Congress workers’ outrage :24 ಗಂಟೆಯೊಳಗೆ ಚಿರತೆ ಸೆರೆ ಹಿಡಿಯಿರಿ: ಇಲ್ಲ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿ- ಬೆಳಗಾವಿಯಲ್ಲಿ ಕೈ ಕಾರ್ಯಕರ್ತೆಯರ ಆಕ್ರೋಶ

ಬೆಳಗಾವಿ : Congress workers’ outrage : ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಅವಿತಿರುವ ಚಿರತೆಯನ್ನು ಹಿಡಿಯೋದಕ್ಕೆ ಇನ್ನು ಸಾಧ್ಯ ಆಗಿಲ್ಲ. ಈ ಚಾಲಾಕಿ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಇಂದು 24ನೇ ದಿನಕ್ಕೆ ಕಾಲಿಟ್ಟಿದೆ. ಪದೇ ಪದೇ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗುತ್ತಿರುವ ಚಿರತೆ ಸೆರೆ ಹಿಡಿಯಲು ಆನೆಯನ್ನು ಬಳಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಿನ್ನೆ ಮಳೆಯಿಂದಾಗಿ ಕಾರ್ಯಾಚರಣೆಗೆ ಅಡ್ಡಿಯಾಗಿದ್ದು ಇಂದು ಸಹ ಮಳೆ‌ ಕಾರಣಕ್ಕೆ ಕೇವಲ ನೂರು ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಯಿತು.

ಬೆಳಗಾವಿ ಜನರ ನಿದ್ದೆಗೆಡಿಸಿರುವ ಈ ಚಿರತೆಯನ್ನು ಹಿಡಿಯುವುದಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಪರದಾಡುವಂತಾಗಿದೆ. ಚಿರತೆಯ ಹೆಜ್ಜೆ ಗುರುತು ಆಧರಿಸಿ ಶೋಧ ಕಾರ್ಯವನ್ನು ಇಂದು ಮುಂದುವರಿಸಲಾಯಿತು. ಗಾಲ್ಫ್ ಮೈದಾನದ ಒಳಗೆ ಮತ್ತು ಹೊರಗೆ ಸಿಬ್ಬಂದಿ ನಿರಂತರವಾಗಿ ಗಸ್ತು ಹೊಡೆಯುತ್ತಿದ್ದು, ಅರಣ್ಯ ಇಲಾಖೆಯ ಸಿ.ಸಿ.ಎಫ್ ಮಂಜುನಾಥ, ಡಿ.ಎಫ್.ಒ ಅಂಥೋನಿ, ಎ.ಸಿ.ಎಸಫ್ ಮಲ್ಲಿನಾಥ ಕುಸನಾಳ ನೇತ್ರತ್ವದಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದೆ. ಇಂದು ಟ್ರ್ಯಾಪ್ ಕ್ಯಾಮೆರಾ, ಬಲೆ ಹಾಕಿ, ಜೆ.ಸಿ.ಬಿ ಗಳನ್ನು ಬಳಸಿ ಕಾರ್ಯಾಚರಣೆ ಮುಂದುವರಿಸಿದ್ದು ಎರಡು ಆನೆಗಳನ್ನು ಬಳಸಿಕೊಳ್ಳಲಾಯಿತು.

ಇನ್ನು ಇಪ್ಪತ್ತನಾಲ್ಕು ದಿನವಾದರೂ ಚಿರತೆ ಹಿಡಿಯಲು‌ ಸಾಧ್ಯವಾಗದಿರುವುದಕ್ಕೆ ಕೈ ಕಾರ್ಯಕರ್ತೆಯರು ಇಂದು ಆಕ್ರೋಶ ವ್ಯಕ್ತಪಡಿಸಿದ ಘಟನೆಯು ನಡೆಯಿತು. ಕಾಂಗ್ರೆಸ್ ಕಾರ್ಯಕರ್ತೆ ಆಯೀಷಾ ಸನದಿ ನೇತ್ರತ್ವದಲ್ಲಿ ಗಾಲ್ಫ್ ಮೈದಾನದ ಬಳಿ ಕೈಯಲ್ಲಿ ಕೋಲು ಹಿಡಿದುಕೊಂಡು ಕೈ ಕಾರ್ಯಕರ್ತೆಯರು ಬಂದರು. ಇಪ್ಪತ್ತನಾಲ್ಕು ದಿನ ಕಳೆದರು ಒಂದು ಚಿರತೆಯನ್ನು ಹಿಡಿಯುವುದಕ್ಕೆ ಆಗಿಲ್ಲ ಉಮೇಶ್ ಕತ್ತಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲಿ‌ ಎಂದು ಒತ್ತಾಯಿಸಿದರು.

ಸತೀಶ್ ಜಾರಕಿಹೊಳಿಯವರನ್ನು ಸೋಲಿಸುತ್ತೇನೆ ಎಂದು ಸಚಿವ ಉಮೇಶ್ ಕತ್ತಿ ಹೇಳುತ್ತಾರೆ, ಆದ್ರೆ ಒಂದು ಚಿರತೆ ಹಿಡಿಯುವುದಕ್ಕೆ ಸಾಧ್ಯ ಆಗದವರು ಸತೀಶ್ ಜಾರಕಿಹೊಳಿಯವರನ್ನು ಸೋಲಿಸುತ್ತಾರ ಎಂದು ವ್ಯಂಗ್ಯವಾಡಿದರು. ಸಚಿವ ಉಮೇಶ್ ಕತ್ತಿ ಒಂದು ದಿನವಾದರೂ ಈ ಸ್ಥಳಕ್ಕೆ ಭೇಟಿ ನೀಡಿದ್ರಾ ಎಂದು ಪ್ರಶ್ನಿಸಿದ ಕೈ ಕಾರ್ಯಕರ್ತೆಯರು ಸತೀಶ್ ಜಾರಕಿಹೊಳಿ ಸಚಿವರಾಗಿದ್ರೆ ಇಲ್ಲೆ ಇರುತ್ತಿದ್ದರು‌ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನುಳಿದ ಇಪ್ಪತ್ತನಾಲ್ಕು ಗಂಟೆಯಲ್ಲಿ ಚಿರತೆ ಸೆರೆ ಹಿಡಿಯಲು ಸಾಧ್ಯ ಆಗದಿದ್ರೆ ರಾಜೀನಾಮೆ ಕೊಡಿ‌ ಎಂದು ಒತ್ತಾಯಿಸಿದರು.

ಇದನ್ನು ಓದಿ : Noida Supertech Twin Towers : ಕೊನೆಗೂ ನೆಲಸಮಗೊಂಡ ನೋಯ್ಡಾದ ಅವಳಿ ಕಟ್ಟಡಗಳು : ವಿಡಿಯೋ ವೈರಲ್

ಇದನ್ನೂ ಓದಿ : Noida Supertech Twin Towers : ಕೊನೆಗೂ ನೆಲಸಮಗೊಂಡ ನೋಯ್ಡಾದ ಅವಳಿ ಕಟ್ಟಡಗಳು : ವಿಡಿಯೋ ವೈರಲ್

Congress workers’ outrage against minister Umesh Katti in Belgaum

Comments are closed.