Two students drowned : ಸೆಲ್ಫಿ ತೆಗೆಯುತ್ತಿದ್ದ ಸಂದರ್ಭದಲ್ಲಿ ಅವಘಡ : ಕಾಲು ಜಾರಿ ಇಬ್ಬರು ವಿದ್ಯಾರ್ಥಿಗಳು ಜಲಸಮಾಧಿ

ರಾಯಚೂರು : Two students drowned : ಸೋಶಿಯಲ್​ ಮೀಡಿಯಾ ಫೀವರ್​ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ನಡುವೆ ಯುವ ಜನತೆಯಲ್ಲಿ ಸೆಲ್ಫೀ ಕ್ರೇಜ್​ ಹೆಚ್ಚಾಗಿದೆ. ಇದೇ ರೀತಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾದ ದಾರುಣ ಘಟನೆಯು ರಾಯಚೂರು ತಾಲೂಕಿನ ಕಲ್ಮಲ ಗ್ರಾಮದ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಸಂಭವಿಸಿದೆ. ಎನ್​ಆರ್​ ಶೆಟ್ಟಿ ಮುಚ್ಚಿಸಿರುವ ಹೈಡಲ್​ ಪ್ರಾಜೆಕ್ಟ್​ ಬಳಿ ಈ ದುರಂತ ಸಂಭವಿಸಿದೆ.


ರಾಯಚೂರು ನಗರದ ವಿದ್ಯಾನಿಧಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಾದ ವೈಭವ್​ (17) ಹಾಗೂ ಸುಜಿತ್​​ (17) ಕಾಲುವೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ.. ನಾಲ್ವರು ಸ್ನೇಹಿತರು ಸೇರಿ ಕಾಲುವೆ ಬಳಿ ಪಿಕ್ನಿಕ್​​ಗೆಂದು ತೆರಳಿದ್ದರು .ಕಾಲುವೆ ಬಳಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ವಿದ್ಯಾರ್ಥಿಗಳ ಪತ್ತೆಗಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ.

ದುರ್ಘಟನೆ ನಡೆದ ಸ್ಥಳದಿಂದ 200 ಮೀಟರ್​ ದೂರದಲ್ಲಿ ವಿದ್ಯಾರ್ಥಿಗಳಾದ ವೈಭವ್​ ಹಾಗೂ ಸುಜಿತ್​ ಮೃತದೇಹ ಪತ್ತೆಯಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ರಾಯಚೂರು ಗ್ರಾಮೀಣ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೃತಪಟ್ಟ ವಿದ್ಯಾರ್ಥಿಗಳು ರಾಯಚೂರು ವಿದ್ಯಾನಿಧಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು .ನಿನ್ನೆ ಪಿಕ್ನಿಕ್​ಗೆಂದು ನಾಲ್ವರು ವಿದ್ಯಾರ್ಥಿಗಳ ತಂಡ ಈ ಸ್ಥಳಕ್ಕೆ ಆಗಮಿಸಿತ್ತು. ಕಾಲುವೆಯಲ್ಲಿ ಸೆಲ್ಫಿ ತೆಗೆದುಕೊಳ್ಳುವ ದುಸ್ಸಾಹಸಕ್ಕೆ ಈ ನಾಲ್ವರು ಮುಂದಾಗಿದ್ದರು.


ಆದರೆ ಕಾಲುವೆಯಲ್ಲಿ ಕಾಲು ಜಾರಿದ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ನೀರಿಗೆ ಬಿದ್ದಿದ್ದಾರೆ. ಆದರೆ ವಿದ್ಯಾರ್ಥಿಗಳಾದ ನಾಗೇಂದ್ರ ಹಾಗೂ ತರುಣ್​ ಈಜಿ ದಡ ಸೇರಿದ್ದಾರೆ. ಆದರೆ ಕಾಲುವೆಯಲ್ಲಿ ಸುಜಿತ್​ ಹಾಗೂ ವೈಭವ್​ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ನೀರುಪಾಲಾಗಿದ್ದ ಸುಜಿತ್​ ಹಾಗೂ ವೈಭವ್​ ಪತ್ತೆಗೆ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದರು. ಶೋಧ ಕಾರ್ಯದ ಸಂದರ್ಭದಲ್ಲಿ ಇಬ್ಬರ ಮೃತ ದೇಹ ಪತ್ತೆಯಾಗಿದೆ. ಈ ಸಂಬಂಧ ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಕ್ಕಳು ಕಾಲೇಜಿನಲ್ಲಿ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಿ ಎಂದು ಪೋಷಕರು ವಿದ್ಯಾರ್ಥಿಗಳನ್ನು ಶಾಲೆಗೆ ಕಳಿಸುತ್ತಾರೆ. ಆದರೆ ಮಕ್ಕಳು ಈ ರೀತಿಯ ಹುಚ್ಚಾಟಗಳಿಂದಾಗಿ ಜೀವವನ್ನೇ ಕಳೆದುಕೊಂಡಿದ್ದು ಪೋಷಕರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ .

ಇದನ್ನು ಓದಿ : Prahlad Joshi :‘ಭಾರತ್​ ಜೋಡೋ ಯಾತ್ರೆಯಿಂದ ಲಾಭವಿದೆ ಎಂಬ ಭ್ರಮರೆ ಕಾಂಗ್ರೆಸ್​ನದ್ದು’ : ಪ್ರಹ್ಲಾದ್​ ಜೋಶಿ ವ್ಯಂಗ್ಯ

ಇದನ್ನೂ ಓದಿ : lover commits suicide :ಪ್ರೀತಿಸಿ ಮದುವೆಯಾಗಲು ನಿರಾಕರಿಸಿದ ಪ್ರಿಯಕರ : ಮನನೊಂದ ಪ್ರಿಯತಮೆ ವಿಷಸೇವಿಸಿ ಆತ್ಮಹತ್ಯೆ

Accident while taking selfie: Two students drowned in water after slipping

Comments are closed.