Alia Bhatt : ಪದೇ ಪದೇ ದೀಪಿಕಾ ಪಡುಕೋಣೆ ಸ್ಟೈಲ್​ ಕಾಪಿ ಮಾಡ್ತಿದ್ದಾರೆ ಆಲಿಯಾ : ಕಾಲೆಳೆದ ನೆಟ್ಟಿಗರು

Alia Bhatt  : ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಾಲಿವುಡ್​ ಸ್ಟಾರ್​ ದಂಪತಿ ರಣಬೀರ್​ ಕಪೂರ್​ ಹಾಗೂ ಆಲಿಯಾ ಭಟ್​ರ ಮದುವೆಯ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದವು. ಮದುವೆ ಕಾರ್ಯಕ್ರಮಗಳ ಬಳಿಕ ಶೂಟಿಂಗ್​ನಲ್ಲಿ ಇವರಿಬ್ಬರು ಬ್ಯುಸಿ ಆಗಿದ್ದಾರೆ. ರಣಬೀರ್​ ಕಪೂರ್​ ಕೆಲ ದಿನಗಳ ಹಿಂದಷ್ಟೇ ಸೆಲೆಬ್ರಿಟಿ ಫುಟ್ಬಾಲ್​ ಪಂದ್ಯಕ್ಕಾಗಿ ದುಬೈನಲ್ಲಿದ್ದರೆ, ಪತ್ನಿ ಆಲಿಯಾ ಭಟ್​ ದೋಹಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಟಿ ಆಲಿಯಾ ಭಟ್​ ಕತಾರ್​ನಲ್ಲಿ ದೋಹಾ ಜ್ಯುವೆಲ್ಲರಿ ಹಾಗೂ ವಾಚಸ್​ ಎಕ್ಸಿಬಿಷನ್​​ನ 18ನೇ ಆವೃತ್ತಿಯನ್ನು ಉದ್ಘಾಟಿಸಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಆಲಿಯಾ ಭಟ್​ ಶ್ವೇತ ಬಣ್ಣದ ವಸ್ತ್ರ ಧರಿಸಿದ್ದರು.


ಕಾರ್ಯಕ್ರಮದ ಬಳಿಕ ಆಲಿಯಾ ಭಟ್​ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.ಅತ್ಯಂತ ಸುಂದರವಾಗಿ ಕಾಣುತ್ತಿದ್ದ ಆಲಿಯಾ ಭಟ್​ರ ಈ ಲುಕ್​ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಬಿಳಿ ಬಣ್ಣದ ಪ್ಯಾಂಟ್​ ಸೂಟ್​ಗೆ ಆಲಿಯಾ ಭಟ್​ ಡೈಮಂಡ್​ ಹಾಗೂ ಪಚ್ಚೆ ಬಣ್ಣದ ನೆಕ್​ಲೇಸ್​ ಹಾಗೂ ವಜ್ರದ ಕಿವಿಯೋಲೆಗಳನ್ನು ಧರಿಸಿದ್ದರು. ಅತ್ಯಂತ ಸರಳವಾಗಿ ಕೇಶ ವಿನ್ಯಾಸ ಮಾಡಿಕೊಂಡ ಆಲಿಯಾ ಭಟ್​ ಸಿಂಪಲ್​ ಆಗಿ ಪೋನಿ ಟೇಲ್​ ಹಾಕಿದ್ದಾರೆ.


ಆಲಿಯಾ ಭಟ್​ರ ಈ ಲುಕ್​ ಬಹುತೇಕರಿಗೆ ಇಷ್ಟವಾಗಿದ್ದರೂ ಸಹ ಕೆಲವರು ಮಾತ್ರ ಆಲಿಯಾ ಭಟ್​​ರಿಗೆ ದೀಪಿಕಾ ಪಡುಕೋಣೆಯ ಸ್ಟೈಲ್​ ಕಾಪಿ ಮಾಡಿದ್ದೀರಾ ಎಂದು ಕಾಲೆಳೆದಿದ್ದಾರೆ. 2019ರಲ್ಲಿ ಲಂಡನ್​ನ ಮೇಡಂ ಟುಸ್ಸಾಡ್ಸ್​ನಲ್ಲಿ ತನ್ನ ಮೇಣದ ಪ್ರತಿಮೆಯ ಅನಾವರಣದ ವೇಳೆಯಲ್ಲಿ ದೀಪಿಕಾ ಪಡುಕೋಣೆ ಇದೇ ಮಾದರಿಯ ಉಡುಪನ್ನು ಧರಿಸಿದ್ದರು.ಇದೇ ಮಾದರಿಯ ಬಿಳಿ ಬಣ್ಣದ ಬ್ಲೇಜರ್​ , ಪ್ಯಾಂಟ್​ಗಳು ಹಾಗೂ ಕ್ಯಾಪ್ಡ್​ ಸ್ಲೀವ್​ಗಳನ್ನು ದೀಪಿಕಾ ಪಡುಕೋಣೆ ಧರಿಸಿದ್ದರು. ಆಲಿಯಾ ಭಟ್​ರಂತೆಯೇ ದೀಪಿಕಾ ಪಡುಕೋಣೆ ಕೂಡ ಅತ್ಯಂತ ಸರಳವಾಗಿ ಕೇಶ ವಿನ್ಯಾಸ, ಮೇಕಪ್​ ಹಾಗೂ ಜ್ಯೂವೆಲ್ಲರಿಗಳನ್ನು ಧರಿಸಿದ್ದರು.


ಅಂದಹಾಗೆ ದೀಪಿಕಾ ಪಡುಕೋಣೆ ಸ್ಟೈಲ್​​ಗಳನ್ನು ಕಾಪಿ ಮಾಡುತ್ತಾರೆ ಎಂಬ ಆರೋಪ ಆಲಿಯಾ ಭಟ್​ರ ಮೇಲೆ ಬಂದಿರುವುದು ಇದೇ ಮೊದಲೇನಲ್ಲ. ಸ್ವಲ್ಪ ಸಮಯದ ಹಿಂದೆ ಕೇಶ ವಿನ್ಯಾಸದ ಕಾರಣಕ್ಕೂ ಗಂಗೂ ಭಾಯಿ ಖ್ಯಾತಿಯ ನಟಿ ಆಲಿಯಾ ಭಟ್​ ಇದೇ ರೀತಿ ಟ್ರೋಲ್​ಗೆ ಒಳಗಾಗಿದ್ದರು.


ಆಲಿಯಾ ಭಟ್​ ಪ್ರಸ್ತುತ ತಮ್ಮ ಮುಂದಿನ ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಇದ್ದಾರೆ.ಕರಣ್​ ಜೋಹರ್ ನಿರ್ದೇಶನದಲ್ಲಿ ನಟ ರಣವೀರ್​ ಸಿಂಗ್​ ಜೊತೆಯಲ್ಲಿ ರಾಕಿ ಔರ್​​ ರಾಣಿ ಕಿ ಪ್ರೇಮ್​ ಕಹಾನಿ ಸಿನಿಮಾ ಶೂಟಿಂಗ್​ ಪೂರ್ಣಗೊಳಿಸಿರುವ ಆಲಿಯಾ ಭಟ್​ ಇದೀಗ ಹಾಲಿವುಡ್​ ಸಿನಿಮಾದತ್ತ ಗಮನ ನೆಟ್ಟಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ : Sonakshi Sinha : ಸದ್ದಿಲ್ಲದ್ದೇ ಎಂಗೇಜ್​ಮೆಂಟ್​ ಮಾಡಿಕೊಂಡ ಬಾಲಿವುಡ್​ ನಟಿ ಸೋನಾಕ್ಷಿ ಸಿನ್ಹಾ

ಇದನ್ನೂ ಓದಿ : wife life is tragic :ಕಪ್ಪಗಿದ್ದೀಯಾ ಎಂದು ಪತ್ನಿಯನ್ನು ದೂರಿದ ಪತಿ : ಸ್ಯಾನಿಟೈಸರ್​​ ಸುರಿದುಕೊಂಡು ಪತ್ನಿ ಸೂಸೈಡ್​

Alia Bhatt stuns in white pantsuit with caped sleeves at Doha event, netizens say she’s ‘copying Deepika Padukone’

Comments are closed.