KS Eshwarappa : ತ್ರಿವರ್ಣ ಧ್ವಜದಲ್ಲಿ ಕೆಂಪು ಬಣ್ಣವಿದೆ ಎಂಬ ಕಾಂಗ್ರೆಸ್ಸಿಗರಿಂದ ನಾವು ರಾಷ್ಟ್ರಭಕ್ತಿ ಕಲಿಯಬೇಕೆ : ಈಶ್ವರಪ್ಪ ವ್ಯಂಗ್ಯ

ಶಿವಮೊಗ್ಗ : KS Eshwarappa : ರಾಜ್ಯದ ಜನತೆಗೆ ನಿರೀಕ್ಷೆಗೂ ಮೀರಿ ಹರ್​ ಘರ್​ ತಿರಂಗಾ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಹಿಂದೂಸ್ತಾನಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆಯುತ್ತಿರುವ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆ. ದೇಶದ ಪ್ರಧಾನಿಯು ಮೂರು ದಿನಗಳ ಕಾಲ ರಾಷ್ಟ್ರ ಧ್ವಜವನ್ನು ಆಚರಿಸುವಂತೆ ಕರೆ ನೀಡಿದ್ದಾರೆ. ಪ್ರತಿ ಮನೆಯಲ್ಲಿಯೂ ತ್ರಿವರ್ಣ ಧ್ವಜವನ್ನು ಹಾರಿಸಿ ಎಂಬ ಪ್ರಧಾನಿಗಳ ಕರೆಯನ್ನು ದೇಶದ ಜನತೆ ಸಂತೋಷದಿಂದ ಸ್ವಾಗತಿಸಿದ್ದಾರೆ. ರಾಜ್ಯದಲ್ಲಿ ನಿರೀಕ್ಷೆಗೂ ಮೀರಿದ ಜನರು ಇದಕ್ಕೆ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.

ಕೆಲವು ಕಡೆಗಳಲ್ಲಿ ರಾಷ್ಟ್ರ ಧ್ವಜದಲ್ಲಿ ದೋಷಗಳು ಕಂಡು ಬಂದಿರುವ ಬಗ್ಗೆಯೂ ಇದೇ ವೇಳೆ ಮಾತನಾಡಿದ ಅವರು ವಿತರಣೆ ಮಾಡಲಾದ ರಾಷ್ಟ್ರ ಧ್ವಜಗಳಲ್ಲಿ ಸಮಸ್ಯೆ ಇರುವುದು ಕಂಡು ಬಂದಿದೆ. ಎಲ್ಲೆಲ್ಲಿ ವ್ಯತ್ಯಾಸ ಉಂಟಾಗಿದೆ ಎಂಬುದನ್ನು ಬದಲಾಯಿಸುವ ಕೆಲಸ ಮಾಡಲಾಗ್ತಿದೆ. ಜನರಿಗೆ ರಾಷ್ಟ್ರ ಧ್ವಜದ ಬಗ್ಗೆ ಕಲ್ಪನೆಯಿದೆ. ಜನರೇ ರಾಷ್ಟ್ರಧ್ವಜವನ್ನು ಸರಿಪಡಿಸಿಕೊಳ್ತಿದ್ದಾರೆ. ಆದರೂ ಹೆಚ್ಚಿನ ಸಮಸ್ಯೆಯಾದಲ್ಲಿ ನಮ್ಮ ಕಾರ್ಯಕರ್ತರು ರಾಷ್ಟ್ರಧ್ವಜವನ್ನು ಬದಲಾಯಿಸಿಕೊಡ್ತಿದ್ದಾರೆ ಎಂದು ಹೇಳಿದರು.

ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ವ್ಯಕ್ತಿಗೆ ಧ್ವಜದ ಬಣ್ಣವೇ ಗೊತ್ತಿಲ್ಲ. ಕೆಂಪು, ಬಿಳಿ ಹಾಗೂ ಹಸಿರು ಎಂದು ಹೇಳುವ ಪರಿಸ್ಥಿತಿ ಸಿದ್ದರಾಮಯ್ಯರದ್ದು. ಆದರೆ ಸಾಮಾನ್ಯ ಜನತೆ ರಾಷ್ಟ್ರಧ್ವಜದ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ. ಕೇಸರಿ ಬದಲು ಕೆಂಪು ಬಣ್ಣ ಪದ ಬಳಕೆ ಮಾಡಿದ ಸಿದ್ದರಾಮಯ್ಯ ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಪಕ್ಷದ ಕಚೇರಿ ಮೇಲೆ ಬಾವುಟ ಹಾರಿಸಲ್ಲ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಯಾವಾನೋ ಹೇಳ್ತಾನೆ ಅಂತಾ ನಾವ್ಯಾಕ್ರಿ ಹೇಳಬೇಕು. ನಮ್ಮ ರಾಷ್ಟ್ರ ಧ್ವಜ, ರಾಷ್ಟ್ರ ಭಕ್ತಿ ಬಗ್ಗೆ ಕೆಂಪು ಬಣ್ಣ ತ್ರಿವರ್ಣ ಧ್ವಜದಲ್ಲಿದೆ ಎಂದು ಹೇಳುವ ವ್ಯಕ್ತಿಗಳಿಗೆ ನಾವು ಉತ್ತರ ಕೊಡಬೇಕಾ..? ಕಾಂಗ್ರೆಸ್​ ನಮಗೆ ರಾಷ್ಟ್ರಭಕ್ತಿ ಹೇಳಿಕೊಡಬೇಕಾದ ಅವಶ್ಯಕತೆಯಿಲ್ಲ. ಮಾಜಿ ಸಿಎಂ ಸೇರಿದಂತೆ ಅವರ ಪಕ್ಷದವರು ಮೊದಲು ತ್ರಿವರ್ಣ ಧ್ವಜದ ಬಗ್ಗೆ ತಿಳಿದುಕೊಳ್ಳಲಿ. ಕಾಂಗ್ರೆಸ್​ ತ್ರಿವರ್ಣ ಧ್ವಜದಲ್ಲೂ ರಾಜಕೀಯ ಮಾಡುತ್ತೆ ಎಂದು ಕಿಡಿಕಾರಿದರು.

ಇದನ್ನು ಓದಿ : Union Minister Prahlad Joshi : ‘ಯುವತಿಯರು ಕೆಲಸಕ್ಕಾಗಿ ಮಂಚ ಹತ್ತಬೇಕು’ : ಪ್ರಿಯಾಂಕ್​ ಖರ್ಗೆ ಹೇಳಿಕೆಗೆ ಪ್ರಹ್ಲಾದ್​ ಜೋಶಿ ಆಕ್ಷೇಪ

ಇದನ್ನೂ ಓದಿ : Laal Singh Chaddha : ಲಾಲ್​ ಸಿಂಗ್​ ಛಡ್ಡಾ : ತನ್ನ ಸಿನಿ ಕರಿಯರ್​ನಲ್ಲಿ ಹಿಂದೆಂದೂ ಕಾಣದ ಸೋಲನ್ನುಂಡ ಆಮೀರ್ ಖಾನ್​

Former minister KS Eshwarappa anger against Congress

Comments are closed.