ದಿನಭವಿಷ್ಯ ಅಕ್ಟೋಬರ್‌ 03 2023 : ವಜ್ರ ಯೋಗದಿಂದ ಈ ರಾಶಿಯವರಿಗೆ ಅದೃಷ್ಟ

ದ್ವಾದಶ ರಾಶಿಗಳ ಮೇಲೆ ಕೃತಿಕಾ ನಕ್ಷತ್ರದ ಪ್ರಭಾವ ಇರುತ್ತದೆ. ಈ ಸಮಯದಲ್ಲಿ ವಜ್ರ ಯೋಗವು ರೂಪುಗೊಳ್ಳುತ್ತದೆ. ಹಲವು ರಾಶಿಯವರಿಗೆ ಕುಟುಂಬದ ವಿಚಾರದಲ್ಲಿ ನೆಮ್ಮದಿ ದೊರೆಯಲಿದೆ. ಮೇಷರಾಶಿಯಿಂದ ಮೀನ ರಾಶಿಯ ವರೆಗೆ 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ (Horoscope today) ಹೇಗಿದೆ.

ಇಂದು ಅಕ್ಟೋಬರ್‌ 3 2023 ದ್ವಾದಶ ರಾಶಿಗಳ ಮೇಲೆ ಕೃತಿಕಾ ನಕ್ಷತ್ರದ ಪ್ರಭಾವ ಇರುತ್ತದೆ. ಈ ಸಮಯದಲ್ಲಿ ವಜ್ರ ಯೋಗವು ರೂಪುಗೊಳ್ಳುತ್ತದೆ. ಹಲವು ರಾಶಿಯವರಿಗೆ ಕುಟುಂಬದ ವಿಚಾರದಲ್ಲಿ ನೆಮ್ಮದಿ ದೊರೆಯಲಿದೆ. ಮೇಷರಾಶಿಯಿಂದ ಮೀನ ರಾಶಿಯ ವರೆಗೆ 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ (Horoscope today) ಹೇಗಿದೆ.

ಮೇಷ ರಾಶಿ
ಇಂದು ಕೆಲವರು ನಿಮಗೆ ತೊಂದರೆಯನ್ನು ಉಂಟು ಮಾಡಬಹುದು. ಸಂಗಾತಿಯೊಂದಿಗಿನ ವಿವಾದ ಬಗೆ ಹರಿಯಲಿದೆ. ಮನೆಯಲ್ಲಿ ನೆಮ್ಮದಿಯ ವಾತಾವರಣ ಕಂಡು ಬರಲಿದೆ. ಕಚೇರಿಯಲ್ಲಿ ಕೆಲವು ಬದಲಾವಣೆಯನ್ನು ನಿರೀಕ್ಷಿಸಬಹುದಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಗತಿ ಕಂಡು ಬರಲಿದೆ.

ವೃಷಭ ರಾಶಿ
ಆದಾಯ ಹಾಗೂ ಖರ್ಚುಗಳ ನಡುವೆ ನೀವು ಹಿಡಿತ ಸಾಧಿಸಬೇಕು. ಮಧ್ಯಾಹ್ನದ ವೇಳೆಗೆ ವ್ಯಾಪಾರಿಗಳು ಶುಭ ಸುದ್ದಿಯೊಂದನ್ನು ಕೇಳುವಿರಿ. ಭವಿಷ್ಯದಲ್ಲಿನ ಆರ್ಥಿಕ ಸಮಸ್ಯೆ ಪರಿಹಾರಕ್ಕೆ ಇಂದೇ ಕೆಲವು ಕಠಿಣ ನಿರ್ಧಾರಗಳನ್ನು ಕೈಗೊಳ್ಳುವುದು ಉಳಿತು. ಕೌಟುಂಬಿಕ ಜೀವನವು ನೆಮ್ಮದಿಯಿಂದ ಇರಲಿದೆ.

ಮಿಥುನ ರಾಶಿ
ಮೇಲಾಧಿಕಾರಿಗಳ ಅನುಗ್ರಹದಿಂದ ಆಸ್ತಿಯನ್ನು ಸಂಪಾದಿಸುವಿರಿ. ಪ್ರೇಮ ಜೀವನವು ನೆಮ್ಮದಿಯಿಂದ ಕೂಡಿರಲಿದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಾಂಗಕ್ಕೆ ಅಡ್ಡಿಯಾಗಲಿದೆ. ಕಚೇರಿಯಲ್ಲಿ ಉದ್ಯೋಗಿಗಳಿಗೆ ಇಂದು ನೆಮ್ಮದಿಯ ವಾತಾರಣ ಕಂಡು ಬರಲಿದೆ.

ಕರ್ಕಾಟಕ ರಾಶಿ
ದೂರ ಪ್ರಯಾಣದಿಂದ ಹೆಚ್ಚು ಲಾಭ ಪಡೆಯುವಿದಿ. ಸಂಜೆಯ ವೇಳೆಗೆ ಶುಭ ಸುದ್ದಿಯೊಂದನ್ನು ಕೇಳುವಿರಿ. ಹೊಸ ವ್ಯವಹಾರ ಆರಂಭಿಸಲು ಇಂದು ಉತ್ತಮ ಸಮಯ. ಮೇಲಾಧಿಕಾರಿಗಳ ಸಹಕಾರದಿಂದ ನೀವು ಇಂದು ಭಡ್ತಿಯನ್ನು ಪಡೆಯುವಿರಿ. ಹೊಂದಾಣಿಕೆಯಿಂದ ಇಂದು ಕಾರ್ಯಾನುಕೂಲ.

ಇದನ್ನೂ ಓದಿ : Googe Pixel 7 ಬೆಲೆಯಲ್ಲಿ ಇಳಿಕೆ : ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಸೇಲ್‌ನಲ್ಲಿ ಬಾರೀ ರಿಯಾಯಿತಿ

ಸಿಂಹ ರಾಶಿ
ತಂದೆಯ ಕಣ್ಣಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆಯಿದೆ. ಮಕ್ಕಳ ಜವಾಬ್ದಾರಿಯನ್ನು ಪೂರೈಸುವಿರಿ. ಇದರಿಂದ ನೀವು ಹೆಚ್ಚು ನೆಮ್ಮದಿಯಾಗಿ ಇರುತ್ತೀರಿ. ರಾಜಕೀಯ ಕ್ಷೇತ್ರದಲ್ಲಿ ತೊಡಗಿರುವವರಿಗೆ ಇಂದು ಯಶಸ್ಸನ್ನು ಪಡೆಯುವಿರಿ. ಕುಟುಂಬ ವಿಚಾರದಲ್ಲಿ ಸಹೋದರರ ಸಹಕಾರ ದೊರೆಯಲಿದೆ.ಹಣ ಕೊರತೆ ಎದುರಾಗುವ ಸಾಧ್ಯತೆಯಿದೆ.

Horoscope Today October 03 2023 Zordic Sign
Image Credit to Original Source

ಕನ್ಯಾ ರಾಶಿ
ಉದ್ಯೋಗಿಗಳಿಗೆ ಇಂದು ಲಾಭದಾಯಕ. ಕಚೇರಿಯಲ್ಲಿ ಆರ್ಥಿಕ ಲಾಭದಿಂದ ಮನಸ್ಸಿಗೆ ನೆಮ್ಮದಿ. ಈ ರಾಶಿಯವರು ಇಂದು ಎಲ್ಲಾ ವಿಷಯದಲ್ಲಿಯೂ ಹೆಚ್ಚು ಜಾಗೃತರಾಗಿ ಇರಬೇಕು. ವಿರೋಧಿಗಳು ನಿಮ್ಮ ಕೆಲಸ ಕಾರ್ಯಗಳನ್ನು ಹಾಳ ಮಾಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ತೀರಾ ಎಚ್ಚರಿಕೆಯಿಂದ ಇರಿ.

ತುಲಾ ರಾಶಿ
ಇಂದು ನಿಮ್ಮ ಮನಸ್ಸಿಗೆ ಆತಂಕ ಇರುತ್ತದೆ. ಸರಕಾರಿ ನೌಕರರು ಇಂದು ಸಂಜೆಯ ಒಳಗೆ ಎಲ್ಲಾ ಕೆಲಸ ಕಾರ್ಯಗಳನ್ನು ಪೂರೈಸುವಿರಿ. ಸ್ನೇಹಿತರಿಂದ ಇಂದು ಹಣಕಾಸಿನ ಸಹಾಯವನ್ನು ಪಡೆಯುವಿರಿ. ಕುಟುಂಬ ಜೀವನದಲ್ಲಿ ಇಂದು ಅಪಶ್ರುತಿ ಕೇಳಿ ಬರುತ್ತದೆ.

ಇದನ್ನೂ ಓದಿ : ಅದ್ದೂರಿ ಹುಟ್ಟುಹಬ್ಬ ಬೇಡ: ನೀವಿದ್ದಲ್ಲೇ ಹಾರೈಸಿ: ಅಭಿಮಾನಿಗಳಿಗೆ ಅಭಿಷೇಕ್ ಅಂಬರೀಶ್ ಮನವಿ

ವೃಶ್ಚಿಕ ರಾಶಿ
ನೀವಿಂದು ಹೆಚ್ಚು ಸಂತೋಷವಾಗಿ ಇರುತ್ತೀರಿ. ಮಕ್ಕಳ ಆಸೆಯನ್ನು ಪೂರೈಸುವಿರಿ. ಬಾಕಿ ಉಳಿದಿರುವ ಕೆಲಸ ಕಾರ್ಯಗಳನ್ನು ಇಂದು ಪೂರ್ಣಗೊಳಿಸುವಿರಿ. ಹೊಸ ಹೂಡಿಕೆ ಇಂದು ಲಾಭವನ್ನು ತಂದುಕೊಡಲಿದೆ. ಕುಟುಂಬಸ್ಥರ ಜೊತೆಗೆ ಹೊಂದಾಣಿಕೆಯಿಂದ ನಿಮಗೆ ಕಾರ್ಯಾನುಕೂಲ.

ಧನಸ್ಸು ರಾಶಿ
ಆದಾಯಕ್ಕೆ ಅನುಗುಣವಾಗಿ ಖರ್ಚು ಮಾಡಿ. ವ್ಯಾಪಾರದಲ್ಲಿ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಸಂಪತ್ತಿನಲ್ಲಿ ಕಡಿಮೆಯಾಗಲಿದೆ. ನೀವು ಯಾರಿಗಾದರೂ ನೀಡಿದ ಸಾಲ ವಾಪಾಸ್‌ ಬಾರದೇ ಇದ್ರೆ ಚಿಂತೆ ಬೇಡ. ಸಂಬಂಧಿಕರು ನಿಮ್ಮ ಸಹಾಯಕ್ಕೆ ಬರಲಿದ್ದಾರೆ.

ಮಕರ ರಾಶಿ
ಉದ್ಯೋಗಳಿಗೆ ಉತ್ತಮ ಅವಕಾಶಗಳು ದೊರೆಯಲಿದೆ. ಹೊಸ ಹೂಡಿಕೆ ಭವಿಷ್ಯದಲ್ಲಿ ಲಾಭವನ್ನು ತಂದುಕೊಡಲಿದೆ. ವ್ಯಾಪಾರಿಗಳು ನಿರೀಕ್ಷಿತ ಲಾಭವನ್ನು ಪಡೆಯಲಿದ್ದಾರೆ. ಸ್ಥಗಿತವಾಗಿದ್ದ ಹಣವು ಇಂದು ನಿಮ್ಮ ಕೈ ಸೇರಲಿದೆ. ದೂರ ಪ್ರಯಾಣದಿಂದ ನಿಮಗೆ ಹೆಚ್ಚು ಅನುಕೂಲಕರ.

ಇದನ್ನೂ ಓದಿ : ಧ್ರುವಸರ್ಜಾ ಪುತ್ರಿಗೆ ಸೋ ಕ್ಯೂಟ್ ಎಂದ ಅಣ್ಣ ರಾಯನ್ ಸರ್ಜಾ: ಮೇಘನಾ ರಾಜ್ ಸರ್ಜಾ ಶೇರ್ ಮಾಡಿದ ವಿಡಿಯೋ ವೈರಲ್

ಕುಂಭ ರಾಶಿ
ಆಸ್ತಿ ಖರೀದಿಗೆ ಅವಕಾಶ. ಆರೋಗ್ಯ ಸಮಸ್ಯೆಯನ್ನು ನೀವಿಂದು ಎದುರಿಸುವ ಸಾಧ್ಯತೆಯಿದೆ. ಆಹಾರ ಪದ್ದತಿಯಲ್ಲಿ ಬದಲಾವಣೆಯನ್ನು ಮಾಡುವುದು ತೀರಾ ಅಗತ್ಯ. ಇಲ್ಲವಾದ್ರೆ ದೊಡ್ಡ ಸಮಸ್ಯೆಯನ್ನು ನೀವು ಎದುರಿಸಬೇಕಾಗುತ್ತದೆ. ಯಾವುದೇ ಆಸ್ತಿ ಖರೀದಿಸಲು ಯೋಚಿಸುತ್ತಿದ್ದರೆ ಅದು ನಿಮಗೆ ಲಾಭವನ್ನು ತಂದುಕೊಡಲಿದೆ.

ಮೀನ ರಾಶಿ
ಮಕ್ಕಳು ಮಾಡುವ ಕೆಲಸ ಕಾರ್ಯಗಳಲ್ಲಿ ನಿಮಗೆ ಇಂದು ಯಶಸ್ಸು ದೊರೆಯಲಿದೆ. ಯಾರಿಂದಲಾದ್ರೂ ಸಾಲ ಪಡೆದುಕೊಂಡಿದ್ರೆ ಅದನ್ನು ನೀವಿಂದು ವಾಪಾಸ್‌ ನೀಡುವಿರಿ. ಕುಟುಂಬ ಸದಸ್ಯರು ಇಂದು ನಿಮ್ಮ ಮೇಲೆ ಪ್ರೀತಿಯನ್ನು ತೋರಿಸುವರು. ಅವಿವಾಹಿತರಿಗೆ ಇಂದು ಯೋಗ್ಯ ಸಂಬಂಧ ಕೂಡಿಬರಲಿದೆ.

Horoscope Today October 03 2023 Zordic Sign

Comments are closed.