ಕರಾವಳಿಯಲ್ಲಿ ಆಧುನಿಕ ಕಂಬಳಕ್ಕೆ ಗ್ರೀನ್ ಸಿಗ್ನಲ್ ! ಯಾವಾಗ ಆರಂಭಗೊಳ್ಳುತ್ತೆ ಗೊತ್ತಾ ಕಂಬಳ ಕ್ರೀಡೆ ?

ಮಂಗಳೂರು : ಕರಾವಳಿಗರ ಜಾನಪದ ಕ್ರೀಡೆಯಾಗಿರುವ ಕಂಬಳ ಜನವರಿ ಅಂತ್ಯಕ್ಕೆ ಆರಂಭಗೊಳ್ಳಲಿದೆ. ತುಳುನಾಡಿನಲ್ಲಿ ಆಧುನಿಕ ಕಂಬಳ ಬಹು ಪ್ರಖ್ಯಾತಿಯನ್ನು ಪಡೆದುಕೊಂಡಿದ್ದು, ಪ್ರಸಕ್ತ ಋತುವಿನಲ್ಲಿ ಒಟ್ಟು 7 ಕಂಬಳಗಳನ್ನು ನಡೆಸಲು ಕಂಬಳ ಸಮಿತಿ ಆಯೋಜಿಸಿದ್ದು, ನಿಮಯಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಂಡಿದೆ.

ಕೊರೊನಾ ಮಾರ್ಗಸೂಚಿಯ ಹಿನ್ನೆಲೆಯಲ್ಲಿ ಕಂಬಳ ಆಯೋಜನೆಗೆ ತಡೆಯಾಗಿತ್ತು. ಆದ್ರೀಗ ಕೊರೊನಾ ವೈರಸ್ ಸೋಂಕಿನ ಪ್ರಮಾಣದ ತಗ್ಗಿದ ಬೆನ್ನಲ್ಲೇ ಕಂಬಳ ಆಯೋಜನೆಗೆ ಕಂಬಳ ಸಮಿತಿ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಕಂಬಳ ಸಮಿತಿಯ ಅಧ್ಯಕ್ಷರಾದ ಪಿ.ಆರ್.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಪ್ರಸಕ್ತ ವರ್ಷದಲ್ಲಿ ಒಟ್ಟು 7 ಕಂಬಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಆದರೆ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ರಾತ್ರಿ ಕಂಬಳಕ್ಕೆ ನಿಷೇಧ ಹೇರಲಾಗಿದ್ದು, ಹಗಲಿನ ವೇಳೆಯಲ್ಲಿ ಮಾತ್ರವೇ ಕಂಬಳ ನಡೆಯಲಿದೆ.

ಕಂಬಳ ಸಮಿತಿಗಳ ವ್ಯವಸ್ಥಾಪಕರು, ಕಂಬಳದ ಯಜಮಾನರು, ಓಟಗಾರರು ಮತ್ತು ತೀರ್ಪುಗಾರರು ಸಭೆಯಲ್ಲಿ ಪಾಲ್ಗೊಂಡಿದ್ದು ಕೋವಿಡ್ ಮಾರ್ಗಸೂಚಿಯಂತೆಯೇ ಕಂಬಳ ಆಯೋಜನೆಗೆ ಸಲಹೆ ನೀಡಿದ್ದಾರೆ. ಕಂಬಳ ಸಮಿತಿ ಈಗಾಗಲೇ ಆಯೋಜನೆಗೆ ದಿನಾಂಕವನ್ನೂ ನಿರ್ಧಿಸಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಮಾತ್ರ ಕಂಬಳ ಆಯೋಜನೆ ಅನುಮತಿ ನೀಡುವ ಕುರಿತು ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ.

ಕಂಬಳ ಸಮಿತಿ ಸಿದ್ದಪಡಿಸಿದ ವೇಳಾಪಟ್ಟಿ :
ಜ. 30 -31 ಹೊಕ್ಕಾಡಿಗೋಳಿ ವೀರ-ವಿಕ್ರಮ
ಫೆ. 6 -7 ಐಕಳಬಾವ ಕಾಂತಬಾರೆ-ಬುಧಬಾರೆ
ಫೆ. 13-14 ವಾಮಂಜೂರು ತಿರುವೈಲು ಸಂಕುಪೂಂಜ-ದೇವುಪೂಂಜ
ಫೆ. 20 -21 ಮೂಡುಬಿದಿರೆ ಕೋಟಿ ಚೆನ್ನಯ
ಫೆ. 27 – 28 ಮಿಯ್ಯಾರು ಲವ-ಕುಶ
ಮಾ. 6 -7 ಬಂಗ್ರಕೂಳೂರು ರಾಮ- ಲಕ್ಷ್ಮಣ
ಮಾ. 20 -21 ವೇಣೂರು ಪೆರ್ಮುಡ ಸೂರ್ಯ-ಚಂದ್ರ

Comments are closed.