ದಿನಭವಿಷ್ಯ ಅಕ್ಟೋಬರ್‌ 01 2023 : ಈ ರಾಶಿಯವರಿಗೆ ಉದ್ಯೋಗದಲ್ಲಿ ಭಡ್ತಿ ದೊರೆಯಲಿದೆ

ಅಶ್ವಿನಿ ನಕ್ಷತ್ರದ ಪ್ರಭಾವ ಇಂದು ದ್ವಾದಶ ರಾಶಿಗಳ ಮೇಲೆ ಇರಲಿದೆ. ಕೆಲವು ರಾಶಿಗಳು ಈ ಸಮಯದಲ್ಲಿ ಶುಭಫಲಗಳನ್ನು ಪಡೆಯಲಿವೆ. ಮೇಷರಾಶಿಯಿಂದ ಮೀನ ರಾಶಿಯ ವರೆಗೆ ಒಟ್ಟು 12  ದ್ವಾದಶ ರಾಶಿಗಳ ಇಂದಿನ ದಿನ ಭವಿಷ್ಯ (Horoscope Today) ಹೇಗಿದೆ.

ಇಂದು ಅಕ್ಟೋಬರ್‌ 01 2023 ಭಾನುವಾರ. ಅಶ್ವಿನಿ ನಕ್ಷತ್ರದ ಪ್ರಭಾವ ಇಂದು ದ್ವಾದಶ ರಾಶಿಗಳ ಮೇಲೆ ಇರಲಿದೆ. ಕೆಲವು ರಾಶಿಗಳು ಈ ಸಮಯದಲ್ಲಿ ಶುಭಫಲಗಳನ್ನು ಪಡೆಯಲಿವೆ. ಮೇಷರಾಶಿಯಿಂದ ಮೀನ ರಾಶಿಯ ವರೆಗೆ ಒಟ್ಟು 12  ದ್ವಾದಶ ರಾಶಿಗಳ ಇಂದಿನ ದಿನ ಭವಿಷ್ಯ (Horoscope Today) ಹೇಗಿದೆ.

ಮೇಷ ರಾಶಿ
ಸಂಗಾತಿಯು ಇಂದು ಕೋಪಗೊಳ್ಳುವ ಸಾಧ್ಯತೆಯಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣುತ್ತೀರಿ. ಆರ್ಥಿಕ ಸ್ಥಿತಿಯನ್ನು ಹೆಚ್ಚಿಸುವ ಯೋಜನೆಗಳು ಕಾರ್ಯರೂಪಕ್ಕೆ ಬರಲಿದೆ. ಮಕ್ಕಳ ಸಮಸ್ಯೆಯನ್ನು ಪರಿಹಾರ ಕಾಣುವಲ್ಲಿ ಯಶಸ್ವಿಯಾಗುವಿರಿ.

ವೃಷಭ ರಾಶಿ
ಸ್ನೇಹಿತರೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯಲಿದ್ದೀರಿ. ಸರಕಾರಿ ನೌಕರರಿಗೆ ಶುಭ ಸುದ್ದಿಯೊಂದು ದೊರೆಯಲಿದೆ. ತಂದೆಯ ಆರೋಗ್ಯದ ಕಡೆಗೆ ಗಮನ ಹರಿಸಿ. ಮಕ್ಕಳ ವಿಚಾರದಲ್ಲಿ ಶುಭ ಸುದ್ದಿಯೊಂದನ್ನು ಕೇಳುವಿರಿ.

ಮಿಥುನ ರಾಶಿ
ವ್ಯಾಪಾರದಲ್ಲಿ ಹೂಡಿಕೆ ಮಾಡಲು ಇತರರಿಂದ ಸಹಾಯ ಪಡೆಯುವಿರಿ. ಮಕ್ಕಳ ಜೊತೆಗೆ ಸುಂದರ ಸಂಜೆಯನ್ನು ಕಳೆಯುವಿರಿ. ಕುಟುಂಬದಲ್ಲಿಂದು ವಿವಾದ ಏರ್ಪಡುವ ಸಾಧ್ಯತೆಯಿದೆ. ಹೊಸ ಹೂಡಿಕೆಯ ವಿಚಾರದಲ್ಲಿ ಎಚ್ಚರವಹಿಸಿ.

ಕರ್ಕಾಟಕ ರಾಶಿ
ಸುತ್ತಮುತ್ತಿನ ಜನರ ಜೊತೆಗೆ ಎಚ್ಚರಿಕೆಯಿಂದ ಇರಿ. ಉದ್ಯೋಗ ಹುಡುಕಾಟದ ಕಾರ್ಯದಲ್ಲಿ ನೀವು ಯಶಸ್ಸನ್ನು ಕಾಣಲಿದ್ದೀರಿ. ಸಂಜೆಯ ವೇಳೆಗೆ ಮನೆಯವರ ಜೊತೆಗೆ ಸುತ್ತಾಟಕ್ಕೆ ತೆರಳುವ ಸಾಧ್ಯತೆಯಿದೆ. ಕಾರ್ಯಕ್ಷೇತ್ರದಲ್ಲಿ ಹೊಂದಾಣಿಕೆ ಸಾಧ್ಯ.

ಇದನ್ನೂ ಓದಿ : ಅಕ್ಟೋಬರ್‌ನಲ್ಲಿ 18 ದಿನ ಬ್ಯಾಂಕ್ ರಜೆ : ಬ್ಯಾಂಕ್‌ ಕೆಲಸವನ್ನು ಶೀಘ್ರವಾಗಿ ಮುಗಿಸಿ

ಸಿಂಹ ರಾಶಿ
ಆರೋಗ್ಯದ ಬಗ್ಗೆ ನೀವು ಎಚ್ಚರಿಕೆಯಿಂದ ಇರಿ. ಅನಾರೋಗ್ಯ ಸಮಸ್ಯೆ ಕಂಡು ಬಂದ್ರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಹಣಕಾಸಿನ ವಿಚಾರದಲ್ಲಿ ನೀವು ಕೈಗೊಂಡ ತೀರ್ಮಾನಗಳು ಭವಿಷ್ಯದಲ್ಲಿ ಉತ್ತಮ ಫಲಿತಾಂಶವನ್ನು ನೀಡಲಿದೆ. ಕುಟುಂಬದ ಸದಸ್ಯರ ಜೊತೆಗೆ ಸಮಸ್ಯೆಗಳ ಕುರಿತು ಮುಕ್ತವಾಗಿ ಚರ್ಚಿಸಿ.

ಕನ್ಯಾ ರಾಶಿ
ಪೂರ್ವಾರ್ಜಿತ ಆಸ್ತಿಯ ವಿಚಾರದಲ್ಲಿ ಸಮಸ್ಯೆ ಉಂಟಾಗಲಿದೆ. ಮಾಡುವ ಕೆಲಸ ಕಾರ್ಯಗಳಲ್ಲಿ ನೀವು ಖಂಡಿತಾವಾಗಿಯೂ ಯಶಸ್ವಿಯಾಗುತ್ತೀರಿ. ವ್ಯವಹಾರದಲ್ಲಿ ಹೊಸ ಒಪ್ಪಂದಕ್ಕೆ ಸಹಿ ಹಾಕುವುದು ನಿಮಗೆ ದೊಡ್ಡ ಲಾಭವನ್ನು ತಂದು ಕೊಡಲಿದೆ. ನಿಮ್ಮ ಪಾಲಿಗೆ ಇಂದು ಅದೃಷ್ಟದ ದಿನ.

ತುಲಾ ರಾಶಿ
ವ್ಯವಹಾರ ಕ್ಷೇತ್ರದಲ್ಲಿ ಹೆಚ್ಚಿನ ಹಣಕಾಸಿನ ಲಾಭವನ್ನು ಪಡೆಯಲಿದ್ದೀರಿ. ಪಾಲುದಾರರ ಜೊತೆಗೆ ಹೆಚ್ಚಿನ ಹೊಂದಾಣಿಕೆ ಲಾಭವನ್ನು ತರಲಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಯಶಸ್ವಿ ಆಗುತ್ತಾರೆ. ಪ್ರೇಮಿಗಳಿಗೆ ಇಂದು ಶುಭದಿನ. ನಿಮ್ಮ ಕೆಲಸ ಕಾರ್ಯಗಳನ್ನು ಇಂದು ಯಶಸ್ವಿಯಾಗಿ ಪೂರೈಸುವಿರಿ.

ಇದನ್ನೂ ಓದಿ : 50MP ಕ್ಯಾಮೆರಾ, 256 GB Ram, ಅತ್ಯಾಧುನಿಕ ತಂತ್ರಜ್ಞಾನ: ಶೀಘ್ರದಲ್ಲೇ ಬಿಡುಗಡೆ ಆಗಲಿದೆ Google Pixel 8

ವೃಶ್ಚಿಕ ರಾಶಿ
ಸಾಮಾಜಿಕ ಸೇವೆಯಲ್ಲಿ ನಿಮಗೆ ಹೆಚ್ಚಿನ ಆಸಕ್ತಿ ಮೂಡಲಿದೆ. ಲಾಭಕ್ಕಿಂತ ಅಧಿಕ ಖರ್ಚು ನಿಮ್ಮನ್ನು ಕಂಗೆಡಿಸಲಿದೆ. ಮಕ್ಕಳ ಮೇಲೆ ನೀವು ಇಂದು ಕೋಪಗೊಳ್ಳುವ ಸಾಧ್ಯತೆಯಿದೆ. ಸಾರ್ವಜನಿಕರಿಂದ ನಿಮಗೆ ಬೆಂಬಲ ವ್ಯಕ್ತವಾಗುತ್ತದೆ. ವ್ಯವಹಾರಿಕವಾಗಿ ಹೊಂದಾಣಿಕೆ ಅತೀ ಮುಖ್ಯ.

ಧನಸ್ಸು ರಾಶಿ
ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಅತೀ ಅಗತ್ಯ. ಪ್ರೇಮಿಗಳ ಪಾಲಿಗೆ ಇಂದು ಅದೃಷ್ಟದ ದಿನ. ಮಹಿಳಾ ಕೆಲಸಗಾರರಿಗೆ ಭಡ್ತಿ ಮತ್ತು ಸಂಬಳ ಹೆಚ್ಚಾಗುವ ಸಾಧ್ಯತೆಯಿದೆ. ಪಾಲುದಾರರ ಜೊತೆಗೆ ಹೊಂದಾಣಿಕೆಯಿಂದ ಕಾರ್ಯಾನುಕೂಲ. ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಮನಸಿಗೆ ನೆಮ್ಮದಿ ದೊರೆಯಲಿದೆ.

ಮಕರ ರಾಶಿ
ಸ್ನೇಹಿತರಿಂದ ಅಮೂಲ್ಯ ಉಡುಗೊರೆಯನ್ನು ಪಡೆಯುವಿರಿ. ವ್ಯವಹಾರ ಕ್ಷೇತ್ರ ಲಾಭದಾಯಕವಾಗಿ ಇರಲಿದೆ. ನಿಮ್ಮ ಮನಸ್ಸು ಇಂದು ಸಂತೋಷವಾಗಿ ಇರುತ್ತದೆ. ಆರ್ಥಿಕ ಸ್ಥಿತಿಯು ಬಲಗೊಳ್ಳಲಿದೆ. ಇದರಿಂದ ನಿಮ್ಮ ಆತ್ಮವಿಶ್ವಾಸವೂ ವೃದ್ದಿಸಲಿದೆ.

ಇದನ್ನೂ ಓದಿ : ಕಾವೇರಿಗಾಗಿ ನೋವಿನ ನಡುವಲ್ಲೇ ವಿಜಯ್‌ ರಾಘವೇಂದ್ರ ಭಾವುಕ ಗಾಯನ

ಕುಂಭ ರಾಶಿ
ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲಿದ್ದಾರೆ. ಕುಟುಂಬದಲ್ಲಿನ ಸಮಸ್ಯೆಗಳಿಗೆ ಇಂದೇ ಪರಿಹಾರ ದೊರೆಯಲಿದೆ. ಸಂಗಾತಿಯ ಜೊತೆಗೆ ಸುತ್ತಾಟದಿಂದ ಮನಸಿಗೆ ನೆಮ್ಮದಿ ದೊರೆಯಲಿದೆ. ವಿದ್ಯಾರ್ಥಿಗಳು ಶುಭ ಸುದ್ದಿಯೊಂದನ್ನು ಕೇಳುವಿರಿ.

ಮೀನ ರಾಶಿ
ವ್ಯವಹಾರಿಕ ಯೋಜನೆಗಳು ಇಂದು ವಿಫಲಗೊಳ್ಳುವ ಸಾಧ್ಯತೆಯಿದೆ. ಕೆಲಸ ಕಾರ್ಯಗಳಲ್ಲಿ ಇತರರ ಸಲಹೆಯನ್ನು ಯೋಚಿಸಿ ಪಾಲಿಸಿ. ಶತ್ರುಗಳಿಂದಾಗಿ ನೀವು ಇಂದು ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗ ಬೇಕಾಗುತ್ತದೆ. ಸಂಗಾತಿಯು ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ. ಕುಟುಂಬದಲ್ಲಿನ ವಿವಾದವೊಂದು ಇಂದು ಸುಖಾಂತ್ಯವನ್ನು ಕಾಣುವ ಸಾಧ್ಯತೆಯಿದೆ.

Horoscope Today October 01 2023 Zordic Sign

Comments are closed.