ಮಂಗಳವಾರ, ಏಪ್ರಿಲ್ 29, 2025
Homehoroscopeನಿತ್ಯಭವಿಷ್ಯ : 21-05-2020

ನಿತ್ಯಭವಿಷ್ಯ : 21-05-2020

- Advertisement -

ಮೇಷರಾಶಿ
ಆರ್ಥಿಕವಾಗಿ ಅನುಕೂಲದ ದಿನ, ಶುಭ ಕಾರ್ಯಗಳಲ್ಲಿ ಮುನ್ನಡೆ, ಲಾಭ ಪ್ರಮಾಣ ಚೇತರಿಕೆ, ವಿದ್ಯಾರ್ಥಿಗಳು ತಮ್ಮ ಪ್ರಯತ್ನ ಬಲದ ಸಮಾಧಾನಕರವಾದ ಫ‌ಲವನ್ನು ಪಡೆಯಲಿದ್ದಾರೆ. ಆರೋಗ್ಯದಲ್ಲಿ ಜಾಗ್ರತೆ. ಮಾತೃವಿನಿಂದ ಧನ ಲಾಭ, ಗೃಹ ನಿರ್ಮಾಣಕ್ಕೆ ಮನಸ್ಸು, ಸಂಗಾತಿಯಿಂದ ನೋವು, ಪಿತ್ರಾರ್ಜಿತ ಸ್ವತ್ತಿನಿಂದ ಅನುಕೂಲ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ.

ವೃಷಭರಾಶಿ
ಸಾಂಸಾರಿಕವಾಗಿ ಸಮಾಧಾನಕರ ದಿನಗಳಿವು. ಅನಾವಶ್ಯಕವಾಗಿ ಋಣಾತ್ಮಕ ಚಿಂತೆಯನ್ನು ಮಹಿಳೆಯರು ಅನುಭವಿಸುವಂತಾದೀತು. ಕ್ರಯವಿಕ್ರಯಗಳಲ್ಲಿ ಆರ್ಥಿಕ ಲಾಭವು ಒದಗಿ ಬಂದು ಸಮಾಧಾನವಿದೆ. ಉದ್ಯಮ, ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ, ಉದ್ಯೋಗದಲ್ಲಿ ಒತ್ತಡ-ಗೊಂದಲ, ಸಂಗಾತಿ ಜೊತೆ ವಾಗ್ವಾದ, ಗರ್ಭ-ಮಾಸ ದೋಷ, ಆರೋಗ್ಯದಲ್ಲಿ ವ್ಯತ್ಯಾಸ, ಬಾಡಿಗೆದಾರರು-ಸೇವಕರೊಂದಿಗೆ ಕಿರಿಕಿರಿ.

ಮಿಥುನರಾಶಿ
ದುಶ್ಚಟಗಳು ಹೆಚ್ಚಾಗುವುದು, ಪ್ರೇಮ ವಿಚಾರದಲ್ಲಿ ಅನಗತ್ಯ ಚರ್ಚೆ, ಮನೆಯ ವಾತಾವರಣ ಸಮಾಧಾನಕರವಾಗದು. ಅನಾವಶ್ಯಕವಾಗಿ ಪತ್ನಿ ಹಾಗೂ ಮಕ್ಕಳೊಂದಿಗೆ ಭಿನ್ನಾಭಿಪ್ರಾಯವನ್ನು ಹೊಂದಲಿದ್ದೀರಿ. ಕೃಷಿಕರು ಸಂತಸವನ್ನು ಹೊಂದಲಿದ್ದಾರೆ. ಆತ್ಮವಿಶ್ವಾಸವಿರಲಿ. ಜೀವನಕ್ಕೆ ಅನ್ಯರಿಂದ ತೊಂದರೆ, ಮಕ್ಕಳಿಂದ ಲಾಭ, ಮನಸ್ಸಿನಲ್ಲಿ ಆಲೋಚನೆ, ರೋಗ ಬಾಧೆ, ಕಲ್ಪನೆಗಳಿಂದ ನಿದ್ರಾಭಂಗ.

ಕಟಕರಾಶಿ
ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸ್ತ್ರೀ ವಿಚಾರದಲ್ಲಿ ನೋವು, ಆಗಾಗ ಮಾನಸಿಕ ಅಸ್ಥಿರತೆ ಕಾಡಲಿದೆ. ಆದರೂ ದೈವಾನುಗ್ರಹ ಉತ್ತಮವಿರುವುದರಿಂದ ನಿಮ್ಮ ಮನೋಕಾಮನೆಗಳು ಹಂತ ಹಂತವಾಗಿ ನೆರವೇರಲಿವೆ. ವೃತ್ತಿರಂಗದಲ್ಲಿ ಮುಖ್ಯವಾಗಿ ಹೊಂದಾಣಿಕೆ ಇರಲಿ. ವಾಹನ ಖರೀದಿಗೆ ಮನಸ್ಸು, ಗೃಹ ನಿರ್ಮಾಣಕ್ಕೆ ಆಸೆ, ಮಕ್ಕಳಿಂದ ನಿರಾಸೆ, ಮಾತೃವಿನಿಂದ ಧನಾಗಮನ, ಸ್ಥಿರಾಸ್ತಿಯಿಂದ ಲಾಭ, ಅಲಂಕಾರಿಕ ವಸ್ತು ವ್ಯಾಪಾರದಲ್ಲಿ ಅನುಕೂಲ, ಮೋಜು-ಮಸ್ತಿಯಲ್ಲಿ ತೊಡಗುವಿರಿ, ಇಷ್ಟಾರ್ಥ ಸಿದ್ಧಿಗಾಗಿ ಪರಿಶ್ರಮ.

ಸಿಂಹರಾಶಿ
ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಮಕ್ಕಳ ನಡವಳಿಕೆಯಿಂದ ಬೇಸರ, ಅನಾವಶ್ಯಕವಾಗಿ ಕೋಪತಾಪಗಳಿಗೆ ಬಲಿಯಾಗದಿರಿ. ಭೂಖರೀದಿಗೆ, ವಾಹನ ಖರೀದಿಗೆ ಅನುಕೂಲವಾಗಲಿದೆ. ಶುಭಮಂಗಲ ಕಾರ್ಯಗಳಿಗೆ ತಾತ್ಕಾಲಿಕ ಅಡೆತಡೆಗಳಿದ್ದರೂ ಪ್ರಯತ್ನದಿಂದ ಸುಗಮವಾದೀತು. ಸ್ಥಿರಾಸ್ತಿ ವ್ಯವಹಾರದಲ್ಲಿ ಜಯ, ನೆರೆಹೊರೆಯವರಿಂದ ಅನುಕೂಲ, ಉದ್ಯೋಗ ಬದಲಾವಣೆ ಆಲೋಚನೆ, ದೂರ ಪ್ರದೇಶದಲ್ಲಿ ಉದ್ಯೋಗ ಹುಡುಕಾಟ, ಶೀತ, ಕೆಮ್ಮು, ಅನಾರೋಗ್ಯ,

ಕನ್ಯಾರಾಶಿ
ಅದೃಷ್ಟದ ದಿನ, ಸ್ತ್ರೀಯರಿಗೆ ಅನುಕೂಲ, ಮಹಿಳಾ ಮಿತ್ರರಿಂದ ಸಹಕಾರ, ವೃತ್ತಿಯಲ್ಲಿ ನಿರುತ್ಸಾಹದಾಯಕ ವಾತಾವರಣದಿಂದ ಕೆಲಸ ಕಾರ್ಯಗಳು ಹಾಳಾಗಲಿದೆ. ಅನಾವಶ್ಯಕವಾಗಿ ಇತರರ ಕೆಲಸ ಕಾರ್ಯಗಳಲ್ಲಿ ತಲೆಹಾಕದಿರಿ. ಆರ್ಥಿಕವಾಗಿ ಖರ್ಚುವೆಚ್ಚ ಅಧಿಕವಾಗಿ ಆತಂಕ ತಂದೀತು. ತಂದೆ ಜೊತೆ ಮನಃಸ್ತಾಪ, ಪ್ರಯಾಣಕ್ಕೆ ಅಡ್ಡಿ, ಸಹೋದರನಿಂದ ನಷ್ಟ, ಅಶುಭ ಸುದ್ದಿ ಕೇಳುವ ಸಾಧ್ಯತೆ, ಮನಸ್ಸಿನಲ್ಲಿ ಆತಂಕ ಹೆಚ್ಚಾಗುವುದು.

ತುಲಾರಾಶಿ
ವ್ಯಾಪಾರ-ವ್ಯವಹಾರದಲ್ಲಿ ಧನ ಲಾಭ, ಅನಿರೀಕ್ಷಿತ ಹಣಕಾಸು ನೆರವು ಲಭಿಸುವುದು, ಪಾಲುದಾರಿಕೆಯಲ್ಲಿ ಅನುಕೂಲ, ವೃತ್ತಿನಿರತರಿಗೆ ಸಮಾಧಾನದ ದಿನಗಳಿವು. ಕಾರ್ಮಿಕ ವರ್ಗದವರಿಗೆ ಆರ್ಥಿಕವಾಗಿ ತುಸು ಚೇತರಿಕೆ ಕಂಡುಬರುವುದು. ಕಾಂಟ್ರಾಕ್ಟ್ ವೃತ್ತಿಯವರಿಗೆ ಲಾಭ ತಂದೀತು. ಸಂಚಾರದಲ್ಲಿ ಜಾಗ್ರತೆ ವಹಿಸಿರಿ. ಚಂಚಲ ಮನಸ್ಸು, ಅಲಂಕಾರಿಕ ವಸ್ತಗಳ ಮೇಲೆ ಒಲವು, ಸಂಗಾತಿಯಿಂದ ಅನುಕೂಲ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಸಂತಾನ ದೋಷ, ಮಕ್ಕಳ ಭವಿಷ್ಯದ ಚಿಂತೆ.

ವೃಶ್ಚಿಕರಾಶಿ
ಉದ್ಯಮ, ವ್ಯವಹಾರದಲ್ಲಿ ಅನುಕೂಲ, ಕೌಟುಂಬಿಕ ಜೀವನದಿಂದ ದೂರಾಗುವ ಯೋಚನೆ, ಸಂಗಾತಿ, ಸ್ನೇಹಿತರೇ ಶತ್ರುವಾಗುವರು, ಆರ್ಥಿಕವಾಗಿ ಶನಿಯ ಲಾಭಸ್ಥಾನದಿಂದ\ ಅಭಿವೃದ್ಧಿ ಕಂಡುಬರುತ್ತದೆ. ಕಾರ್ಯಸಾಧನೆಗೆ ಅನುಕೂಲವಾಗುತ್ತದೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಮನಸ್ಸಿನಂತೆ ಕೆಲಸ ಕಾರ್ಯಗಳು ನಡೆಯಲಿವೆ. ಪಾಲುದಾರಿಕೆಯಲ್ಲಿ ಮೋಸ, ಆರೋಗ್ಯ ಸಮಸ್ಯೆ, ಅಧಿಕವಾದ ಒತ್ತಡ, ಅಕ್ರಮ ಸಂಪಾದನೆಯ ಆಲೋಚನೆ.

ಧನಸ್ಸುರಾಶಿ
ಮಕ್ಕಳ ನಡವಳಿಕೆಯಿಂದ ಬೇಸರ, ಗೊಂದಲಗಳಿಂದ ಅವಕಾಶ ಕೈತಪ್ಪುವುದು, ವಿದ್ಯಾಭ್ಯಾಸದಲ್ಲಿ ಸಮಸ್ಯೆ, ರೋಗ ಬಾಧೆ, ಭವಿಷ್ಯಕ್ಕೆ ತೊಂದರೆಯಾಗುವ ಆತಂಕ, ನೆರೆಹೊರೆಯವರ ಜೊತೆ ಶತ್ರುತ್ವ, ಬರವಣಿಗೆಯಲ್ಲಿ ವ್ಯತ್ಯಾಸ, ನ್ಯಾಯಾಲಯದ ಕೆಲಸ ಕಾರ್ಯಗಳು ವಿಳಂಬಗತಿಯಲ್ಲಿ ನಡೆಯಲಿವೆ ಹಾಗೂ ಆರ್ಥಿಕವಾಗಿ ಧನ ವ್ಯಯವಾದೀತು. ಲಾಭಸ್ಥಾನಗತನಾದ ಕುಜನು ನಿರುದ್ಯೋಗಿಗೆ ಉದ್ಯೋಗ ಭಾಗ್ಯ, ಅವಿವಾಹಿತರಿಗೆ ಒಳ್ಳೆಯ ಯೋಗವಿದೆ. ಆರೋಗ್ಯ ಬಗ್ಗೆ ಕಾಳಜಿವಹಿಸಿ. ಮಕ್ಕಳಿಂದ ಲಾಭ

ಮಕರರಾಶಿ
ಪ್ರೇಮ ವಿಚಾರದಲ್ಲಿ ಯಶಸ್ಸು, ಇಲ್ಲ ಸಲ್ಲ ಅಪವಾದ-ಅಗೌರವ, ಹರುಷದ ದಿನವಿದು. ಬಂದ ಅವಕಾಶಗಳನ್ನು ತಪ್ಪದೆ ಉಪಯೋಗಿಸಿಕೊಳ್ಳಿರಿ. ಇತರರ ಮಾತಿಗೆ ಹೆಚ್ಚಿನ ಮಹತ್ವವನ್ನು ನೀಡದೆ ನಿಮ್ಮ ಸ್ವಸಾಮರ್ಥ್ಯದಿಂದಲೇ ಮುನ್ನಡೆಯಿರಿ. ಅನಿರೀಕ್ಷಿತ ಧನಾಗಮನವಿದೆ. ಭಾವನಾತ್ಮಕ ವಿಚಾರಗಳಿಂದ ತೊಂದರೆ, ಸ್ಪರ್ಧಾತ್ಮಕ ವಿಚಾರಗಳಲ್ಲಿ ಜಯ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಮೋಜು-ಮಸ್ತಿಯಲ್ಲಿ ತೊಡಗುವಿರಿ.

ಕುಂಭರಾಶಿ
ಸ್ಥಿರಾಸ್ತಿಯಿಂದ ಅನುಕೂಲ, ವಾಹನದಿಂದ ಲಾಭ, ಮಾತೃವಿನಿಂದ ಧನಾಗಮನ, ಸಾಂಸಾರಿಕ ಹಾಗೂ ಕೌಟುಂಬಿಕವಾಗಿ ಮನಸ್ಸಿಗೆ ಸಮಾಧಾನವಿರದು. ಆರೋಗ್ಯದಲ್ಲೂ ಏರುಪೇರು ಕಂಡುಬರಲಿದೆ. ಅನಿರೀಕ್ಷಿತ ರೀತಿಯಲ್ಲಿ ಬಂಧುಮಿತ್ರರ ಸಮಾಗಮವು ಇರುತ್ತದೆ. ನೆರೆಹೊರೆಯವರೇ ಶತ್ರುವಾಗುವರು, ಭಾವನೆಗಳಿಗೆ ಮನ್ನಣೆ, ಇಷ್ಟಾರ್ಥ ಸಿದ್ಧಿ ಯೋಗ, ಪ್ರಯಾಣದಲ್ಲಿ ಅನುಕೂಲ, ತಂದೆಯಿಂದ ಅದೃಷ್ಟ.

ಮೀನರಾಶಿ
ಸ್ವಂತ ಉದ್ಯಮ ವ್ಯಾಪಾರದಲ್ಲಿ ನಷ್ಟ, ದೂರ ಪ್ರಯಾಣಕ್ಕೆ ಆಲೋಚನೆ, ನಿರೀಕ್ಷಿತ ಚಿಂತನೆಗಳನ್ನು ಕಾರ್ಯರೂಪಕ್ಕೆ ಇಳಿಸಿರಿ. ಯಶಸ್ಸು ನಿಮ್ಮನ್ನು ಹಿಂಬಾಲಿಸಲಿದೆ. ಉದ್ಯೋಗಸ್ಥರಿಗೆ ಉದ್ಯೋಗದ ಬದಲಾವಣೆಯ ಸಾಧ್ಯತೆ ಇದೆ. ಇದರ ಉಪಯೋಗ ಮುನ್ನಡೆ ತಂದೀತು. ಕುಟುಂಬದಲ್ಲಿ ಗೊಂದಲ, ಉದ್ಯೋಗ ಬದಲಾವಣೆ, ಗೃಹ ಬದಲಾವಣೆಯಿಂದ ಯಶಸ್ಸು, ತಂದೆಯ ನಡವಳಿಕೆಯಿಂದ ಬೇಸರ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular