ಮೇಷರಾಶಿ
ಅಧಿಕ ತಿರುಗಾಟ, ಶತ್ರುಗಳಿಂದ ತೊಂದರೆ, ಮಾನಸಿಕ ವ್ಯಥೆ, ಕೃಷಿಯಲ್ಲಿ ನಷ್ಟ, ಕೆಲಸ ಕಾರ್ಯಗಳಲ್ಲಿ ವಿಳಂಬ. ಆರ್ಥಿಕವಾಗಿ ಆಗಾಗ ತಾಪತ್ರಯಗಳು ಕಂಡು ಬರಲಿವೆ.ವೃತ್ತಿರಂಗದಲ್ಲಿ ಅಧಿಕಾರಿ ಜನರ ಅಗ್ರಹ ಭಿನ್ನಾಭಿಪ್ರಾಯಕ್ಕೆ ಕಾರಣವಾಗಲಿದೆ. ಪ್ರಯಾಣದಲ್ಲಿ ಕಷ್ಟನಷ್ಟಗಳು ತೋರಿ ಬರಲಿವೆ.ದಿನಾಂತ್ಯ ಕಿರು ಸಂಚಾರವಿದೆ.
ವೃಷಭರಾಶಿ
ಸದ್ಯ ದೈವಬಲ ಇದ್ದುದರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಅನುಕೂಲವಾಗಲಿದೆ. ಸ್ಥಿರಾಸ್ತಿ ಲಾಭ, ಹಣಕಾಸು ಅನುಕೂಲ, ಕುಟುಂಬದಲ್ಲಿ ಸೌಖ್ಯ, ವಿವಾಹ ಯೋಗ, ನೆಮ್ಮದಿಯ ವಾತಾವರಣ, ಶುಭ ಫಲ ಯೋಗ. ಮಕ್ಕಳ ವಿಚಾರದಲ್ಲಿ ಮನಸ್ಸಿಗೆ ಆಸಮಾಧಾನ ಕಂಡು ಬರುತ್ತದೆ. ವೃತ್ತಿರಂಗದಲ್ಲಿ ನಿಮ್ಮ ಕಾರ್ಯಸಾಧನೆಗೆ ಉತ್ತಮ ಫಲವು ಸಿಗಲಿದೆ.
ಮಿಥುನರಾಶಿ
ಅಪೇಕ್ಷಿತ ಜನರ ಸಹಾಯದಿಂದ ಕಾರ್ಯಸಾಧನೆಯಾಗಲಿದೆ. ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ಸಮಾಜದಲ್ಲಿ ಗೌರವ ಪ್ರಾಪ್ತಿ, ವಸ್ತ್ರಾಭರಣ ಖರೀದಿ ಯೋಗ, ವ್ಯವಹಾರಗಳಲ್ಲಿ ಲಾಭ, ಮಿತ್ರರೊಂದಿಗೆ ಮೋಜು-ಮಸ್ತಿ. ದೇಹಾರೋಗ್ಯದಲ್ಲಿ ಸಮಾಧಾನ ಸಿಗಲಿದೆ.ದೈಹಿಕ ವಿಷದಾಪತ್ತುಗಳು ಸಮಸ್ಯೆ ತಂದೀತು.ಸಾಂಸಾರಿಕವಾಗಿ ಉತ್ತಮ ಕೆಲಸಗಳು ನಡೆಯಲಿವೆ.

ಕಟಕರಾಶಿ
ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.ಕುಟುಂಬ ವರ್ಗದವರಿಂದ ಸ್ಫೂರ್ತಿ ಸಹಕಾರ ಮುನ್ನಡೆಗೆ ಸಾಧಕವಾಗಲಿದೆ. ಯತ್ನ ಕಾರ್ಯದಲ್ಲಿ ವಿಘ್ನ, ಹಣಕಾಸು ಸಮಸ್ಯೆ, ಸಾಲ ಬಾಧೆ, ಮಾನಸಿಕ ವ್ಯಥೆ, ನೆಮ್ಮದಿ ಇಲ್ಲದ ಜೀವನ, ಯಶಸ್ಸಿಗಾಗಿ ಪರಿಶ್ರಮ. ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳುವುದು.
ಸಿಂಹರಾಶಿ
ಅಧೀನ ನೌಕರರಿಂದ ಕಿರಿಕಿರಿ ಇರುತ್ತದೆ. ಸಾಂಸಾರಿಕವಾಗಿ ಉತ್ತಮ ಕೆಲಸಗಳಾಗಲಿವೆ. ಉದ್ಯೋಗ ಗೃಹಕೃತ್ಯಗಳಲ್ಲಿ ಸಮಾಧಾನ ಸಿಗಲಿದೆ. ಆದಾಯಕ್ಕಿಂತ ಖರ್ಚು ಹೆಚ್ಚು, ಯಾರನ್ನೂ ಹೆಚ್ಚು ನಂಬಬೇಡಿ, ಹಿತ ಶತ್ರುಗಳಿಂದ ತೊಂದರೆ, ನೀವಾಡುವ ಮಾತಿನಲ್ಲಿ ಎಚ್ಚರಿಕೆ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ.ಶತ್ರುಕೃತ ದೋಷದಿಂದ ಮನಸ್ಸಿಗೆ ಸಮಾಧಾನ ದೊರಕಲಾರದು.
ಕನ್ಯಾರಾಶಿ
ಸಾಂಸಾರಿಕವಾಗಿ ಸಾಮರಸ್ಯದ ಕೊರತೆ ಕಾಣಿಸಲಿದೆ.ಮನಸ್ಸು ಉದ್ವೇಗದಿಂದ ಶಾಂತಿ, ಸಮಾಧಾನ ಕಳೆದುಕೊಳ್ಳಲಿದೆ. ಬಂಧು-ಮಿತ್ರರ ಸಮಾಗಮ, ಮಂಗಳ ಕಾರ್ಯಗಳಲ್ಲಿ ಭಾಗಿ, ಸಂತಾನ ಯೋಗ, ತಂದೆಯಿಂದ ಮಕ್ಕಳಿಗೆ ಅನುಕೂಲ, ಮಾತೃವಿನಿಂದ ಲಾಭ, ಶುಭ ಫಲ ಯೋಗ. ಖರ್ಚುವೆಚ್ಚಗಳು ದುಪ್ಪಟ್ಟಾಗುವುದರಿಂದ ಆರ್ಥಿಕ ಸಮತೋಲನ ತಪ್ಪಿ ಆತಂಕಕ್ಕೆ ಕಾರಣವಾದಾವು.

ತುಲಾರಾಶಿ
ಆರ್ಥಿಕವಾಗಿ ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ. ನಾನಾ ರೀತಿಯ ಸಮಸ್ಯೆಗಳು ಮನಸ್ಸನ್ನು ಉದ್ವಿಗ್ನಗೊಳಿಸಲಿವೆ. ಋಣ ಬಾಧೆ, ಶೀತ ಸಂಬಂಧಿತ ರೋಗ, ಮಿತ್ರರಲ್ಲಿ ಮನಃಸ್ತಾಪ, ಕಾರ್ಯದಲ್ಲಿ ವಿಳಂಬ, ಮಿಶ್ರ ಫಲ ಯೋಗ. ಎಲ್ಲದರಲ್ಲೂ ತಪ್ಪು ಹುಳುಕು ಹುಡುಕುವ ನಿಮಗೆ ಸಮಾಧಾನವು ಕಂಡು ಬರಲಾರದು.
ವೃಶ್ಚಿಕರಾಶಿ
ಆರೋಗ್ಯದ ಬಗ್ಗೆ ಮುಖ್ಯವಾಗಿ ಪಿತ್ತ, ಉಷ್ಣ ಜಾಡ್ಯ, ಉದರವ್ಯಾಧಿ, ಉಸಿರಾಟದ ತೊಂದರೆ ಆಗಾಗ ಗೋಚರಕ್ಕೆ ಬಂದಾವು. ಜಾಗ್ರತೆ ವಹಿಸಿರಿ. ಉದ್ಯೋಗದಲ್ಲಿ ತೊಂದರೆ, ಹಣಕಾಸು ಖರ್ಚು, ಅಲಂಕಾರಿ ವಸ್ತುಗಳ ಖರೀದಿ, ಆದಾಯಕ್ಕಿಂತ ಅಧಿಕ ವೆಚ್ಚ, ಇಲ್ಲ ಸಲ್ಲದ ಅಪವಾದ, ಕುಲದೇವರ ಆರಾಧನೆ. ಕಾರ್ಯಕ್ಷೇತ್ರದಲ್ಲಿ ವಿರೋಧಿಗಳನ್ನು ಧೈರ್ಯವಾಗಿ ಎದುರಿಸುವುದು.
ಧನುರಾಶಿ
ನಿರುದ್ಯೋಗಿಗಳಿಗೆ ಅವಕಾಶಗಳು ಅನಿರೀಕ್ಷಿತ ರೀತಿಯಲ್ಲಿ ಸಿಗಲಿವೆ. ವಿದ್ಯಾರ್ಥಿಗಳ ಪರಿಶ್ರಮ ಸಾರ್ಥಕವಾದೀತು. ವಾಹನ ಖರೀದಿ ಯೋಗ, ಸ್ನೇಹಿತರಿಂದ ಸಹಾಯ, ಉನ್ನತ ಸ್ಥಾನಮಾನ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಇಷ್ಟಾರ್ಥ ಸಿದ್ಧಿಗೆ ಪರಿಶ್ರಮ, ಶುಭ ಫಲ ಯೋಗ. ಶ್ರೀದೇವರ ದರ್ಶನ ಭಾಗ್ಯದಿಂದ ಮನಸ್ಸಿಗೆ ಸಂತಸ ತರಲಿದೆ.

ಮಕರರಾಶಿ
ಶುಭಮಂಗಲ ಕಾರ್ಯಗಳು ನಿರ್ವಿಘ್ನವಾಗಿ ನಡೆದೀತು. ಅಕಾಲ ಭೋಜನ, ಕುಟುಂಬದಲ್ಲಿ ಕಲಹ, ಅನ್ಯ ಜನರಲ್ಲಿ ವೈಮನಸ್ಸು, ನೆಮ್ಮದಿ ಇಲ್ಲದ ದಿನ, ಸಂಗಾತಿಯೊಂದಿಗೆ ವೈಮನಸ್ಸು. ಆರ್ಥಿಕವಾಗಿ ಶಿಸ್ತು, ಸಂಯಮದಿಂದ ಇದ್ದಲ್ಲಿ ಕಷ್ಟನಷ್ಟಗಳು ಕಡಿಮೆಯಾಗುವ ಅನುಭವ ನಿಮ್ಮದಾಗಲಿವೆ.ಮಾನಸಿಕ ಒತ್ತಡವು ಹೆಚ್ಚಾಗಲಿದೆ.
ಕುಂಭರಾಶಿ
ವಿದ್ಯಾರ್ಥಿಗಳಿಗೆ ಕೊಂಚ ಹಿನ್ನಡೆಯು ಕಂಡು ಮನಸ್ಸಿಗೆ ಬೇಸರ ತರಲಿದೆ.ಹೆಜ್ಜೆ ಹೆಜ್ಜೆಗೂ ವಿವೇಚನೆ ಅಗತ್ಯವಿದೆ. ವ್ಯಾಪಾರದಲ್ಲಿ ನಷ್ಟ, ಆರೋಗ್ಯದಲ್ಲಿ ವ್ಯತ್ಯಾಸ, ನಂಬಿದ ಜನರಿಂದ ಮೋಸ, ಆಲಸ್ಯ ಮನೋಭಾವ, ಅಶುಭ ಫಲ ದಿನ. ಉದ್ಯೋಗಿಗಳಿಗೆ ದೂರಕ್ಕೆ ವರ್ಗಾವಣೆಯ ಸಂಭವ ಕಂಡು ಬರಲಿದೆ.ತಾಳ್ಮೆಯಿಂದ ಸಹಕರಿಸಿರಿ.
ಮೀನರಾಶಿ
ಗ್ರಹಿಸಿದ ಕೆಲಸವೊಂದು ಅನಿರೀಕ್ಷಿತವಾಗಿ ನಡೆದು ಮನಸ್ಸಿಗೆ ಸಮಾಧಾನವಾಗಲಿದೆ. ಪರರಿಗೆ ಸಹಾಯ ಮಾಡುವಿರಿ, ಮಾನಸಿಕ ನೆಮ್ಮದಿ, ಹಣಕಾಸು ಅನುಕೂಲ, ಉತ್ತಮ ಬುದ್ಧಿಶಕ್ತಿ, ಅಲ್ಪ ಲಾಭ ಅಧಿಕ ಖರ್ಚು. ವಿವಾಹಾಪೇಕ್ಷಿಗಳಿಗೆ ದಾಂಪತ್ಯದ ಯೋಗವಿದೆ.ಪತ್ರಿಕೋದ್ಯಮಿಗಳಿಗೆ ನಿರೀಕ್ಷೆಗೂ ಮೀರಿ ಯಶಸ್ಸು ತೋರಿ ಬರಲಿದೆ.ಸಹನೆ ಇರಲಿ.