Minister Shankar Patil Munenakoppa :ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸಹೋದರ ನಿಧನ: ಹುಬ್ಬಳ್ಳಿಯ ಕಿಮ್ಸ್ ಗೆ ದೇಹದಾನ

ಹುಬ್ಬಳ್ಳಿ : Minister Shankar Patil Munenakoppa :ಕೈಮಗ್ಗ ಮತ್ತು ಜವಳಿ ಹಾಗೂ ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸಹೋದರ ಡಾ.ಮಲ್ಲನಗೌಡ ಪಾಟೀಲ್ ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು‌ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನ‌ ಹೊಂದಿದ್ದಾರೆ.

ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಹಿರಿಯ ಸಹೋದರನಾಗಿದ್ದ ಡಾ ಮಲ್ಲನಗೌಡ ಡಾಕ್ಟರ್ ಅಣ್ಷಾರ ಎಂದೇ ಚಿರಪರಿಚಿತರಾಗಿದ್ದರು. ಹೀಗಾಗಿ ಅವರ ಆಸೆಯಂತೆ ಅವರ ದೇಹವನ್ನು ಹುಬ್ಬಳ್ಳಿಯ ಕಿಮ್ಸ್ ಗೆ ದಾನವಾಗಿ ನೀಡಲು ನಿರ್ಧರಿಸಲಾಗಿದೆ‌. ಪಾರ್ಥಿವ ಶರೀರದ ಸಾರ್ವಜನಿಕ ಅಂತಿಮ ದರ್ಶನಕ್ಕೆ ರಾತ್ರಿ ಎಂಟು ಗಂಟೆವರೆಗೆ ಹುಬ್ಬಳ್ಳಿಯ ವಿಜಯ ನಗರದ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿದೆ. ಆ ಬಳಿಕ ನಿವಾಸದಿಂದ ಲೋಕಪ್ಪನ ಹಕ್ಕಲದ ಮೂಲಕ ಕಿಮ್ಸ್ ಗೆ ಪಾರ್ಥಿವ ಶರೀರದ ರವಾನೆ ಮಾಡಲಾಗುತ್ತದೆ.

ಬಡವರ ಪರವಾಗಿ ಕಾಳಜಿ ಹೊಂದಿದ್ದ ಮಲ್ಲನಗೌಡ ಪಾಟೀಲ ತಮ್ಮ ವೃತ್ತಿಗೆ ರಾಜೀನಾಮೆ ಜನಪರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇದೀಗ ತಮ್ಮ ಸಾವಿನ ಬಳಿಕವೂ ವೈದ್ಯರಾಗಿದ್ದ ಮಲ್ಲನಗೌಡರು ವೈದ್ಯಕೀಯ ಕ್ಷೇತ್ರಕ್ಕೆ ಉಪಯೋಗವಾಗಲಿದ್ದಾರೆ. ಮಲ್ಲನಗೌಡರ ಎರಡು ಕಣ್ಣುಗಳನ್ನು ಡಾ.ಜಿತೂರಿ ಆಸ್ಪತ್ರೆಗೆ ನೀಡುವ ನಿರ್ಧಾರ ಮಾಡಲಾಗಿದೆ.

ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕುಟುಂಬದಲ್ಲಿ ಒಂದಾದ ಮೇಲೊಂದು ಸಾವು ಘಟಿಸುತ್ತಲೆ ಇದೆ. ಕಳೆದ ಎರಡು ವರ್ಷಗಳ ಅಂತರದಲ್ಲಿ ನಾಲ್ಕು ಸಾವು ಸಂಭವಿಸಿದ್ದು ಇಡೀ ಕುಟುಂಬವೇ ದುಃಖಿತ ವಾಗಿದೆ. ಪ್ರಾರಂಭದಲ್ಲಿ ಸಚಿವರ ತಾಯಿ ಮೃತರಾದರೆ ಆ ಬಳಿಕ ಸಹೋದರ, ಸಹೋದರನ ಮಡದಿ, ಇದೀಗ ಮತ್ತೋರ್ವ ಸಹೋದರ ಅಸುನೀಗಿದ್ದಾರೆ. ಒಟ್ಟಿನಲ್ಲಿ ಸಚಿವರ ಸಹೋದರ ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಇದನ್ನು ಓದಿ : ICC T20 World Cup India matches : ಭಾರತದ ಪಂದ್ಯಗಳು ಯಾವಾಗ, ಎಲ್ಲಿ, ಎದುರಾಳಿಗಳು ಯಾರು..? ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಇದನ್ನೂ ಓದಿ : Virat Kohli twitter Followers : ಮೋದಿ ಬಿಟ್ಟರೆ ಟ್ವಿಟರ್ ಫಾಲೋವರ್ಸ್ ಸಂಖ್ಯೆಯಲ್ಲಿ ವಿರಾಟ್ ಕೊಹ್ಲಿ ಇಡೀ ಏಷ್ಯಾಗೇ ನಂ.1

Minister Shankar Patil Munenakoppa’s brother passes away: Body donated to Kims of Hubballi

Comments are closed.