ರಾಜ್ಯಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಣೆ : ಅಶೋಕ್ ಗಸ್ತಿ, ಈರಣ್ಣ ಕಡಾಡಿಗೆ ಟಿಕೆಟ್

0

ಬೆಂಗಳೂರು : ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಅಚ್ಚರಿಯ ಹೆಸರುಗಳನ್ನು ಪ್ರಕಟಿಸಿದೆ. ಬಿಜೆಪಿ ಸಾಮಾನ್ಯ ಕಾರ್ಯಕರ್ತರಿಗೆ ಈ ಬಾರಿ ಮಣೆ ಹಾಕಿದ್ದು, ಬಳ್ಳಾರಿ ಬಿಜೆಪಿ ವಿಭಾಗದ ಪ್ರಬಾರಿ ಆಗಿರುವ ಅಶೋಕ್ ಗಸ್ತಿ, ಬೆಳಗಾವಿ ಬಿಜೆಪಿ ವಿಭಾಗದ ಪ್ರಭಾರಿ ಈರಣ್ಣ ಕಡಾಡಿ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ.

ಜೂನ್ 19 ರಂದು ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಈಗಾಗಲೇ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಿಜೆಪಿಯಲ್ಲಿ ಟಿಕೆಟ್ ಗೆ ಬಾರೀ ಪೈಪೋಟಿ ನಡೆದಿತ್ತು. ಹಾಲಿ ಸದಸ್ಯ ಪ್ರಭಾಕರ ಕೋರೆ ಮತ್ತು ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಮತ್ತು ಕರಾವಳಿಯ ಉದ್ಯಮಿ ಪ್ರಕಾಶ್ ಶೆಟ್ಟಿ ಅವರ ಹೆಸರು ಕೇಳಿಬಂದಿತ್ತು. ಆದ್ರೆ ಬಿಜೆಪಿ ಹೈಕಮಾಂಡ್ ಉತ್ತರ ಕರ್ನಾಟಕ ಮೂಲದವರಿಗೆ ಮಣೆ ಹಾಕಿದ್ದು, ಅಂತಿಮವಾಗಿ ಅಶೋಕ್ ಗಸ್ತಿ ಹಾಗೂ ಈರಣ್ಣ ಕಡಾಡಿ ಅವರಿಗೆ ಟಿಕೆಟ್ ಫೈನಲ್ ಮಾಡಿದೆ. ಈ ಪೈಕಿ ಅಶೋಕ್ ಗಸ್ತಿ ರಾಯಚೂರಿನವರಾಗಿದ್ದು, ಸವಿತಾ ಸಮಾಜಕ್ಕೆ ಸೇರಿದವರಾಗಿದ್ದಾರೆ. ಇನ್ನು ಈರಣ್ಣ ಕಡಾಡಿ ಬೆಳಗಾವಿಯವರಾಗಿದ್ದು, ಲಿಂಗಾಯಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ರಾಜ್ಯ ಸಭೆ ಚುನಾವಣೆ ಟಿಕೆಟ್ ನ ಪ್ರಬಲ ಆಕಾಂಕ್ಷಿಗಳಾಗಿದ್ದ ವಿಧಾನಸಭೆಯಲ್ಲಿ 117 ಶಾಸಕರ ಬಲ ಹೊಂದಿರುವ ಬಿಜೆಪಿ 2 ಸ್ಥಾನದಲ್ಲಿ ಸುಲಭವಾಗಿ ಜಯಗಳಿಸಲಿದೆ.

Leave A Reply

Your email address will not be published.