ಮಕ್ಕಳ ಕೈಗೆ ಚಾಕಲೇಟ್‌ ನೀಡುವ ಮುನ್ನ ಹುಷಾರ್‌ : ಬೈಂದೂರಲ್ಲಿ ಚಾಕಲೇಟ್ ನುಂಗಿ ಉಸಿರುಗಟ್ಟಿ ಶಾಲಾ ಬಾಲಕಿ ಸಾವು

ಬೈಂದೂರು : ಮಕ್ಕಳನ್ನು ಸಮಾಧಾನ ಮಾಡಲು ಪೋಷಕರು ಚಾಕಲೇಟ್‌ ನೀಡುವುದು ಮಾಮೂಲು. ಆದ್ರೆ ಇನ್ಮುಂದೆ ಮಕ್ಕಳ ಕೈಗೆ ಚಾಕಲೇಟ್‌ ನೀಡುವ ಮುನ್ನ ಪೋಷಕರು ಎಚ್ಚರವಾಗಿರಬೇಕು. ಯಾಕೆಂದ್ರೆ ಶಾಲೆಗೆ ತೆರಳುವ ವೇಳೆಯಲ್ಲಿ ಮನೆಯವರು ನೀಡಿದ್ದ ಚಾಕಲೇಟ್‌ ನುಂಗಿ ಶಾಲಾ ಬಾಲಕಿಯೋರ್ವಳು ಉಸಿರುಗಟ್ಟಿ ಸಾವನ್ನಪ್ಪಿರುವ (school girl died after swallowing chocolate) ದುರಂತರ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದಿದೆ.

ಬೈಂದೂರು ತಾಲೂಕಿನ ಬಿಜೂರು ಗ್ರಾಮದ ಕಬ್ಸೆಯ ಶಮಿತ್ – ಸಮನ್ವಿ ನಿಲಯದ ನಿವಾಸಿ ಸುಪ್ರೀತಾ ಪೂಜಾರಿ ಎಂಬುವರ ಮಗಳು ಸಮನ್ವಿ (6 ವರ್ಷ) ದುರಂತ ಸಾವನ್ನಪ್ಪಿದ್ದ ಬಾಲಕಿ. ಸಮನ್ವಿ ಉಪ್ಪುಂದದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಒಂದನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಳು. ಎಂದಿನಂತೆಯೇ ಬೆಳಗ್ಗೆ ಸಮವಸ್ತ್ರ ಧರಿಸಿ ಶಾಲೆಗೆ ಹೊರಡುವ ವೇಳೆಯಲ್ಲಿ ಬಾಲಕಿ ಶಾಲೆಗೆ ತೆರಳುವುದಿಲ್ಲ ಎಂದಿದ್ದಾಳೆ.

ಆದರೆ ಮನೆಯವರು ಬಾಲಕಿಯ ಕೈಗೊಂದು ಚಾಕಲೇಟ್‌ ನೀಡಿ ಪುಸಲಾಯಿಸಿ ಶಾಲೆಗೆ ಕಳುಹಿಸಿದ್ದರು. ಶಾಲಾ ಬಸ್‌ ಬರುತ್ತಿದ್ದಂತೆಯೇ ಕೈಯಲ್ಲಿದ್ದ ಚಾಕಲೇಟ್‌ನ್ನು ಪ್ಲಾಸ್ಟಿಕ್‌ ಸಮೇತ ಬಾಯಲ್ಲಿ ಹಾಕಿಕೊಂಡು ಬಸ್ಸಿನ ಬಳಿಗೆ ಓಡಿದ್ದಾಳೆ. ಈ ವೇಳೆಯಲ್ಲಿ ಬಾಲಕಿಗೆ ಉಸಿರುಗಟ್ಟಿ ಶಾಲಾ ವಾಹನದ ಬಳಿಯಲ್ಲಿಯೇ ಸಾವನ್ನಪ್ಪಿದ್ದಾಳೆ. ಕೂಡಲೇ ಬಸ್ಸಿನ ಚಾಲಕ ಹಾಗೂ ಸ್ಥಳೀಯರು ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದಾರೆ. ಅಲ್ಲದೇ ಬಾಲಕಿಯನ್ನು ಬೈಂದೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ದುರದೃಷ್ಟವಶಾತ್‌ ಬಾರದ ಲೋಕಕ್ಕೆ ಪಯಣಿಸಿದ್ದಾಳೆ ಎನ್ನಲಾಗುತ್ತಿದೆ.

ಮಗುವಿನ ಸಾವಿಗೆ ಹೃದಯಾಘಾತ ಕಾರಣವಿರಬಹುದು ಅಂತ ಹಲವರು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ಚಾಕಲೇಟ್‌ ಕುರಿತ ಮಾತುಗಳು ಕೇಳಿಬರುತ್ತಿದೆ. ಇದೀಗ ಮಗುವಿನ ಸಾವಿನ ನಿಖರವಾದ ಕಾರಣ ತಿಳಿದು ಬಂದಿಲ್ಲ. ಬೈಂದೂರು ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಬಾಲಕಿಯ ಮರಣೋತ್ತರ ಕಾರ್ಯವನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ : bus stand : ಎಮ್ಮೆಯಿಂದ ಬಸ್​ ತಂಗುದಾಣ ಉದ್ಘಾಟನೆ ಮಾಡಿಸಿದ ಗ್ರಾಮಸ್ಥರು :ಗದಗದಲ್ಲೊಂದು ವಿಚಿತ್ರ ಘಟನೆ

ಇದನ್ನೂ ಓದಿ : same-sex marriage : ಸಲಿಂಗ ವಿವಾಹ ಬೆಂಬಲಿಸುವ ಮಸೂದೆಗೆ ಅಮೆರಿಕದಲ್ಲಿ ಅಂಗೀಕಾರ

ಇದನ್ನೂ ಓದಿ : Frogs Marriage:ಗೋರಖ್ ಪುರದಲ್ಲಿ ಕಪ್ಪೆಗಳ ಮದುವೆ; ಮಳೆಗಾಗಿ ಕಪ್ಪೆಗಳ ಮದುವೆ ಆಯೋಜಿಸಿದ ಗ್ರಾಮಸ್ಥರು

school girl died after swallowing chocolate and suffocated in Byndoor

Comments are closed.