Makara Sankranti 2022 Astrology : ದ್ವಾದಶ ರಾಶಿಗಳ ಮಕರ ಸಂಕ್ರಾಂತಿ ಸೂರ್ಯ ಗೋಚಾರ ಫಲಗಳು

ಸೂರ್ಯನು ತನ್ನ ದಕ್ಷಿಣದೆಡೆಗಿನ ಪಯಣವನ್ನು ಮುಗಿಸಿ ಉತ್ತರದೆಡೆಗೆ ಚಲಿಸಲು ಪ್ರಾರಂಭಿಸುವ ಶುಭ ಸಂದರ್ಭವೇ ಮಕರ ಸಂಕ್ರಾಂತಿ (Makara Sankranti 2022 Astrology). ಇದೊಂದು ಗ್ರಹಗಳ ಚಾರದಲ್ಲಿ ಪ್ರಮುಖ ಘಟನೆಯಾಗಿದ್ದು ಮಾನವರ ಬದುಕಿನಲ್ಲಿ ಪ್ರಮುಖ ಬದಲಾವಣೆಗಳನ್ನು ತರುವ ಸಾಧ್ಯತೆಗಳು ಹೆಚ್ಚಿರುತ್ತವೆ. ಸೂರ್ಯನು ಮಕರ ಸಂಕ್ರಾಂತಿಯಂದು ತನ್ನ ಉತ್ತರದ ಕಡೆಗಿನ ಪಯಣವನ್ನು ಪ್ರಾರಂಭಿಸಿ ಧನಸ್ಸು ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದ ಶುಭ ಕಾರ್ಯಗಳಲ್ಲಿ ಉಂಟಾಗುತ್ತಿದ್ದ ಅಡೆ-ತಡೆಗಳು ಕೊನೆಗೊಳ್ಳುತ್ತವೆ. ಸೂರ್ಯನ ಆರಾಧನೆಯಿಂದ ಶುಭಫಲಗಳು ಉಂಟಾಗಲಿವೆ. ಮುಂಬರುವ 2022ರ ಮಕರ ಸಂಕ್ರಾಂತಿಯು ನಮ್ಮ-ನಿಮ್ಮೆಲ್ಲರ ಜೀವನಗಳಲ್ಲಿ ಯಾವ ರೀತಿಯ ಪ್ರಭಾವ ಬೀರಲಿದೆ ಎಂಬುದನ್ನು ತಿಳಿಯುವ ಪ್ರಯತ್ನ ಮಾಡೋಣ.

ಮೇಷ ರಾಶಿ: ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ, ಸರಕಾರದಿಂದ ಲಾಭ, ಧನಾಗಮನ, ಪ್ರತಿಷ್ಠಿತರೊಂದಿಗೆ ಸ್ನೇಹವೃದ್ಧಿಯಾಗಲಿದೆ. ವಿದ್ಯುತ್‌ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳನ್ನು ಖರೀದಿಸುವಿರಿ. “ಓಂ ಸೂರ್ಯಾಯ ನಮ:” ಮಂತ್ರವನ್ನು ಜಪಿಸುವುದರಿಂದ ಶುಭಫಲ. ಬೆಲ್ಲ ಹಾಗೂ ಗೋಧಿಯನ್ನು ದಾನ ಮಾಡುವುದರಿಂದ ಶುಭಫಲ ದೊರೆಯಲಿದೆ.

ವೃಷಭ ರಾಶಿ: ಸುಖ-ಸವಲತ್ತುಗಳಲ್ಲಿ ವೃದ್ಧಿ. ಉನ್ನತ ವ್ಯಾಸಂಗಕ್ಕಾಗಿ ವಿದೇಶ ಪ್ರಯಾಣ ಸಾಧ್ಯತೆಯಿದೆ. ಪ್ರೇಮಸಂಬಂಧಗಳಲ್ಲಿ ಕೆಲ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ. ತಂದೆಯ ಆರೋಗ್ಯದ ಬಗ್ಗೆ ಕಾಳಜಿಯಿರಲಿ. ವಾಹನ ಹಾಗೂ ಮನೆಗಳ ಕ್ರಯ ಲಾಭದಾಯಕ. ಹಾಲು, ಮೊಸರು, ಹಾಗೂ ಬಿಳಿಯ ಬಣ್ಣದ ವಸ್ತುಗಳನ್ನು ದಾನ ಮಾಡಿದರೆ ಶುಭಫಲ.

ಮಿಥುನ ರಾಶಿ: ಕುಟುಂಬದ ಸದಸ್ಯರಲ್ಲಿ ವೃದ್ಧಿ, ಸಂತಾನಪ್ರಾಪ್ತಿ ಸಂಭವ. ಗಣಕಯಂತ್ರ ಹಾಗೂ ಮೊಬೈಲ್‌ ಖರೀದಿ ಸಾಧ್ಯತೆ.  ಸೂರ್ಯನ ರಾಶಿ ಬದಲಾವಣೆಯಿಂದ ಸಂಗಾತಿಗೆ ಜ್ವರ, ಶಾರೀರಿಕ ಸಮಸ್ಯೆಗಳು, ಮಾನಹಾನಿಯಂತಹ ತೊಂದರೆಗಳು ಎದುರಾಗುವ ಸಾಧ್ಯತೆಯಿದೆ. ಹಸಿರು ತರಕಾರಿ, ಉದ್ದಿನಕಾಳು ಅಥವಾ ಬೇಳೆ, ಹಸಿರು ಬಣ್ಣದ ಹಣ್ಣುಗಳನ್ನು, ಅಥವಾ ಹಸಿರು ಬಣ್ಣದ ಸಿಹಿತಿಂಡಿಯನ್ನ ಬಡವರಿಗೆ ತಿನಿಸಿದರೆ ಶುಭಫಲ.

ಕರ್ಕಾಟಕ ರಾಶಿ: ಫ್ರಿಜ್‌, ಏರ್‌ಕಂಡಿಷನರ್, ವಾಟರ್‌ ಪ್ಯೂರಿಫೈಯರ್, ಅಥವಾ ವಾಟರ್‌ ಕೂಲರ್‌ಗಳನ್ನು ಕೊಳ್ಳುವ ಸಾಧ್ಯತೆಯಿದೆ, ಅದರಿಂದ ಶುಭ. ತಲೆ ಬೇನೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು, ಧನಹಾನಿ, ಶತೃಗಳೊಂದಿಗೆ ಜಗಳ, ಹಾಗೂ ಯಾತ್ರೆಗಳ ಸಾಧ್ಯತೆ. ಸೂರ್ಯನಿಗೆ ಎಳ್ಳನ್ನು ಬೆರೆಸಿದ ಜಲವನ್ನು ಸಮರ್ಪಿಸಿದರೆ ಶುಭ. ಅಕ್ಕಿಯನ್ನು ದಾನ ಮಾಡಿದರೆ ಶುಭಫಲ.

ಸಿಂಹ ರಾಶಿ: ಸೂರ್ಯನ ಅರಾಧನೆ ಶುಭಕರ. ಸರಕಾರದಿಂದ ಲಾಭ. ಚಿನ್ನದ ಒಡವೆಗಳು ಹಾಗೂ ನಾಣ್ಯಗಳನ್ನು ಕೊಳ್ಳುವುದರಿಂದ ಧನವೃದ್ಧಿಯಾಗಲಿದೆ. ಶತೃಗಳ ಮೇಲೆ ವಿಜಯ, ಕಾರ್ಯಸಿದ್ಧಿ, ಮತ್ತು ರೋಗನಾಶ. ಬಟ್ಟೆ ವ್ಯಾಪಾರ ಲಾಭಕರ. ಗೋಧಿ ಅಥವಾ ಬೇಕರಿ ತಿನಿಸುಗಳನ್ನು ದಾನ ಮಾಡಿದರೆ ಶುಭ.

ಕನ್ಯಾ ರಾಶಿ: ಸ್ನಾನದ ನೀರನಲ್ಲಿ ಎಳ್ಳನ್ನು ಬೆರೆಸೆ ಸ್ನಾನ ಮಾಡುವುದರಿಂದ ಶುಭ. ಹೊಸ ಮೊಬೈಲ್, ಬ್ರಾಡ್‌ಬ್ಯಾಂಡ್‌ ಸಂಪರ್ಕ, ಟಿ.ವಿ, ಅಥವಾ ಸಂಪರ್ಕ ಸಾಧನಗಳನ್ನು ಕೊಂಡರೆ ಶುಭ. ಆದರೆ ಸಾಲ ಮಾಡಿ ಅಥವಾ ಕ್ರೆಡಿಟ್‌ ಕಾರ್ಡ್‌ ಉಪಯೋಗಿಸಿ ಏನನ್ನೂ ಕೊಳ್ಳಬೇಡಿ. ನಿಮ್ಮ ಪ್ರಿಯರಾದವರಿಗೆ ಅಥವಾ ಅವಶ್ಯಕತೆಯಿರುವವರಿಗೆ ಮೊಬೈಲ್ ಕೊಡಿಸುವುದರಿಂದ ಶುಭ. ಸಂತಾನಕ್ಕೆ ಸಂಬಂಧಿಸಿದ ಚಿಂತೆ ಸಾಧ್ಯತೆ. ಪ್ರವಾಸ-ಯಾತ್ರೆಗಳನ್ನು ಮಾಡುವಾಗ ಎಚ್ಚರವಿರಲಿ. ಮಕ್ಕಳ ಆರೋಗ್ಯದ ಕಡೆ ಗಮನವಿರಲಿ. ವಾದ-ವಿವಾದಗಳಿಂದ ದೂರವಿರಿ. ಮಾನಸಿಕ ಸ್ಥಿತಿಯನ್ನು ಸಮತೋಲನದಲ್ಲಿ ಇಟ್ಟುಕೊಳ್ಳಿ. ಸ್ನಾನದ ನೀರಿನಲ್ಲಿ ಎಳ್ಳನ್ನು ಬೆರೆಸಿ ಸ್ನಾನಮಾಡುವುದರಿಂದ ಶುಭ. ಹಸುವಿಗೆ ಮೇವನ್ನು ನೀಡುವುದರಿಂದ ಶುಭ.

ತುಲಾ ರಾಶಿ: ಎಲ್ಲಾ ಕಡೆಗಳಿಂದ ಧನ-ಧಾನ್ಯಗಳ ಪ್ರಾಪ್ತಿ. ಎಳ್ಳಿನ ಲೇಪವನ್ನು ಹಚ್ಚಿಕೊಳ್ಳಿ. ಬೆಳ್ಳಿಯನ್ನು ಖರೀದಿಸುವುದರಿಂದ ವರ್ಷಾಂತ್ಯದ ಹೊತ್ತಿಗೆ ಅಪಾರ ಧನಿಕರಾಗುವಿರಿ. ಜಮೀನು-ಆಸ್ತಿಗಳ ಸಮಸ್ಯೆಗಳು, ಮಾನಹಾನಿ, ಕೌಟುಂಬಿಕ ಜಗಳಗಳಿಂದ ಮಾನಸಿಕ ಕಿರಿಕಿರಿಗಳಿದ್ದರೆ, ಹಾಗೂ ಶಾರೀರಿಕ ದೌರ್ಬಲ್ಯಗಳಿದ್ದರೆ ಖಿಚಡೀ ಹಾಗೂ ಖೀರುಗಳನ್ನು ದಾನ ಮಾಡುವದರಿಂದ ಪರಿಹಾರ ದೊರೆಯಲಿದೆ.

ವೃಶ್ಚಿಕ ರಾಶಿ: ಬರಬೇಕಾಗಿರುವ ಹಣ ಬರುವ ಸಾಧ್ಯತೆ. ಕೋರ್ಟ್‌ ವ್ಯಾಜ್ಯಗಳಲ್ಲಿ ಜಯ. ಶತೃಗಳು ದುರ್ಬಲರಾಗಿರುವರು. ಎಲೆಕ್ಟ್ರಾನಿಕ್‌ ವಸ್ತು ಖರೀದಿಸಿದರೆ ಶುಭ. ಬೆಲ್ಲ/ಸಕ್ಕರೆಯಿಂದ ಹಾಗೂ ಕಡಲೆಯಿಂದ ಮಾಡಿದ ಸಿಹಿ ತಿನಿಸು ಹಾಗೂ ಚಿಗಳಿಯನ್ನು ದಾನಮಾಡಿದರೆ ಶುಭಫಲ. ರೋಗಮುಕ್ತಿ, ಮಾನ-ಪ್ರತಿಷ್ಠೆಗಳಲ್ಲಿ ಹೆಚ್ಚಳ, ಸಮಾಜದಿಂದ ಸಮ್ಮಾನ ಪ್ರಾಪ್ತಿ. ನೀರಿನಲ್ಲಿ ಬೆಲ್ಲವನ್ನು ಸೇರಿಸಿ ಸೂರ್ಯನಿಗಿ ಅರ್ಪಿಸುವುದರಿಂದ ಶುಭಫಲ ಪ್ರಾಪ್ತಿ.

ಧನಸ್ಸು ರಾಶಿ: ಶಿಕ್ಷಣ ಕ್ಷೇತ್ರ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು. ಚಿನ್ನದ ನಾಣ್ಯ ಅಥವಾ ವಿಗ್ರಹವನ್ನು ಸಾಮರ್ಥ್ಯಕ್ಕನುಸಾರವಾಗಿ ಖರೀದಿಸಿ ಮನೆಯ ಪೂಜಾಸ್ಥಳದಲ್ಲಿ ಸ್ಥಾಪಿಸಿ. ನೀವೇ ಸ್ವತ: ಕಿಚಡಿಯನ್ನು ತಯಾರಿಸಿ 9 ಜನ ಬಡ ಕೂಲಿ ಕಾರ್ಮಿಕರಿಗೆ ತಿನ್ನಿಸುವುದರಿಂದ ಶುಭಫಲ. ತಲೆ ಹಾಗೂ ಕಣ್ಣುಗಳಲ್ಲಿ ಬೇನೆ, ದುಷ್ಟಜನರ ಸಹವಾಸ, ವ್ಯಾಪಾರಹಾನಿ, ಬಂಧುಗಳೊಂದಿಗೆ ವೈಮನಸ್ಸು ಉಂಟಾಗುವ ಸಾಧ್ಯತೆ. ನೇತ್ರಹೀನರಿಗೆ ಭೋಜನ ನೀಡಿದರೆ ಶುಭ. ಕಡಲೆಬೇಳೆಯನ್ನು ದಾನ ಮಾಡುವುದರಿಂದ ಶುಭಫಲ ಉಂಟಾಗಲಿದೆ.

ಮಕರ ರಾಶಿ: ಕಾಲು ಕೆ.ಜಿ ಅಕ್ಕಿ ಹಾಗೂ ಕಾಲು ಕೆ.ಜಿ ಕಪ್ಪು ಉದ್ದನ್ನು ಬಡವರಿಗೆ ದಾನ ಮಾಡಿ ಅಥವಾ ಕಿಚಡಿಯನ್ನು ದಾನ ಮಾಡಿ. ಸೂರ್ಯನ ಗೋಚಾರವು ಮಾನಹಾನಿ, ಕಾರ್ಯವಿಳಂಬ, ಮಿತ್ರರೊಂದಿಗೆ ವೈಮನಸ್ಸು, ಆರೋಗ್ಯ ಕೆಡುವ ಸಂಭವವಿದೆ. ತಾಮ್ರದ ಪಾತ್ರೆಯನ್ನು ದೇವಸ್ಥಾನದಲ್ಲಿ ದಾನ ಮಾಡಿದರೆ ಶುಭಫಲವಿದೆ.

ಕುಂಭ ರಾಶಿ: ಸೂರ್ಯನ ಗೋಚಾರವು ವಿದೇಶಯಾತ್ರೆ, ನೇತ್ರ-ಸಂಬಂಧಿ ಸಮಸ್ಯೆಗಳು, ಅಧಿಕ ಖರ್ಚು, ಹಾಗೂ ಪದವಿನಷ್ಟವನ್ನು ಕೊಡುವ ಸಾಧ್ಯತೆಯಿದೆ. ವೈವಾಹಿಕ ಜೀವನದಲ್ಲಿ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ, ಎಚ್ಚರವಿರಲಿ. ವ್ಯಾಪಾರಸ್ಥರು ಹೆಚ್ಚಿನ ಜಾಗರೂಕತೆಯಿಂದ ಇರುವುದು ಅತ್ಯವಶ್ಯಕ, ದಾಖಲಾತಿಗಳ ಪರಿಶೀಲನೆ ಎಚ್ಚರಿಕೆಯಿಂದ ಮಾಡಿ ಮುಂದುವರೆಯಿರಿ. ರೋಗಿಗಳಿಗೆ ಧಾನ್ಯದ ನುಚ್ಚಿನಿಂದ ಮಾಡಿದ ಸಿಹಿ ಪದಾರ್ಥಗಳನ್ನು ತಿನ್ನಿಸಿದರೆ ಶುಭಫಲ ಸಿಗಲಿದೆ.

ಮೀನ ರಾಶಿ: ಸೂರ್ಯನ ಗೋಚಾರವು ಧನಲಾಭ, ಹೊಸ ಪದವಿ, ಮಂಗಳಕಾರ್ಯ, ರಾಜಕೃಪೆ, ಅಭಿವೃದ್ಧಿ, ಹಾಗೂ ಧನಪ್ರಾಪ್ತಿಗಳನ್ನು ನೀಡಲಿದೆ. ಆಸ್ತಿ ಖರೀದಿಸಲು ಮುಂಗಡ ಹಣ ನೀಡಿಕೆ ಅಥವಾ ಬುಕಿಂಗ್, ಹಾಗೂ ದೀರ್ಘಕಾಲಿಕ ಹೂಡಿಕೆಗಳಿಗೆ ಇದು ಅತ್ಯಂತ ಉತ್ತಮ ಕಾಲ. ಚಿಗಳಿ ಅಥವಾ ಕಡಲೆಹಿಟ್ಟಿನಿಂದ ಮಾಡಿದ ಸಿಹಿಪದಾರ್ಥಗಳನ್ನು ದಾನ ಮಾಡಿದರೆ ಶುಭಫಲ ಸಿಗಲಿದೆ.

ಇದನ್ನೂ ಓದಿ: ಜ್ಯೋತಿಷ್ಯಕ್ಕೂ ಕೋಡ್ ಆಫ್ ಕಂಡಕ್ಟ್…! ಚುನಾವಣೆ ಭವಿಷ್ಯ ಹೇಳಂಗಿಲ್ಲ…!!

ಇದನ್ನೂ ಓದಿ: Surya Namaskar Yoga : ಪಿಯು ಕಾಲೇಜಿನಲ್ಲಿ‌ ಸೂರ್ಯನಮಸ್ಕಾರ ಯೋಗಾಭ್ಯಾಸ: ಕೇಂದ್ರ ಶಿಕ್ಷಣ ಸಚಿವಾಲಯದ ಆದೇಶ

Makara Sankranti 2022 Astrology Sun transit results for 12 moon signs

Comments are closed.