Punjab election: ಆಪ್​​ನ ಪಂಜಾಬ್​ ಸಿಎಂ ಅಭ್ಯರ್ಥಿಯಾಗಿ ಭಗವಂತ್​ ಮಾನ್​ ಆಯ್ಕೆ

Punjab election : ಫೆಬ್ರವರಿಯಲ್ಲಿ ಪಂಜಾಬ್​ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಮ್​ ಆದ್ಮಿ ಪಕ್ಷವು ಪಂಜಾಬ್​​ಗೆ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಭಗವಂತ್​ ಮಾನ್​ ಅವರ ಹೆಸರನ್ನು ಘೋಷಣೆ ಮಾಡಿದೆ. ಪಂಜಾಬ್​ನಲ್ಲಿ ಆಪ್​ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಪಕ್ಷವು ಸಾರ್ವಜನರಿಕೆ ಅವಕಾಶ ನೀಡಿತ್ತು . ಅದರಂತೆ ಸಿಎಂ ಅಭ್ಯರ್ಥಿ ಹೆಸರು ಸೂಚಿಸಲು ಪಕ್ಷವು ದೂರವಾಣಿ ಮಾರ್ಗಗಳನ್ನು ತೆರೆದ ಬಳಿಕ ಈ ನಿರ್ಧಾರವನ್ನು ಪ್ರಕಟಿಸಿದೆ. ಪಂಜಾಬ್​ ಚುನಾವಣೆಗೆ ತನ್ನ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಆಪ್​ ಬರೋಬ್ಬರಿ 22 ಲಕ್ಷ ದೂರವಾಣಿ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ.


ಪಂಜಾಬ್​ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಭಗವಂತ್​ ಮಾನ್​ ಅವರನ್ನು ಸಿಎಂ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲು ಬಯಸುವುದಾಗಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಕಳೆದ ವಾರ ಹೇಳಿಕೆ ನೀಡಿದ್ದರು. ಸಂಗ್ರೂರ್​ ಸಂಸದ ಪಂಜಾಬ್​ ಸಿಎಂ ಅಭ್ಯರ್ಥಿ ಆಯ್ಕೆಯ ನಿರ್ಧಾರವನ್ನು ಜನರ ಮೇಲೆ ಬಿಡಬೇಕು ಎಂದು ಒತ್ತಾಯಿಸಿದ್ದರು.


2017ರ ಪಂಜಾಬ್​ ವಿಧಾನಸಭಾ ಚುನಾವಣೆಯ ವೇಳೆಯಲ್ಲಿ ಆಮ್​ ಆದ್ಮಿ ಪಕ್ಷವು ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡದೇ ಚುನಾವಣೆಯನ್ನು ಎದುರಿಸಿತ್ತು. ಆದರೆ ಪಂಜಾಬ್​ನಲ್ಲಿ ಸರ್ಕಾರ ರಚಿಸುವಲ್ಲಿ ಪಂಜಾಬ್​ ಎಡವಿತ್ತು. 20 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಪ್ರಮುಖ ಪ್ರತಿಪಕ್ಷ ಎನಿಸಿಕೊಂಡಿತು. ಆದರೆ ಕಳೆದ ಬಾರಿ ಮಾಡಿದ ತಪ್ಪು ಈ ಬಾರಿ ಆಗಬಾರದು ಎಂಬ ಕಾರಣಕ್ಕೆ ಆಮ್​ ಆದ್ಮಿ ಪಕ್ಷವು ಪಂಜಾಬ್​ನಲ್ಲಿ ತನ್ನ ಸಿಎಂ ಅಭ್ಯರ್ಥಿಯನ್ನು ಈ ಬಾರಿ ಮೊದಲೇ ಆಯ್ಕೆ ಮಾಡುತ್ತೇವೆ ಎಂದು ಆರಂಭಿಕ ದಿನಗಳಿಂದಲೂ ಜನರಿಗೆ ಹೇಳುತ್ತಲೇ ಬಂದಿತ್ತು.

2017 ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ, ಆಮ್ ಆದ್ಮಿ ಪಕ್ಷವು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೆ ಚುನಾವಣೆಗೆ ಹೋದರು ಆದರೆ ಸರ್ಕಾರ ರಚಿಸಲು ವಿಫಲವಾಯಿತು. ಇದು 20 ಸ್ಥಾನಗಳನ್ನು ಗೆದ್ದು ರಾಜ್ಯದಲ್ಲಿ ಪ್ರಮುಖ ಪ್ರತಿಪಕ್ಷವಾಯಿತು. ಈ ಬಾರಿ, ಎಎಪಿ ರಾಷ್ಟ್ರೀಯ ಸಂಚಾಲಕರು ಚುನಾವಣೆಗೆ ಮುಂಚಿತವಾಗಿ ಪಕ್ಷವು ತನ್ನ ಸಿಎಂ ಮುಖವನ್ನು ಘೋಷಿಸುತ್ತದೆ ಎಂದು ಆರಂಭಿಕ ದಿನಗಳಿಂದಲೂ ಮತದಾರರಿಗೆ ಭರವಸೆ ನೀಡಿದರು.

Punjab election: AAP announces Bhagwant Mann as its chief ministerial candidate

ಇದನ್ನು ಓದಿ : Dolo 650 : ಹುಬ್ಬೇರಿಸುತ್ತೆ ಕಳೆದ 2 ವರ್ಷಗಳಲ್ಲಿ ದೇಶದಲ್ಲಿ ಮಾರಾಟವಾದ ಡೋಲೋ 650 ಮಾತ್ರೆಗಳ ಸಂಖ್ಯೆ

ಇದನ್ನೂ ಓದಿ : Samantha comeback Bollywood : ಮತ್ತೆ ಸದ್ದು ಮಾಡಿದ ಸಮಂತಾ : ಬಾಲಿವುಡ್ ನಿಂದ ಬಂತು ಮೂರು ಸಿನಿಮಾ ಆಫರ್

Comments are closed.