yash movie : ಬಾಲಿವುಡ್​ನಲ್ಲಿ ರಿಮೇಕ್​ ಆಗಲಿದೆ ರಾಕಿಂಗ್​ ಸ್ಟಾರ್​ ಯಶ್​ ನಟನೆಯ ಈ ಸಿನಿಮಾ

yash movie : ಕೆಜಿಎಫ್​ 2 ಸಿನಿಮಾದ ಬಳಿಕ ರಾಕಿಂಗ್​ ಸ್ಟಾರ್ ಯಶ್​ರ ಹೆಸರು ವಿಶ್ವ ಮಟ್ಟದಲ್ಲಿ ರಾರಾಜಿಸಿದೆ. ಗಜಕೇಸರಿ, ಸಂತು ಸ್ಟ್ರೇಟ್​ ಫಾರ್ವಡ್​, ಕಿರಾತಕದಂತಹ ಸಿನಿಮಾಗಳಲ್ಲಿ ಯಶ್​ ನಟಿಸಿದ್ದರು ಎಂಬುದೂ ನೆನಪಿಲ್ಲದ ಮಟ್ಟಿಗೆ ಕೆಜಿಎಫ್​ ಎಂಬ ಒಂದೇ ಸಿನಿಮಾ ಯಶ್​​ರನ್ನು ದೊಡ್ಡ ಬ್ರ್ಯಾಂಡ್​ನಂತೆ ಮಾಡಿದೆ ಎಂದು ಹೇಳಿದರೆ ತಪ್ಪಾಗಲಾರದು. ಸ್ಯಾಂಡಲ್​ವುಡ್​ ಸಿನಿಮಾದ ಇತಿಹಾಸದಲ್ಲಿಯೇ ಯಾವುದೇ ಸಿನಿಮಾಗಳು ಈವರೆಗೆ ಮಾಡಿರದಷ್ಟು ಕಲೆಕ್ಷನ್​ನ್ನು ಕೆಜಿಎಫ್​ 2 ಸಿನಿಮಾವೊಂದೇ ಮಾಡಿದೆ. ಈ ಮೂಲಕ ಚಂದನವನದ ಹೀರೋ ಎನಿಸಿಕೊಂಡಿದ್ದ ಯಶ್ ಇದೀಗ ವಿಶ್ವ ಮಟ್ಟದಲ್ಲಿ ಸೌಂಡ್​ ಮಾಡಿದ್ದಾರೆ. ಈ ಎಲ್ಲದರ ನಡುವೆ ಯಶ್​ ಅಭಿಮಾನಿಗಳಿಗೆ ಮತ್ತೊಂದು ಗುಡ್​ ನ್ಯೂಸ್​ ಕಾದಿದೆ.


ಕೆಜಿಎಫ್​ 2 ಸಿನಿಮಾ ಬಾಲಿವುಡ್​, ಕಾಲಿವುಡ್​, ಟಾಲಿವುಡ್​ ಹೀಗೆ ಎಲ್ಲಾ ಕಡೆಗಳಲ್ಲೂ ಸದ್ದು ಮಾಡಿತ್ತು. ಅದರಲ್ಲೂ ವಿಶೇಷವಾಗಿ ಉತ್ತರ ಭಾರತದಲ್ಲಿ ಈ ಸಿನಿಮಾ ಸಿಕ್ಕಾಪಟ್ಟೆ ಸೌಂಡ್​ ಮಾಡಿತ್ತು. ಇದೀಗ ಮತ್ತೊಂದು ಖುಷಿ ವಿಚಾರ ಏನೆಂದರೆ ನಟ ಯಶ್​ರ ಸಿನಿಮಾವೊಂದು ಇದೀಗ ಬೇರೆ ಭಾಷೆಯಲ್ಲಿ ರಿಮೇಕ್​ ಆಗಲಿದ ಎಂಬ ಸುದ್ದಿ ಸಿಕ್ಕಿದೆ. ಹೌದು..! ಬರೋಬ್ಬರಿ 9 ವರ್ಷಗಳ ಹಿಂದೆ ತೆರೆ ಕಂಡಿದ್ದ ಯಶ್​ ನಟನೆಯ ಸೂಪರ್​ ಹಿಟ್​ ಸಿನಿಮಾ ಗೂಗ್ಲಿ ಇದೀಗ ಬಾಲಿವುಡ್​ಗೆ ರಿಮೇಕ್​ ಆಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.


ಜಯಣ್ಣ ಕಂಬೈನ್ಸ್​ ಬ್ಯಾನರ್​ನಡಿಯಲ್ಲಿ ಮೂಡಿ ಬಂದಿದ್ದ ಪವನ್​ ಒಡೆಯರ್ ನಿರ್ದೇಶನದ ಸಿನಿಮಾ ಗೂಗ್ಲಿ 2013ರಲ್ಲಿ ತೆರೆ ಕಂಡಿತ್ತು. ಈ ಸಿನಿಮಾದಲ್ಲಿ ಯಶ್​ಗೆ ಜೋಡಿಯಾಗಿ ಕೃತ ಕರಬಂಧ ನಟಿಸಿದ್ದರು. ಈ ಸಿನಿಮಾಗೆ ಅನುಪ್​ ಸೀಳಿನ್​ ಸಂಗೀತ ನಿರ್ದೇಶನ ಮಾಡಿದ್ದರು. ಗೂಗ್ಲಿ ಸಿನಿಮಾದ ಟೈಟಲ್​ ಟ್ರ್ಯಾಕ್​ ಅಂತೂ ಯೂತ್ಸ್​ಗೆ ಸಿಕ್ಕಾಪಟ್ಟೆ ಫೇವರಿಟ್​ ಎನಿಸಿತ್ತು.


ಇದೀಗ ಈ ಸಿನಿಮಾ ಹಿಂದಿ, ಗುಜರಾತು, ಪಂಜಾಬಿ ಹಾಗೂ ಮರಾಠಿ ಭಾಷೆಗಳಲ್ಲಿ ರಿಮೇಕ್​ ಆಗಲಿದೆ. ಮಹೇಶ್​ ದಾನಣ್ಣನವರ್ ಎಂಬವರು ಈ ಸಿನಿಮಾದ ರೀಮೇಕ್​ ರೈಟ್ಸ್​ ಪಡೆದುಕೊಂಡಿದ್ದಾರೆ. ಆದರೆ ಈ ಸಿನಿಮಾದಲ್ಲಿ ಯಶ್​ ಪಾತ್ರದಲ್ಲಿ ಯಾರು ಕಾಣಿಸಿಕೊಳ್ತಾರೆ ಎಂಬುದು ಇನ್ನಷ್ಟೇ ರಿವೀಲ್​ ಆಗಬೇಕಿದೆ.

ಇದನ್ನು ಓದಿ : I love Virat .. ಇಂಗ್ಲೆಂಡ್ ಟೆಸ್ಟ್ ಕ್ಯಾಪ್ಟನ್ ಬೆನ್ ಸ್ಟೋಕ್ಸ್ ಯಾಕೆ ಹೀಗಂದ್ರು ?

ಇದನ್ನೂ ಓದಿ : same-sex marriage : ಸಲಿಂಗ ವಿವಾಹ ಬೆಂಬಲಿಸುವ ಮಸೂದೆಗೆ ಅಮೆರಿಕದಲ್ಲಿ ಅಂಗೀಕಾರ

yash movie going to remake in bollywood

Comments are closed.