳಿಗೆ ಅವಕಾಶವಿದೆ.
ಸಿಂಹರಾಶಿ (Leo)
ಆರ್ಥಿಕ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳುವಿರಿ. ಕೆಲಸದ ಕ್ಷೇತ್ರದಲ್ಲಿ ನಿಮ್ಮ ಕಲ್ಪನೆಗಳು ಯಶಸ್ಸನ್ನು ತರುತ್ತವೆ. ಚಿಕ್ಕ ಪ್ರಯಾಣದ ಯೋಗವಿದೆ. ರೋಗಬಾಧೆಗಳಿಗೆ ಅಧಿಕ ಖರ್ಚು, ಮಾನಸಿಕ ಕಿರಿಕಿರಿ ಇರಬಹುದು.
ಕನ್ಯಾರಾಶಿ (Virgo)
ಸ್ನೇಹಿತರಿಂದ ಲಾಭವಾಗಲಿದೆ. ಉದ್ಯೋಗ ಬದಲಾವಣೆಗೆ ಅಡೆತಡೆಗಳು ಎದುರಾಗಬಹುದು. ಮಾನ-ಅಪಮಾನಗಳಿಗೆ ಗುರಿಯಾಗುವಿರಿ. ನಿಮ್ಮ ಆತ್ಮವಿಶ್ವಾಸವು ನಿಮ್ಮನ್ನು ವೃತ್ತಿಪರ ಯಶಸ್ಸಿನೆಡೆಗೆ ಕೊಂಡೊಯ್ಯುತ್ತದೆ.
ತುಲಾರಾಶಿ (Libra)
ಉದ್ಯೋಗ ದೊರಕುವುದು. ಆತ್ಮಗೌರವಕ್ಕೆ ಚ್ಯುತಿ ಬರಬಹುದು. ತಾಯಿಯಿಂದ ಅನುಕೂಲವಿದೆ. ನಿಮ್ಮ ಪ್ರೇಮ ಜೀವನದಲ್ಲಿ ಪ್ರಣಯ ಕ್ಷಣಗಳನ್ನು ಅನುಭವಿಸುವಿರಿ. ಆರೋಗ್ಯ ಉತ್ತಮವಾಗಿರುತ್ತದೆ.
ವೃಶ್ಚಿಕರಾಶಿ (Scorpio)
ದೇವತಾ ಕಾರ್ಯಗಳಿಗೆ ಶುಭ ಸಮಯ. ವ್ಯಾಪಾರದಲ್ಲಿ ಬೆಳವಣಿಗೆಗೆ ಹಲವು ಅವಕಾಶಗಳು ಸಿಗಲಿವೆ. ಉನ್ನತ ವಿದ್ಯಾಭ್ಯಾಸಕ್ಕೆ ಪ್ರಯಾಣದ ಯೋಗವಿದೆ. ಬಹುಮಾನ ಅಥವಾ ಭಕ್ಷೀಸು ಲಭಿಸಬಹುದು. ಆರೋಗ್ಯದಲ್ಲಿ ವ್ಯತ್ಯಾಸವಿರಬಹುದು.
ಧನಸ್ಸುರಾಶಿ (Sagittarius)
ಆರ್ಥಿಕ ಲಾಭದ ಹೊಸ ಮೂಲಗಳು ಗೊತ್ತಾಗುವವು. ಹಿರಿಯರಿಗೆ ಕೆಲಸದ ಮೂಲಕ ಗೌರವ ತೋರಿಸುವಿರಿ. ಅನಗತ್ಯವಾಗಿ ಇತರರ ಖಾಸಗಿ ವಿಚಾರದಲ್ಲಿ ಪ್ರವೇಶ ಮಾಡಬೇಡಿ. ಲೋಹ ಮತ್ತು ಅಗ್ನಿ ವಿಚಾರದಲ್ಲಿ ಎಚ್ಚರವಿರಲಿ.
ಮಕರರಾಶಿ (Capricorn)
ಉತ್ತಮವಾದ ಅದೃಷ್ಟವನ್ನು ತರುವ ದಿನ. ಹಲವು ಮೂಲಗಳಿಂದ ಆದಾಯ ಬರಲಿದೆ. ಸಾಂಸಾರಿಕವಾಗಿ ನೆಮ್ಮದಿ ತರುವ ಸಮಯ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿಯಾಗುವ ಕಾಲ. ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ.
ಕುಂಭರಾಶಿ (Aquarius)
ಗುರುವಿನ ಮನೆಯಲ್ಲಿರುವ ಶನಿ, ಶತ್ರುವಿನ ಮನೆಯಲ್ಲಿರುವ ಗುರು, ಜನ್ಮ ರಾಶಿಯಲ್ಲಿರುವ ರಾಹು ಇವರಿಗೆ ಪರಿಹಾರ ಮಾಡಿಕೊಳ್ಳಿ. ಸಾಮಾಜಿಕ ಚಟುವಟಿಕೆಗಳಿಗೆ ನಿಮ್ಮ ಕೊಡುಗೆ ಗೌರವ ತರುತ್ತದೆ. ಮಕ್ಕಳಿಂದ ಭೂಮಿ ನಷ್ಟದ ಸಾಧ್ಯತೆ.
ಮೀನರಾಶಿ (Pisces)
ಗುರಿಯನ್ನು ಸಾಧಿಸಲು ನೀವು ಶ್ರಮಿಸಬಹುದು. ಮನಸ್ಸಿನಲ್ಲಿರುವ ಕನಸುಗಳನ್ನು ನನಸಾಗಿಸಲು ಸಮಯ ಸರಿಯಾಗಿದೆ. ಆಪ್ತ ಸ್ನೇಹಿತರ ಭೇಟಿಯಿಂದ ಒತ್ತಡ ಹೆಚ್ಚಾಗಬಹುದು. ನಿಮ್ಮ ಕೋಪವನ್ನು ನಿಯಂತ್ರಿಸಿ.
Horoscope Today 30 October 2025 Kannada News



