unknown letter case : ಶಿವಮೊಗ್ಗ ಅನಾಮಧೇಯ ಪತ್ರ ಕೇಸ್​ಗೆ ಬಿಗ್​ ಟ್ವಿಸ್ಟ್​ : ಅಕ್ರಮ ಸಂಬಂಧಕ್ಕಾಗಿ ನಡೆದಿತ್ತು ಹುನ್ನಾರ

ಶಿವಮೊಗ್ಗ : unknown letter case : ಶಿವಮೊಗ್ಗದಲ್ಲಿ ಗಣೇಶೋತ್ಸವಕ್ಕೂ ಮುನ್ನ ಗಲಭೆ ನಡೆಸುವ ಬಗ್ಗೆ ಪ್ಲಾನ್​ ರೂಪಿಸಿದ್ದಾರೆಂದು ಮಾಹಿತಿಯನ್ನು ಹೊಂದಿದ್ದ ಅನಾಮಧೇಯ ವ್ಯಕ್ತಿಯ ಪತ್ರವೊಂದು ಪೊಲೀಸರ ಕೈ ಸೇರಿತ್ತು. ಆದರೆ ಶಿವಮೊಗ್ಗ ನಗರದಲ್ಲಿ ಕೋಮು ಗಲಭೆ ಸೃಷ್ಟಿಸುವ ಬಗ್ಗೆ ಆತಂಕ ಸೃಷ್ಟಿಸಿದ್ದ ಈ ಪತ್ರಕ್ಕೆ ಇದೀಗ ಬಿಗ್​ ಟ್ವಿಸ್ಟ್​ ದೊರಕಿದೆ. ಅನೈತಿಕ ಸಂಬಂಧಕ್ಕಾಗಿ ಈ ರೀತಿಯ ಪತ್ರ ಬರೆಯಲಾಗಿದೆ ಎಂಬುದು ಪೊಲೀಸರ ತನಿಖೆ ವೇಳೆ ಬಯಲಾಗಿದೆ.

ಈ ವಿಚಾರವಾಗಿ ಸ್ಪಷ್ಟನೆ ನೀಡಿದ ಶಿವಮೊಗ್ಗ ಎಸ್ಪಿ ಲಕ್ಷ್ಮೀ ಪ್ರಸಾದ್​, ಅಪರಿಚಿತ ಪತ್ರ ಸಿಕ್ಕ ಬಳಿಕ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಯೂಬ್​ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಯೂಬ್​​ನನ್ನು ತನಿಖೆಗೆ ಒಳಪಡಿಸಿದ ವೇಳೆಯಲ್ಲಿ ಈ ಪ್ರಕರಣಕ್ಕೆ ಬಹುದೊಡ್ಡ ಟ್ವಿಸ್ಟ್​ ಸಿಕ್ಕಿದೆ ಎಂದು ಹೇಳಿದ್ದಾರೆ.

ಫೈಸಲ್​ ಎಂಬಾತನ ಪತ್ನಿಯೊಂದಿಗೆ ಅಯೂಬ್​ ಅಕ್ರಮ ಸಂಬಂಧವನ್ನು ಹೊಂದಿದ್ದ. ಕೋಮು ಗಲಭೆ ಸೃಷ್ಟಿಯಾಗುತ್ತೆ .ಇದಕ್ಕೆ ಫೈಸಲ್​​ ಕಾರಣ ಎಂದು ಅನಾಮಧೇಯ ಪತ್ರವನ್ನು ಬಂಧಿತ ಆಯೂಬ್​ ಬರೆದಿದ್ದ. ತನಿಖೆ ವೇಳೆ ಅಯೂಬ್​​ ಮಾಡಿರುವ ಷಡ್ಯಂತ್ರ ಬಯಲಾಗಿದೆ. ಆದರೆ ಈ ಪತ್ರದಿಂದ ಶಿವಮೊಗ್ಗದಲ್ಲಿ ನಿನ್ನೆ ರಾತ್ರಿಯಿಂದ ಆತಂಕ ಸೃಷ್ಟಿಯಾಗಿತ್ತು. ರಾತ್ರಿಯಿಂದ ಪೊಲೀಸರು ಹೈ ಅಲರ್ಟ್ ಆಗಿದ್ದರು.

ಫೈಸಲ್​ ವಿವಾಹವಾಗಿ ನಾಲ್ಕು ವರ್ಷವಾಗಿತ್ತು. ಆದರೆ ಈ ಮದುವೆಗೂ ಮುನ್ನವೇ ಫೈಸಲ್​ ಪತ್ನಿಗೂ ಹಾಗೂ ಅಯೂಬ್​ ನಡುವೆ ಅಕ್ರಮ ಸಂಬಂಧವಿದ್ದಿತ್ತು. ಫೈಸಲ್​​ನನ್ನು ಜೈಲಿಗೆ ಕಳುಹಿಸಿಬಿಟ್ಟರೆ ತನ್ನ ಅಕ್ರಮ ಸಂಬಂಧವನ್ನು ಆರಾಮಾಗಿ ಮುಂದುವರಿಸಬಹುದು ಎಂಬುದು ಅಯೂಬ್​ನ ಪ್ಲಾನ್​ ಆಗಿತ್ತು. ಹೇಗೂ ಜಿಲ್ಲೆಯಲ್ಲಿ ಕೋಮು ಗಲಭೆ ಆತಂಕ ಇರೋದ್ರಿಂದ ಈ ಪರಿಸ್ಥಿತಿಯ ಲಾಭವನ್ನೇ ಪಡೆದುಕೊಂಡ ಅಯೂಬ್​ ಈ ರೀತಿ ಅನಾಮಧೇಯ ಪತ್ರವನ್ನು ಬರೆದಿದ್ದಾನೆ.

ಅನಾಮಧೇಯ ಪತ್ರದ ಜಾಡು ಹಿಡಿದು ಹೊರಟ ಪೊಲೀಸರು ಕೊನೆಗೂ ಈ ಪ್ರಕರಣವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಭೇದಿಸಿದ್ದಾರೆ. ಶಿವಮೊಗ್ಗದಲ್ಲಿ ಇನ್ನೂ ಸಾವರ್ಕರ್​ ಫ್ಲೆಕ್ಸ್​ ಗಲಾಟೆಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಇದ್ದು ಇನ್ನೂ ನಗರದ ಮೂರು ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ.

ಇದನ್ನು ಓದಿ : KS Eshwarappa : ಸಿದ್ದರಾಮಯ್ಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡೋದನ್ನು ನೋಡಬೇಕು : ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ವ್ಯಂಗ್ಯ

ಇದನ್ನೂ ಓದಿ : Basan Gowda Patil Yatnal : ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದವರ ಮೇಲೆ ನನಗೆ ಅಭಿಮಾನವಿದೆ : ಶಾಸಕ ಯತ್ನಾಳ್​

Big twist in ShivaMogga’s unknown letter case

Comments are closed.