Bada Poojary died : ಕಂಬಳ ಕ್ಷೇತ್ರದ ಸಾಧಕ ಇರುವೈಲ್‌ ಪಾಣಿಲ ಬಾಡ ಪೂಜಾರಿ ವಿಧಿವಶ

ಮಂಗಳೂರು : (Bada Poojary died ) ಕಂಬಳ ಕ್ಷೇತ್ರ ಯಜಮಾನರೆಂದೇ ಪ್ರಸಿದ್ಧರಾದ ಸಾಧಕ ಇರುವೈಲ್‌ ಪಾಣಿಲ ಬಾಡ ಪೂಜಾರಿ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಬಾಡ ಪೂಜಾರಿ(Bada Poojary died ) ಅವರು ಮೂಡುಬಿದಿರೆಯ ಇರುವೈಲು ಗ್ರಾಮದವರಾಗಿದ್ದು, ಇವರಿಗೆ 82 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ವಿಧಿವಶರಾಗಿದ್ದಾರೆ. ರೈತ ಕುಟುಂಬದವರಾಗಿದ್ದು, ಪ್ರಗತಿಪರ ಕೃಷಿಕರಾಗಿದ್ದರು.

ಸರಿ ಸುಮಾರು 23 ವರ್ಷಗಳಿಂದ ಕಂಬಳ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದು, ಕಂಬಳ ಕ್ಷೇತ್ರದ ಯಜಮಾನರೆಂದೆ ಪ್ರಸಿದ್ಧರಾಗಿದ್ದರು. ಇವರ ಕಂಬಳದ ಕೋಣಗಳು ನೇಗಿಲು ಕಿರಿಯ ಮತ್ತು ಹಿರಿಯ ವಿಭಾಗದಲ್ಲಿ ದಾಖಲೆಯನ್ನು ಸೃಷ್ಠಿ ಮಾಡಿದ್ದಲ್ಲದೆ ದಾಖಲೆಯ ಬಹುಮಾನವನ್ನು ಪಡೆದಿವೆ.

ಇದನ್ನೂ ಓದಿ : Mouvin Godinho : ಕುಡಿದವರನ್ನು ಮನೆಗೆ ತಲುಪಿಸುವುದು ಬಾರ್‌ ಮಾಲೀಕರ ಜವಾಬ್ಧಾರಿ : ಸಚಿವರ ಆದೇಶ

ಇವರ ತಾಟಿ ಮತ್ತು ಬೊಟ್ಟಿಮಾರ್‌ ಕಂಬಳ ಕ್ಷೇತ್ರದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಕೋಣಗಳು ಉಸೇನ್ ಬೋಲ್ಟ್‌ ಖ್ಯಾತಿಯ ಕಂಬಳ ಓಟಗಾರ ಶ್ರೀನಿವಾಸ ಗೌಡ ಮತ್ತು ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಆನಂದ ಅವರು ಇವರ ಗಡಿಯಲ್ಲೆ ಬೆಳೆದು ಪ್ರಸಿದ್ಧಿಯನ್ನು ಪಡೆದಿದ್ದರು. ಕಂಬಳ ಕೂಟದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುತ್ತಿದ್ದ ಮೇರು ವ್ಯಕ್ತಿತ್ವ ಇವರದ್ದು. ಸರಳ , ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿದ ಬಾಡ ಪೂಜಾರಿ ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುತ್ತಿದ್ದರು . ಕಂಬಳ ಕ್ಷೇತ್ರದ ಅಪೂರ್ವ ಯಜಮಾನರಾದ ಬಾಡ ಪೂಜಾರಿ ಅವರು ಮಂಗಳವಾರ ನಿಧನರಾಗಿದ್ದಾರೆ. ಬಾಡ ಪೂಜಾರಿ ಅವರ ನಿಧನದಿಂದಾಗಿ ಕಂಬಳ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.

ಇದನ್ನೂ ಓದಿ : Himanta Biswa:ಘೇಂಡಾಮೃಗಕ್ಕೆ ಟ್ರಕ್‌ ಢಿಕ್ಕಿ : ವಿಡಿಯೋ ವೈರಲ್‌

ಇದನ್ನೂ ಓದಿ : Bhanvar lal Died : ಕಾಂಗ್ರೆಸ್ ಹಿರಿಯ ನಾಯಕ ಭನ್ವರ್‌ ಲಾಲ್‌ ಶರ್ಮಾ ವಿಧಿವಶ

(Bada Poojary died) Sadhaka Iruvail Panila Bada Poojary, who was known as the Master of Kambala Kshetra, has passed away due to age-related disease. Bada Poojary (Bada Poojary died) was a resident of Iruvailu village in Moodubidir, he was 82 years old. Died due to age related disease. He belonged to a farming family and was a progressive agriculturist

Comments are closed.