Auto that fell into the canal :ಕಾಲುವೆಗೆ ಪಲ್ಟಿಯಾಗಿ ಬಿದ್ದ ಆಟೋ: ಮೂವರ ಶವ ಪತ್ತೆ, ಮೂವರು ಮಿಸ್ಸಿಂಗ್, ನಾಲ್ವರ ರಕ್ಷಣೆ

ಬಳ್ಳಾರಿ :Auto that fell into the canal: ಇಂದು ಬೆಳ್ಳಂಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ.ಪ್ಯಾಸೆಂಜರ್​ ಆಟೋವೊಂದು ಕಾಲುವೆಗೆ ಬಿದ್ದ ಪರಿಣಾಮ ಜೀವಹಾನಿ ಸಂಭವಿಸಿದ ಘಟನೆಯು ಬಳ್ಳಾರಿ ಜಿಲ್ಲೆಯ ತುಂಗಭದ್ರ ಕಾಲುವೆಯಲ್ಲಿ ಸಂಭವಿಸಿದೆ. ಅಟೋದಲ್ಲಿ ಚಾಲಕ ಸೇರಿ ಒಟ್ಟು ಹತ್ತು ಜನ‌ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಘಟನೆಯಲ್ಲಿ ನಾಲ್ವರ ರಕ್ಷಣೆ ನಡೆದಿದ್ದರೆ ಆರು ಜನ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಸದ್ಯ ಆರು ಜನರಲ್ಲಿ ಮೂವರ ಮೃತದೇಹ ಪತ್ತೆಯಾದರೆ ಇನ್ನುಳಿದ ಮೂವರ ಸುಳಿವು ಲಭ್ಯ ಆಗಿಲ್ಲ.

ಕಾಲುವೆ ಪಕ್ಕದಲ್ಲಿಯೇ ಆಟೋ ಸಂಚರಿಸುವಾಗ ದೊಡ್ಡದಾದ ಕಲ್ಲೊಂದು ರಸ್ತೆಗೆ ಅಡ್ಡವಾಗಿ ಸಿಕ್ಕಿದೆ. ಹೀಗಾಗಿ ಆಟೋ ಚಾಲಕ ಕಲ್ಲನ್ನು ತಪ್ಪಿಸೋದಕ್ಕೆ ಹೋಗಿದ್ದಾನೆ‌. ಆದ್ರೆ ಅದು ಸಾಧ್ಯವಾಗದೆ ಕಲ್ಲಿನ ಮೇಲೆಯೆ ಆಟೋ ಹೋಗಿ ಪಲ್ಟಿಯಾಗಿ ಕಾಲುವೆಗೆ ಬಿದ್ದಿದೆ‌. ಕಾಲುವೆಯಲ್ಲಿ ನೀರು ತುಂಬಿ ಹರಿಯುತ್ತಿದ್ದ ಕಾರಣ ಆಟೋದಲ್ಲಿದ್ದವರು ಕೊಚ್ಚಿಕೊಂಡು ಹೋಗಿದ್ದಾರೆ.

ಘಟನೆ ನಡೆದ ಸಂದರ್ಭ ಅದೇ ಸ್ಥಳದ ಪಕ್ಕದ ಹೊಲದಲ್ಲಿ ಯುವಕನೊಬ್ಬ ಕೆಲಸ ಮಾಡುತ್ತಿದ್ದ‌. ಅಪಘಾತ ಆದ ವಿಚಾರ ತಿಳಿದು ತಕ್ಷಣ ಆಟೋದಲ್ಲಿದ್ದವರ ರಕ್ಷಣೆಗೆ ಆಗಮಿಸಿದ್ದಾನೆ. ತಕ್ಷಣ ಮೂವರನ್ನು ರಕ್ಷಿಸಿ ನೀರಿನಿಂದ ಮೇಲಕ್ಕೆ ಎತ್ತಿದ್ದಾನೆ. ಉಳಿದಂತೆ ಮೂರು ಮೃತದೇಹಗಳನ್ನು ಮೇಲಕೆತ್ತಿದ್ದಾನೆ.ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಸದ್ಯ ನಾಪತ್ತೆಯಾಗಿರುವ ಮೂವರಿಗಾಗಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಈ ದುರ್ಘಟನೆಗೆ ಆಟೋ ಚಾಲಕನ ನಿರ್ಲಕ್ಷ್ಯ ಕಾರಣ ಎಂದು ಹೇಳಲಾಗುತ್ತಿದೆ. ಘಟನೆಯಲ್ಲಿ ನಿಂಗಮ್ಮ, ದುರ್ಗಮ್ಮ, ಪುಷ್ಪಾವತಿ ಮೃತಪಟ್ಟಿದು ಮೃತದೇಹ ಪತ್ತೆಯಾಗಿದೆ. ಇನ್ನು ನಾಲ್ವರಾದ ಹೇಮಾವತಿ, ಶಿಲ್ಪ, ಮಹೇಶ್ ಮತ್ತು ಭೀಮಾ ಬಚಾವಾಗಿದ್ದಾರೆ. ಇನ್ನುಳಿದ ಮೂವರು ಲಕ್ಷ್ಮೀ, ನಾಗರತ್ನ, ಹುಲಿಗೆಮ್ಮ ನಾಪತ್ತೆಯಾಗಿದ್ದು ಶೋಧ ಕಾರ್ಯ ಮುಂದುವರಿಸಲಾಗಿದೆ.

ಕಾಲುವೆಗೆ ಆಟೋ ಬಿದ್ದ ಸಂದರ್ಭದಲ್ಲಿ ಆಟೋ ಸಹ ಕೊಚ್ಚಿಕೊಂಡು ಹೋಗಿದೆ. ಹೀಗಾಗಿ ಹಗ್ಗವನ್ನು ಕಟ್ಟಿ ಆಟೋ ಎಳೆಯುವ ಪ್ರಯತ್ನ ನಡೆಸಲಾಗಿತ್ತು.‌ ಆದ್ರೆ ಹಗ್ಗ ತುಂಡಾದ ಪರಿಣಾಮ ಆಟೋ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಒಟ್ಟಿನಲ್ಲಿ ಬೆಳಗ್ಗೆ ಎದ್ದು ದಿನ ಆರಂಭಿಸಿದ್ದ ಮಂದಿ ಇನ್ನು ಯಾವತ್ತು ಬಾರದ ಲೋಕಕ್ಕೆ ಪ್ರಯಾಣಿಸಿದ್ದು ದುರಂತವೇ ಸರಿ.

ಇದನ್ನು ಓದಿ : Virat Kohli twitter Followers : ಮೋದಿ ಬಿಟ್ಟರೆ ಟ್ವಿಟರ್ ಫಾಲೋವರ್ಸ್ ಸಂಖ್ಯೆಯಲ್ಲಿ ವಿರಾಟ್ ಕೊಹ್ಲಿ ಇಡೀ ಏಷ್ಯಾಗೇ ನಂ.1

ಇದನ್ನೂ ಓದಿ : India Women Vs England Women: ಇಂಗ್ಲೆಂಡ್ ವನಿತೆಯರ ವಿರುದ್ಧ ಸ್ಮೃತಿ ಮಂಧನ ಅಬ್ಬರದ ಬ್ಯಾಟಿಂಗ್, ಭಾರತಕ್ಕೆ ಭರ್ಜರಿ ಜಯ

Auto that fell into the canal: Three bodies found, three missing, four rescued

Comments are closed.