ರಾಜ್ಯದಲ್ಲಿಂದು 3 ಮಂದಿಗೆ ಕೊರೊನಾ ಪಾಸಿಟಿವ್, ಓರ್ವ ಮಹಿಳೆ ಬಲಿ

0

ಬೆಂಗಳೂರು : ರಾಜ್ಯವನ್ನೇ ತಲ್ಲಣ ಮೂಡಿಸಿದ್ದ ಕೊರೊನಾ ವೈರಸ್ ಸೋಂಕಿನ ಕುರಿತು ಸಮಾಧಾನಕರ ಸುದ್ದಿಯೊಂದು ಹೊರಬಿದ್ದಿದೆ. ರಾಜ್ಯದಲ್ಲಿಂದು ಕೇವಲ 3 ಮಂದಿಗಷ್ಟೇ ಕೊರೊನಾ ಸೋಂಕು ದೃಢಪಟ್ಟಿದ್ದರೆ, ಕೊರೊನಾ ಮಹಾಮಾರಿಗೆ ಮಹಿಳೆಯೋರ್ವರು ಬಲಿಯಾಗಿದ್ದಾರೆ.

ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರೋದು ಆತಂಕವನ್ನು ಮೂಡಿಸಿತ್ತು. ಆದ್ರಿಂದು ಕೇವಲ 3 ಮಂದಿಗಷ್ಟೇ ಕೊರೊನಾ ಸೋಂಕು ದೃಢಪಟ್ಟಿರುವುದರಿಂದಾಗಿ ಕೊಂಚ ನೆಮ್ಮದಿ ತರಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ನೆರಿಕೊಂಬು ನಿವಾಸಿ, ಕಲಬುರಗಿಯಲ್ಲಿ 65 ವೃದ್ದ ಹಾಗೂ 7 ವರ್ಷದ ಬಾಲಕನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಈ ಮೂಲಕ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಇದೀಗ 503ಕ್ಕೆ ಏರಿಕೆಯಾಗಿದೆ. ಬೆಂಗಳೂರಿನ ನಿವಾಸಿ 45 ವರ್ಷ ಮಹಿಳೆ ತೀವ್ರ ಉಸಿರಾಟದ ಸಮಸ್ಯೆ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದ ಕೊರೊನಾ ಸೋಂಕಿತ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.


ಈ ನಡುವಲ್ಲೇ ರಾಜ್ಯದಲ್ಲಿಂದು 24 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರಲ್ಲಿ 8, ಮೈಸೂರಿನಲ್ಲಿ 4, ಬಾಗಲಕೋಟೆಯಲ್ಲಿ 4, ಮಂಡ್ಯದಲ್ಲಿ 4, ಬೆಳಗಾವಿಯಲ್ಲಿ 4 ಹಾಗೂ ಬಳ್ಳಾರಿಯಲ್ಲಿ 2 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ ರಾಜ್ಯದಲ್ಲಿ 182 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

Leave A Reply

Your email address will not be published.