ದೀಪ ಹಚ್ಚಲು ಬೀದಿಗೆ ಬಂದ್ರೆ ಬೀಳುತ್ತೆ ಕೇಸ್

0

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾತ್ರಿ 9 ಗಂಟೆಗೆ ಮನೆಯ ಮುಂಭಾಗದಲ್ಲಿ ದೀಪ ಬೆಳಗಿಸುವಂತೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಮನೆಯಲ್ಲಿಯೇ ದೀಪ ಬೆಳಗಿಸಬೇಕು.

ಯಾವುದೇ ಕಾರಣಕ್ಕೂ ಬೀದಿಗೆ ಬಂದು ದೀಪ ಹಚ್ಚುವಂತಿಲ್ಲ, ಮೆರವಣಿಗೆ ನೆಡೆಸುವಂತಿಲ್ಲ. ಅಲ್ಲದೇ ಗುಂಪು ಸೇರುವಂತಿಲ್ಲ. ಯಾರಾದ್ರೂ ಮನೆಯಿಂದ ಹೊರಗೆ ಬಂದು ದೀಪ ಹಚ್ಚಿದ್ರೆ ಕೇಸ್ ದಾಖಲಿಸುವುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ.

ಜನತಾ ಕರ್ಪ್ಯೂ ವೇಳೆಯಲ್ಲಿ ಜನತೆ ಮನೆಯಿಂದ ಹೊರ ಬಂದು ಗಂಟೆ ಬಾರಿಸಿದ್ದಾರೆ. ಆ ವೇಳೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿಲ್ಲ. ನಾಳೆ ಕೂಡ ಪ್ರಧಾನಿ ಮೋದಿ ಒಳ್ಳೆಯ ಉದ್ದೇಶಕ್ಕೆ ದೀಪ ಬೆಳಗುವಂತೆ ಕರೆ ನೀಡಿದ್ದಾರೆ. ಹೀಗಾಗಿ ಮನೆಯಲ್ಲಿಯೇ ಇದ್ದು ದೀಪವನ್ನು ಬೆಳಗಿಸಬೇಕು. ದೀಪ ಬೆಳಗಿಸಲು ರಸ್ತೆಗೆ ಬಂದ್ರೆ ನಿಮ್ಮ ಮೇಲೆ ಮುಲಾಜಿಲ್ಲದೇ ಕೇಸು ದಾಖಲಿಸುತ್ತೇನೆ ಅಂತಾ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ.

Leave A Reply

Your email address will not be published.