Jaggesh visited Mantralaya : ಬಸ್​​ಚಾರ್ಜ್​ಗೂ ಗತಿಯಿರಲಿಲ್ಲ, ಈಗ ರಾಜ್ಯಸಭಾ ಸದಸ್ಯನಾಗಿದ್ದೇನೆ: ಎಲ್ಲಾ ರಾಯರ ಕೃಪೆಯೆಂದ ಜಗ್ಗೇಶ್​​

ರಾಯಚೂರು : Jaggesh visited Mantralaya : ಚಂದನವನದ ಹಿರಿಯ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್​​ ರಾಯರ ಭಕ್ತರು ಅನ್ನೋದ್ರಲ್ಲಿ ಎರಡು ಮಾತಿಲ್ಲ. ರಾಘವೇಂದ್ರ ಸ್ವಾಮಿಯನ್ನು ಸದಾ ಆರಾಧಿಸುವ ನಟ ಜಗ್ಗೇಶ್​ ರಾಯರ 351ನೇ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಇಂದು ಮಂತ್ರಾಲಯಕ್ಕೆ ತೆರಳಿ ರಾಯರ ದರ್ಶನವನ್ನು ಪಡೆದಿದ್ದಾರೆ.


ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಶ್ರೀ ಮಠವನ್ನು ಅದ್ಧೂರಿಯಾಗಿ ಸಜ್ಜಗೊಳಿಸಲಾಗಿದೆ. ವೈಭವದಿಂದ ಸಜ್ಜಾಗಿರುವ ಶ್ರೀ ಮಠದ ದರ್ಶನವನ್ನು ಪಡೆದು ಬಳಿಕ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಜಗ್ಗೇಶ್​, ಶ್ರೀಗಳ ನೇತೃತ್ವದಲ್ಲಿ ಮಠದ ಘನತೆ ಹೆಚ್ಚುತ್ತಿದೆ .ನಾವೇನು ಮಾಡುವುದಿಲ್ಲ ಎಲ್ಲವನ್ನೂ ರಾಯರೇ ಮಾಡಿಸುತ್ತಾರೆ. ರಾಯರ ಮೇಲೆ ಭಾರ ಹಾಕಿ ನಾನು ಈ ವಿಷಯವನ್ನು ಮುಂದೆ ತೆಗೆದುಕೊಂಡು ಹೋಗುತ್ತೇನೆ. ಅಧಿಕಾರ ಬಂದಾಗ ಯಾರು ತಮ್ಮ ಕೈ ಗಲೀಜು ಮಾಡಿಕೊಳ್ತಾರೋ ಅವರನ್ನ ರಾಯರು ಕ್ಷಮಿಸುವುದಿಲ್ಲ. ಅಂತವರು ಮುಂದೊಂದು ದಿನ ಬೆತ್ತಲಾಗಿ ನಿಲ್ಲಬೇಕಾಗುತ್ತದೆ ಎಂದು ಹೇಳಿದರು.


ರಾಯರ ಕೃಪೆಯನ್ನು ಪಡೆಯಬೇಕು ಅಂದರೆ ಸದ್ಭಾವನೆಯಿಂದ ಕೆಲಸ ಮಾಡಬೇಕು. ಒಂದು ಕಾಲದಲ್ಲಿ ನನ್ನ ಬಳಿ 39 ರೂಪಾಯಿ ಬಸ್​​ ಚಾರ್ಜ್​ಗೂ ದುಡ್ಡಿರಲಿಲ್ಲ. ಈಗ ದೊಡ್ಡ ನಟನಾಗಿ ಬಳಿಕ ರಾಜ್ಯಸಭಾ ಸದಸ್ಯನಾಗಿದ್ದೇನೆ ಇದಕ್ಕೆಲ್ಲ ರಾಯರ ಆಶೀರ್ವಾದವೇ ಕಾರಣ ಎಂದು ಹೇಳಿದರು.


ಕೇಂದ್ರದ ಯೋಜನೆಗಳ ವಿಚಾರವಾಗಿ ಮಾತನಾಡಿದ ಜಗ್ಗೇಶ್​, ಎಷ್ಟೋ ಯೋಜನೆಗಳ ಬಗ್ಗೆ ಜನರು ಸರಿಯಾಗಿ ತಿಳಿದುಕೊಳ್ಳುವುದಿಲ್ಲ. ಹೀಗಾಗಿ ಎಷ್ಟೋ ಫಂಡ್​ಗಳು ವಾಪಸ್​ ಹೋಗುತ್ತದೆ. ಹೀಗಾಗಿ ಯೋಜನೆಗಳ ಬಗ್ಗೆ ಸರಿಯಾಗಿ ಓದಿ ತಿಳಿದುಕೊಳ್ಳಬೇಕು. ನಮಗೆ ಪ್ರಹ್ಲಾದ್​ ಜೋಶಿ ಹಾಗೂ ಸಂತೋಷ್​ ಜಿ ಮಾರ್ಗದರ್ಶನವನ್ನು ಮಾಡುತ್ತಾರೆ. ಇಡೀ ವಿಶ್ವದಲ್ಲಿ ಯುದ್ಧ ನಿಲ್ಲಬೇಕು ಅಂದರೆ ಮೋದಿಯಂತಹ ಸಾಮರ್ಥ್ಯವನ್ನು ಹೊಂದಿರುವವರೇ ಬೇಕು. ಅಮೇರಿಕ, ರಷ್ಯಾ, ಚೀನಾದಂತಹ ಬಲಿಷ್ಠ ರಾಷ್ಟ್ರಗಳನ್ನು ಸಾತ್ವಿಕರನ್ನಾಗಿ ಮಾಡುವ ಶಕ್ತಿ ಮೋದಿಗೆ ಮಾತ್ರ ಇದೆ ಎಂದು ಹೇಳಿದರು.

ಇದನ್ನು ಓದಿ : Laal Singh Chaddha : ಲಾಲ್​ ಸಿಂಗ್​ ಛಡ್ಡಾ : ತನ್ನ ಸಿನಿ ಕರಿಯರ್​ನಲ್ಲಿ ಹಿಂದೆಂದೂ ಕಾಣದ ಸೋಲನ್ನುಂಡ ಆಮೀರ್ ಖಾನ್​

ಇದನ್ನೂ ಓದಿ : KS Eshwarappa : ತ್ರಿವರ್ಣ ಧ್ವಜದಲ್ಲಿ ಕೆಂಪು ಬಣ್ಣವಿದೆ ಎಂಬ ಕಾಂಗ್ರೆಸ್ಸಿಗರಿಂದ ನಾವು ರಾಷ್ಟ್ರಭಕ್ತಿ ಕಲಿಯಬೇಕೆ : ಈಶ್ವರಪ್ಪ ವ್ಯಂಗ್ಯ

Actor and Rajya Sabha member Jaggesh visited Mantralaya

Comments are closed.