ಕೋಟದಲ್ಲಿ ಲಾರಿ ಚಾಲಕರು, ಮಾಲೀಕರ ಮುಷ್ಕರ : ಜಿಲ್ಲಾಡಳಿತ ವಿರುದ್ದ ತೀವ್ರ ಆಕ್ರೋಶ

: ಕಟ್ಟಡ ಸಾಮಗ್ರಿಗಳ ಸಾಗಾಟವನ್ನು ಕಾನೂನು ಬದ್ದಗೊಳಿಸಿ ಉಡುಪಿ ಜಿಲ್ಲಾಡಳಿತ (udupi DC) ಆದೇಶ ಮಾಡಿರುವ ಕ್ರಮವನ್ನು ಖಂಡಿಸಿ ಲಾರಿ ಮತ್ತು ಟೆಂಪೋ ಮಾಲೀಕರ ಸಂಘ (Tempo Drivers Union Strike) ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ.

ಉಡುಪಿ : ಕಟ್ಟಡ ಸಾಮಗ್ರಿಗಳ ಸಾಗಾಟವನ್ನು ಕಾನೂನು ಬದ್ದಗೊಳಿಸಿ ಉಡುಪಿ ಜಿಲ್ಲಾಡಳಿತ (udupi DC) ಆದೇಶ ಮಾಡಿರುವ ಕ್ರಮವನ್ನು ಖಂಡಿಸಿ ಲಾರಿ ಮತ್ತು ಟೆಂಪೋ ಮಾಲೀಕರ ಸಂಘ (Tempo Drivers Union Strike) ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಇದೀಗ ಮುಷ್ಕರ 3 ನೇ ದಿನಕ್ಕೆ ಕಾಳಿಟ್ಟಿದ್ದು, ಹೋರಾಟವನ್ನು ತೀವ್ರಗೊಳಿಸಿದ್ದಾರೆ.

ಜಿಲ್ಲಾಡಳಿತ ಲಾರಿ ಚಾಲಕರು ಮತ್ತು ಮಾಲೀಕರನ್ನು ಗುರಿಯಾಗಿಸಿಕೊಂಡು ನಿಯಮಗಳನ್ನು ಜಾರಿಗೆ ತರುತ್ತಿದೆ. ಹೀಗೆ ಆದ್ರೆ ಉಡುಪಿ ಜಿಲ್ಲೆಯ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತ ಬೀಳಲಿದೆ. ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Lorry drivers, owners strike in Kota Strong anger against the Udupi DC
Image Credit : Vijay Vaddarse

ಅಧಿಕಾರಿಗಳೇ ನಾವು ಕಳ್ಳರಲ್ಲ, ನಮ್ಮದು ಹೊಟ್ಟೆಪಾಡಿನ ಹೋರಾಟ. ಹೀಗಾಗಿ ನ್ಯಾಯ ಸಿಗುವ ತನಕ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಉಡುಪಿ ಜಿಲ್ಲಾಡಳಿತಕ್ಕೆ ಟೆಂಪೋ, ಲಾರಿ ಚಾಲಕರು ಹಾಗೂ ಮಾಲೀಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಕಾವೇರಿಗಾಗಿ ಶುಕ್ರವಾರ ಕರ್ನಾಟಕ ಬಂದ್: ಏನಿರುತ್ತೆ ? ಏನಿರಲ್ಲ?

ಇಂದು ಕೋಟ ಮೂರುಕೈನಿಂದ ಎತ್ತಿನಗಾಡಿ, ಕಂಬಳದ ಕೋಣಗಳ ಜೊತೆಗೆ ಸಾಲಿಗ್ರಾಮದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಚಾಲಕರು ಹಾಗೂ ಮಾಲೀಕರು ಸಾಲಿಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ

Lorry drivers, owners strike in Kota Strong anger against the Udupi DC
Image Credit : Vijay Vaddarse

ನಂತರ ಅಲ್ಲಿಂದು ಸಾಲಿಗ್ರಾಮ ಬಸ್‌ ನಿಲ್ದಾಣದ ಬಳಿಗೆ ತೆರಳಿದ ನೂರಾರು ಸಂಖ್ಯೆಯ ಪ್ರತಿಭಟನಾಕಾರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್‌ ಇಲಾಖೆಯ ವಿರುದ್ದ ಕಿಡಿಕಾರಿದ್ದಾರೆ. ಜಿಲ್ಲಾಡಳಿತ ಕೂಡಲೇ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ

ಇನ್ನು ಕೋಟ ವಲಯದ ಲಾರಿ ಮಾಲಕರು ಹಾಗೂ ಚಾಲಕರು ತಮ್ಮ ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಬುಧವಾರ ರಾತ್ರಿ ಕೋಟ ಮೂರು ಕೈ ಬಳಿಯಲ್ಲಿ ಉಡುಪಿ ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿ ಪಂಜಿನ ಮೆರವಣಿಗೆಯನ್ನು ನಡೆಸಿದ್ದರು. ಈ ಮೂಲಕ ಜಿಲ್ಲಾಡಳಿತ ನಡೆಯ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

Lorry drivers, owners strike in Kota Strong anger against the Udupi DC
Image Credit : Vijay Vaddarse

ಇದನ್ನೂ ಓದಿ : ನಾಳೆ ಕರ್ನಾಟಕ ಬಂದ್‌ ಗೆ 1900 ಸಂಘಟನೆಗಳ ಬೆಂಬಲ : ಆಟೋ, ಬಸ್ ಸಂಚಾರ ಇಲ್ಲ, ಬೆಂಗಳೂರಲ್ಲಿ ನಿಷೇಧಾಜ್ಞೆ

ಕಡ್ಡಟ ಸಾಮಗ್ರಿಗಳ ಸಾಗಾಟ ನಿಯಮವನ್ನು ಕಠಿಣಗೊಳಿಸಿರುವುದು ಟೆಂಪೋ, ಲಾರಿಗಳ ಚಾಲಕರು ಹಾಗೂ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಲಾರಿ ಹಾಗೂ ಟೆಂಪೋಗಳನ್ನು ಕೋಟ ಹೈಸ್ಕೂಲಿನಿಂದ ಕೋಟಕ್ಕೆ ತೆರಳುವ ಮಾರ್ಗದಲ್ಲಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಾಲಕರು ಹಾಗೂ ಮಾಲೀಕರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಕುಂದಾಪುರ ಶಾಸಕ ಕಿರಣ್‌ ಕೊಡ್ಗಿ, ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಮುಖಂಡ ಉದಯ್‌ ಕುಮಾರ್‌ ಶೆಟ್ಟಿ ಕಿದಿಯೂರು ಭೇಟಿ ನೀಡಿ ಸಮಸ್ಯೆಯನ್ನು ಶೀಘ್ರದಲ್ಲಿಯೇ ಪರಿಹಾರ ಮಾಡುವ ಭರವಸೆಯನ್ನು ನೀಡಿದ್ದಾರೆ.

Lorry drivers, owners strike in Kota Strong anger against the Udupi DC
Image Credit : Vijay Vaddarse

ಟೆಂಪೋ, ಲಾರಿಯನ್ನು ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿರುವ ಟೆಂಪೋ ಹಾಗೂ ಲಾರಿ ಚಾಲಕರು ಹಾಗೂ ಮಾಲೀಕರು ಇಂದು ಎತ್ತಿನ ಗಾಡಿಯಲ್ಲಿ ಕಟ್ಟಡ ಸಾಮಗ್ರಿಗಳನ್ನು ಸಾಗಾಟ ಮಾಡುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

Lorry drivers, owners strike in Kota Strong anger against the Udupi DC

Comments are closed.