Horoscope Today : ದಿನಭವಿಷ್ಯ 05 ನವೆಂಬರ್‌ 2023 : ಪುಷ್ಯಾ ನಕ್ಷತ್ರದಿಂದ ಈ ರಾಶಿಯವರಿಗೆ ಅದೃಷ್ಟದ ದಿನ 

Horoscope Today : ದಿನಭವಿಷ್ಯ 05 ನವೆಂಬರ್‌ 2023 ಭಾನುವಾರ. ಇಂದು ದ್ವಾದಶರಾಶಿಗಳ ಮೇಲೆ ಪುಷ್ಯಾ ನಕ್ಷತ್ರದ ಪ್ರಭಾವ ಇರುತ್ತದೆ. ವೃಷಭರಾಶಿ, ಕರ್ಕಾಟಕರಾಶಿ, ಕನ್ಯಾರಾಶಿ, ತುಲಾರಾಶಿ, ಮಕರರಾಶಿ ಮತ್ತು ಕುಂಭರಾಶಿಯವರಿಗೆ ಚಂದ್ರಬಲ ಇರುತ್ತದೆ.

Horoscope Today : ದಿನಭವಿಷ್ಯ 05 ನವೆಂಬರ್‌ 2023 ಭಾನುವಾರ. ಇಂದು ದ್ವಾದಶರಾಶಿಗಳ ಮೇಲೆ ಪುಷ್ಯಾ ನಕ್ಷತ್ರದ ಪ್ರಭಾವ ಇರುತ್ತದೆ. ವೃಷಭರಾಶಿ, ಕರ್ಕಾಟಕರಾಶಿ, ಕನ್ಯಾರಾಶಿ, ತುಲಾರಾಶಿ, ಮಕರರಾಶಿ ಮತ್ತು ಕುಂಭರಾಶಿಯವರಿಗೆ ಚಂದ್ರಬಲ ಇರುತ್ತದೆ. ಹಾಗಾದ್ರೆ ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು 12  ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಹಲವು ದಿನಗಳ ನಂತರ ನಿಮ್ಮ ಆರ್ಥಿಕ ಸ್ಥಿತಿಯು ಸುಧಾರಣೆಯನ್ನು ಕಾಣಲಿದೆ. ಸ್ವತಂತ್ರವಾಗಿ ಹೂಡಿಕೆ ಮಾಡುವುದರಿಂದ ಲಾಭ ದೊರೆಯಲಿದೆ. ಸಂಗಾತಿಯಿಂದ ನಿಮಗೆ ಸಂತೋಷ ದೊರೆಯುತ್ತದೆ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದೆ.

ವೃಷಣರಾಶಿ ದಿನಭವಿಷ್ಯ
ಉದ್ಯಮಗಳಲ್ಲಿ ಯಶಸ್ಸು ದೊರೆಯಲಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಲಿದೆ. ಸಾಲಗಾರರ ಕಾಟದಿಂದ ಕೊಂಚ ಮುಕ್ತಿ ದೊರೆಯಲಿದೆ. ಕುಟುಂಬ ಸದಸ್ಯರ ಸಹಕಾರ ದೊರೆಯಲಿದೆ. ಪ್ರೀತಿಯ ಜೀವನವು ನಿಮಗೆ ಸಂತೋಷವಾಗಿ ಇರುತ್ತದೆ. ಅವಿವಾಹಿತರಿಗೆ ಇಂದು ವಿವಾಹ ಯೋಗವಿದೆ. ದೂರ ಪ್ರಯಾಣದಿಂದ ಅಧಿಕ ಲಾಭ.

ಮಿಥುನರಾಶಿ ದಿನಭವಿಷ್ಯ
ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕೆಲಸದ ನಿಮಿತ್ತ ಹೊರ ಜಿಲ್ಲೆಗಳಿಗೆ ತೆರಳುವವರು ಶುಭ ಸುದ್ದಿ ದೊರೆಯಲಿದೆ. ಹಣದ ವಿಚಾರದಲ್ಲಿ ಎಚ್ಚರಿಕೆ ವಹಿಸುವುದು ತೀರಾ ಅಗತ್ಯ. ಬಿಡುವಿಲ್ಲದ ವೇಳಾಪಟ್ಟಿ ನಿಮ್ಮನ್ನು ಕಂಗೆಡಿಸಲಿದೆ. ಕುಟುಂಬ ಸದಸ್ಯರು ನಿಮ್ಮ ಸಮಸ್ಯೆಯಿಂದ ಪಾರು ಮಾಡಲಿದ್ದಾರೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

ಇದನ್ನೂ ಓದಿ : ಮುಂದಿನ ಐದು ವರ್ಷಗಳ ಅವಧಿಗೆ ಸಿಗಲಿದೆ ಫ್ರೀ ಅಕ್ಕಿ, ಬೇಳೆ : ಪ್ರಧಾನಿ ಮೋದಿ ಗುಡ್​ನ್ಯೂಸ್​

ಕರ್ಕಾಟಕರಾಶಿ ದಿನಭವಿಷ್ಯ
ತಂದೆಯ ಯಾವುದೇ ಸಲಹೆಗಳು ನಿಮಗೆ ಕೆಲಸದ ಸ್ಥಳದಲ್ಲಿ ಪ್ರಯೋಜನಕಾರಿ ಆಗಲಿದೆ. ಪ್ರಭಾವಿ ವ್ಯಕ್ತಿಗಳ ಸಂಪರ್ಕದಿಂದ ನಿಮಗೆ ಅಧಿಕ ಲಾಭ. ಹಳೆಯ ಸಮಸ್ಯೆಯೊಂದಕ್ಕೆ ಇಂದು ಪರಿಹಾರ ದೊರೆಯಲಿದೆ. ಆರ್ಥಿಕವಾಗಿ ಚೇತರಿಕೆ ಕಂಡು ಬರಲಿದೆ. ವಿಶ್ರಾಂತಿಯನ್ನು ಪಡೆಯುವುದು ತೀರಾ ಅಗತ್ಯ.

ಸಿಂಹರಾಶಿ ದಿನಭವಿಷ್ಯ
ಒತ್ತಡದ ಹೊರತಾಗಿಯೂ ನಿಮ್ಮ ಆರೋಗ್ಯವೂ ಪರಿಪೂರ್ಣವಾಗಿ ಇರಲಿದೆ. ಕುಟುಂಬ ಸದಸ್ಯರಿಗಾಗಿ ನೀವು ಸಾಕಷ್ಟು ಹಣವನ್ನು ವ್ಯಯಿಸಬೇಕಾಗುತ್ತದೆ. ಪಾರ್ಟಿ ಮಾಡಲು ಯೋಚಿಸುತ್ತಿದ್ದರೆ ಹಳೆಯ ಸ್ನೇಹಿತರನ್ನು ಆಹ್ವಾನಿಸಿ. ಒತ್ತಡದ ಕಾರಣದಿಂದ ಸಂಗಾತಿಯ ಜೊತೆಗೆ ಯಾವುದೇ ಕಾರಣಕ್ಕೂ ಜಗಳವಾಡಬೇಡಿ.

ಇದನ್ನೂ ಓದಿ : ಕರಾವಳಿಯಲ್ಲಿ ಭತ್ತದ ಕಟಾವು ಕಾರ್ಯಕ್ಕೆ ಮಳೆಯ ಆತಂಕ : ಕರ್ನಾಟಕದಲ್ಲಿ ನವೆಂಬರ್‌ 5ರ ವರೆಗೆ ಸುರಿಯಲಿದೆ ಭಾರೀ ಮಳೆ

ಕನ್ಯಾರಾಶಿ ದಿನಭವಿಷ್ಯ
ನಿಮ್ಮ ಆರೋಗ್ಯದ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ. ಸುತ್ತಮುತ್ತಲಿನ ಜನರಿಗೆ ನಿಮಗೆ ಆತ್ಮಸ್ಥೈರ್ಯವನ್ನು ತುಂಬಲಿದ್ದಾರೆ. ಮಾತುಗಳ ಮೇಲೆ ಹಿಡಿತ ಇರಲಿ. ಆರ್ಥಿಕ ನಷ್ಟ ಸಾಧ್ಯತೆಯಿದ್ದು, ಹೂಡಿಕೆಗಳ ಮೇಲೆ ಎಚ್ಚರಿಕೆ ವಹಿಸಿ. ಹೊಸ ಯೋಜನೆಯನ್ನು ಆರಂಭಿಸುವ ಮೊದಲು ಅದರ ಬಗೆಗಿನ ಸಾಧಕ ಬಾಧಕಗಳ ಕುರಿತು ಯೋಚಿಸಿ. ಸಕಾರಾತ್ಮಕ ಯೋಚನೆಗಳು ನಿಮಗೆ ನೆಮ್ಮದಿಯನ್ನು ತಂದುಕೊಡಲಿದೆ.

Horoscope Today 05 November 2023 Zordic Sign 
Image Credit to Original Source

ತುಲಾರಾಶಿ ದಿನಭವಿಷ್ಯ
ನಿಮ್ಮ ದೈಹಿಕ ಶಕ್ತಿಯನ್ನು ಕಾಪಾಡಿಕೊಳ್ಳಲು ನೀವು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ಹಣದ ಖರ್ಚಿನ ಬಗ್ಗೆ ಎಚ್ಚರಿಕೆಯನ್ನು ವಹಿಸುವುದು ತೀರಾ ಅಗತ್ಯ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನೀವು ಸಮಸ್ಯೆಯನ್ನು ಎದುರಿಸ ಬೇಕಾಗುತ್ತದೆ. ಸಂಗಾತಿಯನ್ನು ಯಾವುದೇ ಕಾರಣಕ್ಕೂ ನೋಯಿಸಬೇಡಿ. ಹಳೆಯ ತಪ್ಪನ್ನು ಅರಿತು ಕೊಂಡ್ರೆ ಇಂದು ಸಂತೋಷದ ದಿನವಾಗಲಿದೆ.

ಇದನ್ನೂ ಓದಿ :ಮುಂದಿನ ಐದು ವರ್ಷಗಳ ಅವಧಿಗೆ ಸಿಗಲಿದೆ ಫ್ರೀ ಅಕ್ಕಿ, ಬೇಳೆ : ಪ್ರಧಾನಿ ಮೋದಿ ಗುಡ್​ನ್ಯೂಸ್​

ವೃಶ್ಚಿಕರಾಶಿ ದಿನಭವಿಷ್ಯ
ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ. ಆಧ್ಯಾತ್ಮಿಕ ಜೀವನವು ಮನಸಿಗೆ ನೆಮ್ಮದಿಯನ್ನು ಕೊಡಲಿದೆ. ಸುತ್ತಮುತ್ತಲಿನ ವಿಚಾರಗಳಿಗಾಗಿ ಹಣವನ್ನು ನೀವಿಂದು ವ್ಯಯ ಮಾಡುವಿರಿ. ಅಧಿಕ ಖರ್ಚು ನಿಮ್ಮನ್ನು ಕೆಂಗೆಡಿಸುವ ಸಾಧ್ಯತೆಯಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲವಾಗಲಿದೆ. ಮದುವೆಯ ಸಂಬಂಧಗಳು ಮುರಿದು ಹೋಗುವ ಸಾಧ್ಯತೆ ಇರುತ್ತದೆ.

ಧನಸ್ಸುರಾಶಿ ದಿನಭವಿಷ್ಯ
ನಿಮ್ಮ ಆಕರ್ಷಕ ನಡವಳಿಕೆಯು ಇಂದು ಇತರರ ಗಮನ ಸೆಳೆಯಲಿದೆ. ಕುಟುಂಬ ಸದಸ್ಯರ ವರ್ತನೆ ನಿಮಗೆ ಬೇಸರ ತರಿಸಲಿದೆ. ಗೆಳತಿಯೊಂದಿಗೆ ಯಾವುದೇ ಕಾರಣಕ್ಕೂ ಅಸಭ್ಯವಾಗಿ ವರ್ತಿಸಬೇಡಿ. ಸಮಯವನ್ನು ಹಾಳು ಮಾಡಿದ್ರೆ ಪಶ್ಚಾತಾಪ ಪಡಬೇಕಾಗುತ್ತದೆ. ಒತ್ತಡದ ಬದುಕು ನಿಮಗೆ ಬೇಸರವನ್ನು ಮೂಡಿಸಲಿದೆ. ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾದ ಅಗತ್ಯವಿದೆ.

ಮಕರರಾಶಿ ದಿನಭವಿಷ್ಯ
ನೀವಿಂದು ಹಣದ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳುವಿರಿ. ಅನಗತ್ಯ ಖರ್ಚುಗಳ ಮೇಲೆ ಹಿಡಿತ ಇರಲಿ. ಇಲ್ಲವಾದ್ರೆ ಭವಿಷ್ಯದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ. ಕುಟುಂಬದ ಜವಾಬ್ದಾರಿಗಳು ನಿಮಗೆ ಉದ್ವೇಗವನ್ನು ತರಲಿದೆ. ಕಠೋರ ಮಾತುಗಳಿಂದ ನಿಮ್ಮ ಮನಸ್ಥಿತಿಯು ವಿಚಲಿತವಾಗಲಿದೆ. ವೈವಾಹಿಕ ಜೀವನದಲ್ಲಿನ ಅಡೆತಡೆಗಳು ನಿವಾರಣೆ ಆಗಲಿದೆ. ಬುದ್ದಿವಂತಿಕೆಯಿಂದ ವ್ಯವಹಾರವನ್ನು ಮಾಡುವುದು ಒಳಿತು.

ಕುಂಭರಾಶಿ ದಿನಭವಿಷ್ಯ
ಮಕ್ಕಳ ವಿಚಾರದಲ್ಲಿ ನೀವು ಸಮಾಧಾನವನ್ನು ಕಂಡುಕೊಳ್ಳಿ. ಸಣ್ಣಪುಟ್ಟ ವಿಚಾರಗಳಿಗೆ ನೀವು ಸಾಕಷ್ಟು ಹಣವನ್ನು ವ್ಯಯ ಮಾಡಬೇಕಾಗುತ್ತದೆ. ಇಂದು ರೋಮ್ಯಾಂಟಿಕ್‌ ಭಾವನೆಯಲ್ಲಿ ನೀವು ಮುಳುಗಿರುತ್ತೀರಿ. ಶಾಂಪಿಂಗ್‌ ಮಾಡಲು ತೆರಳುವ ಸಾಧ್ಯತೆಯಿದೆ. ಅಪರಿಚಿತರ ಸ್ನೇಹ ಮಾಡುವ ಮುನ್ನ ಎಚ್ಚರಿಕೆಯನ್ನು ವಹಿಸುವುದು ತೀರಾ ಅಗತ್ಯ.

ಮೀನರಾಶಿ ದಿನಭವಿಷ್ಯ
ವ್ಯವಹಾರ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ. ನಿಮ್ಮ ಕೋಪವನ್ನು ಇಂದು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ಆರ್ಥಿಕ ಪರಿಸ್ಥಿತಿ ನಿಮ್ಮನ್ನು ಕಂಗೆಡಿಸಬಹುದು. ಸ್ನೇಹಿತರ ಕಡೆಯಿಂದ ಅಚ್ಚರಿಯ ವಿಚಾರವೊಂದು ನಿಮಗೆ ತಿಳಿಯಲಿದೆ. ಅನಗತ್ಯ ವಾದ ವಿವಾದಗಳಿಂದ ದೂರ ಇರುವುದು ಉತ್ತಮ. ಯಾವುದೇ ಕಾರಣಕ್ಕೂ ಸಮಯವನ್ನು ನೀವು ವ್ಯರ್ಥ ಮಾಡಬೇಡಿ. ಜೀವನ ಸಂಗಾತಿಯಿಂದ ನಿಮಗೆ ಮನಸಿಗೆ ನೆಮ್ಮದಿ ದೊರೆಯಲಿದೆ.

Horoscope Today 05 November 2023 Zordic Sign 

Comments are closed.