ಗದಗ : bus stand : ಬಸ್ ನಿಲ್ದಾಣ ಅಥವಾ ಬಸ್ ತಂಗುದಾಣಗಳು ಸಾರ್ವಜನಿಕರ ಆಸ್ತಿಯಾಗಿರುವುದರಿಂದ ಇದನ್ನು ನೋಡಿಕೊಳ್ಳುವ ಜವಾಬ್ದಾರಿ ಆಯಾ ಕ್ಷೇತ್ರದ ಶಾಸಕರದ್ದಾಗಿರುತ್ತದೆ. ಬಸ್ ತಂಗುದಾಣುಗಳು ಶಿಥಿಲಾವಸ್ಥೆಗೆ ತಲುಪಿದ್ದರೆ ಅಧಿಕಾರಿಗಳು ಅದನ್ನು ಸರಿಪಡಿಸಬೇಕು . ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ಶಾಸಕರಿಗೆ ದೂರು ನೀಡಬೇಕಾಗುತ್ತದೆ. ಆದರೆ ಶಾಸಕರೂ ಎಮ್ಮೆ ಚರ್ಮದವರಾದರೆ..? ಗ್ರಾಮಸ್ಥರು ಏನು ಮಾಡಬೇಕು..?
ಗ್ರಾಮದ ಬಸ್ ತಂಗುದಾಣವನ್ನು ಉದ್ಘಾಟನೆ ಮಾಡಿಕೊಡಿ ಎಂದು ಗ್ರಾಮದ ಅಧಿಕಾರಿಗಳು ಹಾಗೂ ಶಾಸಕರಿಗೆ ಮನವಿ ಮಾಡಿ ಸುಸ್ತಾದ ಜನತೆಗೆ ತಾವೇ ತಂಗುದಾಣವನ್ನು ನಿರ್ಮಿಸಿ ಎಮ್ಮೆಯ ಕೈಯಿಂದ ಅದರ ಉದ್ಘಾಟನೆ ಮಾಡಿಸಿದ ವಿಚಿತ್ರ ಘಟನೆಯೊಂದು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬಾಲೇಹೊಸೂರು ಗ್ರಾಮದಲ್ಲಿ ನಡೆದಿದೆ. ಜನರು ಈ ರೀತಿಯಾಗಿ ಆಕ್ರೋಶವನ್ನು ಹೊರಹಾಕಲು ಇಲ್ಲಿನ ಅಧಿಕಾರಿಗಳು ಹಾಗೂ ಶಾಸಕರ ನಿರ್ಲಕ್ಷ್ಯವೇ ಕಾರಣವಾಗಿದೆ.
ಬರೋಬ್ಬರಿ 10 ವರ್ಷಗಳ ಹಿಂದೆ ಬಾಲೇಹೊಸುರು ಗ್ರಾಮದ ತಂಗುದಾಣ ಬಿದ್ದು ಹೋಗಿತ್ತು . ಹೀಗಾಗಿ ಮಳೆಗಾಲದ ಸಮಯದಲ್ಲಿ ಕೆಸರಿನಲ್ಲಿ ನಿಂತು ಬಸ್ಗೆ ಕಾಯುವುದು ಅಂದರೆ ಇಲ್ಲಿನ ಜನತೆಯ ಪಾಲಿಗೆ ಯಮನರಕವೇ ಆಗಿತ್ತು . ಈ ಸಂಬಂಧ ಅಧಿಕಾರಿಗಳ ಕಿವಿ ಹಿಂಡಿ ಸಾಕಾದ ಗ್ರಾಮಸ್ಥರು ಕೊನೆಗೆ ಶಿರಹಟ್ಟಿ ಕ್ಷೇತ್ರದ ಶಾಸಕ ರಾಮಪ್ಪ ಲಮಾಣೀ ಹಾಗೂ ಸಂಸದ ಶಿವಕುಮಾರ್ ಉದಾಸಿಗೂ ಮನವಿ ಸಲ್ಲಿಸಿದ್ದರು. ಆದರೆ ಈ ಇಬ್ಬರು ಜನಪ್ರತಿನಿಧಿಗಳೂ ಇದನ್ನು ಕಿವಿಗೇ ಹಾಕಿಕೊಂಡಿರಲಿಲ್ಲ.
ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ತಾವೇ ತೆಂಗಿನ ಗರಿಯ ಚಪ್ಪರವನ್ನು ಅಳವಡಿಸಿ ನೂತನ ಬಸ್ ನಿಲ್ದಾಣವನ್ನು ನಿರ್ಮಿಸಿಕೊಂಡಿದ್ದಾರೆ. ಶಾಸಕ ರಾಮಪ್ಪ ಲವಾಣಿ ಹಾಗೂ ಸಂಸದ ಶಿವಕುಮಾರ್ ಉದಾಸಿ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕುವ ನಿಮಿತ್ತ ಗ್ರಾಮದ ಎಮ್ಮೆಯೊಂದನ್ನು ಕರೆ ತಂದು ರಿಬ್ಬನ್ ಕಟ್ ಮಾಡಿ ಬಸ್ ತಂಗುದಾಣದ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ. ಅಲ್ಲದೇ ಬಸ್ ತಂಗುದಾಣ ಉದ್ಘಾಟನೆಯ ಬ್ಯಾನರ್ನಲ್ಲಿ ಶಾಸಕ, ಸಂಸದರ ಶವಯಾತ್ರೆ ಎಂದು ಬರೆಯುವ ಮೂಲಕ ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸಿದ್ದಾರೆ .
ಇದನ್ನು ಓದಿ : same-sex marriage : ಸಲಿಂಗ ವಿವಾಹ ಬೆಂಬಲಿಸುವ ಮಸೂದೆಗೆ ಅಮೆರಿಕದಲ್ಲಿ ಅಂಗೀಕಾರ
ಇದನ್ನೂ ಓದಿ : yash movie : ಬಾಲಿವುಡ್ನಲ್ಲಿ ರಿಮೇಕ್ ಆಗಲಿದೆ ರಾಕಿಂಗ್ ಸ್ಟಾರ್ ಯಶ್ ನಟನೆಯ ಈ ಸಿನಿಮಾ
buffalo inaugurates bus stand instead of mla in gadag