ರಾಜ್ಯದ 8 ಜಿಲ್ಲೆಗಳು ರೆಡ್ ಝೋನ್.‌..! ಯಾವೆಲ್ಲಾ ಜಿಲ್ಲೆಗಳು ಡೇಂಜರ್ ಗೊತ್ತಾ ?

0

ನವದೆಹಲಿ : ಕೊರೊನಾ ವೈರಸ್ ಸೋಂಕು ದೇಶವನ್ನೇ ತತ್ತರಿಸಿ ಹೋಗುವಂತೆ ಮಾಡುತ್ತಿದೆ. ಹಲವು ರಾಜ್ಯಗಳಲ್ಲಿ ಕೊರೊನಾ ಸೋಂಕು ಕಡಿಮೆ ಪ್ರಮಾಣದಲ್ಲಿದೆ. ಅದ್ರಲ್ಲೂ ಕರ್ನಾಟಕದ ಹಲವು ಜಿಲ್ಲೆಗಳಿಗೆ ಕೊರೊನಾ ಸೋಂಕು ಬಾಧಿಸಿಲ್ಲ. ಸೋಂಕಿತರು ಹಾಗೂ ಸಾವಿನ ಸಂಖ್ಯೆ ಆಧಾರದ ಮೇಲೆ‌ ಕೇಂದ್ರ ಸರ್ಕಾರ ರೆಡ್, ಆರೆಂಜ್, ಗ್ರೀನ್ ಝೋನ್ ವಲಯಗಳನ್ನಾಗಿ ಪರಿವರ್ತಿಸಿದೆ. ರಾಜ್ಯದ 8 ಜಿಲ್ಲೆಗಳನ್ನು ರೆಡ್ ಝೋನ್ ಗೆ ಸೇರಿಸಿದೆ. ಹಾಗಾದ್ರೆ ರಾಜ್ಯದ ಯಾವ ಜಿಲ್ಲೆಗಳು ಯಾವ ಪಟ್ಟಿಯಲ್ಲಿವೆ ಅನ್ನೋ ಮಾಹಿತಿ ಇಲ್ಲಿದೆ.

ರೆಡ್ ಝೋನ್ (ಹಾಟ್ ಸ್ಪಾಟ್ ಜಿಲ್ಲೆಗಳು)
ಕೇಂದ್ರ ಸರ್ಕಾರದ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಬೆಂಗಳೂರು ನಗರ, ಮೈಸೂರು ಹಾಗು ಬೆಳಗಾವಿ ಜಿಲ್ಲೆಯನ್ನ ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ. ಈ‌ ಮೂರು ಜಿಲ್ಲೆಯ ಜನರು ಮನೆಯಿಂದ ಯಾರು ಕೂಡ, ಯಾವುದೇ ಕಾರಣಕ್ಕೂ ಹೊರಗೆ ಬರುವಂತಿಲ್ಲ.

ರೆಡ್ ಝೋನ್ (ಹಾಟ್ ಸ್ಪಾಟ್ ವಿತ್ ಕ್ಲಸ್ಟರ್)
ರೆಡ್ ಝೋನ್ ಪಟ್ಟಿಯಲ್ಲಿ ಇನ್ನು ಐದು ಜಿಲ್ಲೆಗಳಿವೆ ದಕ್ಷಿಣ‌‌ ಕನ್ನಡ, ಬೀದರ್, ಕಲಬುರಗಿ, ಬಾಗಲಕೋಟೆ, ಧಾರವಾಡವನ್ನ ಹಾಟ್ ಸ್ಪಾಟ್ ವಿತ್ ಕ್ಲಸ್ಟರ್ ಎಂದು ಘೋಷಣೆ ‌ಮಾಡಲಾಗಿದೆ. ಧಾರವಾಡ, ಬಾಗಲಕೋಟೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಯಾವುದೇ ಕ್ಷಣದಲ್ಲಿ ಮತಷ್ಟು ಏರಿಕೆಯಾಗುವ ಸಾಧ್ಯತೆ .

ಆರೆಂಜ್ ಝೋನ್
ಈಗಾಗಲೇ ಕೊರೊನಾ ಸೋಂಕು ಕಾಣಿಸಿಕೊಂಡು ಸೋಂಕಿತರು ಗುಣಮುಖರಾಗಿದ್ದಾರೆ. ಇಂತಹ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆ ತೀರಾ ಕಡಿಮೆ. ಹೀಗಾಗಿ ಈ ಜಿಲ್ಲೆಗಳನ್ನು ಆರೆಂಜ್ ಝೋನ್ ನಲ್ಲಿ ಇರಿಸಲಾಗಿದೆ. ಈ ಪಟ್ಟಿಯಲ್ಲಿ ಬಳ್ಳಾರಿ, ಮಂಡ್ಯ, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಉಡುಪಿ, ಗದಗ, ತುಮಕೂರು, ಕೊಡಗು, ವಿಜಯಪುರ, ಚಿಕ್ಕಬಳ್ಳಾಪುರ, ಉತ್ತರಕನ್ನಡ ಜಿಲ್ಲೆಗಳು ಸೇರಿಕೊಂಡಿದೆ.

ಗ್ರೀನ್ ಝೋನ್
ಇನ್ನು ಹಲವು ಜಿಲ್ಲೆಗಳನ್ನು ಗ್ರೀನ್ ಝೋನ್ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಹಾವೇರಿ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಶಿವಮೊಗ್ಗ, ಯಾದಗಿರಿ. ಈ ಭಾಗದಲ್ಲಿ ಯಾವುದೇ ಕೊರೊನಾ ಪ್ರಕರಣಗಳ ಕಂಡು ಬಂದಿಲ್ಲ. ಆದ್ರೂ ಈ ಜಿಲ್ಲೆಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇನ್ನು ಕೇಂದ್ರ ಸರ್ಕಾರ ನೀಡಿರುವ ಪಟ್ಟಿ ಪ್ರತಿ ನಾಲ್ಕು ದಿನಗಳಿಗೊಮ್ಮೆ ಪರಿಷ್ಕರಣೆ‌ ಮಾಡಲಾಗುತ್ತೆ. ಯಾವುದಾದರೂ ಕ್ಷೇತ್ರದಲ್ಲಿ ಕೊರೊನಾ ಸೋಂಕು ಹೆಚ್ಚಾದಲ್ಲಿ ಅದನ್ನ ನಿಗಧಿತ ವಲಯಗಳ ಪಟ್ಟಿಗೆ ಸೇರಿಸಲಾಗುತ್ತೆ.

Leave A Reply

Your email address will not be published.