ಭಾನುವಾರ, ಏಪ್ರಿಲ್ 27, 2025
Homehoroscopeದಿನಭವಿಷ್ಯ ಸೆಪ್ಟೆಂಬರ್‌ 30 2023 : ಧ್ರುವ ಯೋಗದಿಂದ ಈ ರಾಶಿಯವರಿಗೆ ಅದೃಷ್ಟ

ದಿನಭವಿಷ್ಯ ಸೆಪ್ಟೆಂಬರ್‌ 30 2023 : ಧ್ರುವ ಯೋಗದಿಂದ ಈ ರಾಶಿಯವರಿಗೆ ಅದೃಷ್ಟ

- Advertisement -

ಇಂದು ಸೆಪ್ಟೆಂಬರ್‌ 30 2023 ಶನಿವಾರ. ರೇವತಿ ನಕ್ಷತ್ರವು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಧ್ರುವ ಯೋಗವು ರೂಪುಗೊಳ್ಳುತ್ತಿದ್ದು, ಕೆಲವು ರಾಶಿಗಳಿಗೆ ಉತ್ತಮ ಫಲಿತಾಂಶ ದೊರೆಯಲಿದೆ. ಮೇಷ ರಾಶಿಯಿಂದ ಮೀನ ರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನ ಭವಿಷ್ಯ (Horoscope Today) ಹೇಗಿದೆ.

ಮೇಷ ರಾಶಿ
ನಿಮ್ಮ ಅಗತ್ಯತೆಗಳು ಇಂದು ಈಡೇರಲಿದೆ. ಶ್ರಮವಹಿಸಿ ಕೆಲಸ ಕೆಲಸ ಮಾಡಿದ್ರೆ ಯಶಸ್ಸು ದೊರೆಯುತ್ತದೆ. ಕೆಲಸ ಕಾರ್ಯಗಳಲ್ಲಿ ಶತ್ರುಗಳಿಂದ ಕಿರುಕುಳ ಸಾಧ್ಯತ. ಸಮಸ್ಯೆಗಳಿಗೆ ಇಂದು ಮುಕ್ತಿ ದೊರೆಯುತ್ತದೆ. ಇಂದು ನೀವು ಸಂತೋಷವಾಗಿ ಇರುತ್ತೀರಿ.

ವೃಭಷ ರಾಶಿ

ಇತರರ ಸಲಹೆಯ ಮೇರೆಗೆ ಹಣವನ್ನು ಹೂಡಿಕೆ ಮಾಡಿ. ಭವಿಷ್ಯದಲ್ಲಿ ಇದರಿಂದ ಉತ್ತಮ ಫಲ ದೊರೆಯಲಿದೆ. ಉದ್ಯೋಗ, ವ್ಯವಹಾರದಲ್ಲಿ ನಷ್ಟ ಉಂಟಾಗುವ ಸಾಧ್ಯತೆಯಿದೆ. ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ.

ಇದನ್ನೂ ಓದಿ : ದೀಪಾವಳಿಗೆ ಭರ್ಜರಿ ಗಿಫ್ಟ್‌ : ಪ್ರತೀ ಕುಟುಂಬಕ್ಕೂ ತಲಾ 2000ರೂ. ಘೋಷಣೆ

ಮಿಥುನ ರಾಶಿ
ಕುಟುಂಬದಲ್ಲಿನ ವಿವಾದಗಳು ಇಂದು ಬಗೆ ಹರಿಯಲಿದೆ. ಯಾವುದೇ ಕೆಲಸ ಕಾರ್ಯಗಳಲ್ಲಿಯೂ ಇಂದು ಯಶಸ್ವಿ ಆಗುತ್ತೀರಿ. ಮಕ್ಕಳ ಆಸೆಗಳನ್ನು ಇಂದು ಪೂರೈಸುತ್ತೀರಿ. ಮಧ್ಯಾಹ್ನದ ನಂತರ ಯಾರನ್ನೇ ಭೇಟಿಯಾದರೂ ಎಚ್ಚರಿಕೆ ವಹಿಸಿ.

ಕರ್ಕಾಟಕ ರಾಶಿ
ಆರೋಗ್ಯದ ಬಗ್ಗೆ ಎಚ್ಚರಿಕ ವಹಿಸಿ. ಉದ್ಯೋಗ ಸ್ಥಳದಲ್ಲಿ ಮೇಲಾಧಿಕಾರಿಗಳಿಂದ ಕೆಲಸದ ಒತ್ತಡ. ಕುಟುಂಬಸ್ಥರಿಗೆ ಸಮಯ ನೀಡಲು ಸಾಧ್ಯವಾಗುವುದಿಲ್ಲ. ಬಾಳ ಸಂಗಾತಿಯಿಂದ ಸಹಕಾರ ದೊರೆಯುತ್ತದೆ. ಸಹೋದರರ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾಗಲಿದೆ.

Horoscope today September 30 2023 Zordic Sign
Image Credit To Original Source

ಸಿಂಹ ರಾಶಿ
ಸಾಮಾಜಿಕವಾಗಿ ಉತ್ತಮವಾದ ದಿನ. ಪಾಲುದಾರಿಕೆಯ ವ್ಯವಹಾರ ಇಂದು ಹೆಚ್ಚು ಲಾಭವನ್ನು ತಂದುಕೊಡಲಿದೆ. ಸ್ನೇಹಿತರ ಸಹಾಯದಿಂದ ಆರ್ಥಿಕವಾಗಿ ಲಾಭಗಳಿಸುತ್ತೀರಿ. ಕುಟುಂಬಕ್ಕಾಗಿ ಸಾಕಷ್ಟು ಹಣವನ್ನು ವ್ಯಯಿಸಲಿದ್ದೀರಿ. ಹೊಸ ಯೋಜನೆಗಳಲ್ಲಿ ಇಂದು ಯಶಸ್ಸು ಕಾಣುವಿರಿ.

ಇದನ್ನೂ ಓದಿ : ಮತ್ತೊಂದು ದಾಖಲೆಗೆ ಸಜ್ಜಾದ ಪ್ರಶಾಂತ್ ನೀಲ್: ಪ್ರಭಾಸ್ ಸಲಾರ್ ರಿಲೀಸ್ ಗೆ ಡೇಟ್ ಫಿಕ್ಸ್

ಕನ್ಯಾ ರಾಶಿ
ಆರ್ಥಿಕ ಸ್ಥಿತಿ ಇಂದು ಸುಧಾರಣೆಯನ್ನು ಕಾಣಲಿದೆ. ವಿದ್ಯಾರ್ಥಿಗಳಿಗೆ ಹಣಕಾಸಿನ ಕೊರತೆ ಉಂಟಾಗಲಿದೆ. ವ್ಯವಹಾರ ಕ್ಷೇತ್ರದಲ್ಲಿ ಇಂದು ದೊಡ್ಡಮಟ್ಟದ ಲಾಭ ದೊರೆಯಲಿದೆ. ಆಧ್ಯಾತ್ಮಿಕ ಕ್ಷೇತ್ರದಲ್ಲಿ ನಿಮಗೆ ಮಾನಸಿಕ ನೆಮ್ಮದಿ ದೊರೆಯಲಿದೆ. ಶ್ರದ್ದೆಯಿಂದ ಕೆಲಸ ಮಾಡಿದ್ರೆ ಯಶಸ್ಸು ಖಚಿತ.

ತುಲಾ ರಾಶಿ
ಹವಾಮಾನ ಬದಲಾವಣೆಯಿಂದ ಅನಾರೋಗ್ಯ. ಬಾಳ ಸಂಗಾತಿಯಿಂದ ಸಂಪೂರ್ಣ ಸಹಕಾರ. ಉದ್ಯೋಗ ಕ್ಷೇತ್ರದಲ್ಲಿ ವ್ಯಾಪಾರಸ್ಥರು ಎಚ್ಚರಿಕೆಯನ್ನು ವಹಿಸಿ. ಸಹೋದರರ ಸಹಕಾರದಿಂದ ಹೊಸ ಆದಾಯದ ಮೂಲ ದೊರೆಯಲಿದೆ. ಮಕ್ಕಳಿಗಾಗಿ ಹೂಡಿಕೆ ಮಾಡಿದ್ರೆ ಯಶಸ್ಸು ಕಾಣುವಿರಿ.

ಇದನ್ನೂ ಓದಿ : ಕೋಟದಲ್ಲಿ ಲಾರಿ ಚಾಲಕರು, ಮಾಲೀಕರ ಮುಷ್ಕರ : ಜಿಲ್ಲಾಡಳಿತ ವಿರುದ್ದ ತೀವ್ರ ಆಕ್ರೋಶ

ವೃಶ್ಚಿಕ ರಾಶಿ
ತಂದೆಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಹೊಸ ವ್ಯವಹಾರಗಳಲ್ಲಿ ಇಂದು ಯಶಸ್ಸಿ ಆಗುತ್ತೀರಿ. ಶತ್ರುಗಳು ನಿಮ್ಮನ್ನು ಗಮನಿಸುತ್ತಾರೆ. ಎಲ್ಲಾ ಕಾರ್ಯಗಳನ್ನು ಮಾಡುವಾಗ ಸಾಕಷ್ಟು ಎಚ್ಚರವಾಗಿ ಇರುವುದು ಒಳಿತು. ಹೊಂದಾಣಿಕೆಯಿಂದ ಕಾರ್ಯಾನುಕೂಲ.

ಧನಸ್ಸು ರಾಶಿ
ತಾಯಿಯ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ಕೆಲವೊಂದು ಸಮಸ್ಯೆಗಳನ್ನು ನೀವು ಇಂದು ಎದುರಿಸಬೇಕಾಗುತ್ತದೆ. ವ್ಯವಹಾರ ಕ್ಷೇತ್ರದಲ್ಲಿ ಲಾಭವನ್ನು ಕಾಣಲಿದ್ದೀರಿ. ಹಿರಿಯ ಮಾರ್ಗದರ್ಶನದಿಂದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಯಶಸ್ಸು ದೊರೆಯಲಿದೆ. ಹಣವನ್ನು ಉತ್ತಮ ಉದ್ದೇಶಕ್ಕೆ ವ್ಯಯ ಮಾಡಿ.

ಮಕರ ರಾಶಿ
ಆರ್ಥಿಕ ಲಾಭದ ದೃಷ್ಟಿಯಿಂದ ನೋಡಿದ್ರೆ ಉತ್ತಮವಾದ ದಿನ. ವ್ಯವಹಾರ ಕ್ಷೇತ್ರದಲ್ಲಿ ಆಸಕ್ತಿ ಹೆಚ್ಚಲಿದೆ. ಯಾವುದೇ ನಿರ್ಧಾರವನ್ನು ಕೈಗೊಳ್ಳುವ ಮೊದಲು ಸಾಕಷ್ಟು ಯೋಚಿಸಿ. ಕುಟುಂಬಸ್ಥರ ಜೊತೆಗೆ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವಿರಿ. ನಿಮ್ಮ ಮನಸ್ಸಿಗೆ ಇಂದು ಸಂತೋಷವಾಗಲಿದೆ. ಕಷ್ಟಕರವಾದ ಕೆಲಸವನ್ನು ಸುಲಭವಾಗಿ ಮುಗಿಸುವಿರಿ.

ಇದನ್ನೂ ಓದಿ : ಈ ಮಹಿಳೆಯರಿಗೆ ಸಿಗೋದಿಲ್ಲ ಗೃಹಲಕ್ಷ್ಮೀ ಯೋಜನೆಯ 2ನೇ ಕಂತಿನ 2000 ರೂ.

ಕುಂಭ ರಾಶಿ
ರಿಯಲ್‌ ಎಸ್ಟೇಟ್‌ ವ್ಯವಹಾರದಿಂದ ನಷ್ಟ ಸಾಧ್ಯತೆಯಿದೆ. ವ್ಯವಹಾರ ಕ್ಷೇತ್ರದಲ್ಲಿನ ಅಡೆತಡೆಗಳು ಕುಟುಂಬಸ್ಥರ ಸಹಕಾರ ನಿವಾರಣೆ ಆಗಲಿದೆ. ಆರ್ಥಿಕ ಸ್ಥಿತಿಯನ್ನು ಬಲ ಪಡಿಸುವ ನಿಟ್ಟಿನಲ್ಲಿ ನೀವು ಇಂದು ಯಶಸ್ವಿ ಆಗುತೀರಿ. ಮನೆಯವರ ಸಹಕಾರದಿಂದ ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳಲಿದೆ.

ಮೀನ ರಾಶಿ
ನಿರ್ಗತಿಕರಿಗೆ ಇಂದು ಹಣಕಾಸಿನ ಸಹಾಯ ಮಾಡುವಿರಿ. ಆರ್ಥಿಕವಾಗಿ ನೀವು ಇಂದು ದೊಡ್ಡ ಮಟ್ಟದ ಲಾಭವನ್ನು ಪಡೆಯುತ್ತೀರಿ. ವ್ಯವಹಾರ ಕ್ಷೇತ್ರದಲ್ಲಿ ಎಚ್ಚರಿಕೆಯಿಂದ ಇರಿ. ಶತ್ರುಗಳು ನಿಮ್ಮ ಮೇಲೆ ಕಣ್ಣಿಟ್ಟಿದ್ದಾರೆ. ವೈವಾಹಿಕ ಜೀವನದ ಮನಸ್ಥಾಪಗಳು ಇಂದು ಕೊನೆಗೊಳ್ಳಲಿದೆ. ಸಾಮಾಜಿಕವಾಗಿ ಗೌರವ ವೃದ್ದಿಸಲಿದೆ.

Horoscope today September 30 2023 Zordic Sign

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular