ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 19-06-2020

ನಿತ್ಯಭವಿಷ್ಯ : 19-06-2020

- Advertisement -

ಮೇಷರಾಶಿ
ಮಾನ ಹಾನಿ, ಧನ ಹಾನಿ ಪ್ರಸಂಗಗಳು ಎದುರಾಗಬಹುದು. ಸ್ತ್ರೀಯರಿಂದ ಅದೃಷ್ಟ ಒಲಿಯುವುದು, ಯತ್ನ ಕಾರ್ಯಗಳಲ್ಲಿ ಜಯ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಅನಗತ್ಯ ಮನಃಸ್ತಾಪ, ವ್ಯವಹಾರದಲ್ಲಿ ಅನುಕೂಲ ಸಾಧ್ಯತೆ. ನೌಕರ ವರ್ಗಕ್ಕೆ ವೇತನದಲ್ಲಿ ಮುಂಭಡ್ತಿ ಇದೆ. ಆಪ್ತರ ವಿರಹ ದುಃಖ ತಂದೀತು. ಹಿರಿಯರ ಮಾರ್ಗದರ್ಶನದಿಂದ ಪರಿಹಾರ ದೊರಕಲಿದೆ.

ವೃಷಭರಾಶಿ
ಕಮಿಶನ್‌ ವ್ಯವಹಾರ. ವಿಮೆ, ಪಾಲು ಬಂಡವಾಳ ಇತ್ಯಾದಿಗಳಿಂದ ಅದಾಯ ಉತ್ತಮ ವಾದೀತು. ಕಲಾವಿದರಿಗೆ ಉತ್ತಮ ಅವಕಾಶ, ಮಾನಸಿಕ ನೆಮ್ಮದಿ ಪ್ರಾಪ್ತಿ, ಅಧಿಕಾರಿಗಳು-ರಾಜಕೀಯ ವ್ಯಕ್ತಿಗಳು ಪ್ರಯಾಣ ಮಾಡುವರು, ಸಹೋದ್ಯೋಗಿಗಳಿಂದ ನಷ್ಟ. ಜವಾಬ್ದಾರಿಯ ಹೆಚ್ಚಳ ತಂದೀತು. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಪರಿಶ್ರಮದ ಅಗತ್ಯವು ತೋರಿಬರುವುದು.

ಮಿಥುನರಾಶಿ
ಶುಭಮಂಗಲ ಕಾರ್ಯದಲ್ಲಿ ಭಾಗವಹಿಸುವಿರಿ. ಬ್ರಹ್ಮಚಾರಿಗಳಿಗೆ ಕಳತ್ರ ಯೋಗಕ್ಕೆ ಮಾತುಕತೆ ನಡೆಯಲಿದೆ. ಸಹೋದರಿಯಿಂದ ಧನಾಗಮನ, ಅಧಿಕ ಸಾಲ ಬಾಧೆ, ನೆರೆಹೊರೆಯವರಿಂದ ಕಿರಿಕಿರಿ, ಬಂಧುಗಳಿಂದ ತೊಂದರೆ. ವೃತ್ತಿಯಲ್ಲಿ ಮೇಲಧಿಕಾರಿಗಳ ಶ್ಲಾಘನೆಯಿಂದ ತುಸು ಸಂತಸವಾಗುತ್ತದೆ. ಕಿರು ಸಂಚಾರವಿದೆ.

ಕಟಕರಾಶಿ
ಕೋರ್ಟು ಕಚೇರಿಯ ಕಾರ್ಯಭಾಗದಲ್ಲಿ ಯಶಸ್ಸು ನಿಮಗಿದೆ. ಶ್ರಮಕ್ಕೆ ತಕ್ಕ ಪ್ರತಿಫಲ, ಸ್ವಯಂ ಸಾಮಥ್ರ್ಯದಿಂದ ಸಂಪಾದನೆ ಮಾಡುವಿರಿ, ಮನೆಯಲ್ಲಿ ಅಹಿತಕರ ವಾತಾವರಣ, ಅಹಂಭಾವದ ಮಾತುಗಳನ್ನಾಡುವಿರಿ. ವ್ಯಾಪಾರಿಗಳಿಗೆ, ತೆರಿಗೆ ಅಧಿಕಾರಿಗಳಿಗೆ ಕಿರಿಕಿರಿ ಇರುತ್ತದೆ. ನೆರೆಹೊರೆಯವರ ಕಿರಿಕಿರಿಗಳು ಅಸಮಾಧಾನಕ್ಕೆ ಕಾರಣವಾದಾವು. ಜಾಗ್ರತೆ ಮಾಡಿರಿ.

ಸಿಂಹರಾಶಿ
ಹೊಸ ವಾಹನ ಖರೀದಿಗೆ ಅವಕಾಶವಿದೆ. ಆರೋಗ್ಯ ಸಮಸ್ಯೆ, ಶತ್ರುಗಳು ಅಧಿಕವಾಗುವರು, ದಾಂಪತ್ಯದಲ್ಲಿ ಮನಃಸ್ತಾಪ, ಸ್ನೇಹಿತರಿಂದ ಉದ್ಯೋಗ ಪ್ರಾಪ್ತಿ. ಆರೋಗ್ಯದಲ್ಲಿ ಉತ್ತಮ ಅಭಿವೃದ್ಧಿ ಕಂಡು ಬರುತ್ತದೆ. ಯಾರಿಗೋ ಸಹಾಯ ಮಾಡಲು ಹೋಗಿ ಕೈಸುಟ್ಟುಕೊಳ್ಳುವ ಪ್ರಸಂಗ ಒದಗಿ ಬರಲಿದೆ. ಜೋಕೆ.

ಕನ್ಯಾರಾಶಿ
ಅಧಿಕಾರದಲ್ಲಿ ಬದಲಾವಣೆ, ಸ್ಥಾನಭ್ರಂಶ ಯೋಗವಿದೆ. ವರ್ಗಾವಣೆಯ ಸಂಭವವೂ ಇರಬಹುದು. ಕುಟುಂಬ ನಿರ್ವಹಣೆಗೆ ಸಾಲ, ಹಣಕಾಸು ವಿಚಾರದಲ್ಲಿ ಕಿರಿಕಿರಿ, ಕೌಟುಂಬಿಕ ಕಲಹ, ಮಕ್ಕಳಿಂದ ನಷ್ಟ ಅಧಿಕವಾಗುವುದು, ಸ್ಥಿರಾಸ್ತಿ ಸಮಸ್ಯೆ ಬಗೆಹರಿಯುವ ಸಾಧ್ಯತೆ. ಕೃಷಿ ಕಾರ್ಯದಲ್ಲಿ ವಿಳಂಬವಾದೀತು. ವ್ಯಾಪಾರ, ವ್ಯವಹಾರದಲ್ಲಿ ತೆರಿಗೆ ಅಧಿಕಾರಿಗಳಿಂದ ಕಿರಿಕಿರಿ ಇದ್ದೀತು.

ತುಲಾರಾಶಿ
ಆಕಸ್ಮಿಕ ಧನ ಹಾನಿ ಕಂಡೀತು. ತಾಯಿಗೆ ಆರೋಗ್ಯ ಹಾನಿಯಿಂದ ಸೇವಾ, ಆಕಸ್ಮಿಕ ಉದ್ಯೋಗ ಬಡ್ತಿ, ಮಕ್ಕಳ ಪ್ರೇಮ ವಿಚಾರದಲ್ಲಿ ಅಶಾಂತಿ, ದಾಂಪತ್ಯದಲ್ಲಿ ಕಲಹ, ಪಿತ್ರಾರ್ಜಿತ ಆಸ್ತಿ ತಗಾದೆ, ಬಂಧುಗಳ ವಿರುದ್ಧ ಜಯ. ಶುಶ್ರೂಷೆಯ ಅಗತ್ಯತೆ ಕಂಡು ಬರಲಿದೆ. ದಾಯಾದಿಗಳಲ್ಲಿ ವಾದ, ವಿವಾದಗಳಿಂದ ನ್ಯಾಯಾಲಯದ ದರ್ಶನಭಾಗ್ಯ ಲಭಿಸಲಿದೆ.

ವೃಶ್ಚಿಕರಾಶಿ
ವೃಶ್ಚಿಕ: ಮಕ್ಕಳಿಂದ ತೊಂದರೆ, ಮನೆಯಲ್ಲಿ ಅಶಾಂತಿ, ಉದ್ಯೋಗ ನಿಮಿತ್ತ ಪ್ರಯಾಣ, ಮನಸಿಗೆ ಕೆಟ್ಟಾಲೋಚನೆ, ಮಾನಸಿಕ ನೆಮ್ಮದಿ ಹಾಳು. ಆರ್ಥಿಕವಾಗಿ ನಾನಾ ರೀತಿಯಲ್ಲಿ ಧನ ಸಂಗ್ರಹವಾದೀತು. ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶ ಸಂಚಾರ ತಂದೀತು. ಕ್ರಯವಿಕ್ರಯಗಳಲ್ಲಿ ಲಾಭ ತಂದೀತು. ಹಿರಿಯರಿಗೆ ದೇವತಾದರ್ಶನ ಭಾಗ್ಯವಿದೆ.

ಧನುರಾಶಿ
ಸಾಂಸಾರಿಕವಾಗಿ ಧರ್ಮಪತ್ನಿಯ ಸಹಕಾರದಿಂದ ಕಾರ್ಯಸಾಧನೆ ಆಗಲಿದೆ. ತಂದೆಯ ಸಾಲ ಬಾಧೆ, ಬಂಧುಗಳಿಂದ ಕಿರಿಕಿರಿ, ಸ್ತ್ರೀಯರೊಂದಿಗೆ ಕಲಹ, ಸರ್ಕಾರಿ ಕೆಲಸಗಳಲ್ಲಿ ಜಯ, ಅಧಿಕಾರಿಗಳಿಂದ ಅನುಕೂಲ. ಉದ್ಯೋಗಿಗಳಿಗೆ ಅನಿರೀಕ್ಷಿತ ವೃತ್ತಿ ಬದಲಾಗುವ ಸಂಭವವಿದೆ. ಕಾಂಟ್ರಾಕ್ಟ್ದಾರರಿಗೆ ವ್ಯಾಪಾರದಲ್ಲಿ ಅಭಿವೃದ್ಧಿಯು ತೋರಿ ಬರಲಿದೆ.

ಮಕರರಾಶಿ
ಆಕಸ್ಮಿಕ ಪ್ರೇಮದ ಬಲೆಗೆ ಸಿಲುಕುವಿರಿ, ಆತ್ಮ ವಿಶ್ವಾಸದ ಅಧಿಕವಾಗುವುದು, ಹೆಣ್ಣು ಮಕ್ಕಳಿಂದ ಅನುಕೂಲ, ಸೈಟ್ ಖರೀದಿಗೆ ಸಹಕಾರ. ಆಗಾಗ ಖರ್ಚುವೆಚ್ಚಗಳು ಹೆಚ್ಚಿದರೂ ಧನಾಗಮನಕ್ಕೆ ಕೊರತೆ ಇರದು. ಕಾರ್ಯಕ್ಷೇತ್ರದಲ್ಲಿ ನಿಮ್ಮ ಚಿಂತನೆಗಳು ಕಾರ್ಯಗತವಾಗಲಿವೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಿದೆ. ದಂಪತಿಗಳಿಗೆ ಸಿಹಿ ಸುದ್ಧಿ.

ಕುಂಭರಾಶಿ
ನೆರೆಹೊರೆಯವರೊಂದಿಗೆ ಜಗಳಕ್ಕೆ ಕಾರಣರಾಗದಿರಿ. ಸ್ನೇಹಿತರೇ ಶತ್ರುಗಳಾಗುವರು, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಸ್ಥಿರಾಸ್ತಿ-ವಾಹನ ಖರೀದಿಗೆ ಸಹಾಯ, ನೆಮ್ಮದಿಯ ವಾತಾವರಣಕ್ಕೆ ಧಕ್ಕೆ. ಆರೋಗ್ಯದಲ್ಲಿ ವಾತ, ಪಿತ್ತ ಪ್ರಕೋಪ ತೋರಿ ಬರಲಿದೆ. ನ್ಯಾಯಾಲಯದ ಕೆಲಸಗಳು ಬಂಧುಗಳ ಮಧ್ಯಸ್ಥಿಕೆಯೊಂದಿಗೆ ಉತ್ತಮ ಮುಕ್ತಾಯ ಕಾಣಲಿದೆ.

ಮೀನರಾಶಿ
ಗೃಹ ಬಳಕೆಯ ಸಾಮಗ್ರಿಗಳ ಖರೀದಿ ನಡೆಯಲಿದೆ. ಪಡೆದ ಸಾಲ ಮರುಪಾವತಿಸುವಿರಿ, ಸ್ವಯಂಕೃತ್ಯಗಳಿಂದ ತೊಂದರೆ, ಶತ್ರುಗಳು ಅಧಿಕವಾಗುವರು, ವಿಪರೀತ ನಷ್ಟ, ಮಕ್ಕಳಿಂದ ನಿದ್ರಾಭಂಗ. ವ್ಯಾಪಾರ, ವ್ಯವಹಾರಗಳಲ್ಲಿ ದಿನೇ ದಿನೆ ಅಭಿವೃದ್ಧಿ ಕಾಣಲಿದೆ. ಹೊಸ ವಾಹನ ಖರೀದಿಗೆ ಅವಕಾಶವಿದೆ. ಶುಭಕಾರ್ಯಗಳಿಗೆ ಇದು ಸಕಾಲ. ಸದುಪಯೋಗಿಸಿರಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular