Rishi kumara swamiji : ವಿವಾದಾತ್ಮಕ ಹೇಳಿಕೆ ಹಿನ್ನೆಲೆ ಕಾಳಿ ಸ್ವಾಮೀಜಿ ಖಾಕಿ ವಶಕ್ಕೆ

ಮಂಡ್ಯ : ಕೋಮು ಸೌಹಾರ್ದತೆಯನ್ನು ಕೆಡುವುವಂತಹ ವಿಡಿಯೋವನ್ನು ಹರಿಬಿಟ್ಟ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಪೊಲೀಸರು ಕಾಳಿ ಸ್ವಾಮೀಜಿಯನ್ನು(rishi kumara swamiji) ವಶಕ್ಕೆ ಪಡೆದಿದ್ದಾರೆ. ನಿನ್ನೆ ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋವನ್ನು ಹರಿಬಿಟ್ಟಿದ್ದ ರಿಷಿ ಕುಮಾರ್​ ಸ್ವಾಮಿಜಿ ಬಾಬ್ರಿ ಮಸೀದಿಯಂತೆಯೇ ಶ್ರೀರಂಗಪಟ್ಟಣದಲ್ಲಿರುವ ಮಸೀದಿಯನ್ನೂ ಕೆಡವುವಂತೆ ಹಿಂದೂಗಳಿಗೆ ಕರೆ ನೀಡಿದ್ದರು.

ಮಸೀದಿ ಮುಂದೆ ನಿಂತು ವಿಡಿಯೋ ಮಾಡಿದ್ದ ಕಾಳಿ ಸ್ವಾಮೀಜಿ ಶ್ರೀರಂಗಪಟ್ಟಣದಲ್ಲಿ ದೇವಾಲಯವನ್ನು ಕೆಡವಿ ಮಸೀದಿ ನಿರ್ಮಾಣ ಮಾಡಲಾಗಿದೆ. ಹೀಗಾಗಿ ನಾವು ಬಾಬಿ ಮಸೀದಿಯಂತೆಯೇ ಈ ಮಸೀದಿಯನ್ನೂ ಕೆಡವಬೇಕು ಎಂದು ವಿಡಿಯೋದಲ್ಲಿ ಹೇಳಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ನಿನ್ನೆಯಿಂದ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಹಿಂದೂಗಳಿಗೆ ಈ ರೀತಿಯಾಗಿ ಕರೆ ನೀಡಿದ ರಿಷಿ ಕುಮಾರ ಸ್ವಾಮೀಜಿ ಕೋಮು ಸೌರ್ಹಾತೆಯನ್ನು ಕಡೆವುತ್ತಿದ್ದಾರೆಂದು ಇಂದು ಬೆಳಗ್ಗೆ 4:30ರ ಸುಮಾರಿಗೆ ಚಿಕ್ಕಮಗಳೂರು ಮಠದಲ್ಲಿ ರಿಷಿ ಕುಮಾರ ಸ್ವಾಮೀಜಿಯನ್ನು ವಶಕ್ಕೆ ಪಡೆಯಲಾಗಿದೆ.

ಓಮೈಕ್ರಾನ್ ಸಾಮಾನ್ಯ ಶೀತವಲ್ಲ, ಕಾಳಜಿ ವಹಿಸಿ: ಆರೋಗ್ಯ ಸಚಿವ ಸುಧಾಕರ್ ಮನವಿ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಜೊತೆಗೆ ಓಮೈಕ್ರಾನ್ ಪ್ರಕರಣಗಳು ಕೂಡ ಹೆಚ್ಚುತ್ತಲೇ ಇದ್ದು, ದೇಶದ ಮೊದಲ ಓಮೈಕ್ರಾನ್ ಪ್ರಕರಣ ಬೆಂಗಳೂರಿನಲ್ಲೇ ಪತ್ತೆಯಾದ ಬಳಿಕ ಇದುವರೆಗೂ ಒಟ್ಟು ಪ್ರಕರಣಗಳ ಸಂಖ್ಯೆ ಸಾವಿರದ ಗಡಿಯಲ್ಲಿದೆ. ಕೊರೋನಾಗಿಂತ ಹೆಚ್ಚು ಆತಂಕಕಾರಿ ಹಾಗೂ ಹೆಚ್ಚು ವೇಗವಾಗಿ ಹರಡುತ್ತದೆ ಎನ್ನಲಾದ ಓಮೈಕ್ರಾನ್ (Omicron not common cold) ಬಗ್ಗೆ ಹೆಚ್ಚು ಕಾಳಜಿ ವಹಿಸುವ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕೂಡ ಹೇಳಿದೆ. ಈ ಮಧ್ಯೆ ಒಮಿಕ್ರಾನ್ ಬಗ್ಗೆ ಆರೋಗ್ಯ ಸಚಿವ ಡಾ.ಸುಧಾಕರ್ ಆತಂಕ ವ್ಯಕ್ತಪಡಿಸಿದ್ದು, ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಒಮಿಕ್ರಾನ್ ಎಂದರೇ ಸಾಮಾನ್ಯ ಶೀತವಲ್ಲ. ಗಂಟಲು ನೋವು, ಶೀತ ಮತ್ತು ಸುಸ್ತು ಸಾಮಾನ್ಯ ಜ್ವರದ ಲಕ್ಷಣಗಳಂತೆ ಮೇಲ್ನೋಟಕ್ಕೆ ಕಾಣಬಹುದು. ವಿಶ್ವ ಆರೋಗ್ಯ ಸಂಸ್ಥೆಯಿಂದ ಒಮಿಕ್ರಾನ್ ಮತ್ತು ಡೆಲ್ಟಾ ತಳಿಗಳ ಕುರಿತು ಮಾಹಿತಿ ನೀಡಲಾಗಿದೆ. ಒಮಿಕ್ರಾನ್ ದೇಹದ ಭಾಗಗಳಿಗೆ ಹಾನಿ ಉಂಟು ಮಾಡುವ ಆತಂತವಿದೆ. ಅಲ್ಲದೇ ಹಿರಿಯರು, ರೋಗಿಗಳು ಮತ್ತು‌ ಲಸಿಕೆ ಪಡೆಯದವರಿಗೆ ಓಮೈಕ್ರಾನ್ ತೀವ್ರವಾಗಿ ಬಾಧಿಸುವ ಸಾಧ್ಯತೆ ಹೆಚ್ಚು.

ಈ ಸಮಯದಲ್ಲಿ ಒಮಿಕ್ರಾನ್ ವೈರಸ್ ಕುರಿತು ಹೆಚ್ಚಿನ ಜಾಗೃಕತೆ ವಹಿಸುವುದು ಅತ್ಯಗತ್ಯ. ವೈರಸ್ ವಿರುದ್ಧದ ಪರಿಣಾಮಕಾರಿ ಆಯುಧ ಲಸಿಕೆ ಒಂದೇ. ಹೀಗಾಗಿ ಪ್ರತಿಯೊಬ್ಬರೂ ಲಸಿಕೆ ಪಡೆಯುವುದು ಅತ್ಯಗತ್ಯ ಎಂದಿದ್ದಾರೆ. ಮಾತ್ರವಲ್ಲ ಕೇವಲ ಲಸಿಕೆ 100% ಪರಿಣಾಮಕಾರಿ ಅಲ್ಲ, ಕೇವಲ ಲಸಿಕೆಯಿಂದ ವೈರಸ್ ವಿರುದ್ಧದ ಹೋರಾಟ ಸಾಧ್ಯವಿಲ್ಲ. ಹೀಗಾಗಿ ಕೋವಿಡ್ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕು ಎಂದಿರುವ ಡಾ.ಸುಧಾಕರ್ ಕೊರೋನಾ ಹಾಗೂ ಓಮೈಕ್ರಾನ್ ‌ನಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಲು ಕೊರೋನಾ ನಿಯಮ ಪಾಲಿಸಿ ಲಸಿಕೆ ಪಡೆಯಿರಿ ಎಂದು ಸಲಹೆ‌ನೀಡಿದ್ದಾರೆ.

ಸದ್ಯ ರಾಜ್ಯದಲ್ಲಿ ಓಮೈಕ್ರಾನ್ ಪ್ರಕರಣ ಸಂಖ್ಯೆಯೂ ಹೆಚ್ಚಿದ್ದು, ಕೊರೋನಾ ಪ್ರಕರಣಗಳು ಪ್ರತಿನಿತ್ಯ ಏರುತ್ತಿದೆ. ಆದರೆ ಸಾವು ಹಾಗೂ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಕಡಿಮೆಯಾಗಿದೆ‌. ಮೂರನೇ ಅಲೆ ಮಕ್ಕಳನ್ನು ಹೆಚ್ಚು ಬಾಧಿಸುತ್ತಿದ್ದು ರಾಜ್ಯದಾದ್ಯಂತ ವಸತಿ ಹಾಗೂ ಇತರ ಶಾಲೆಗಳ‌ ಮಕ್ಕಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ರಾಜ್ಯದಲ್ಲಿ 15 ರಿಂದ 18ವಯಸ್ಸಿನ ಮಕ್ಕಳಿಗೆ ಲಸಿಕೆ ವಿತರಣೆ ಆರಂಭವಾಗಿದ್ದು, ಮಾರ್ಚ್ ವೇಳೆಗೆ ಗೆ 12 ರಿಂದ 14 ನೇ ವಯಸ್ಸಿನ ಮಕ್ಕಳಿಗೂ ಕೊರೋನಾ ಲಸಿಕೆ ಹಾಕುವ ಸಿದ್ಧತೆ ನಡೆದಿದೆ.

ಇದನ್ನು ಓದಿ : Dolo 650 : ಹುಬ್ಬೇರಿಸುತ್ತೆ ಕಳೆದ 2 ವರ್ಷಗಳಲ್ಲಿ ದೇಶದಲ್ಲಿ ಮಾರಾಟವಾದ ಡೋಲೋ 650 ಮಾತ್ರೆಗಳ ಸಂಖ್ಯೆ

ಇದನ್ನೂ ಓದಿ : Samantha comeback Bollywood : ಮತ್ತೆ ಸದ್ದು ಮಾಡಿದ ಸಮಂತಾ : ಬಾಲಿವುಡ್ ನಿಂದ ಬಂತು ಮೂರು ಸಿನಿಮಾ ಆಫರ್

chikkamagaluru police arrests rishi kumara swamiji over controvrsial video

Comments are closed.