My sugar factory in Mandya : ಮಂಡ್ಯ ರೈತರಿಗೆ ಸಿಹಿ ಸುದ್ದಿ : ಶೀಘ್ರದಲ್ಲೇ ಪುನಾರಂಭಗೊಳ್ಳಲಿದೆ ಮೈ ಶುಗರ್​ ಕಾರ್ಖಾನೆ

ಮಂಡ್ಯ : My sugar factory in Mandya : ಗೌರಿ – ಗಣೇಶ ಹಬ್ಬಕ್ಕೂ ಮುಂಚಿತವಾಗಿ ರಾಜ್ಯ ಸರ್ಕಾರವು ಮಂಡ್ಯದ ಜನತೆಗೆ ಸಿಹಿ ಸುದ್ದಿಯನ್ನು ನೀಡಿದೆ. ಸೆಪ್ಟೆಂಬರ್​ 10ರ ಒಳಗಾಗಿ ಮೈ ಶುಗರ್​ ಕಾರ್ಖಾನೆ ಆರಂಭಗೊಳ್ಳಲಿದ್ದು ಗಣೇಶ ಚತುರ್ಥಿ ಹಬ್ಬದಿಂದಲೇ ರೈತರಿಂದ ಕಬ್ಬು ಖರೀದಿ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಸಚಿವ ಶಂಕರ್ ಬಿ.ಪಾಟೀಕ್ ಮುನೇನಕೊಪ್ಪ ಹೇಳಿದ್ದಾರೆ.


ಮಂಡ್ಯದಲ್ಲಿ ಈ ವಿಚಾರವಾಗಿ ಮಾತನಾಡಿದ ಸಚಿವ ಶಂಕರ್​ ಪಾಟೀಲ್​ ಮುನೇನಕೊಪ್ಪ, ಗಣೇಶ ಚತುರ್ಥಿಯಿಂದಲೇ ರೈತರಿಂದ ಕಬ್ಬು ಖರೀದಿ ಮಾಡುವ ಪ್ರಕ್ರಿಯೆ ಆರಂಭಗೊಳ್ಳಲಿದೆ. ಮತ್ತೊಮ್ಮೆ ಮೈ ಶುಗರ್ ಕಾರ್ಖಾನೆ ನಷ್ಟದಲ್ಲಿ ನಡೆಯದಂತೆ ಎಚ್ಚರವಹಿಸುತ್ತೇವೆ. ತಾಂತ್ರಿಕ ಸಮಿತಿ ನೀಡಿರುವ ವರದಿಯನ್ನು ಆಧರಿಸಿ ಮೈ ಶುಗರ್​ ಕಾರ್ಖಾನೆ ಪುನಾರಂಭಗೊಳ್ಳುತ್ತಿದೆ ಎಂದು ಹೇಳಿದರು.


ಅಲ್ಲದೇ ಈ ಬಾರಿ ಯಾವುದೇ ಕಾರಣಕ್ಕೂ ಕಾರ್ಖಾನೆಯಲ್ಲಿ ಹಣ ಪೋಲಾಗದಂತೆ ಗಮನ ಹರಿಸಲಾಗುತ್ತದೆ. ಸೆಪ್ಟಂಬರ್​ 10ರ ಒಳಗಾಗಿ ಸಿಎಂ ಬಸವರಾಜ ಬೊಮ್ಮಾಯಿ ಮೈ ಶುಗರ್​ ಕಾರ್ಖಾನೆ ಪುನಾರಂಭಕ್ಕೆ ಅಧಿಕೃತ ಚಾಲನೆಯನ್ನು ನೀಡಲಿದ್ದಾರೆ. ನಷ್ಟದಿಂದಾಗಿ ಕಳೆದ 4 ವರ್ಷಗಳಿಂದ ಮೈ ಶುಗರ್​ ಕಾರ್ಖಾನೆಗೆ ಬೀಗ ಹಾಕಲಾಗಿತ್ತು. ಆದರೆ ನಾವು ಮಂಡ್ಯದ ಈ ಹೆಮ್ಮೆಯ ಫ್ಯಾಕ್ಟರಿ ಬಂದ್​ ಆಗದಂತೆ ನೋಡಿಕೊಳ್ಳಬೇಕೆಂದು ತೀರ್ಮಾನಿಸಿದ್ದೇವೆ ಎಂದು ಶಂಕರ್ ಪಾಟೀಲ್​ ಮುನೇನಕೊಪ್ಪ ಹೇಳಿದರು.


ಸಿಎಂ ಬೊಮ್ಮಾಯಿ ಕೂಡ ಮಂಡ್ಯಕ್ಕೆ ಆಗಮಿಸುತ್ತೇನೆಂದು ಹೇಳಿದ್ದಾರೆ. ಎಥನಾಲ್ ಉತ್ಪಾದನೆ ಮಾಡುವ ಹೆಜ್ಜೆ ಇಟ್ಟಿದ್ದೇವೆ.ಈ ಬಗ್ಗೆ ಸ್ವತಃ ಸಿಎಂ ಬೊಮ್ಮಾಯಿ ಮಾಹಿತಿ ನೀಡಲಿದ್ದಾರೆ. ಯಾವುದೇ ಕಾರಣಕ್ಕೂ ಹಣಕಾಸು ತೊಂದರೆ ಉಂಟಾಗದಂತೆ ಸರ್ಕಾರ ಗಮನಹರಿಸಲಿದೆ. 311 ಕೋಟಿ ರೂಪಾಯಿ ಕೆಇಬಿಗೆ ಬಿಲ್​ ಪಾವತಿ ಮಾಡುವುದು ಬಾಕಿ ಇದ್ದಿತ್ತು. ಆದ್ದರಿಂದ ಕಾರ್ಖಾನೆಗೆ ಕರೆಂಟ್​ ಕೂಡ ಇರಲಿಲ್ಲ. ಆದರೆ ನಮ್ಮ ಸರ್ಕಾರ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿದೆ ಎಂದು ಹೇಳಿದರು.


ಫ್ಯಾಕ್ಟರಿಯಲ್ಲಿ ಈವರೆಗೆ ಇದ್ದ ಎಲ್ಲಾ ಸಮಸ್ಯೆಗಳನ್ನು ಸರಿದೂಗಿಸಿ ಕಾರ್ಖಾನೆ ಪುನಾರಂಭಿಸುತ್ತಿದ್ದೇವೆ. ಸರ್ಕಾರದ ನಿಯಂತ್ರಣದಲ್ಲಿಯೇ ಫ್ಯಾಕ್ಟರಿ ನಡೆಯಲಿದೆ. ಪಾರದರ್ಶಕವಾಗಿ ಫ್ಯಾಕ್ಟರಿ ವ್ಯವಹಾರಗಳನ್ನು ನೋಡಿಕೊಳ್ತೇವೆ ಎಂದು ಸಚಿವ ಶಂಕರ್​ ಬಿ ಪಾಟೀಲ್​ ಮುನೆನಕೊಪ್ಪ ಹೇಳಿದರು.

ಇದನ್ನು ಓದಿ : Noida Supertech Twin Towers : ಕೊನೆಗೂ ನೆಲಸಮಗೊಂಡ ನೋಯ್ಡಾದ ಅವಳಿ ಕಟ್ಟಡಗಳು : ವಿಡಿಯೋ ವೈರಲ್

ಇದನ್ನೂ ಓದಿ : Congress workers’ outrage :24 ಗಂಟೆಯೊಳಗೆ ಚಿರತೆ ಸೆರೆ ಹಿಡಿಯಿರಿ: ಇಲ್ಲ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿ- ಬೆಳಗಾವಿಯಲ್ಲಿ ಕೈ ಕಾರ್ಯಕರ್ತೆಯರ ಆಕ್ರೋಶ

My sugar factory in Mandya will be reopened soon

Comments are closed.