ಚಿನ್ನದ ದರದಲ್ಲಿ ಬಾರೀ ಇಳಿಕೆ, ಖರೀದಿಗೆ ಮುಗಿಬಿದ್ದ ಗ್ರಾಹಕರು : ಬೆಳ್ಳಿ ದರದಲ್ಲೂ 2000 ರೂ. ಕುಸಿತ

ಕಳೆದ ಕೆಲವು ದಿನಗಳಿಂದಲೂ ಚಿನ್ನದ ಬೆಲೆಯಲ್ಲಿ (Gold Rate) ಇಳಿಕೆಯಾಗುತ್ತಿದ್ದು, ಇಂದು ಚಿನಿವಾರು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಬಾರೀ ಇಳಿಕೆ ಕಂಡಿದೆ. ಇನ್ನು ಬೆಳ್ಳಿಯ (Silver Rate) ಬೆಲೆಯಲ್ಲಿಯೂ 2,000 ರೂಪಾಯಿ ಕುಸಿತವಾಗಿದೆ.

ಇಂದಿನ ಚಿನ್ನ, ಬೆಳ್ಳಿಯ ದರ (Today Gold and Silver Rate) :  ಪ್ರಿಯರು, ಮಹಿಳೆಯರ ಪಾಲಿಗೆ ನಿಜಕ್ಕೂ ಇದು ಸಿಹಿ ಸುದ್ದಿ. ಕಳೆದ ಕೆಲವು ದಿನಗಳಿಂದಲೂ ಚಿನ್ನದ ಬೆಲೆಯಲ್ಲಿ (Gold Rate) ಇಳಿಕೆಯಾಗುತ್ತಿದ್ದು, ಇಂದು ಚಿನಿವಾರು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಬಾರೀ ಇಳಿಕೆ ಕಂಡಿದೆ. ಇನ್ನು ಬೆಳ್ಳಿಯ (Silver Rate) ಬೆಲೆಯಲ್ಲಿಯೂ 2,000 ರೂಪಾಯಿ ಕುಸಿತವಾಗಿದೆ.

ಕಳೆದ ಸೆಪ್ಟೆಂಬರ್‌ ಕೊನೆಯ ವಾರದಿಂದಲೂ ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಕುಸಿತವಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ಕಳೆದ 7 ತಿಂಗಳಲ್ಲಿಯೇ ಇದು ಕನಿಷ್ಠಮಟ್ಟದ ಕುಸಿತವಾಗಿದೆ. ಕಳೆದ 10 ದಿನಗಳ ಅವಧಿಯಲ್ಲಿ ಚಿನ್ನದ ದರ 4,000  ರೂಪಾಯಿ ಕುಸಿತ ಕಂಡಿದೆ.

Gold and Sliver Rate Down Good news for Gold Buyers
Image Credit to Original Source

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಬೇಡಿಕೆ ಕಡಿಮೆಯಾಗಿದೆ. ಅಲ್ಲದೇ ಶುಭ ಸಮಾರಂಭಗಳು ಈ ಬಾರಿ ಅಷ್ಟಾಗಿ ನಡೆಯುತ್ತಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಆಭರಣ ವ್ಯಾಪಾರಿಗಳು ಚಿನ್ನ ಖರೀದಿಗೆ ಹೆಚ್ಚಿನ ಒಲವು ತೋರಿಸಿದ್ರೆ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : ಕ್ರೆಡಿಟ್ ಕಾರ್ಡ್ ಮೂಲಕ ಬಾಡಿಗೆ ಪಾವತಿಸಬಹುದೇ ? ಆದರೆ ಈ ತಪ್ಪುಗಳನ್ನು ಮಾತ್ರ ಮಾಡಲೇ ಬೇಡಿ

ಬೆಂಗಳೂರಲ್ಲಿ ಎಷ್ಟಿದೆ ಚಿನ್ನದ ದರ ?

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿಯೂ ಚಿನ್ನದ ದರದಲ್ಲಿ ಬಾರೀ ಇಳಿಕೆ ಕಂಡಿದೆ. 24 ಕ್ಯಾರೆಟ್‌ ಚಿನ್ನದ ಬೆಲೆ ನಿನ್ನೆ 1 ಗ್ರಾಂಗೆ 5,804 ರೂ.ಇದ್ದು, ಇಂದು 5,738 ರೂ.ಗಳಿಗೆ ಇಳಿಕೆ ಕಂಡಿದೆ. 10  ಗ್ರಾಂ ಚಿನ್ನಕ್ಕೆ58,040  ರೂಪಾಯಿ ಇದ್ದ ಚಿನ್ನ ಇಂದು5,738  ರೂಪಾಯಿಗಳಿಗೆ ಇಳಿಕೆಯಾಗಿದೆ.

ಇನ್ನು 22 ಕ್ಯಾರೆಟ್‌ ಚಿನ್ನದ ದರವನ್ನು ನೋಡುವುದಾದ್ರೆ. ಒಂದು ಗ್ರಾಂ ಚಿನ್ನದ ದರದ ನಿನ್ನೆ 5,320 ರೂಪಾಯಿ ಇದ್ದು, ಇಂದು 5,260 ರೂಪಾಯಿ ಇದೆ. ಇನ್ನು 10  ಗ್ರಾಂ ಚಿನ್ನದರ ಇಂದು 53,200  ರೂಪಾಯಿ ಇದ್ದು, ಇಂದು 52,600 ರೂಪಾಯಿ ಇದೆ.

ಇದನ್ನೂ ಓದಿ : ಪ್ರಧಾನಿ ವಿಶ್ವಕರ್ಮ ಯೋಜನೆ : ಕುಶಲಕರ್ಮಿಗಳಿಗೆ ಸಿಗುತ್ತೆ 2 ಲಕ್ಷರೂ. ಸಬ್ಸಿಡಿ ಸಾಲ, ಅರ್ಜಿ ಸಲ್ಲಿಸುವುದು ಹೇಗೆ ?

ದೇಶದ ಪ್ರಮುಖ ಚಿನಿವಾರು ಮಾರುಕಟ್ಟೆಯಾಗಿರುವ ಮುಂಬೈನಲ್ಲಿಯೂ ಚಿನ್ನದರ ಇಳಿಕೆಯಾಗಿದೆ. 22 ಗ್ರಾಂ ಚಿನ್ನದರದಲ್ಲಿ 600 ರೂಪಾಯಿ ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ದರ 52,750 ರೂಪಾಯಿಗೆ ಇಳಿಕೆಯಾಗಿದೆ. ಇನ್ನು ದೆಹಲಿಯಲ್ಲಿಯೂ ಚಿನ್ನದ ದರದಲ್ಲಿ ಇಳಿಕೆ ಕಂಡಿದ್ದು, 10 ಗ್ರಾಂ ಚಿನ್ನದ ದರ 57,530 ರೂಪಾಯಿಗೆ ಇಳಿಕೆಯಾಗಿದೆ.

Gold and Sliver Rate Down Good news for Gold Buyers
Image Credit to Original Source

ಹೈದ್ರಾಬಾದ್‌ನಲ್ಲಿಯೂ ಚಿನ್ನದ ದರ ಇಳಿಕೆ ಕಂಡಿದ್ದು, 22 ಕ್ಯಾರೆಟ್‌ ಚಿನ್ನದ ದರ 10ಗ್ರಾಂಗೆ 52,600  ರೂಪಾಯಿ ಇದ್ದು, ೨೪ ಕ್ಯಾರೆಟ್‌ ಚಿನ್ನದ ದರ 57,380 ಕ್ಕೆ ಇಳಿಕೆ ಕಂಡಿದೆ. ಈ ಮೂಲಕ ಚಿನ್ನದ ದರದಲ್ಲಿ 600 ರೂಪಾಯಿಗೂ ಅಧಿಕ ಇಳಿಕೆ ಕಂಡಿದೆ. ಇದು ಚಿನ್ನಾಭರಣ ಪ್ರಿಯರಿಗೆ ಸಖತ್‌ ಖುಷಿಕೊಟ್ಟಿದೆ.

ಇದನ್ನೂ ಓದಿ : ಗೃಹ ಸಾಲ ಪಡೆದವರಿಗೆ ಗುಡ್‌ನ್ಯೂಸ್ : ಆರ್‌ಬಿಐ ಹೊಸ ರೂಲ್ಸ್‌, 50 ಲಕ್ಷರೂ. ಗೃಹ ಸಾಲಕ್ಕೆ33 ಲಕ್ಷ ರೂ. ಬಡ್ಡಿ ಉಳಿತಾಯ

ಜಾಗತಿಕ ಮಾರುಕಟ್ಟೆಯಲ್ಲಿಯೂ ಚಿನ್ನದ ದರ ಸ್ಥಿರವಾಗಿದೆ. ಚಿನ್ನದ ದರ ಪ್ರತೀ ಔನ್ಸ್‌ಗೆ 1824 ಡಾಲರ್‌ ಇದ್ದು, ಬೆಳ್ಳಿಯ ದರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಆಗಿದೆ. ಬೆಳ್ಳಿಯ ದರ ಔನ್ಸ್‌ಗೆ 21.19 ಡಾಲರ್‌ ಬೆಲೆ ಇದ್ದು, ಭಾರತೀಯ ಕರೆನ್ಸಿ ರೂಪಾಯಿ ವಿನಿಮಯ ದರ 83.275ಕ್ಕೆ ಮಾರಾಟವಾಗುತ್ತಿದೆ.

ಚಿನ್ನದ ದರ ಮುಂದಿನ ಒಂದೆರಡು ತಿಂಗಳ ಕಾಲ ಇಳಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ಶುಭ ಸಮಾರಂಭಗಳು ಆರಂಭವಾದ ನಂತರವೇ ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಏರಿಕೆ ಕಾಣುವ ಸಾಧ್ಯತೆಯಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಇನ್ನು ಬೆಳ್ಳಿಯ ದರದಲ್ಲಿಯೂ ಇಳಿಕೆ ಕಂಡಿದೆ. ದೆಹಲಿಯಲ್ಲಿ ಬೆಳ್ಳಿಯ ದರ ಸದ್ಯ ಕೆಜಿಗೆ 71000 ರೂಪಾಯಿ ಇದ್ದು, 2000 ರೂಪಾಯಿ ಇಳಿಕೆಯಾಗಿದೆ.

Gold and Sliver Rate Down Good news for Gold Buyers

Comments are closed.