ವಾರ ಭವಿಷ್ಯ (ತಾ.15-03-2021 ರಿಂದ ತಾ.21-03-2021 ರ ವರೆಗೆ)



ಮೇಷರಾಶಿ
ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಧನ ವ್ಯಯವಾಗಲಿದೆ. ಕಾರ್ಯ ನಿಮಿತ್ತ ಅಧಿಕ ಓಡಾಟದಿಂದ ದೇಹಾಯಾಸವಾಗಬಹುದು. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಸಾಂಸಾರಿಕವಾಗಿ ಅನಗತ್ಯ ಮಾತುಗಳಿಗೆ ಅವಕಾಶ ಕೊಡಬೇಡಿ.
ಅದೃಷ್ಟ ಬಣ್ಣ : ಕೆಂಪು
ಅದೃಷ್ಟ ಸಂಖ್ಯೆ : 9

ವೃಷಭರಾಶಿ
ಆರ್ಥಿಕ ಪರಿಸ್ಥಿತಿಯೂ ಆತಂಕಕಾರಿಯಾಗಿದ್ದರೂ ಅನಿರೀಕ್ಷಿತ ರೀತಿಯಲ್ಲಿ ಸ್ನೇಹಿತರ ಸಹಾಯ ಸಿಗಲಿದೆ. ದೇಹಾರೋಗ್ಯದಲ್ಲಿ ಏರುಪೇರಾದೀತು ಎಚ್ಚರಿಕೆ ಅಗತ್ಯ. ವೃತ್ತಿರಂಗದಲ್ಲಿ ಮುನ್ನಡೆ ತೋರಿಬರಲಿದೆ. ದೇವತಾ ಪ್ರಾರ್ಥನೆ ಮಾಡಿ.
ಅದೃಷ್ಟ ಬಣ್ಣ : ಬಿಳಿ
ಅದೃಷ್ಟ ಸಂಖ್ಯೆ : 6

ಮಿಥುನರಾಶಿ
ಸರಕಾರಿ ಉದ್ಯೋಗಿಗಳಿಗೆ ಉತ್ತಮ ಧನಾದಾಯ ಕಂಡುಬರಲಿದೆ. ಬಂಧು ಬಳಗದವರ ಸಹಾಯದಿಂದ ಕಷ್ಟಗಳು ತೀರಲಿವೆ. ವೃತ್ತಿರಂಗದಲ್ಲಿ ಅನವಶ್ಯಕ ಕಲಹಗಳಾಗದಂತೆ ಎಚ್ಚರಿಕೆ ವಹಿಸಿ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ.
ಅದೃಷ್ಟ ಬಣ್ಣ : ಪಚ್ಚೆ
ಅದೃಷ್ಟ ಸಂಖ್ಯೆ : 5

ಕರ್ಕಾಟಕರಾಶಿ
ಅನಿರೀಕ್ಷಿತ ರೀತಿಯಲ್ಲಿ ಹಳೆಯ ಮಿತ್ರನ ಭೇಟಿಯಾಗಲಿದ್ದು, ಸಂತಸವಾಗಲಿದೆ. ಮನೆಯಲ್ಲಿ ಸಂತೋಷದಾಯಕ ವಾತಾವರಣವಿರಲಿದೆ. ಆದರೆ ನಿಮ್ಮ ದುಡುಕಿನ ಮಾತಿನಿಂದ ಬೇರೆಯವರಿಗೆ ನೋವಾಗದಂತೆ ನೋಡಿಕೊಳ್ಳಿ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.
ಅದೃಷ್ಟ ಬಣ್ಣ : ತಿಳಿ ಹಳದಿ
ಅದೃಷ್ಟ ಸಂಖ್ಯೆ : 2

ಸಿಂಹರಾಶಿ
ಮಹಿಳೆಯರಿಗೆ ಗೃಹ ಕೃತ್ಯಗಳಲ್ಲಿ ಬಿಡುವಿಲ್ಲದ ದುಡಿಮೆಯಿಂದ ದೇಹಾಯಾಸವಾದೀತು. ಕುಲದೇವರ ಆಶೀರ್ವಾದದಿಂದ ನೀವು ಅಂದುಕೊಂಡ ಕೆಲಸಗಳು ಹಂತ ಹಂತವಾಗಿ ನೆರವೇರಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ.
ಅದೃಷ್ಟ ಬಣ್ಣ : ಕೆಂಪು
ಅದೃಷ್ಟ ಸಂಖ್ಯೆ : 1

ಕನ್ಯಾರಾಶಿ
ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯುವ ಯೋಗ ನಿಮ್ಮದಾಗುವುದು. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದ್ದು, ಹೊಸ ಯೋಜನೆಗಳಿಗೆ ಕೈ ಹಾಕಲಿದ್ದೀರಿ. ಆರೋಗ್ಯದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ನಿವಾರಣೆಯಾಗಲಿವೆ.
ಅದೃಷ್ಟ ಬಣ್ಣ : ಪಚ್ಚೆ,ಬಿಳಿಪು
ಅದೃಷ್ಟ ಸಂಖ್ಯೆ : 3

ತುಲಾರಾಶಿ
ನಿಮ್ಮ ಮನಸ್ಸಿನ ಭಾರವನ್ನು ಸಂಗಾತಿಯ ಜತೆ ಹಂಚಿಕೊಳ್ಳಲಿದ್ದೀರಿ. ನಿರುದ್ಯೋಗಿಗಳು ಉದ್ಯೋಗ ಬೇಟೆಗಾಗಿ ದೂರ ಸಂಚಾರ ಮಾಡಬೇಕಾದೀತು. ವಿವಾಹ ಪ್ರಸ್ತಾಪಗಳು ಸ್ವಲ್ಪದರಲ್ಲೇ ಕೈ ತಪ್ಪಿ ಹೋದೀತು. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.
ಅದೃಷ್ಟ ಬಣ್ಣ : ಬಿಳಿಪು
ಅದೃಷ್ಟ ಸಂಖ್ಯೆ : 9

ವೃಶ್ಚಿಕರಾಶಿ
ದೈವಾನುಕೂಲದಿಂದ ಇಂದು ನೀವು ಅಂದುಕೊಂಡಿದ್ದ ಕೆಲಸಗಳು ಸುಗಮವಾಗಿ ನೆರವೇರಲಿದೆ. ಹೊಸ ಯೋಜನೆಗಳಿಗೆ ಇದುವರೆಗೆ ಇದ್ದ ವಿಘ್ನೀಗಳು ದೂರವಾಗಲಿದೆ. ಸರಕಾರಿ ಕೆಲಸದಲ್ಲಿರುವವರಿಗೆ ಕಾರ್ಯದೊತ್ತಡ ತಪ್ಪದು. ತಾಳ್ಮೆಯಿರಲಿ.
ಅದೃಷ್ಟ ಬಣ್ಣ : ಕೆಂಪು
ಅದೃಷ್ಟ ಸಂಖ್ಯೆ : 9

ಧನುರಾಶಿ
ಅನಗತ್ಯ ವಿಚಾರಗಳಿಗೆ ತಾವೂ ನೆಮ್ಮದಿ ಹಾಳು ಮಾಡಿಕೊಂಡು ಬೇರೆಯವರ ನೆಮ್ಮದಿಯನ್ನೂ ಹಾಳು ಮಾಡುವುದು ಬೇಡ. ಅನಿರೀಕ್ಷಿತ ರೀತಿಯಲ್ಲಿ ಕಾರ್ಯ ಸಾಧನೆಯಾಗಲಿದೆ. ಮಹಿಳೆಯರಿಗೆ ಚಿನ್ನಾಭರಣಗಳನ್ನು ಕಾಪಾಡುವ ಹೊಣೆಗಾರಿಕೆ ಸಿಗಲಿದೆ.
ಅದೃಷ್ಟ ಬಣ್ಣ : ಹಳದಿ
ಅದೃಷ್ಟ ಸಂಖ್ಯೆ : 3

ಮಕರರಾಶಿ
ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲು ಇದು ಸಕಾಲವಾಗಿದೆ. ದೇಹಾರೋಗ್ಯದಲ್ಲಿ ಏರುಪೇರಾದರೂ ನಿಮ್ಮ ಮನೋಬಲದಿಂದ ಎಲ್ಲವನ್ನೂ ಗೆಲ್ಲಲಿದ್ದೀರಿ. ನಿರುದ್ಯೋಗಿಗಳಿಗೆ ಹಲವು ಅವಕಾಶಗಳು ಬರಲಿವೆ. ಜಾಣತನದಿಂದ ಬಳಸಿಕೊಳ್ಳಿ.
ಅದೃಷ್ಟ ಬಣ್ಣ : ನೀಲಿ
ಅದೃಷ್ಟ ಸಂಖ್ಯೆ : 8

ಕುಂಭರಾಶಿ
ಕಾರ್ಯಕ್ಷೇತ್ರದಲ್ಲಿ ನಿಮ್ಮ ಕಾರ್ಯಕ್ಷಮತೆ ಎಲ್ಲರಿಗೂ ಇಷ್ಟವಾಗಲಿದೆ. ಕ್ರಿಯಾತ್ಮಕವಾಗಿ ಆಲೋಚಿಸುವುದರಿಂದ ಸಮಸ್ಯೆಗೆ ಪರಿಹಾರ ಕಂಡುಬರಲಿದೆ. ವಿದ್ಯಾರ್ಥಿಗಳು ಅಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಕುಲದೇವರ ಪ್ರಾರ್ಥನೆ ಮಾಡಿ.
ಅದೃಷ್ಟ ಬಣ್ಣ : ಕಪ್ಪು
ಅದೃಷ್ಟ ಸಂಖ್ಯೆ : 8

ಮೀನರಾಶಿ
ಸಾಂಸಾರಿಕವಾಗಿ ಸಣ್ಣ ಪುಟ್ಟ ಮನಸ್ತಾಪಗಳು ಸಾಮಾನ್ಯ. ಹಿರಿಯರ ಮಧ್ಯಸ್ಥಿಕೆಯಲ್ಲಿ ಅವುಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ. ಎಲೆಕ್ಟ್ರಿಕಲ್ ವೃತ್ತಿಯವರಿಗೆ ಉದ್ಯೋಗದಲ್ಲಿ ಮುನ್ನಡೆ ಕಂಡುಬರಲಿದೆ. ಗೃಹ ಬಳಕೆ ವಸ್ತುಗಳ ಖರೀದಿ ಮಾಡುವಿರಿ.
ಅದೃಷ್ಟ ಬಣ್ಣ : ಹಳದಿ ಬಣ್ಣ
ಅದೃಷ್ಟ ಸಂಖ್ಯೆ : 8

ಶುಭಂಭವತು
ಶ್ರೀದೀಪ ಬಸವರಾಜ್ ಗುರೂಜಿ,
ಸಂಖ್ಯಾ ಜ್ಯೋತಿಷಿ
8197319164

Comments are closed.