ದಿನಭವಿಷ್ಯ 10 ಅಕ್ಟೋಬರ್‌ 2023 : ಸುಭಾ ಯೋಗದಿಂದ ಈ ರಾಶಿಯವರಿಗೆ ಆರ್ಥಿಕ ಅನುಕೂಲ

ದ್ವಾದಶ ರಾಶಿಗಳ ಮೇಲೆ ಮಾಘ ನಕ್ಷತ್ರದ ಪ್ರಭಾವ ಇರುತ್ತದೆ. ಸುಭಾ ಮತ್ತು ಸಧ್ಯ ಯೋಗಗಳು ಹಲವು ಪ್ರಯೋಜನಗಳನ್ನು ನೀಡುತ್ತದೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ (Horoscope Today) ಹೇಗಿದೆ.

Horoscope Today : ಇಂದು ಅಕ್ಟೋಬರ್‌ 10 2023 ದ್ವಾದಶ ರಾಶಿಗಳ ಮೇಲೆ ಮಾಘ ನಕ್ಷತ್ರದ ಪ್ರಭಾವ ಇರುತ್ತದೆ. ಸುಭಾ ಮತ್ತು ಸಧ್ಯ ಯೋಗಗಳು ಹಲವು ಪ್ರಯೋಜನಗಳನ್ನು ನೀಡುತ್ತದೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ (Horoscope Today) ಹೇಗಿದೆ.

ಮೇಷರಾಶಿ ದಿನಭವಿಷ್ಯ
ಸರಕಾರಿ ಕೆಲಸ ಕಾರ್ಯಗಳಲ್ಲಿ ಇಂದು ಅಧಿಕಾರಿಗಳ ನಡುವೆ ವಾಗ್ವಾದ ಸಾಧ್ಯತೆಯಿದೆ. ಹೊಸ ಹೂಡಿಕೆಯ ಯೋಚನೆ ಇದ್ದರೆ, ಸ್ವಲ್ಪ ಸಮಯದ ಕಾಲ ಮುಂದೂಡಿಕೆ ಮಾಡಿ. ಸ್ನೇಹಿತರ ಜೊತೆಗೆ ಪ್ರವಾಸಕ್ಕೆ ತೆರಳುವ ಸಾಧ್ಯತೆಯಿದೆ. ಉದ್ಯೋಗದಲ್ಲಿ ಮೇಲಾಧಿಕಾರಿಗಳ ಮೆಚ್ಚುಗೆ.

ವೃಷಭರಾಶಿ ದಿನಭವಿಷ್ಯ
ಹಣಕಾಸಿನ ವಿಚಾರಕ್ಕೆ ಚಿಂತೆ ಮಾಡಬೇಕಾಗುತ್ತದೆ. ಅನಗತ್ಯ ಖರ್ಚು ವೆಚ್ಚಗಳ ಮೇಲೆ ಕಡಿವಾಣ ಹಾಕಿ. ಬಾಕಿ ಉಳಿದ ಹಣವನ್ನು ಇಂದು ಮರಳಿ ಪಡೆಯಬಹುದು. ಹೊಸ ವ್ಯವಹಾರದ ಕಡೆಗೆ ಗಮನ ಹರಿಸಬೇಕು. ಸಾಮಾಜಿಕವಾಗಿ ಗೌರವವು ಹೆಚ್ಚಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

ಮಿಥುನರಾಶಿ ದಿನಭವಿಷ್ಯ
ತಂದೆಯ ಸಹಾಯದಿಂದ ಸಮಸ್ಯೆಗಳು ಪರಿಹಾರ ಕಂಡುಕೊಳ್ಳುವಿರಿ. ಸಣ್ಣ ವ್ಯಪಾರ ಲಾಭವನ್ನು ತಂದುಕೊಡಲಿದೆ. ದೈನಂದಿನ ಅಗತ್ಯತೆಗಳನ್ನು ಪೂರೈಸುವಲ್ಲಿ ಯಶಸ್ವಿ ಆಗುತ್ತೀರಿ. ಸ್ನೇಹಿತರ ಜೊತೆಗೆ ಮೋಜು ಮಸ್ತಿ ಮಾಡುವಿರಿ. ದೂರ ಪ್ರಯಾಣ ಲಾಭದಾಯಕವಾಗಲಿದೆ.

ಕರ್ಕಾಟಕರಾಶಿ ದಿನಭವಿಷ್ಯ
ಮದುವೆಯ ಬಗ್ಗೆ ಚಿಂತೆ ಮಾಡುವಿರಿ. ಮಕ್ಕಳ ಉತ್ತಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುವಿರಿ. ಸಾಮಾಜಿಕ ಕಾರ್ಯಗಳಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ಎದುರಾಳಿಯ ಟೀಕೆಯ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಮನಸಿಗೆ ನೆಮ್ಮದಿ.

ಇದನ್ನೂ ಓದಿ : ಗೃಹಲಕ್ಷ್ಮಿ ಯೋಜನೆ 2ನೇ ಕಂತಿನ ಹಣ : ಗೃಹಿಣಿಯರಿಗೆ ಮತ್ತೊಂದು ಗುಡ್‌ನ್ಯೂಸ್‌ ಕೊಟ್ಟ ಸರಕಾರ

ಸಿಂಹರಾಶಿ ದಿನಭವಿಷ್ಯ
ಶ್ರಮವಹಿಸಿ ಕೆಲಸ ಮಾಡಿದ್ರೆ ಯಶಸ್ಸು ದೊರೆಯಲಿದೆ. ಸ್ನೇಹಿತರಿಂದ ಸಹಕಾರ ದೊರೆಯಲಿದೆ. ಸಣ್ಣ ವ್ಯಪಾರಸ್ಥರು ಹೆಚ್ಚು ಲಾಭವನ್ನು ಪಡೆದುಕೊಳ್ಳಲಿದ್ದಾರೆ. ಸಾಮಾಜಿಕವಾಗಿ ನಿಮ್ಮ ಗೌರವ ವೃದ್ದಿಸಲಿದೆ. ಸಂಗಾತಿಯೊಂದಿಗೆ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸುವಿರಿ.

Horoscope Today October 10 2023 Zordic Sign
Image Credit to Original Source

ಕನ್ಯಾರಾಶಿ ದಿನಭವಿಷ್ಯ
ವ್ಯವಹಾರಕ್ಕೆ ಸಂಬಂಧಿಸಿದಂತೆ ಹಣಕಾಸಿನ ಸಹಾಯ ದೊರೆಯಲಿದೆ. ಶೂಬ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಕುಟುಂಬದಲ್ಲಿನ ಸಮಸ್ಯೆಗಳಿಗೆ ಇಂದು ಪರಿಹಾರ ಕಂಡುಕೊಳ್ಳುವಿರಿ. ಉದ್ಯೋಗ, ವ್ಯವಹಾರದ ವಿಚಾರದಲ್ಲಿ ನೀವು ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ.

ತುಲಾರಾಶಿ ದಿನಭವಿಷ್ಯ
ವಿದೇಶಿ ವ್ಯವಹಾರ ಮಾಡುವವರಿಗೆ ಉತ್ತಮ. ಪಾಲುದಾರಿಕೆ ವ್ಯವಹಾರದಿಂದ ಅಧಿಕ ಲಾಭ. ಹಿರಿಯ ಸಲಹೆಯನ್ನು ಪಡೆದು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ. ದೂರ ಪ್ರಯಾಣದಿಂದ ಹೊಸ ವ್ಯವಹಾರದ ಕಲ್ಪನೆ ಮೂಡಲಿದೆ. ಪುಣ್ಯಕ್ಷೇತ್ರಗಳ ದರ್ಶನದಿಂದ ನೆಮ್ಮದಿ.

ವೃಶ್ಚಿಕರಾಶಿ ದಿನಭವಿಷ್ಯ
ಕೋಪವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಿ. ಸಹೋದ್ಯೋಗಿಗಳ ನೆರವಿನಿಂದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಮಕ್ಕಳ ವಿಚಾರದಲ್ಲಿ ನಿರಾಸೆಯನ್ನು ಎದುರಿಸುವಿರಿ. ಉದ್ಯೋಗದ ವಿಚಾರದಲ್ಲಿ ಶುಭದಾಯಕ. ವಿವಾದಗಳು ಪರಿಹಾರವಾಗಲಿದೆ.

ಧನಸ್ಸುರಾಶಿ ದಿನಭವಿಷ್ಯ
ಕುಟುಂಬ ಸದಸ್ಯರಿಗೆ ಮದುವೆ ಸಮಸ್ಯೆ ಇಂದು ಪರಿಹಾರವಾಗಲಿದೆ. ಹಿರಿಯ ಸದಸ್ಯರ ಸಹಾಯದಿಂದ ವ್ಯವಹಾರಿಕ ಸಮಸ್ಯೆ ಪರಿಹಾರ ಕಾಣಲಿದೆ. ಸಂಗಾತಿಯ ಬೆಂಬಲ ಪಡೆಯಲಿದ್ದೀರಿ. ವ್ಯವಹಾರದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಲಿದೆ. ಹಿರಿಯ ಸದಸ್ಯರ ಸಹಕಾರ ಲಾಭದಾಯಕವಾಗಲಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ 2ನೇ ಕಂತಿನ ಹಣ ಎಲ್ಲರಿಗೂ ಸಿಗಲ್ಲ‌ ! ಯಾವುದಕ್ಕೂ ಒಮ್ಮೆ ಸ್ಟೇಟಸ್‌ ಚೆಕ್‌ ಮಾಡಿ

ಮಕರರಾಶಿ ದಿನಭವಿಷ್ಯ
ಕುಟುಂಬ ಸದಸ್ಯರ ಜೊತೆಗೆ ಮೋಜು ಮಸ್ತಿ ಮಾಡುವಿರಿ. ಆಸ್ತಿ ವ್ಯವಹಾರಗಳು ನಿಮಗೆ ಲಾಭದಾಯಕವಾಗಿ ಪರಿಣಮಿಸಲಿದೆ. ಯಾರ ಪ್ರಭಾವಕ್ಕೂ ಒಳಗಾಗಬೇಡಿ. ಆರೋಗ್ಯದ ವಿಚಾರದಲ್ಲಿ ನೀವು ಜಾಗರೂಕರಾಗಿ ಇರಬೇಕು. ಸಂಜೆಯ ವೇಳೆಯಲ್ಲಿ ದೂರ ಪ್ರಯಾಣ ಕೈಗೊಳ್ಳುವ ಸಾಧ್ಯತೆಯಿದೆ.

ಕುಂಭರಾಶಿ ದಿನಭವಿಷ್ಯ
ಸಂಗಾತಿಯೊಂದಿಗೆ ಶಾಪಿಂಗ್‌ಗೆ ತೆರಳುವ ಸಾಧ್ಯತೆಯಿದೆ. ಕುಟುಂಬ ವಿಚಾರಕ್ಕಾಗಿ ಹೆಚ್ಚಿನ ಖರ್ಚು ನಿಮ್ಮನ್ನು ಕಂಗೆಡಿಸಲಿದೆ. ಸರಕಾರಿ ಉದ್ಯೋಗದಲ್ಲಿ ಇರುವವರಿಗೆ ಭಡ್ತಿ ದೊರೆಯಲಿದೆ. ಹಳೆಯ ಸಾಲ ಮರುಪಾವತಿಯಿಂದ ಮನಸ್ಸಿಗೆ ನೆಮ್ಮದಿ. ಹಳೆಯ ಸ್ನೇಹಿತರ ಭೇಟಿಯಿಂದ ನೆಮ್ಮದಿ.

ಮೀನರಾಶಿ ದಿನಭವಿಷ್ಯ
ಮಕ್ಕಳ ಆರೋಗ್ಯದ ಸಮಸ್ಯೆ ಪರಿಹಾರವಾಗಲಿದೆ. ವಿದ್ಯಾರ್ಥಿಗಳು ಪರೀಕ್ಷೆಯ ವಿಚಾರದಲ್ಲಿ ಯಶಸ್ಸಿ ಆಗುತ್ತಾರೆ. ಸ್ನೇಹಿತರ ಆರೋಗ್ಯ ಬಗ್ಗೆ ಚಿಂತೆ ಮಾಡುವಿರಿ. ವ್ಯವಹಾರದ ವಿಚಾರದಲ್ಲಿ ಶುಭ ಸೂಚನೆಗಳು ದೊರೆಯಲಿದೆ. ಬಾಳ ಸಂಗಾತಿಯ ಸಹಕಾರದಿಂದ ಮನಸಿಗೆ ನೆಮ್ಮದಿ ಮೂಡಲಿದೆ.

Horoscope Today October 10 2023 Zordic Sign

Comments are closed.