ವಾಸನೆ ಗ್ರಹಿಸೋಕೆ ಸಾಧ್ಯವಾಗದಿದ್ರೆ ಟೆಸ್ಟ್ ಮಾಡಿಸಿಕೊಳ್ಳಿ : ಹೊಸ ರೂಪದಲ್ಲಿ ಜನ್ಮತಾಳಿದೆ ಕೊರೊನಾ ಮಹಾಮಾರಿ !

0

ಬೆಂಗಳೂರು : ಕೊರೊನಾ ವೈರಸ್ ಸೋಂಕು ನಾನಾ ರೀತಿಯಲ್ಲಿ ಎಂಟ್ರಿಕೊಡ್ತಿದೆ. ನಿಮಗೆನಾದ್ರೂ ವಾಸನೆ ಗ್ರಹಿಸೋಕೆ ಸಾಧ್ಯವಾಗದೇ ಇದ್ರೆ ಕೂಡಲೇ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ. ಯಾಕೆಂದ್ರೆ ಸಿಲಿಕಾನ್ ಸಿಟಿಯಲ್ಲಿ ವಾಸನೆ ಗ್ರಹಿಸಲು ಸಾಧ್ಯವಾಗದ ವ್ಯಕ್ತಿಯೋರ್ವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಜ್ವರ, ಶೀತ, ನೆಗಡಿಯಂತಹ ಲಕ್ಷಣಗಳು ಕಂಡುಬಂದ್ರೆ ಕೊರೊನಾ ತಪಾಸಣೆ ಮಾಡಿಸಿಕೊಳ್ಳಿ ಅಂತಾ ಸರಕಾರ ಹೇಳಿತ್ತು. ನಂತರದಲ್ಲಿ ಕೊರೊನಾ ಸೋಂಕು ಹೊಸ ರೂಪಗಳನ್ನು ತಾಳುತ್ತಲೇ ಬಂದಿದೆ. ಬಾಯಿಗೆ ರುಚಿ ಕೆಟ್ಟರೆ ಕೊರೊನಾ ಬರುತ್ತೆ ಅಂತಾ ತಜ್ಞರು ಹೇಳಿದ್ದಾರೆ. ಆದ್ರೀಗ ಬಾಯಿ ರಚಿಯ ಜೊತೆಗೆ ವಾಸನೆ ಗ್ರಹಿಸೋಕೆ ಆಗದೇ ಇದ್ರೂ ಕೊರೊನಾ ಸೋಂಕು ದೃಢಪಡುವ ಸಾಧ್ಯತೆಯಿದೆ.

ಬೆಂಗಳೂರಿನ ಶ್ರೀರಾಂ ಪುರದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಹಲವು ದಿನಗಳಿಂದಲೂ ಯಾವುದೇ ರೀತಿಯ ಸ್ಮೆಲ್ ಗ್ರಹಿಸೋದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಆದರೆ ವ್ಯಕ್ತಿಗೆ ಬೇರಾವುದೇ ಕೊರೊನಾ ಲಕ್ಷಣಗಳು ಕಂಡುಬಂದಿರಲಿಲ್ಲ. ಅನುಮಾನಗೊಂಡ ವ್ಯಕ್ತಿ ಕೊರೊನಾ ತಪಾಸಣೆಯನ್ನು ಮಾಡಿಸಿಕೊಂಡಿದ್ರು. ಆದ್ರೀಗ ಕೊರೊನಾ ತಪಾಸಣಾ ವರದಿಯಲ್ಲಿ ಆಘಾತಕಾರಿ ಅಂಶ ಪತ್ತೆಯಾಗಿದ್ದು, ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ವಾಸನೆ ಗ್ರಹಿಸೋದಕ್ಕೆ ಸಾಧ್ಯವಾಗದ ವ್ಯಕ್ತಿಗೆ ಸೋಂಕು ಪತ್ತೆಯಾದ ಬೆನ್ನಲ್ಲೇ ಸಿಲಿಕಾನ್ ಸಿಟಿ ಮಂದಿ ಬೆಚ್ಚಿಬಿದ್ದಿದ್ದಾರೆ. ವ್ಯಕ್ತಿಯನ್ನು ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಕೊರೊನಾ ಮಹಾಮಾರಿ ದಿನೇ ದಿನೇ ಒಂದೊಂದು ರೂಪದಲ್ಲಿ ಎಂಟ್ರಿಕೊಡ್ತಿರೋದು ಜನರಿಗೆ ಮಾತ್ರವಲ್ಲ, ಆರೋಗ್ಯ ಇಲಾಖೆಗೂ ತಲೆನೋವು ತರಿಸಿದೆ.

ನಿಮಗೂ ವಾಸನೆ, ರುಚಿ ಗ್ರಹಿಸೋದಕ್ಕೆ ಸಾಧ್ಯವಾಗದೇ ಇದ್ರೆ, ಯಾವುದಕ್ಕೂ ಒಮ್ಮೆ ತಪಾಸಣೆ ಮಾಡಿಸಿಕೊಳ್ಳುವುದು ಒಳಿತು. ಒಟ್ಟಿನಲ್ಲಿ ಕೊರೊನಾ ಮಹಾಮಾರಿಯ ಆರ್ಭಟಕ್ಕೆ ಜನರು ತತ್ತರಿಸಿ ಹೋಗಿದ್ದಂತೂ ಸುಳ್ಳಲ್ಲ.

Leave A Reply

Your email address will not be published.