ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 27-04-2020

ನಿತ್ಯಭವಿಷ್ಯ : 27-04-2020

- Advertisement -

ಮೇಷರಾಶಿ
ಶ್ರಮವೇ ಜೀವನವಾಗಲಿದೆ. ಕೆಲಸದಲ್ಲಿ ತಕ್ಕ ಪ್ರತಿಫ‌ಲವಿಲ್ಲದೆ ನಿರಾಶೆಯಾಗಲಿದೆ. ವಾಹನದಿಂದ ಅಪಘಾತ ಭೀತಿ ತೋರಿಬರಲಿದೆ. ಕೆಲಸ ಕಾರ್ಯಗಳಲ್ಲಿ ಅನುಕೂಲ, ವೃತ್ತಿ ಕ್ಷೇತ್ರದಲ್ಲಿ ತೊಂದರೆ, ಶತ್ರುಗಳ ಕುತಂತ್ರ, ಅಪವಾದ ಭೀತಿ, ತಾಯಿಯಿಂದ ಅನುಕೂಲ, ಜಮೀನು ಮಾರಾಟದಿಂದ ಲಾಭ, ದಿನಾಂತ್ಯ ಶುಭ ವಾರ್ತೆ ಕೇಳಲಿದೆ.

ವೃಷಭರಾಶಿ
ಶೈಕ್ಷಣಿಕ ಕಾರ್ಯಗಳಲ್ಲಿ ಒಳ್ಳೆಯ ಉತ್ತೇಜನ ಸಿಗಲಿದೆ. ಕೆಲಸ ಕಾರ್ಯಗಳಲ್ಲಿ ಅನುಕೂಲ, ತಂದೆಯಿಂದ ಆಕಸ್ಮಿಕ ಅನಾನುಕೂಲಗಳು, ದೂರ ಪ್ರಯಾಣದಿಂದ ನಷ್ಟ, ಅನಾವಶ್ಯಕ ವಾದ-ವಿವಾದಗಳಿಂದ ಮಾನಸಿಕ ಭಂಗ, ತಂದೆ-ಮಕ್ಕಳಲ್ಲಿ ವಿರಸ, ಸಣ್ಣ ಸಣ್ಣ ವಿಚಾರದಲ್ಲಿ ಅನಾವಶ್ಯಕವಾಗಿ ಹೆಚ್ಚಿನ ಧನ ವ್ಯಯವಾದೀತು.

ಮಿಥುನರಾಶಿ
ದೈವಬಲವಿಲ್ಲದೆ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಅಪಘಾತ ಭಯ, ಅಗ್ನಿಭಯ, ಅನಾರೋಗ್ಯ ಭಯ, ಶ್ರಮದಿಂದ ಲಾಭವಿಲ್ಲದೆ ನೋವು, ಸಂಬಂಧಿಗಳಿಂದ ಗೌರವ, ನಿಮ್ಮ ಅಭಿವೃದ್ಧಿಗೆ ಶತ್ರುಗಳು ಅಸೂಯೆಪಟ್ಟಾರು. ವ್ಯಾಪಾರಿಗಳು ಸಿಂಹಾವಲೋಕನ ಮಾಡಿಕೊಳ್ಳಬೇಕು.

ಕಟಕರಾಶಿ
ವಿದ್ಯಾರ್ಥಿಗಳು ಚೇತರಿಕೆಯನ್ನು ಪಡೆಯಲಿದ್ದಾರೆ. ಕೆಲಸ ಕಾರ್ಯಗಳಲ್ಲಿ ಚೇತರಿಕೆ, ವ್ಯವಹಾರಗಳಲ್ಲಿ ನಷ್ಟ, ಅಗೌರವ, ಉಷ್ಣಾಂಶದ ಭಾದೆ, ದಾಂಪತ್ಯದ ವಿರಸದ ನೋವುಗಳು ಹೆಚ್ಚಾಗುತ್ತವೆ. ಆರೋಗ್ಯಕ್ಕಾಗಿ ಆಗಾಗ ಆತಂಕವನ್ನು ಕಂಡುಕೊಳ್ಳುವಿರಿ. ಹಿರಿಯರು ಮನಸ್ಸಿಗೆ ಸಮಾಧಾನವಿಲ್ಲದೆ ಕಿರಿಕಿರಿ ತಂದಾರು.

ಸಿಂಹರಾಶಿ
ದೇವತಾ ಕಾರ್ಯಗಳಿಗೆ ವೈದಿಕರ ಸಲಹೆಗಳು ಬಂದಾವು. ಇಷ್ಟು ದಿನದ ಸಮಸ್ಯೆಗೆ ಮುಕ್ತಿ, ಜಮೀನು, ವಾಹನ, ಮಾತೃ ವರ್ಗದಿಂದ ಅನುಕೂಲ, ಶತ್ರುಬಾಧೆ, ರೋಗಬಾಧೆ, ಸಾಲದ ಬಾದೆ ಪರಿಹಾರ, ನಿಮ್ಮ ಮಟ್ಟಿಗೆ ಇಂದು ಅದೃಷ್ಟದ ದಿನ, ವ್ಯಾಪಾರಿಗಳು ವ್ಯವಹಾರದಲ್ಲಿ ಚೇತರಿಕೆಯನ್ನು ಪಡೆಯಲಿದ್ದಾರೆ. ಮಡದಿಯ ಕನಸು ನನಸಾಗಿ ಸಂತಸ ತಂದೀತು.

ಕನ್ಯಾರಾಶಿ
ವಿದ್ಯಾರ್ಥಿಗಳ ಕೌಶಲಕ್ಕೆ ಉತ್ತಮ ಫ‌ಲಿತಾಂಶ ಸಿಗಲಿದೆ. ಈ ದಿನ ನೆರೆಹೊರೆಯವರಿಂದ ಆಗಲಿ, ಬಂಧು-ಮಿತ್ರರಿಂದ ಆಗಲಿ ಕೆಲವು ಅಡಚಣೆಗಳು ತೊಂದರೆಗಳು, ಮಾನಸಿಕ ನೋವು ತರಬಹುದು, ಮಾನಸಿಕ ಇಚ್ಛೆಗಳು ಪೂರ್ತಿಯಾಗದೆ ಚಂಚಲ ಮನಸ್ಸಿನಿಂದ ಕೋಪವು ಉದ್ಭವಿಸಬಹುದು, ಹಿರಿಯರ ಸಲಹೆಯಿಂದ ಅನುಕೂಲ, ದಿನಾಂತ್ಯ ಶುಭ.

ತುಲಾರಾಶಿ
ಆರೋಗ್ಯಕ್ಕೆ ಭಂಗ ಆಗಾಗ ತಂದೀತು. ಸಮಸ್ಯೆಗಳಿಂದ ಮಾನಸಿಕ ನೆಮ್ಮದಿ ಹಾಲೂ, ಆಸ್ತಿ, ವಾಹನ ಅಪಘಾತ , ತಾಯಿಯ ಅನಾರೋಗ್ಯ, ನಿಮಗೆ ಹೆಚ್ಚು ಹೆಚ್ಚು ನಷ್ಟವನ್ನು ಉಂಟು ಮಾಡುವ ಸಾಧ್ಯತೆಯಿದೆ, ವಿದ್ಯುತ್ ಅಪಘಾತ ವಾಗಲಿ, ವಿಷ ಸರ್ಪದ ಭಯವಾಗಲಿ, ದಂಪತಿಗಳ ಕಿತ್ತಾಟವಾಗುವ ಸಾಧ್ಯತೆ. ವೃತ್ತಿರಂಗದಲ್ಲಿ ಮುನ್ನಡೆ, ಕೆಲಸಗಳು ಅಡೆತಡೆ ಇರದೆ ಮುನ್ನಡೆ ತರಲಿವೆ. ದಿನಾಂತ್ಯ ಅತಿಥಿ ಬಂದಾರು.

ವೃಶ್ಚಿಕರಾಶಿ
ತೋಟಗಾರಿಕೆ, ಕೃಷಿ ಕೆಲಸದಲ್ಲಿ ಆಸಕ್ತಿ ತಂದೀತು. ಮಾಡಿದ ಕೆಲಸಗಳಲ್ಲಿ ಯಶಸ್ಸು, ಬಂಧು ಮಿತ್ರರಿಂದ ಅನುಕೂಲ, ಆತ್ಮವಿಶ್ವಾಸ, ಗೌರವ ಹೆಚ್ಚಾಗುತ್ತದೆ, ರಾಜಕಾರಣಿಗಳಿಗೆ ಗೊಂದಲ, ಮಂಗಳ ಕಾರ್ಯಗಳಲ್ಲಿ ವಿಳಂಭ, ಸಾಂಸಾರಿಕವಾಗಿ ಕೊಂಚ ನೆಮ್ಮದಿಯನ್ನು ತರಲಿದೆ.

ಧನುರಾಶಿ
ಪಾಲು ವ್ಯವಹಾರಗಳಲ್ಲಿ ಸಮಸ್ಯೆ ತಂದಾವು. ಕೆಲಸ ಕಾರ್ಯಗಳಲ್ಲಿ ಯಶಸ್ಸು, ಸ್ನೇಹಿತರ ಸಹಕಾರದಿಂದ ಆತ್ಮವಿಶ್ವಾಸ ಹೆಚ್ಚಳ, ಸ್ವಯಂಕೃತ ಅಪರಾಧದಿಂದ ಚಿಂತೆ ನಿಮ್ಮನ್ನು ಕಾಡಲಿದೆ. ಆರೋಗ್ಯದ ಕುರಿತು ಜಾಗ್ರತೆ ಇರಲಿ. ನಿರುದ್ಯೋಗಿಗಳು ಬಂದ ಅವಕಾಶವನ್ನು ಪಡೆದುಕೊಳ್ಳುವುದು ಲೇಸು. ಸಂಚಾರದಲ್ಲಿ ಜಾಗ್ರತೆ ವಹಿಸಿ.

ಮಕರರಾಶಿ
ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆದಾವು. ಉಷ್ಣದ ದೋಷಗಳು, ದಾಂಪತ್ಯದಲ್ಲಿನ ವಿರಸಗಳು, ಕೋಪವನ್ನು ತರುತ್ತವೆ, ಕೆಲವೊಂದು ಸಮಸ್ಯೆಗಳು ಪರಿಹಾರವಾಗಲಿದೆ. ಹಳೆಯ ಸಂಬಂಧವೊಂದು ಕೂಡಿಬರಲಿದೆ. ಚಿಂತಿತ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ಇದರಿಂದ ನಿಮಗೆ ಸಮಾಧಾನವಾಗಲಿದೆ. ದಾಂಪತ್ಯದಲ್ಲಿ ಸಾಮರಸ್ಯವಿರುತ್ತದೆ.

ಕುಂಭರಾಶಿ
ಅನಾವಶ್ಯಕವಾಗಿ ಮುಂಗೋಪದಿಂದ ವಿರಸ ಕಟ್ಟಿಕೊಳ್ಳುವಂತಾದೀತು. ಕೆಲಸ ಕಾರ್ಯಗಳಲ್ಲಿ ತೊಂದರೆಗಳು, ಅವಮಾನ, ನಷ್ಟಗಳನ್ನು ಅನುಭವಿಸುವ ಅವಕಾಶ ಇದೆ, ಬಂಧು-ಮಿತ್ರರ ಅಸಹಕಾರ, ವೃತ್ತಿಯಲ್ಲಿ ಆಗುವ ಅನಾನುಕೂಲಗಳು ನಷ್ಟವನ್ನು ಉಂಟು ಮಾಡುತ್ತವೆ. ಇದರಿಂದ ಮನಸ್ಸಿನ ಚಂಚಲತೆ ಹೆಚ್ಚಾಗಿ ನಿದ್ರಾಹೀನತೆ, ಸಾಂಸಾರಿಕವಾಗಿ ಪತ್ನಿಯ ಸಹಕಾರದಿಂದ ಶಾಂತಿ-ಸಮಾಧಾನ ಸಿಗಲಿದೆ. ನೆರೆಹೊರೆಯವರ ಸಹಕಾರ ಸಮಾಧಾನವನ್ನು ತಂದುಕೊಟ್ಟಿತು.

ಮೀನರಾಶಿ
ಧನಾಗಮನ ಕಾರ್ಯಸಾಧನೆಗೆ ಸುಲಭವಾಗಲಿದೆ. ಹಣಕಾಸಿನ ವಿಚಾರದಲ್ಲಿ ನೀವಿಂದು ಅದೃಷ್ಟವಂತರು, ಕುಟುಂಬದಲ್ಲಿ ನೆಮ್ಮದಿ, ಬಂಧುಮಿತ್ರರ ಸಹಾಯ ಸಹಕಾರ, ಸಂತಾನ ವಿಚಾರದಲ್ಲಿ ಮಾನಸಿಕ ಕ್ಷೇಶ, ಅನಿರೀಕ್ಷಿತ ರೂಪದಲ್ಲಿ ಬಂಧುಮಿತ್ರರು ಮನೆಗೆ ಬಂದಾರು. ಕಾಂಟ್ರಾಕ್ಟ್ ದಾರರಿಗೆ ಚೇತರಿಕೆಯ ದಿನಗಳಾಗಲಿವೆ. ದಿನಾಂತ್ಯ ಸಿಹಿ ವಾರ್ತೆ ಇದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular