- Advertisement -
ಧರ್ಮಸ್ಥಳ : ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ಮನೆಯಲ್ಲಿ ದೀಪ ಹಚ್ಚಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ದೇಶದ ಪ್ರತೀ ಮನೆಯಲ್ಲಿಯೂ ದೀಪ ಹಚ್ಚುವಂತೆ ಮೋದಿ ಅವರು ಕರೆ ನೀಡಿದ್ದಾರೆ. ಜ್ಯೋತಿ ಬೆಳಗುವುದರಿಂದ ಪ್ರತೀ ಮನೆಯ ಮನಸ್ಸಿಗೆ ಬೆಳಕು ಕೊಡುತ್ತದೆ. ಧರ್ಮಸ್ಥಳದಲ್ಲಿಯೂ ಜ್ಯೋತಿಯನ್ನು ಬೆಳಗುತ್ತೇವೆ.

ದೀಪವನ್ನು ಹಚ್ಚುವುದರಿಂದ ನಾಡಿಗೆ ಶುಭವಾಗುತ್ತದೆ. ಹೀಗಾಗಿ ಮನೆಯ ಮುಂದೆ ದೀಪ ಬೆಳಗಿಸಿ ಪ್ರೀತಿಯಿಂದ ಆನಂದಿಸಿ ಎಂದು ಹೆಗ್ಗಡೆ ಅವರು ಹೇಳಿದ್ದಾರೆ.