ಬಿಜೆಪಿಗೆ ಬಿಎಸ್‌ ಯಡಿಯೂರಪ್ಪ ಅನಿವಾರ್ಯ : ಕರ್ನಾಟಕ ರಾಜ್ಯ ಬಿಜೆಪಿಗೆ ಬಿವೈ ವಿಜಯೇಂದ್ರ ಅಧ್ಯಕ್ಷ

ಚುನಾವಣಾ ರಾಜಕಾರಣದ ಗಂಧ ಗಾಳಿ ಅರಿಯದವರ ರಣತಂತ್ರಕ್ಕೆ ಮಣೆ ಹಾಕಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದ ಬಿಎಸ್‌ ಯಡಿಯೂರಪ್ಪ (BS Yediyurapp) ಅವರನ್ನೇ ಮೂಲೆಗುಂಪು ಮಾಡಿದ್ದ ಕಮಲ ಪಾಳಯಕ್ಕೆ ಇದೀಗ ಹಳೆ ಸೇನಾಧಿಪತಿಯ ಪಾದವೇ ಗತಿ ಎಂಬಂತಾಗಿದೆ.

ಬೆಂಗಳೂರು : ನಾಯಕತ್ವ ಅನ್ನೋದು ಎಷ್ಟು ಮುಖ್ಯ ಅಂತ ಸದ್ಯ ರಾಜ್ಯ ಬಿಜೆಪಿಗೆ ಅರ್ಥವಾದಷ್ಟು ಇನ್ಯಾರಿಗೂ ಅರ್ಥವಾಗಿರಲಿಕ್ಕಿಲ್ಲ. ಚುನಾವಣಾ ರಾಜಕಾರಣದ ಗಂಧ ಗಾಳಿ ಅರಿಯದವರ ರಣತಂತ್ರಕ್ಕೆ ಮಣೆ ಹಾಕಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದ ಬಿಎಸ್‌ ಯಡಿಯೂರಪ್ಪ (BS Yediyurapp) ಅವರನ್ನೇ ಮೂಲೆಗುಂಪು ಮಾಡಿದ್ದ ಕಮಲ ಪಾಳಯಕ್ಕೆ ಇದೀಗ ಹಳೆ ಸೇನಾಧಿಪತಿಯ ಪಾದವೇ ಗತಿ ಎಂಬಂತಾಗಿದೆ.

ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ನಾಯಕತ್ವಕ್ಕೆ ಬಿಜೆಪಿ ಮರಳಿದೆ. ಸದ್ಯದಲ್ಲಿಯೇ ಕರ್ನಾಟಕದ ಬಿಜೆಪಿ ಜವಾಬ್ದಾರಿ ಬಿಎಸ್‌ವೈ ಹೆಗಲೇರಲಿದ್ದು, ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ (BY Vijayendra) ರಾಜ್ಯ ಬಿಜೆಪಿಯ ಅಧ್ಯಕ್ಷರಾಗುವುದು (karnataka BJP State President)  ಖಚಿತ. ಹೀಗಾಗಿ ಕರ್ನಾಟಕ ಬಿಜೆಪಿಗೆ ವಿಜಯೇಂದ್ರನೇ ಸಾರಥಿ ಹಾಗೂ ಬಿಎಸ್‌ ಯಡಿಯೂರಪ್ಪ ಅಧಿಪತಿ ಎಂಬುದು ಮತ್ತೊಮ್ಮೆ ಸಾಬೀತಾದಂತಿದೆ.

BS Yeddyurappa is indispensable for BJP, Karnataka State BJP president BY Vijayendra
Image Credit to Original Source

ರಾಜ್ಯದಲ್ಲಿ ಬಿಜೆಪಿಯನ್ನು ಸೈಕಲ್ ಬ್ಯಾಲೆನ್ಸ್ ಮಾಡುತ್ತಾ, ಮನೆ ಮನೆ ತಿರುಗಿ ಕಟ್ಟಿದವರು ಶಿವಮೊಗ್ಗದ ಹುಲಿ ಬಿಎಸ್‌ ಯಡಿಯೂರಪ್ಪ. ಅಷ್ಟೇ ಯಾಕೆ ದಕ್ಷಿಣ ಭಾರತದಲ್ಲಿಯೇ ಬಿಜೆಪಿ ಬಾವುಟವನ್ನು ಹಾರಿಸಿದವರು ಕೂಡ ಇದೇ ಯಡಿಯೂರಪ್ಪ. ಆದರೆ ಅದ್ಯಾವುದೋ ವಿಷ ಗಳಿಗೆಯಲ್ಲಿ ಎಲ್ಲವನ್ನೂ ಮರೆತ ಬಿಜೆಪಿ ಬಿಎಸ್‌ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸಿ ಬಲವಂತವಾಗಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿ ಮನೆಸೇರುವಂತೆ ಮಾಡಿತ್ತು.

ಇದನ್ನೂ ಓದಿ : ಕಾಂಗ್ರೆಸ್ ಟೀಕೆಯಿಂದ ಮುಜುಗರ: ವಿಪಕ್ಷ ನಾಯಕನಿಲ್ಲದೇ ಅಧಿವೇಶನದಿಂದ ದೂರ ಉಳಿಯಲು ಬಿಜೆಪಿ ಶಾಸಕರ ನಿರ್ಧಾರ

ಸಿಎಂ ಕುರ್ಚಿಯಿಂದ ಕೆಳಗೆ ಇಳಿಯುವ ಹೊತ್ತಲ್ಲೇ ಯಡಿಯೂರಪ್ಪ ಅವರು ಸುರಿಸಿದ ಕಣ್ಣೀರು, ಬಿಜೆಪಿಯ ಮೇಲೆ ಪರಿಣಾಮ ಬೀರಲು ಹೆಚ್ಚು ಸಮಯ ಹಿಡಿಯಲೇ ಇಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣವಾಗಿ ನೆಲ ಕಚ್ಚಿದ್ದು, ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಅಧಿಕಾರದ ಗದ್ದುಗೆಗೆ ಏರಿತ್ತು.

ರಾಜ್ಯದಲ್ಲಿ ಸರಕಾರ ಅಧಿಕಾರಕ್ಕೆ ಬಂದು ಆರು ತಿಂಗಳೇ ಕಳೆದು ಹೋಗಿದೆ. ಆದ್ರೆ ವಿರೋಧ ಪಕ್ಷದ ನಾಯಕನ ಆಯ್ಕೆಯನ್ನು ಮಾಡಲು ಬಿಜೆಪಿ ನಾಯಕರಿಂದ ಸಾಧ್ಯವಾಗಿಲ್ಲ. ಜೊತೆಗೆ ರಾಜ್ಯಾಧ್ಯಕ್ಷ ಹುದ್ದೆಗೆ ಸಮರ್ಥವನ್ನು ಆಯ್ಕೆ ಮಾಡಲು ರಾಜ್ಯ ಹಾಗೂ ರಾಷ್ಟ್ರ ನಾಯಕರಿಂದ ಆಗುತ್ತಿಲ್ಲ. ಹೀಗಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು, ಸರ್ಕಾರ ಅಳತೆಗೆಟ್ಟು ಹೋಗಿದ್ದರೂ ಬಿಜೆಪಿ ನೋಡಿಕೊಂಡು ಸುಮ್ಮನಿರುವ ಸ್ಥಿತಿ ಬಂದಿದೆ.

ಇದನ್ನೂ ಓದಿ : ಬಿಜೆಪಿ ರಾಜ್ಯಾಧ್ಯಕ್ಷರಾಗ್ತಾರಾ ಬಿ ವೈ ವಿಜಯೇಂದ್ರ : ಪುತ್ರನ ಅಧಿಕಾರಕ್ಕಾಗಿ ಬಿಎಸ್ ಯಡಿಯೂರಪ್ಪ ಮಾಸ್ಟರ್ ಪ್ಲ್ಯಾನ್

ಇದೆಲ್ಲವನ್ನು ಕಂಡ ಬಿಎಸ್‌ ಯಡಿಯೂರಪ್ಪ ಅವರು ಮತ್ತೆ ಪಕ್ಷದ ಪರಿಸ್ಥಿತಿ ಮರುಗಿ ಸಂಘಟನೆಗೆ ಮುಂದಾಗಿದ್ದು, ಬರ ಅಧ್ಯಯನ ಪ್ರವಾಸದ ಮೂಲಕ ಮತ್ತೆ ರಾಜ್ಯ ಪ್ರವಾಸಕ್ಕೆ ಸಿದ್ಧವಾಗಿದ್ದಾರೆ. ಬಿಎಸ್ವೈ ಒಂದು ಕರೆಗೆ ಕಾದಿದ್ದವರಂತೆ ಎಲ್ಲ ಶಾಸಕರು ಬಿಎಸ್ವೈ ನಿರ್ದೇಶನದಂತೆ ತಂಡ ತಂಡವಾಗಿ ಬರ ಅಧ್ಯಯನಕ್ಕೆ ಮುಂದಾಗಿದ್ದಾರೆ.

BS Yeddyurappa is indispensable for BJP, Karnataka State BJP president BY Vijayendra
Image Credit to Original Source

ಇದು ಬಿಜೆಪಿ ಹೈಕಮಾಂಡ್ ಗೆ ಸ್ಪಷ್ಟ ಸಂದೇಶ ರವಾನಿಸಿದೆ. ಬಿಎಸ್‌ ಯಡಿಯೂರಪ್ಪ, ರಾಜ್ಯಕ್ಕೆ ಅನಿವಾರ್ಯ ಎಂಬುದು ಮತ್ತೊಮ್ಮೆ ಸಾಬೀತಾದಂತಿದೆ. ಇದುವರೆಗೂ ಯಾವ ಬಿಜೆಪಿ ನಾಯಕರಿಗೂ ಪಕ್ಷದ ಕಚೇರಿಗೆ ಎಲ್ಲ ಶಾಸಕರನ್ನು ಕರೆಸಲು ಸಾಧ್ಯವಾಗಿರಲಿಲ್ಲ. ಆದರೆ ಬಿಎಸ್ವೈ ನಾಯಕತ್ವಕ್ಕೆ ಮತ್ತೊಮ್ಮೆ ಎಲ್ಲರೂ ತಲೆಬಾಗಿದ್ದಾರೆ.

ಮಾತ್ರವಲ್ಲ ಚಳಿಗಾಲದ ಅಧಿವೇಶನದ ಒಳಗೆ ವಿರೋಧ ಪಕ್ಷದ ನಾಯಕರನ್ನು ಆಯ್ಮೆ ಮಾಡುವಂತೆ ನೀವು ಹೈಕಮಾಂಡ್ ಮನವೊಲಿಸಿ. ಇಲ್ಲದಿದ್ದರೇ ನಾವೆಲ್ಲ ಅಧಿವೇಶನಕ್ಕೆ ಗೈರಾಗುತ್ತೇವೆ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರಂತೆ. ಹೀಗಾಗಿ ಇದು ಬಿಜೆಪಿ ಹೈಕಮಾಂಡ್ ಗೆ ಬಿಎಸ್ವೈ ಗೆ ಪಕ್ಷದ ಮೇಲಿರುವ ಹಿಡಿತವನ್ನು ತೋರಿಸಿದ್ದಲ್ಲದೇ ರಾಜಾಹುಲಿ ಅನಿವಾರ್ಯ ಎಂಬುದನ್ನು ಮನದಟ್ಟು ಮಾಡಿದೆ.

ಇದನ್ನೂ ಓದಿ : ರಾಜ್ಯಪಾಲರಾಗ್ತಾರಾ ಡಿವಿ ಸದಾನಂದ ಗೌಡ : ಸಕ್ರಿಯ ರಾಜಕಾರಣದಿಂದ ನಿವೃತ್ತಿ ಎಂದ ಡಿವಿಎಸ್

ಹೀಗಾಗಿ ಸದ್ಯ ಬಿಜೆಪಿ ಗೆ ಬಿಎಸ್ವೈ ಪುತ್ರ ವಿಜಯೇಂದ್ರ ನಾಯಕತ್ವ ಸೂಕ್ತ ಮತ್ತು ಅನಿವಾರ್ಯ ಎಂಬ ಮಾತು ರಾಜಕೀಯ ಪಡಶಾಲೆಯಲ್ಲಿ ಕೇಳಿ ಬರ್ತಿದೆ. ಬಿಜೆಪಿಯ ರಾಜ್ಯ ಉಪಾಧ್ಯಕ್ಷರಾಗಿರುವ ಬಿವೈ ವಿಜಯೇಂದ್ರ ಶಿಕಾರಿಪುರ ಕ್ಷೇತ್ರದಿಂದಲೇ ಗೆದ್ದು ವಿಧಾನಸಭೆ ಪ್ರವೇಶಿಸಿದ್ದಾರೆ. ಸಿದ್ಧರಾಮಯ್ಯ ಸೇರಿದಂತೆ ಎಲ್ಲಾ ನಾಯಕರನ್ನು ಎದುರಿಸುವ ಸಾಮರ್ಥ್ಯ ಇದೆ.

ಇನ್ನೊಂದೆಡೆ ಬಿಎಸ್ವೈ ಪುತ್ರ ಎಂಬ ಅಂಶ ವಿಜಯೇಂದ್ರ ನಾಯಕತ್ವಕ್ಕೆ ಪ್ಲಸ್ ಪಾಯಿಂಟ್. ತಂದೆ ಮೇಲಿನ ಅಭಿಮಾನ ಹಾಗೂ ಪ್ರೀತಿಯಿಂದ ಪಕ್ಷದ ಕಾರ್ಯಕರ್ತರು ಹಾಗೂ ಶಾಸಕರು,‌ ಮಾಜಿ ಸಚಿವರು ವಿಜಯೇಂದ್ರ್ ಅವರನ್ನು ಬೆಂಬಲಿಸಿದ್ದಾರೆ. ಹೀಗಾಗಿ ಲೋಕಸಭೆ ಚುನಾವಣೆಯ ಹೊತ್ತಿನಲ್ಲಿ ಬಿಜೆಪಿ ತನ್ನ ಇರುವ ಗೌರವ ಹಾಗೂ ಸ್ಥಾನಮಾನ ಉಳಿಸಿಕೊಳ್ಳಲು ಬಿಎಸ್ವೈ ಆಶೀರ್ವಾದ ಬೇಕೇ ಬೇಕು ಎಂಬುದು ಜಗಜನೀತವಾಗಿದೆ.

ಇನ್ನೊಂದೆಡೆ ಕಾಂಗ್ರೆಸ್ ಈ ಭಾರಿ ತನ್ನ ಲೋಕಸಭಾ ಸದಸ್ಯರ ಸಂಖ್ಯೆಯನ್ನು ಸಿಂಗಲ್ ನಿಂದ ಡಬ್ಬಲ್ ಡಿಜಿಟ್ ಗೆ ತರಲು ರಣತಂತ್ರ ರೂಪಿಸುತ್ತಿದೆ. ಹೀಗಿರುವಾಗ ವಿಳಂಬವಾದಷ್ಟು ಮತವಿಭಜನೆ ಹೆಚ್ಚೋ ಸಾಧ್ಯತೆ ಇರೋದರಿಂದ ಹೈಕಮಾಂಡ್ ಬಿಎಸ್ವೈ ಹಾಗೂ ಪುತ್ರನ ಕೈಗೆ ಪಕ್ಷ ನೀಡೋದು ಉತ್ತಮ ಎಂಬ ಅಭಿಪ್ರಾಯ ಕೇಳಿ ಬರ್ತಿದೆ.

ಈಗಾಗಲೇ ಜೆಡಿಎಸ್‌ ಪಕ್ಷ ಬಿಜೆಪಿ ಜೊತೆಗೆ ಕೈ ಜೋಡಿಸಿದೆ. ಹೀಗಾಗಿ ಒಕ್ಕಲಿಗರ ಬೆಂಬಲ ಬಿಜೆಪಿ ಪಡೆದುಕೊಳ್ಳಲಿದೆ. ಆದರೆ ಯಡಿಯೂರಪ್ಪ ಕಣ್ಣೀರಿ ನಿಂದಾಗಿ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಲಿಂಗಾಯಿತರ ಮನವೊಲಿಕೆಗೆ ವಿಜಯೇಂದ್ರ ಆಯ್ಕೆ ಸೂಕ್ತ ಅನ್ನೋ ಅಭಿಪ್ರಾಯವನ್ನು ಪಕ್ಷದ ಹಿರಿಯ ಮುಖಂಡರೇ ವ್ಯಕ್ತಪಡಿಸುತ್ತಿದ್ದಾರೆ.

BS Yeddyurappa is indispensable for BJP, Karnataka State BJP president BY Vijayendra

Comments are closed.