ದಿನಭವಿಷ್ಯ ಅಕ್ಟೋಬರ್‌ 04 2023 : ಸಿದ್ದಿ ಯೋಗದಿಂದ ಈ ರಾಶಿಯವರಿಗೆ ಹೆಚ್ಚು ಲಾಭ

ದ್ವಾದಶ ರಾಶಿಗಳ ಮೇಲೆ ಇಂದು ರೋಹಿಣಿ ನಕ್ಷತ್ರದ (Rohini Nakshatra ) ಪ್ರಭಾವ ಇರುತ್ತದೆ. ಜೊತೆಗೆ ಸಿದ್ದಿ ಯೋಗದಿಂದ (Siddhi Yoga) ಹಲವು ರಾಶಿಯವರಿಗೆ ಶುಭ. ಹಾಗಾದ್ರೆ ಮೇಷ ರಾಶಿಯಿಂದ ಮೀನ ರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನ ಭವಿಷ್ಯ (Horoscope Today) ಹೇಗಿದೆ.

ಇಂದು ಅಕ್ಟೋಬರ್‌ 04 2023 ಬುಧವಾರ. ದ್ವಾದಶ ರಾಶಿಗಳ ಮೇಲೆ ಇಂದು ರೋಹಿಣಿ ನಕ್ಷತ್ರದ (Rohini Nakshatra ) ಪ್ರಭಾವ ಇರುತ್ತದೆ. ಜೊತೆಗೆ ಸಿದ್ದಿ ಯೋಗದಿಂದ (Siddhi Yoga) ಹಲವು ರಾಶಿಯವರಿಗೆ ಶುಭ. ಹಾಗಾದ್ರೆ ಮೇಷ ರಾಶಿಯಿಂದ ಮೀನ ರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನ ಭವಿಷ್ಯ (Horoscope Today) ಹೇಗಿದೆ.

ಮೇಷ ರಾಶಿ
ಕಚೇರಿಯಲ್ಲಿ ಬಾಕಿ ಉಳಿದಿರುವ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ಕುಟುಂಬದಲ್ಲಿ ಮಕ್ಕಳೊಂದಿಗೆ ಸಮಯವನ್ನು ಕಳೆಯುವಿರಿ. ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ. ಹೊಸ ಆಸ್ತಿ ಖರೀದಿಯಿಂದ ನಿಮ್ಮ ಆಸೆ ಈಡೇರಲಿದೆ. ವ್ಯವಹಾರದಲ್ಲಿ ಆದಾಯವೂ ವೃದ್ದಿಯಾಗಲಿದೆ.

ವೃಷಭ ರಾಶಿ
ಪ್ರೇಮ ಜೀವನದಲ್ಲಿ ಬೇಸರ ಮೂಡಲಿದೆ. ಸಂಗಾತಿಯು ನಿಮ್ಮ ಮೇಲೆ ಕೋಪಗೊಳ್ಳುವ ಸಾಧ್ಯತೆಯಿದೆ. ಸ್ನೇಹಿತರ ಜೊತೆಗೆ ಮೋಜು ಮಸ್ತಿಯಲ್ಲಿ ದಿನ ಕಳೆಯುವಿರಿ. ವ್ಯವಹಾರ, ವ್ಯಾಪಾರಕ್ಕೆ ಸಂಬಂಧಿಸಿದಂತೆ ದೂರ ಪ್ರಯಾಣ ಸಾಧ್ಯತೆಯಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

ಮಿಥುನ ರಾಶಿ
ಸ್ನೇಹಿತರ ಜೊತೆಗೆ ಎಚ್ಚರಿಕೆಯಿಂದ ಇರಿ. ನಿಮ್ಮ ಆರ್ಥಿಕ ಪರಿಸ್ಥಿತಿಯು ಅಪಾಯದಲ್ಲಿದೆ. ವಿದ್ಯಾರ್ಥಿಗಳು ಯಾರೊಂದಿಗೂ ವಿವಾದಕ್ಕೆ ಇಳಿಯ ಬೇಡಿ. ಹೊಸ ಯೋಜನೆಯಿಂದ ಕಾರ್ಯಾನುಕೂಲ. ನೀವು ನಂಬುವ ಜನರೇ ಇಂದು ನಿಮಗೆ ಮೋಸ ಮಾಡುವ ಸಾಧ್ಯತೆಯಿದೆ.

 

ಕರ್ಕಾಟಕ ರಾಶಿ
ನಿಮ್ಮ ಆರ್ಥಿಕ ಸ್ಥಿತಿಯು ಇಂದು ದುರ್ಬಲಗೊಳ್ಳಲಿದೆ. ಖರ್ಚುಗಳ ಮೇಲೆ ನಿಯಂತ್ರಣ ಹೇರಿ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿಯು ಹೆಗಲೇರಲಿದೆ. ಆಸ್ತಿ ಖರೀದಿ ಅಥವಾ ಮಾರಾಟಕ್ಕೆ ಯೋಚಿಸುತ್ತಿದ್ದರೆ ಶುಭ ಸುದ್ದಿ ಕೇಳುವಿರಿ. ಆತಂಕವನ್ನು ದೂರ ಮಾಡಿದ್ರೆ ವ್ಯವಹಾರದಲ್ಲಿ ಯಶಸ್ಸು ದೊರೆಯಲಿದೆ.

ಸಿಂಹ ರಾಶಿ
ನೀವು ಒತ್ತಡದಿಂದ ಮುಕ್ತರಾಗುವಿರಿ. ಆಸ್ತಿ ಖರೀದಿಸಲು ಬಯಸಿದ್ದರೆ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶಗಳು ದೊರೆಯಲಿವೆ. ನಿಮ್ಮ ವೈವಾಹಿಕ ಜೀವನದಲ್ಲಿನ ಘರ್ಷಣೆಗಳು ಇಂದು ಪರಿಹಾರ ಕಾಣಲಿದೆ. ವ್ಯವಹಾರದಲ್ಲಿನ ನಿರ್ಧಾರಗಳು ಬುದ್ದಿವಂತಿಕೆ ಹಾಗೂ ವಿವೇಚನೆಯಿಂದ ತೆಗೆದುಕೊಂಡರೆ ಲಾಭದಾಯಕವಾಗಲಿದೆ.

ಕನ್ಯಾ ರಾಶಿ
ಬಾಕಿ ಉಳಿದಿರುವ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ನ್ಯಾಯಾಲಯದಲ್ಲಿನ ವ್ಯಾಜ್ಯಗಳು ಪರಿಹಾರ ಕಾಣಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ ಪ್ರೀತಿಯ ಜೀವನದಲ್ಲಿ ಹೊಸ ಸಂಬಂಧಗಳು ರೂಪುಗೊಳ್ಳುವ ಸಾಧ್ಯತೆಯಿದೆ. ಹೊಸ ವಾಹನ ಖರೀದಿ, ವ್ಯವಹಾರವು ಲಾಭದಾಯಕವಾಗಿ ಇರಲಿದೆ.

Horoscope Today October 04 2023 Zordic Sign Siddhi Yoga
Image Credit to Original Source

ತುಲಾ ರಾಶಿ
ಕುಟುಂಬದಲ್ಲಿ ಮದುವೆಯ ಬಗ್ಗೆ ಚರ್ಚೆ ನಡೆಯಲಿದೆ. ತಂದೆಯ ಸಲಹೆಯಂತೆ ಕೆಲಸ ಕಾರ್ಯಗಳಲ್ಲಿ ಯಶಸ್ಸು. ಜೀವನ ಸಂಗಾತಿಗೆ ಉಡುಗೊರೆಯನ್ನು ನೀಡುವಿರಿ. ನೀವು ಕೊಟ್ಟಿರುವ ಸಾಲ ಇಂದು ಮರಳಿ ಕೈ ಸೇರಲಿದೆ. ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯುವಿರಿ. ಖರ್ಚು ವೆಚ್ಚಗಳು ಹೆಚ್ಚುವ ಸಾಧ್ಯತೆಯಿದೆ.

ವೃಶ್ಚಿಕ ರಾಶಿ
ಜೀವನ ಸಂಗಾತಿಯ ಪ್ರಗತಿಯನ್ನು ನೋಡಿ ಸಂತೋಷ ಪಡುವಿರಿ. ಹೊರಗಿನ ಆಹಾರ ಸೇವನೆ ಮಾಡುವ ವೇಳೆಯಲ್ಲಿ ಹೆಚ್ಚು ಎಚ್ಚರವಾಗಿ ಇರುವುದು ಒಳಿತು. ಅನಾರೋಗ್ಯ ಸಮಸ್ಯೆ ಇಂದು ನಿಮ್ಮನ್ನು ಕಾಡುವ ಸಾಧ್ಯತೆಯಿದೆ. ಸಹೋದ್ಯೋಗಿಗಳು ಉದ್ಯೋಗ ಕ್ಷೇತ್ರದಲ್ಲಿ ಸಹಕಾರವನ್ನು ಮಾಡಲಿದ್ದಾರೆ.

ಧನಸ್ಸು ರಾಶಿ
ಆಧ್ಯಾತ್ಮದ ಕಡೆಗೆ ನಿಮ್ಮ ಒಲವು ಹೆಚ್ಚಲಿದೆ. ವ್ಯವಹಾರ ಕ್ಷೇತ್ರದಲ್ಲಿ ಹೆಚ್ಚಿನ ಆರ್ಥಿಕ ಲಾಭ ದೊರೆಯಲಿದೆ. ಭವಿಷ್ಯ ಯೋಜನೆಗಳಿಗಾಗಿ ಹೂಡಿಕೆ ಮಾಡುವಿರಿ. ಸಹೋದರರ ನಡುವಿನ ಮನಸ್ತಾಪಗಳು ಇಂದೇ ಕೊನೆಗೊಳ್ಳುವುದು. ಸ್ನೇಹಿತರ ಸಂಖ್ಯೆ ಹೆಚ್ಚಳವಾಗಲಿದೆ. ಪಾಲುದಾರರ ಜೊತೆಗೆ ಹೊಂದಾಣಿಕೆ ಅಗತ್ಯ.

ಮಕರ ರಾಶಿ
ವಾಹನದಲ್ಲಿನ ದೋಷದಿಂದ ಹಣಕಾಸಿನ ವೆಚ್ಚಗಳು ಹೆಚ್ಚಳವಾಗಲಿದೆ. ಹೊಸ ಚಟುವಟಿಕೆಗಳು ಆರಂಭವಾಗುತ್ತದೆ. ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಶತ್ರುಗಳ ಬಗ್ಗೆ ಇಂದು ಎಚ್ಚರಿಕೆಯಿಂದ ಇರಬೇಕು. ಪ್ರೀತಿಯ ಜೀವನದಲ್ಲಿ ಹೊಸ ತಿರುವು ಪಡೆಯಲಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುವ ಕಾರ್ಯಗಳು ಇಂದು ನಡೆಯಲಿದೆ.

ಕುಂಭ ರಾಶಿ
ಹಳೆಯ ಸಮಸ್ಯೆಗಳು, ವಿವಾದಗಳು ಇಂದು ಕೊನೆಗೊಳ್ಳುತ್ತದೆ. ಉದ್ಯೋಗಿಗಳು ಇಂದು ಕಚೇರಿಯಲ್ಲಿ ಎಚ್ಚರಿಕೆಯಿಂದ ಇರಬೇಕು. ಮೇಲಾಧಿಕಾರಿಗಳಿಂದ ಕಿರಿಕಿರಿ. ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚು ಸಕ್ರೀಯರಾಗಿ ಇರುತ್ತೀರಿ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಎದುರಾಗುವ ಅಡೆತಡೆಗಳನ್ನು ನಿವಾರಿಸಲು ತಂದೆಯ ಸಲಹೆಯನ್ನು ಪಾಲಿಸಿ.

ಮೀನ ರಾಶಿ
ಅವಿವಾಹಿತರಿಗೆ ಯೋಗ್ಯ ವಿವಾಹಫಲಗಳು ಗೋಚರಿಸಲಿದೆ. ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಲಾಭವನ್ನು ತಂದುಕೊಡಲಿದೆ. ಜೀವನ ಸಂಗಾತಿಯಿಂದ ಪೂರ್ಣ ಬೆಂಬಲ ದೊರೆಯಲಿದೆ. ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿ ಇರಬೇಕು. ನಿಮ್ಮ ಮನಸ್ಸಿಗೆ ಇಂದು ಸಂತೋಷ ಉಂಟು ಮಾಡುತ್ತದೆ. ಪಾಲುದಾರರ ಜೊತೆಗೆ ಹೊಂದಾಣಿಕೆಯಿಂದ ಇರಿ.

Horoscope Today October 04 2023 Zordic Sign Siddhi Yoga

Comments are closed.