harassment by loan app : ಲೋನ್​ ಆ್ಯಪ್​​ಗಳ ಕಿರುಕುಳ ತಾಳಲಾರದೇ ವ್ಯಕ್ತಿ ಆತ್ಮಹತ್ಯೆ

ಹೈದರಾಬಾದ್​ : harassment by loan app : ಲೋನ್​ ಆ್ಯಪ್​ಗಳು ಆ ಕ್ಷಣಕ್ಕೆ ಜನರ ಆರ್ಥಿಕ ಸಂಕಷ್ಟವನ್ನು ಪರಿಹಾರ ಮಾಡಿದಂತೆ ಮಾಡಿದರೂ ಸಹ ಕೊನೆಗೆ ಇವು ಜೀವಕ್ಕೆ ಸಂಚಕಾರವಾಗಿಬಿಡುತ್ತದೆ . ಆರ್​ಬಿಐನಿಂದ ಮಾನ್ಯತೆಯನ್ನು ಪಡೆಯದ ಅನೇಕ ಆ್ಯಪ್​ಗಳು ಅತೀ ಹೆಚ್ಚಿನ ಬಡ್ಡಿದರಕ್ಕೆ ಜನರಿಗೆ ಸಾಲವನ್ನು ನೀಡಿ ಬಳಿಕ ಸಾಲ ಮರುಪಾವತಿ ಮಾಡುವಂತೆ ಇನ್ನಿಲ್ಲದಂತೆ ಪೀಡಿಸುತ್ತದೆ. ಇದೇ ರೀತಿ ಲೋನ್​ ಆ್ಯಪ್​​ನ ಎಕ್ಸಿಕ್ಯೂಟಿವ್​ಗಳ ಕಿರುಕುಳದಿಂದ ಬೇಸತ್ತ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆಯು ಹೈದರಾಬಾದ್​ನ ರಾಮಕೋಟಿಯಲ್ಲಿ ನಡೆದಿದೆ.


ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಸಿ. ರವಿಂದರ್​​ ಯಾದವ್​​ ಎಂದು ಗುರುತಿಸಲಾಗಿದೆ. ಇವರು ಆನ್​​ಲೈನ್​ ಆ್ಯಪ್​​ಗಳ ಮೂಲಕ ಸಾಲವನ್ನು ಪಡೆದಿದ್ದರು. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ರವೀಂದ್ರ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ರವೀಂದ್ರ ನೇಣು ಬಿಗಿದುಕೊಂಡಿದ್ದರು. ಕುಟುಂಬಸ್ಥರು ಮನೆಗೆ ಬಂದು ನೋಡಿದ ವೇಳೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.


ಕೂಡಲೇ ರವೀಂದ್ರನ ಮೃತದೇಹವನ್ನು ಕೆಳಗಿಳಿಸಿ ಹತ್ತಿರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ವೈದ್ಯರು ಆಗಮಿಸುವಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ರವೀಂದ್ರ ಆನ್​ಲೈನ್​ ಆ್ಯಪ್​​ಗಳಲ್ಲಿ ಸಾಲ ಮಾಡಿಕೊಂಡಿದ್ದರು. ಆದರೆ ಇದನ್ನು ಮರುಪಾವತಿಸಲು ಸಾಧ್ಯವಾಗದೇ ಈ ರೀತಿ ಮಾಡಿಕೊಂಡಿದ್ದರು. ಸಾಲ ಮರು ಪಾವತಿಸಿ ಎಂದು ಲೋನ್​ ಆ್ಯಪ್​ ಎಕ್ಸಿಕ್ಯೂಟಿವ್​​ಗಳು ಪದೇ ಪದೇ ಕರೆ ಮಾಡಿ ಬ್ಲ್ಯಾಕ್​ಮೇಲ್​​ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಎದುರಿಸಲು ಸಾಧ್ಯವಾಗದೇ ರವೀಂದ್ರ ಈ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ. ಈ ಸಂಬಂಧ ಮೃತನ ಸಂಬಂಧಿಗಳು ಪೊಲೀಸ್​ ಠಾಣೆಗೆ ದೂರನ್ನು ನೀಡಿದ್ದಾರೆ.


ಲೋನ್​ ಆ್ಯಪ್​​ಗಳು ರವೀಂದ್ರರಿಗೆ ಬೆದರಿಕೆ ಹಾಕಲು ಆರಂಭಿಸಿದ್ದವು. ಹೀಗಾಗಿ ರವೀಂದ್ರ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆಗಳು ದಟ್ಟವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಲೋನ್​ ಆ್ಯಪ್​ಗಳ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಇದನ್ನು ಓದಿ : Minister CC Patil : ಕಾಂಗ್ರೆಸ್ಸಿಗರಿಗೆ ಮೊಟ್ಟೆಯಲ್ಲಿ ರಾಜಕೀಯ ಮಾಡುವ ದುಸ್ಥಿತಿ ಬಂದಿದೆ : ಸಚಿವ ಸಿ.ಸಿ ಪಾಟೀಲ್​ ವ್ಯಂಗ್ಯ

ಇದನ್ನೂ ಓದಿ : Domino’s Job : ಸಂದರ್ಶನದ ವೇಳೆ ಮಹಿಳೆಯ ವಯಸ್ಸು ಕೇಳಿ 3 ಲಕ್ಷ ದಂಡ ಪಾವತಿಸಿದ ಡಾಮಿನಾಸ್​ ಕಂಪನಿ

Hyderabad: Man ends life over alleged harassment by loan app executives

Comments are closed.