Covid cases : ದೇಶದಲ್ಲಿ 1.79 ಲಕ್ಷ ಹೊಸ ಕೋವಿಡ್ ಪ್ರಕರಣ :ಒಂದು ದಿನದಲ್ಲಿ 146 ಮಂದಿ ಸಾವು

Covid cases : ದೇಶದಲ್ಲಿ ಕೊರೊನಾ ರಣಕೇಕೆ ಮುಂದುವರಿದಿದೆ. ಒಂದೇ ದಿನದಲ್ಲಿ ದೇಶದಲ್ಲಿ ಬರೋಬ್ಬರಿ 1,79,723 ಕೊರೊನಾ ಕೇಸ್​ಗಳು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ. ಭಾನುವಾರಕ್ಕಿಂತ ಸೋಮವಾರ ವರದಿಯಾದ ಕೊರೊನಾ ಕೇಸುಗಳ ಸಂಖ್ಯೆಯಲ್ಲಿ 13 ಪ್ರತಿಶತ ಏರಿಕೆ ಕಂಡುಬಂದಿದೆ.


ಇನ್ನು ದೇಶದಲ್ಲಿ ಓಮಿಕ್ರಾನ್​ ರೂಪಾಂತರಿ ಪ್ರಕರಣವು 4 ಸಾವಿರದ ಗಡಿ ದಾಟಿದೆ. ದೇಶದಲ್ಲಿ ಒಟ್ಟು 4003 ಓಮಿಕ್ರಾನ್​ ಪ್ರಕರಣ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಅಂದರೆ 1216 ಓಮಿಕ್ರಾನ್​ ಪ್ರಕರಣಗಳು ಧೃಡಪಟ್ಟಿದೆ. ನಂತರದ ಸ್ಥಾನದಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಇದ್ದು 529 ಓಮಿಕ್ರಾನ್​ ಪ್ರಕರಣಗಳು ಇವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.


ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 146 ಮಂದಿ ಕೋವಿಡ್​ ಸೋಂಕಿನಿಂದ ಮೃತಪಟ್ಟಿದ್ದು ಈ ಮೂಲಕ ಒಟ್ಟು ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 4,83,936 ಆಗಿದೆ ಎನ್ನಲಾಗಿದೆ. ದೇಶದಲ್ಲಿ ಕೋವಿಡ್​ 19 ರಿಕವರಿ ಪ್ರಮಾಣ 96.62 ಪ್ರತಿಶತವಿದೆ ಎನ್ನಲಾಗಿದೆ.


ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 46,569 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾದಿಂಡ ಗುಣಮುಖರಾದವರ ಒಟ್ಟು ಸಂಖ್ಯೆ 3,45,00,172 ಆಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. .


ದೇಶದಲ್ಲಿ ವಾರದ ಪಾಸಿಟಿವಿಟಿ ರೇಟ್​ 7.92 ಪ್ರತಿಶತವಾಗಿದೆ ಎಂದು ತಿಳಿದು ಬಂದಿದೆ. ಇನ್ನು ದೇಶದಲ್ಲಿ ಕೊರೊನಾ ಲಸಿಕಾ ಅಭಿಯಾನ ಚುರುಕುಗತಿಯಲ್ಲಿ ಸಾಗಿದ್ದು 146.66 ಕೋಟಿಗೂ ಮೀರಿ ಕೊರೊನಾ ಲಸಿಕೆಗಳನ್ನು ನೀಡಲಾಗಿದೆ.

ಇಂದಿನಿಂದ ಕೊರೊನಾ ಬೂಸ್ಟರ್​ ಡೋಸ್​ ಆರಂಭ: 3ನೇ ಡೋಸ್​ ಲಸಿಕೆ ಬಗ್ಗೆ ಇಲ್ಲಿದೆ ಮಾಹಿತಿ

ದೇಶದಲ್ಲಿ ಸಂಭಾವ್ಯ ಕೊರೊನಾ ಮೂರನೇ ಅಲೆಯ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ದೇಶದಲ್ಲಿ ಆರೋಗ್ಯ ಮತ್ತು ಮಂಚೂಣಿ ಸಿಬ್ಬಂದಿಗೆ ಹಾಗೂ 60 ವರ್ಷ ಮೇಲ್ಪಟ್ಟ ಕೊಮೊರ್ಬಿಡಿಟಿ ಹೊಂದಿರುವವರಿಗೆ ಕೋವಿಡ್​ 19 ಲಸಿಕೆಯ ಬೂಸ್ಟರ್​ ಡೋಸ್​ ನೀಡುವ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ.


ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ ಸರಿ ಸುಮಾರು 1.06 ಕೋಟಿ ಆರೋಗ್ಯ ಹಾಗೂ 1.9 ಕೋಟಿ ಮುಂಚೂಣಿ ಸಿಬ್ಬಂದಿ ಮತ್ತು 60 ವರ್ಷ ಮೇಲ್ಪಟ್ಟ 2.75 ಕೋಟಿ ಕೊಮೊರ್ಬಿಡಿಟಿ ಹೊಂದಿರುವವರಿಗೆ ಮುಂದಿನ ದಿನಗಳಲ್ಲಿ ಬೂಸ್ಟರ್​ ಡೋಸ್ ನೀಡಲಾಗುವುದು ಎಂದು ಹೇಳಲಾಗಿದೆ.


ಅಲ್ಲದೇ ಕೋವಿಡ್ ಬೂಸ್ಟರ್​ ಡೋಸ್​ಗಾಗಿ ಯಾವುದೇ ರೀತಿಯ ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲವೆಂದೂ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಅರ್ಹರ ಫಲಾನುಭವಿಗಳು ನೇರವಾಗಿ ಲಸಿಕಾ ಕೇಂದ್ರಗಳಿಗೆ ತೆರಳಿ ಕೋವಿಡ್​ ಲಸಿಕೆಗಳನ್ನು ಪಡೆಯಬಹುದಾಗಿದೆ.


ಇನ್ನು ಎರಡನೇ ಡೋಸ್​ ಲಸಿಕೆಯಿಂದ ಮೂರನೇ ಡೋಸ್​ ಲಸಿಕೆಯ ನಡುವಿನ ಅಂತರ ಕನಿಷ್ಟ 9 ತಿಂಗಳು ಇರಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಮೊದಲ ಹಾಗೂ ಎರಡನೇ ಡೋಸ್​ ವೇಳೆ ಸ್ವೀಕರಿಸಿದ ಲಸಿಕೆಯೇ ಮೂರನೇ ಡೋಸ್​ ರೂಪದಲ್ಲಿ ನೀಡಲಾಗುತ್ತದೆ. ಹೀಗಾಗಿ ಮೊದಲ ಹಾಗೂ ಎರಡನೇ ಡೋಸ್​ ರೂಪದಲ್ಲಿ ಕೊವ್ಯಾಕ್ಸಿನ್​ ಲಸಿಕೆಯನ್ನು ಸ್ವೀಕರಿಸಿದವರು ಮೂರನೇ ಡೋಸ್​ ಆಗಿ ಕೊವ್ಯಾಕ್ಸಿನ್ ಲಸಿಕೆಯನ್ನೇ ಸ್ವೀಕರಿಸಲಿದ್ದಾರೆ. ಇದೇ ನಿಯಮ ಕೋವಿಶೀಲ್ಡ್​ ಲಸಿಕೆಯನ್ನು ಸ್ವೀಕರಿಸಿದವರಿಗೂ ಅನ್ವಯವಾಗುತ್ತದೆ. ಯಾವುದೇ ಕಾರಣಕ್ಕೂ ಲಸಿಕೆಗಳ ಮಿಶ್ರಣ ಮಾಡಬೇಡಿ ಎಂದು ಲಸಿಕಾ ಕೇಂದ್ರಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.


ಕೋವಿನ್​ ಅಪ್ಲಿಕೇಶನ್​ ಮೂಲಕ ಅರ್ಹ ಫಲಾನುಭವಿಗಳು ಲಸಿಕೆಯ ಲಭ್ಯತೆಯ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಕೋವಿನ್​ ಅಪ್ಲಿಕೇಶನ್​ನಲ್ಲಿ ನಿಮ್ಮ 2ನೇ ಡೋಸ್ ಯಾವಾಗ ಪಡೆಯಲಾಗಿದೆ ಎಂಬುದನ್ನು ನೋಡಿಕೊಂಡು ಆ ಅರ್ಹತೆಯ ಮಾನದಂಡದ ಮೇಲೆ ಆರೋಗ್ಯ ಸಿಬ್ಬಂದಿ ಕೋವಿಡ್​ 3ನೇ ಡೋಸ್​ನ್ನು ನೀಡಲಿದ್ದಾರೆ. ನೀವು ಮೂರನೇ ಡೋಸ್​ ಪಡೆಯುವ ಅವಧಿ ಮೀರಿದ್ದರೆ ನಿಮ್ಮ ಮೊಬೈಲ್​ಗೆ ಎಸ್​ಎಂಎಸ್​ ಕಳಿಸುವ ಮೂಲಕ ಜ್ಞಾಪಿಸಲಾಗುತ್ತದೆ.

India reports over 1.79 lakh new Covid cases, 146 deaths; Omicron tally at 4,003

ಇದನ್ನು ಓದಿ : Karnataka Covid-19 Live Updates : ಬೆಂಗಳೂರು, ಉಡುಪಿ, ದ.ಕ, ಮೈಸೂರಲ್ಲಿ ಕೊರೊನಾ ಬ್ಲಾಸ್ಟ್‌ : ಸಕ್ರೀಯ ಪ್ರಕರಣಗಳ ಸಂಖ್ಯೆ 49,602 ಕ್ಕೆ ಏರಿಕೆ

ಇದನ್ನೂ ಓದಿ : Private Hospital Corona Treatment : ರಾಜ್ಯದಲ್ಲಿ ಏರುತ್ತಲೇ ಇದೆ‌ ಕೊರೋನಾ : ಚಿಕಿತ್ಸೆಗೆ ಸಜ್ಜಾದ ಖಾಸಗಿ ಆಸ್ಪತ್ರೆಗಳು

Comments are closed.