Dasara 2022:ಮೈಸೂರು ದಸರಾಕ್ಕೆ ಸಕಲ ಸಿದ್ದತೆ : ಸಂಸದ ಪ್ರತಾಪ್‌ ಸಿಂಹ ಪರಿಶೀಲನೆ

ಮೈಸೂರು:( Dasara 2022)ನಾಡಹಬ್ಬ ದಸರಾಕ್ಕೆ ವೇದಿಕೆ ಸಜ್ಜಾಗಿದೆ. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಾಳೆ ದೇವಿಗೆ ಪುಶ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ. ದಸರಾ ಸಂಭ್ರಮಕ್ಕಾಗಿ ಈಗಾಗಲೇ ಸಿದ್ದತೆಗಳು ಜೋರಾಗಿ ನಡೆದಿದೆ. ಉಸ್ತುವಾರಿ ಸಚಿವರಾದ ಎಸ್.ಟಿ ಸೋಮಶೇಖರ್‌ ಅವರ ನೇತೃತ್ವದಲ್ಲಿ ಸಂಸದ ಪ್ರತಾಪ್‌ ಸಿಂಹರವರು ದಸರಾ ಸಿದ್ದತೆಗಳನ್ನು ಪರಿಶೀಲನೆ ನಡೆಸಿದ್ದಾರೆ.

ನಾಳೆ ಬೆಳಗ್ಗೆ 9.45 ರಿಂದ 10:05 ರ ವರೆಗಿನ ವೃಶ್ಚಿಕ ಲಗ್ನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ(Dasara 2022) ದಸರಾಕ್ಕೆ ಚಾಲನೆ ನೀಡಲಿದ್ದಾರೆ. ದೌಪದಿ ಮುರ್ಮು ಅವರನ್ನು ಬರಮಾಡಿಕೊಳ್ಳಲು ಸಕಲ ಸಿದ್ದತೆಗಳು ನಡೆದಿದೆ. ರಾಷ್ಟ್ರಪತಿಯವರನ್ನು ಬರ ಮಾಡಿಕೊಳ್ಳುವುದಕ್ಕೆ ಡಿಸಿ ಮತ್ತು ಕಮೀಷನರ್‌ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ವಿಶೇಷ ವಿಮಾನದಲ್ಲಿ ಬೆಳಗ್ಗೆ 9 ಗಂಟೆಯ ಸುಮಾರಿಗೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ದ್ರೌಪದಿ ಮುರ್ಮು ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬರ ಮಾಡಿಕೊಳ್ಳುತ್ತಾರೆ.

ಇದನ್ನೂ ಓದಿ:Dasara 2022 : ಕರಾವಳಿಯಲ್ಲಿ ನವರಾತ್ರಿಯಂದು ನಡೆಯುತ್ತೆ ತೆನೆಪೂಜೆ : ಈ ಆಚರಣೆಯ ಬಗ್ಗೆ ನಿಮಗೆ ಗೊತ್ತಾ ?

ಇದನ್ನೂ ಓದಿ:Navratri :ನವರಾತ್ರಿಯ ಉಪವಾಸದ ಹಿಂದಿದೆ ವೈಜ್ಞಾನಿಕ ಕಾರಣ

ಇದನ್ನೂ ಓದಿ:Navratri : ದೇಶದ ಯಾವ್ಯಾವ ಭಾಗದಲ್ಲಿ ನವರಾತ್ರಿ ಆಚರಣೆ ಹೇಗಿರುತ್ತೆ : ಇಲ್ಲಿದೆ ಮಾಹಿತಿ

ಇದನ್ನೂ ಓದಿ:Small Tirupati Manjuguni of Karnataka: ಕರ್ನಾಟಕದ ಚಿಕ್ಕ ತಿರುಪತಿ ಮಂಜುಗುಣಿ : ರಥೋತ್ಸವದಂದು ಇಲ್ಲಿಗೆ ಬರುತ್ತಾನೆ ತಿರುಪತಿ ವೆಂಕಟೇಶ್ವರ

ಇದನ್ನೂ ಓದಿ:Sharana samskruthi utsava:ಮುರುಘಾ ಶ್ರೀ ಇಲ್ಲದೆ ಮುರುಘಾ ಮಠದಲ್ಲಿ ನಡೆಯಲಿದೆ ಶರಣ ಸಂಸ್ಕೃತಿ ಉತ್ಸವ

ಇದನ್ನೂ ಓದಿ:Mysore Dasara 2022 : ಮೈಸೂರು ದಸರಾ : ಅರಮನೆ ನಗರಿಯಲ್ಲಿ 124 ಕಿ.ಮೀ ದೀಪಾಲಂಕಾರ

ರಾಷ್ಟ್ರಪತಿಗಳು ಪಾಲ್ಗೊಳ್ಳಲಿರುವ ಕಾರ್ಯಕ್ರಮದಲ್ಲಿ ಕೇವಲ 13 ಜನರಿಗೆ ಮಾತ್ರವೇ ಅವಕಾಶವನ್ನು ಕಲ್ಪಿಸಲಾಗಿದೆ. ಕಾರ್ಯಕ್ರಮದ ಕೊನೆಯಲ್ಲಿ ಪೋಟೋಗಳನ್ನು ತೆಗೆದುಕೊಳ್ಳಲು ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಒಟ್ಟಿನಲ್ಲಿ ಅರಮನೆ ನಗರಿ ಈ ಬಾರಿ ಅದ್ದೂರಿ ದಸರಾ ಸಂಭ್ರಮಕ್ಕೆ ಸಜ್ಜಾಗಿ ನಿಂತಿದೆ.

preparing mysore dasara mp pratap

Comments are closed.