Arthritis : ಸಂಧಿವಾತದ ನೋವಿಗೆ ಪರಿಹಾರ ಸಂದುಬಳ್ಳಿ

(Arthritis)ಪ್ರತಿಯೊಬ್ಬ ಮನುಷ್ಯನ ದೇಹದಲ್ಲೂ ವಾತ, ಕಫ ಹಾಗೂ ಪಿತ್ತ ಸಾಮಾನ್ಯವಾಗಿದೆ. ವಾತ, ಕಫ ಹಾಗೂ ಪಿತ್ತ ಈ ಮೂರು ಸಮತೋಲನದಲ್ಲಿದ್ದರೆ, ದೇಹದ ಆರೋಗ್ಯ ಚೆನ್ನಾಗಿ ಇರುತ್ತದೆ. ವಾತವು ಹೆಚ್ಚಾಗಿ ಶುಷ್ಕ, ತಂಪು, ಬೆಳಕು, ನಿಮಿಷ ಮತ್ತು ಚಲನೆಯ ಲಕ್ಷಣಗಳನ್ನು ಹೊಂದಿದೆ. ಶರೀರದಲ್ಲಿ ಆಗುವ ಎಲ್ಲಾ ಚಲನೆಯು ವಾತದ ಗುಣಲಕ್ಷಣಗಳನ್ನು ಹೊಂದಿರುತ್ತದೆ. ದೇಹದಲ್ಲಿ ವಾತವು ಸಮತೋಲವನ್ನು ಕಳೆದುಕೊಂಡಾಗ ವಾಯು ತುಂಬಿರುವಿಕೆ, ಸಂಧಿವಾತ, ವಾಯುನೋವು ಇತ್ಯಾದಿಗಳು ಕಾಣಿಸಿಕೊಳ್ಳುತ್ತದೆ. ವಾತವನ್ನು ಗಾಳಿ ಎಂದು ತಿಳಿಯಬಾರದು.

(Arthritis)ಇದೇ ವಾತದ ಅಸಮತೋಲದಿಂದ ದೇಹದ ಸಂಧಿಗಳಲ್ಲಿ ಉಂಟಾಗುವ ನೋವುಗಳಿಗೆ ಸಂಧಿವಾತ ಎನ್ನುತ್ತಾರೆ. ಇದು ಹೆಚ್ಚಾಗಿ ದೇಹದ ಕೀಲುಗಳಲ್ಲಿ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತದೆ. ಸಂಧಿವಾತದಿಂದ ಕೀಲುಗಳಲ್ಲಿ ಅತೀವ ನೋವು ಹಾಗೂ ಊತ ಕಾಣಿಸಿಕೊಳ್ಳುತ್ತದೆ. ಇದ್ದರಿಂದ ಆಗಿ ಕ್ರಮೇಣ ಕೀಲುಗಳ ಚಲನೆಯನ್ನು ಕಳೆದುಕೊಳ್ಳುತ್ತದೆ. ಸಂಧಿವಾತವು ಕಾಣಿಸಿಕೊಂಡ ಕೂಡಲೇ ಮನೆ ಔಷಧಿಯನ್ನು ಪ್ರಾರಂಭಿಕ ಹಂತದಲ್ಲಿ ಮಾಡುವುದರಿಂದ ಈ ನೋವಿನಿಂದ ಸಂಪೂರ್ಣವಾಗಿ ಮುಕ್ತಿಪಡೆಯಬಹುದಾಗಿದೆ. ಈ ಔಷಧಿಯನ್ನು ಮನೆಯಲ್ಲಿ ಹೇಗೆ ತಯಾರಿಸಬಹುದೆಂದು ತಿಳಿಯೋಣ.

ಬೇಕಾಗುವ ಸಾಮಾಗ್ರಿ:

  • ಸಂದುಬಳ್ಳಿ
  • ಜೀರಿಗೆ
  • ತೆಂಗಿನಕಾಯಿ ತುರಿ
  • ಬೆಲ್ಲ
  • ಅಕ್ಕಿ

ತಯಾರಿಸುವ ವಿಧಾನ:


ಸ್ವಚ್ಚ ಮಾಡಿ ಇಟ್ಟುಕೊಂಡ ಒಂದು ಕಪ್‌ ಅಕ್ಕಿ, ಸಂದುಬಳ್ಳಿ ಮತ್ತು ಜೀರಿಗೆಯ ಜೊತೆಗೆ ಇದನ್ನು ಬೇಯಿಸಲು ಬೇಕಾಗುವಷ್ಟು ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಓಲೆ ಮೇಲೆ ಇಡಬೇಕು. ಇದು ಸರಿಯಾಗಿ ಬೇಯಿಸಿದ ಮೇಲೆ ಒಂದು ಕಪ್‌ ತೆಂಗಿನಕಾಯಿ ತುರಿ ಹಾಗೂ ಬೇಕಾಗುಷ್ಟು ಬೆಲ್ಲವನ್ನು ಬೆರೆಸಿ ಚೆನ್ನಾಗಿ ಮಿಕ್ಸ್‌ ಮಾಡಬೇಕು. ಸರಿಯಾಗಿ ಮಿಕ್ಸ್‌ ಆಗಿ ನೀರಿನ ಅಂಶ ಒಣಗಿದ ಮೇಲೆ ತಣಿಯಲು ಬಿಡಬೇಕು.

ಬಳಸುವ ವಿಧಾನ:


ಈ ಗಂಜಿಯನ್ನು ಪತ್ಯೆಯ ರೂಪದಲ್ಲಿ ಸೇವಿಸುವುದಾಗಿದೆ. ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟದ ಸಮಯ ದಿನದ ಮೂರು ಹೊತ್ತಿನಲ್ಲಿ ಸೇವಿಸಿದ್ದರೆ ತುಂಬಾ ಪರಿಣಾಮಕಾರಿ. ಒಂದು ವಾರದವರೆಗೆ ಸೇವಿಸಿದ್ದರೆ (ಮೊದಲ ಹಂತದಲ್ಲಿ ಇದ್ದರೆ)ಬೇಗನೆ ಸಂಧಿವಾತದಿಂದ ಗುಣಮುಖರಾಗಬಹುದಾಗಿದೆ.

ಇದನ್ನೂ ಓದಿ : ಕಾಡುತ್ತಿರುವ ಮಂಡಿ ನೋವಿಗೆ ಮನೆಯಲ್ಲೇ ಔಷಧ : ಈ ಜೆಲ್‌ ಒಮ್ಮೆ ಟ್ರೈ ಮಾಡಿ

ಇದನ್ನೂ ಓದಿ : ಗ್ಯಾಸ್ಟ್ರಿಕ್‌ ಸಮಸ್ಯೆಗೆ ಪುದೀನ ಲೆಮೆನ್‌ ಜ್ಯೂಸ್‌ ಟ್ರೈ ಮಾಡಿ

ಇದನ್ನೂ ಓದಿ : ಮಕ್ಕಳಲ್ಲಿ ಕಾಡುವ ಜೆಂತು ಹುಳು, ಕ್ರಿಮಿಹುಳುಗಳಿಗೆ ಮನೆಯಲ್ಲೇ ಇದೆ ಔಷಧ

ಸಂದುಬಳ್ಳಿಯ ಉಪಯೋಗ:


ಸಂದುಬಳ್ಳಿಯಲ್ಲಿ ಔಷಧಿ ಸತ್ವವಿರುವುದ್ದರಿಂದ ಮೂಳೆ ಮುರಿದಾಗ ಇದನ್ನು ಜಜ್ಜಿ ಮುರಿದ ಭಾಗಕ್ಕೆ ಪಟ್ಟಿ ಕಟ್ಟುವುದರಿಂದ ನೋವು ಶಮನವಾಗಿ ಗುಣವಾಗುತ್ತದೆ. ಇದನ್ನು ಜಜ್ಜಿ ರಸ ತೆಗೆದು ಮೂಲವ್ಯಾಧಿ ಮೊಳಕೆಗೆ ಲೇಪಿಸಿ ಹಾಗೆ ಜೇನಿನೊಂದಿಗೆ ಸೇವಿಸುವುದರಿಂದ ಈ ಕಾಯಿಲೆಯಿಂದ ಗುಣಮುಖರಾಗುತ್ತಾರೆ. ಮೂತ್ರಕಟ್ಟಿದ್ದರೆ ಒಣಗಿದ ಸಂದುಬಳ್ಳಿಯ ಕಷಾಯ ಕುಡಿಯುವುದರಿಂದ ಸರಿಯಾಗುತ್ತದೆ.

Remedy for arthritis pain is sanduballi

Comments are closed.