ಮಂಗಳವಾರ, ಏಪ್ರಿಲ್ 29, 2025
Homehoroscopeನಿತ್ಯಭವಿಷ್ಯ :16-04-2020

ನಿತ್ಯಭವಿಷ್ಯ :16-04-2020

- Advertisement -

ಮೇಷರಾಶಿ
ಮಾನಸಿಕ ಕಿರಿಕಿರಿ, ದೇಹದಲ್ಲಿ ಆಲಸ್ಯ, ಆತ್ಮೀಯರೊಂದಿಗೆ ಮನಃಸ್ತಾಪ, ವಿರೋಧಿಗಳನ್ನು ಸಮರ್ಥವಾಗಿ ಎದುರಿಸುವ ತಾಕತ್ತು ನಿಮಗಿದ್ದು ಮುನ್ನಡೆಯುವಿರಿ. ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಫ‌ಲವಿರುತ್ತದೆ. ಗೃಹ ನಿರ್ಮಾಣ ಕಾರ್ಯಗಳಿಗೆ ಆರ್ಥಿಕ ಅಡಚಣೆ ಇರುತ್ತದೆ. ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಉದ್ಯೋಗದಲ್ಲಿ ಕಿರಿಕಿರಿ, ಮನೆಯಲ್ಲಿ ಅಶಾಂತಿ, ಸ್ಥಿರಾಸ್ತಿ ತಗಾದೆ, ನೀರು-ವಾಹನದಿಂದ ಎಚ್ಚರ.

ವೃಷಭರಾಶಿ
ಸಮಸ್ಯೆಗಳನ್ನು ನೀವು ವೈಯಕ್ತಿಕವಾಗಿ ಪರಿಹರಿಸಿಕೊಳ್ಳುವುದು ಒಳ್ಳೆಯದು. ಹೆಚ್ಚಿನ ಶುಭ ಫ‌ಲಗಳೇ ಅನುಭವಕ್ಕೆ ಬರಲಿವೆ. ಆಗಾಗ ನಾನಾ ರೀತಿಯಲ್ಲಿ ಖರ್ಚು ವೆಚ್ಚಗಳು ಕಿರಿಕಿರಿ ತರಲಿವೆ. ಬಂಧುಗಳಿಂದ ಕಿರಿಕಿರಿ, ಸಹೋದರಿಯಿಂದ ತೊಂದರೆ, ಪ್ರಯಾಣದಲ್ಲಿ ಎಚ್ಚರ, ಪೆಟ್ಟಾಗುವ ಸಾಧ್ಯತೆ, ಉದ್ಯೋಗ ಬದಲಾವಣೆಯಿಂದ ಸಮಸ್ಯೆ, ಹೇಳಿಕೆ ಮಾತುಗಳಿಂದ ಬೇಸರ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ.

ಮಿಥುನರಾಶಿ
ಅರ್ಥಪೂರ್ಣವಾದ ಮಾತು ಶತ್ರುಗಳಲ್ಲೂ, ಮಿತ್ರರಲ್ಲೂ, ಸಹಮತ ಮೂಡಿ ಮುನ್ನಡೆಗೆ ಸಾಧಕ ಮಾಡಲಿದೆ. ದೂರ ಸಂಚಾರದಲ್ಲಿ ಕಾರ್ಯಸಿದ್ಧಿ ಇದ್ದರೂ ಹೆಚ್ಚಿನ ಜಾಗ್ರತೆ ಮಾಡಬೇಕು. ಆಕಸ್ಮಿಕ ಆರ್ಥಿಕ ಸಂಕಷ್ಟ, ರೋಗ ಬಾಧೆ, ಶತ್ರುಗಳಿಂದ ತೊಂದರೆ, ಕುಟುಂಬದಲ್ಲಿ ಕಲಹ, ಹೆಣ್ಣು ಮಕ್ಕಳಿಂದ ಆರ್ಥಿಕ ಸಹಾಯ, ಮೋಜು-ಮಸ್ತಿಯಿಂದ ಸಮಸ್ಯೆ, ಪ್ರೇಮ ವಿಚಾರದಲ್ಲಿ ವೈಮನಸ್ಸು. ದಿನಾಂತ್ಯ ಶುಭವಿದೆ.

ಕಟಕರಾಶಿ
ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಅವಕಾಶಗಳು ಕೈ ತಪ್ಪುವುದು, ಕೋರ್ಟು ಕಚೇರಿ ಕಾರ್ಯಭಾಗದಲ್ಲಿ ಮುನ್ನಡೆ ತೋರಿಬಂದು ಸಂತಸ. ನಿಮ್ಮಿಂದ ಉಪಕೃತರಾದವರೇ ನಿಮಗೆ ಸಹಕಾರ ನೀಡಲಿದ್ದಾರೆ. ಆರ್ಥಿಕವಾಗಿ ಸಂಕಷ್ಟಗಳು ದೂರವಾಗಲಿವೆ. ಖರ್ಚಿನಲ್ಲಿ ಮಿತಿ ಇರಲಿ. ಸ್ವಂತ ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಉದ್ಯೋಗದಲ್ಲಿ ಒತ್ತಡ, ಕೆಟ್ಟ ದೃಷ್ಠಿ ಬೀಳುವುದು, ದಾಂಪತ್ಯದಲ್ಲಿ ಸಂಶಯ, ಮನಸ್ಸಿನಲ್ಲಿ ಆತಂಕ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.

ಸಿಂಹರಾಶಿ
ವಿಪರೀತ ಸಾಲ, ಋಣ-ರೋಗ ಬಾಧೆ, ಅಧಿಕ ಖರ್ಚು, ಸೇವಕರಿಂದ ಕಿರಿಕಿರಿ, ಕಾರ್ಮಿಕರಿಂದ ತೊಂದರೆ, ಕೆಳ ಹಂತದ ಅಧಿಕಾರಿಗಳಿಂದ ನಷ್ಟ, ಆರೋಗ್ಯದಲ್ಲಿ ಸಮಸ್ಯೆ, ಸರಕಾರಿ ಕೆಲಸಗಳಲ್ಲಿ ನಿಮ್ಮ ಕಾರ್ಯಸಾಧನೆ ಯಾಗಲಿದೆ. ಕೆಲಸ ಕಾರ್ಯಗಳು ಹಂತ ಹಂತವಾಗಿ ಜರಗಿ ಸಂತಸ ತಂದಾವು. ಮನಸ್ಸಿನಲ್ಲಿ ಆತಂಕ, ಸಹೋದರಿಯೊಂದಿಗೆ ಶತ್ರುತ್ವ, ನೆರೆಹೊರೆಯವರೊಂದಿಗೆ ಕಲಹ.

ಕನ್ಯಾರಾಶಿ
ಮಕ್ಕಳಿಂದ ಅನುಕೂಲ, ಪ್ರೇಮ ವಿಚಾರದಲ್ಲಿ ಯಶಸ್ಸು, ಆಲೋಚನೆಗಳಿಂದ ತೊಂದರೆ, ಗೌರವ-ಸನ್ಮಾನಕ್ಕೆ ಮಿತ್ರರಿಂದ ಅಡೆತಡೆ, ಗೃಹ ನಿರ್ಮಾಣ ಹಾಗೂ ಭೂ ಖರೀದಿಗೆ ಅಡಚಣೆ ತೋರಿಬರಲಿದೆ. ಆರ್ಥಿಕವಾಗಿ ತುಸು ಚೇತರಿಕೆಯು ಅನುಕೂಲವಾಗಲಿದೆ. ಶಿಸ್ತು ಹಾಗೂ ಸಂಯಮದಿಂದ ಇದ್ದಲ್ಲಿ ಎಲ್ಲವನ್ನೂ ಎದುರಿಸಬಹುದಾಗಿದೆ ಜಾಗ್ರತೆ. ರಾಜಕಾರಣಿಗಳಿಂದ ಸಮಸ್ಯೆ, ಸರ್ಕಾರಿ ಅಧಿಕಾರಿಗಳಿಂದ ಅವಮಾನ, ನಷ್ಟಗಳು ಹೆಚ್ಚಾಗುವುದು.

ತುಲಾರಾಶಿ
ಉದ್ಯೋಗ ಅವಕಾಶ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ವಾಸ ಸ್ಥಳದಲ್ಲಿ ಮಾಟದ ಭೀತಿ, ಕಾರ್ಯಗಳಿಂದ ಸಮಸ್ಯೆ, ಪಾಲುದಾರಿಕೆ ವ್ಯವಹಾರದಲ್ಲಿ ಹೆಚ್ಚಿನ ವಿಶ್ವಾಸ ಸಲ್ಲದು. ದಾನಧರ್ಮಾದಿಗಳಿಗೆ ಧನ ವ್ಯಯವಾದರೂ ಸಂತೃಪ್ತಿ ದೊರಕಲಿದೆ. ನಿರುದ್ಯೋಗಿಗಳು ತಾತ್ಕಾಲಿಕ ಉದ್ಯೋಗವನ್ನು ಪಡೆಯಲಿದ್ದಾರೆ. ಸಂಚಾರದಲ್ಲಿ ಜಾಗ್ರತೆ. ನೀರಿನ ಸ್ಥಳಗಳಲ್ಲಿ ಎಚ್ಚರಿಕೆ, ಮಹಿಳೆಯರಿಂದ ಅಪವಾದ, ಮೇಲಾಧಿಕಾರಿಗಳಿಂದ ಕಿರಿಕಿರಿ, ನೋವು-ನಿರಾಸೆ ಹೆಚ್ಚು.

ವೃಶ್ಚಿಕರಾಶಿ
ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ದೂರ ಪ್ರಯಾಣ ಮಾಡುವ ಸಾಧ್ಯತೆ, ಕೈ ಕಾಲುಗಳಿಗೆ ಪೆಟ್ಟು, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಅವಕಾಶಗಳು ಕೈತಪ್ಪುವುದು. ಅನಿರೀಕ್ಷಿತವಾಗಿ ಶುಭ ಸುದ್ದಿಯಿಂದ ಸಂತಸ ತರುವುದು. ವ್ಯಾಪಾರ, ವ್ಯವಹಾರಗಳಲ್ಲಿ ತುಸು ಚೇತರಿಕೆ ತೋರಿಬಂದು ಮುನ್ನಡೆ ತರುವುದು. ಯೋಗ್ಯ ವಯಸ್ಕರಿಗೆ ಕಂಕಣಬಲದ ಯೋಗವು ಇರುವುದು.

ಧನಸ್ಸುರಾಶಿ
ಆಕಸ್ಮಿಕ ಧನಾಗಮನ, ನಾನಾ ಮೂಲಗಳಿಂದ ಧನ ಪ್ರಾಪ್ತಿ, ಸೋಲು-ನಿರಾಸೆಗಳು, ವಿಪರೀತ ನಷ್ಟ-ಅಪಕೀರ್ತಿ, ಕುಟುಂಬದಲ್ಲಿ ಆತಂಕ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಶೀತ ಸಂಬಂಧಿತ ರೋಗ, ಕೋರ್ಟು ಕಚೇರಿಯ ಕೆಲಸ ಕಾರ್ಯಗಳಲ್ಲಿ ಹಂತ ಹಂತವಾಗಿ ಮುನ್ನಡೆ ಇರುತ್ತದೆ. ವೃತ್ತಿಯ ಸಹಕಾರದಿಂದ ಶಾಂತಿ ಸಮಾಧಾನ ಸಿಗಲಿದೆ. ವಿರೋಧಿಗಳನ್ನು ಸಮರ್ಥವಾಗಿ ಎದುರಿಸುವಿರಿ.

ಮಕರರಾಶಿ
ದಾಂಪತ್ಯದಲ್ಲಿ ವಿರಸ, ಮನಸ್ಸಿಗೆ ಬೇಸರ, ಅಧಿಕ ಮುಂಗೋಪ, ಮಕ್ಕಳಿಂದ ವೈಮನಸ್ಸು, ಗುಪ್ತ ವಿಚಾರಗಳು ಬಯಲಾಗುವುದು, ವ್ಯಾಪಾರ-ಉದ್ಯಮದಲ್ಲಿ ನಷ್ಟ, ವ್ಯಾಪಾರ ವ್ಯವಹಾರಗಳಲ್ಲಿ ಚೇತರಿಕೆ ಸಮಾಧಾನ ತರಲಿದೆ. ಧನಾಗಮನ ಚೇತರಿಕೆಯನ್ನು ಪಡೆಯಲಿದೆ. ಮನಸ್ಸನ್ನು ಏಕಾಗ್ರಗೊಳಿಸುವುದರಿಂದ ಸಮಸ್ಯೆ ಪರಿಹಾರವಾಗಲಿದೆ. ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ದುಷ್ಟ ವ್ಯಕ್ತಿಗಳಿಂದ ತೊಂದರೆ, ಅನ್ಯರ ಕುತಂತ್ರಕ್ಕೆ ಸಿಲುಕುವಿರಿ.

ಕುಂಭರಾಶಿ
ಶ್ರಮಜೀವಿಗಳಿಗೆ ಕಾರ್ಯಸಾಧನೆಗೆ ಸಮಯ ಸಿಗಲಿದೆ. ವೈಯಕ್ತಿಕ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕು. ಹಿತಶುತ್ರಗಳಿಗೆ ನೀವು ಪಾಠ ಕಲಿಸಲಿದ್ದೀರಿ. ಆರೋಗ್ಯದಲ್ಲಿ ವ್ಯತ್ಯಾಸ, ಗುಪ್ತ ಶತ್ರುಗಳಿಂದ ತೊಂದರೆ, ಕೆಲಸಗಾರರಿಂದ ವಂಚನೆ, ಸೇವಕರಿಂದ ಮೋಸ, ಇಲ್ಲ ಸಲ್ಲದ ಅಪವಾದ, ಉಸಿರಾಟದ ತೊಂದರೆ, ಕಣ್ಣಿಗೆ ಪೆಟ್ಟಾಗುವ ಸಾಧ್ಯತೆ. ದಿನಾಂತ್ಯ ಶುಭ.

ಮೀನರಾಶಿ
ಮಕ್ಕಳ ಏಳಿಗೆಗೆ ತೊಂದರೆ, ಜೀವನದಲ್ಲಿ ಏರುಪೇರು, ಸಂತಾನ ದೋಷ, ದುಶ್ಚಟಗಳಿಂದ ಸಮಸ್ಯೆ, ಅಕ್ರಮ ಸಂಪಾದನೆಯಿಂದ ತೊಂದರೆ, ಶ್ರೀದೇವರ ರಕ್ಷೆ ಇರುತ್ತದೆ. ಇದು ಭವಿಷ್ಯಕ್ಕೆ ಪೂರಕವಾಗಲಿದೆ. ಮುಖ್ಯವಾಗಿ ಅನಾವಶ್ಯಕವಾಗಿ ಚಿಂತೆಗೆ ಕಾರಣರಾಗದಿರಿ. ಯೋಗ್ಯ ವಯಸ್ಕರಿಗೆ ಶುಭವಾರ್ತೆ ಇರುತ್ತದೆ. ಮಹಿಳಾ ಮಿತ್ರರೊಂದಿಗೆ ಕಲಹ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆಯಾಗುವ ಸಾಧ್ಯತೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular