ಆಸ್ತಿ ಮೌಲ್ಯ ಶೇ.30ರಷ್ಟು ಹೆಚ್ಚಳ: ಆಸ್ತಿ ಖರೀದಿ, ಮಾರಾಟಕ್ಕೆ ಜಾರಿಗೆ ಬಂತು ಪರಿಷ್ಕೃತ ಮಾರ್ಗಸೂಚಿ

ಬೆಂಗಳೂರು (Bengaluru) ಸೇರಿದಂತೆ ರಾಜ್ಯದಲ್ಲಿ ಆಸ್ತಿ ಪರಿಷ್ಕೃತ ಮಾರ್ಗಸೂಚಿ (Property Tax In Guidliness) ಪ್ರಕಟಿಸಲಾಗಿದ್ದು ಏರಿಕೆಯಾಗಿರುವ ದರ (Property Tax Hike) ಕಂಡು ಆಸ್ತಿ ಖರೀದಿ ಹಾಗೂ ಮಾರಾಟ ಮಾಡೋರು ಕಂಗಲಾಗಿದ್ದಾರೆ.

ಬೆಂಗಳೂರು : ಈಗಾಗಲೇ ಬೆಲೆ ಏರಿಕೆಯಿಂದ ನಲುಗಿ ಹೋಗಿರೋ ಜನರಿಗೆ ಮತ್ತೆ ರಾಜ್ಯ ಸರ್ಕಾರ ಶಾಕ್ ನೀಡಲು ಮುಂದಾಗಿದೆ. ಬೆಂಗಳೂರು (Bengaluru) ಸೇರಿದಂತೆ ರಾಜ್ಯದಲ್ಲಿ ಆಸ್ತಿ ಪರಿಷ್ಕೃತ ಮಾರ್ಗಸೂಚಿ (Property Tax In Guidliness) ಪ್ರಕಟಿಸಲಾಗಿದ್ದು ಏರಿಕೆಯಾಗಿರುವ ದರ (Property Tax Hike) ಕಂಡು ಆಸ್ತಿ ಖರೀದಿ ಹಾಗೂ ಮಾರಾಟ ಮಾಡೋರು ಕಂಗಲಾಗಿದ್ದಾರೆ.

ಹೌದು ರಾಜ್ಯದಲ್ಲಿ(karnataka Property Purchase)  ಆಸ್ತಿ ಖರೀದಿ, ಮಾರಾಟ ದರಗಳಲ್ಲಿ ಸರಾಸರಿ ಶೇ 30% ರಷ್ಟು ಹೆಚ್ಚಳವಾಗಿದೆ. ಹೊಸ ದರಗಳು ಅಕ್ಟೋಬರ್ 1 ರಿಂದ ಪರಿಷ್ಕ್ರತ ಮಾರ್ಗಸೂಚಿ ಜಾರಿಯಾಗಿದೆ. ರಾಜ್ಯದಲ್ಲಿ ನಿವೇಶನ, ಕಟ್ಟಡ, ಭೂಮಿ ಮತ್ತಿತರ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

Karnataka 30% increase in property Tax Revised guidelines for property purchase, sale came into effect
Image Credit to Original Source

ಅಕ್ಟೋಬರ್ ಒಂದು ಹಾಗೂ ಎರಡರಂದು ರಜೆ ಇದ್ದಿದ್ದರಿಂದ ಅಕ್ಟೋಬರ್ ರಿಂದಲೇ ರಾಜ್ಯದಲ್ಲಿ ಆಸ್ತಿ ನೋಂದಣಿ ತೆರಿಗೆಯಲ್ಲಿ ನೂತನ ದರ ಜಾರಿಗೆ ಬರಲಿದೆ. ಕಳೆದ ಐದು ವರ್ಷಗಳಿಂದ ಕರೋನಾ ಸೇರಿದಂತೆ ಹಲವು ಕಾರಣಕ್ಕೆ ಆಸ್ತಿ ದರ ಪರಿಷ್ಕರಣೆ ಆಗಿರಲಿಲ್ಲ. ಈಗ 5 ವರ್ಷಗಳ ಬಳಿಕ ದರ ಪರಿಷ್ಕರಣೆ ಮಾಡಿ ಅದೇಶ ಹೊರಡಿಸಲಾಗಿದೆ.

ನೂತನ ಆದೇಶದ ಪ್ರಕಾರ ದರ ಏರಿಕೆಯಾಗಿದ್ದು ಮಾರುಕಟ್ಟೆ ದರ ಮಾರ್ಗಸೂಚಿ ದರಕ್ಕಿಂತ 500 ರಿಂದ 2,000 ಪಟ್ಟು ಹೆಚ್ಚಳವಾಗಿದ್ದು ಜನರಿಗೆ ಶಾಕ್ ಎದುರಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಭೂಮಿಗಳಿಗೆ ಮಾರ್ಗಸೂಚಿ ದರ 5 ರಿಂದ 10 ಲಕ್ಷ ರೂ. ನಿಗದಿ ಮಾರುಕಟ್ಟೆ ದರ 10 ಕೋಟಿ ರೂ.ಗಳಿಗೂ ಅಧಿಕ ಪ್ರದೇಶಗಳಲ್ಲಿ ಮಾರ್ಗಸೂಚಿ ದರವನ್ನು ಶೇ. 50ರಷ್ಟು ಹೆಚ್ಚಳ ಮಾಡಲಾಗಿದೆ.

ಇದನ್ನೂ ಓದಿ : Googe Pixel 7 ಬೆಲೆಯಲ್ಲಿ ಇಳಿಕೆ : ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಸೇಲ್‌ನಲ್ಲಿ ಬಾರೀ ರಿಯಾಯಿತಿ

ಈ ಹಿಂದೆ 2018ರಲ್ಲಿ ಮಾರ್ಗಸೂಚಿ ದರ ಪರಿಷ್ಕರಣೆಯಾಗಿತ್ತು ಕಳೆದ ನಾಲ್ಕೂವರೆ ವರ್ಷಗಳಿಂದ ಪರಿಷ್ಕರಣೆಯಾಗಿರಲಿಲ್ಲ. ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಕೋಲಾರ ಸೇರಿದಂತೆ ಬೆಂಗಳೂರಿಗೆ ಸಮೀಪದಲ್ಲಿರುವ ಜಿಲ್ಲೆಗಳಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದೆ‌‌.

ಇನ್ನು ಗ್ರಾಮೀಣ ಪ್ರದೇಶದಲ್ಲಿ ಗ್ರಾಮಠಾಣಾ ವ್ಯಾಪ್ತಿ- ಯಲ್ಲಿನ ಅನುಮೋದಿತ ನಿವೇಶನಗಳ ಮಾರ್ಗಸೂಚಿ ದರದಲ್ಲೂ ಏರಿಕೆಯಾಗಿದೆ.ಕೃಷಿ, ಕೃಷಿಯೇತರ ಜಮೀನುಗಳ ಮಾರ್ಗಸೂಚಿ ದರಗಳಲ್ಲೂ ಭಾರಿ ಬದಲಾವಣೆಯಾಗಿದೆ. ಈ ದರ ಬದಲಾವಣೆಯಿಂದ ಮಧ್ಯಮವರ್ಗದ ಆಸ್ತಿ ಖರೀದಿದಾರರಿಗೆ ಶಾಕ್ ಎದುರಾದಂತಾಗಿದೆ.

Karnataka 30% increase in property Tax Revised guidelines for property purchase, sale came into effect
Image Credit to Original Source

ಮಾರುಕಟ್ಟೆ ದರಕ್ಕೂ ಮಾರ್ಗಸೂಚಿ ದರಕ್ಕೂ ಸಾಮ್ಯತೆ ಇರುವ ಪ್ರದೇಶದಲ್ಲಿ ಮಾರ್ಗಸೂಚಿ ದರವನ್ನು ಶೇ 10 ರಷ್ಟು ಮಾತ್ರ ಏರಿಕೆ ಮಾಡಲಾಗಿದೆ. ಮಾರ್ಗಸೂಚಿ ದರಕ್ಕಿಂತ ಮಾರುಕಟ್ಟೆ ದರ 200 ಪಟ್ಟು ಹೆಚ್ಚಿರುವ ಪ್ರದೇಶಗಳಲ್ಲಿ ಪರಿಷ್ಕೃತ ದರವನ್ನು ಶೇ 20 ರಿಂದ ಶೇ25 ಹೆಚ್ಚಿಸಲಾಗಿದೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಮಾರುಕಟ್ಟೆ ದರ ಮಾರ್ಗಸೂಚಿ ದರಕ್ಕಿಂತ 500 ರಿಂದ 2000 ಪಟ್ಟು ಹೆಚ್ಚಿಸಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿದ್ದ ಕೃಷ್ಣ ಭೈರೇಗೌಡ ದರ ಪರಿಷ್ಕರಣೆಯಾಗಲಿದೆ ಎಂಬ ಸುಳಿವು ನೀಡಿದ್ದರು.

ಇದನ್ನೂ ಓದಿ : ಈ ಮಹಿಳೆಯರಿಗೆ ಸಿಗೋದಿಲ್ಲ ಗೃಹಲಕ್ಷ್ಮೀ ಯೋಜನೆಯ 2ನೇ ಕಂತಿನ 2000 ರೂ.

ಈ ಮಾರ್ಗಸೂಚಿ ದರ ಪರಿಷ್ಕರಣೆಯಿಂದ ಕಂದಾಯ ಇಲಾಖೆ ದೊಡ್ಡ ಮೊತ್ತದ ಆದಾಯ ಸಂಗ್ರಹಿಸುವ ವಿಶ್ವಾಸದಲ್ಲಿದೆ. ಈ ಬಾರಿಯ ಬಜೆಟ್ ನಲ್ಲೂ ಕೂಡ ನೋಂದಣಿ ಹಾಗೂ ಮುದ್ರಾಂಕ ಇಲಾಖೆಗೆ 2023-24 ಸಾಲಿನಲ್ಲಿ 25 ಸಾವಿರ ಕೋಟಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದೆ.

Karnataka 30% increase in property Tax Revised guidelines for property purchase, sale came into effect

Comments are closed.