ಮ್ಯಾಗಿ, ಮೊಟ್ಟೆಗೆ ಪ್ರಧಾನಿ ಕಚೇರಿಗೆ ಬೇಡಿಕೆಯಿಟ್ಟ ಮಂಗಳೂರು ವಿದ್ಯಾರ್ಥಿನಿ ! ನಂತರ ಆಗಿದ್ದೇನು ?

0

ಮಂಗಳೂರು : ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಜನ ಮನೆಯಿಂದ ಹೊರಗೆ ಬರೋದಕ್ಕೆ ಸಾಧ್ಯವಾಗ್ತಿಲ್ಲ. ಬೇಕಾದ ವಸ್ತುಗಳನ್ನು ಖರೀದಿಸುವಂತಿಲ್ಲ. ಹೀಗಿರುವಾಗಲೇ ಮಂಗಳೂರಿನ ವೈದ್ಯಕೀಯ ವಿದ್ಯಾರ್ಥಿನಿಯೋರ್ವಳು ತನಗೆ ಮ್ಯಾಗಿ ಮತ್ತು ಮೊಟ್ಟೆ ಬೇಕು ಅಂತಾ ಪ್ರಧಾನ ಮಂತ್ರಿಗಳ ಕಚೇರಿಗೆ ಟ್ವೀಟ್ ಮಾಡಿದ್ದಾಳೆ. ಹೀಗೆ ಟ್ವೀಟ್ ಮಾಡಿದ ಅರ್ಧ ಗಂಟೆಯಲ್ಲಿಯೇ ವಿದ್ಯಾರ್ಥಿನಿಗೆ ಶಾಕ್ ಕಾದಿತ್ತು.

ಉತ್ತರ ಭಾರತ ಮೂಲದ ವೈದ್ಯಕೀಯ ವಿದ್ಯಾರ್ಥಿನಿಯಾಗಿರುವ ಸೌಮ್ಯ ಸಿಂಗ್ ಮಂಗಳೂರಿನ ಲೇಡಿಸ್ ಹಾಸ್ಟೆಲ್ ನಲ್ಲಿ ನೆಲೆಸಿದ್ದಾಳೆ. ನಗರದಲ್ಲಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಅಂಗಡಿಗಳೆಲ್ಲಾ ಸಂಪೂರ್ಣವಾಗಿ ಮುಚ್ಚಲಾಗಿತ್ತು. ಆದರೆ ಸೌಮ್ಯಾಗೆ ಮೊಟ್ಟೆ ಹಾಗೂ ಮ್ಯಾಗಿಯ ಅಗತ್ಯವಿತ್ತು.

ಅದಕ್ಕಾಗಿಯೇ ಸೌಮ್ಯ ಪ್ರಧಾನಮಂತ್ರಿ ಕಚೇರಿ (ಪಿಎಂಓ) ಕಚೇರಿಯ ಟ್ವೀಟರ್ ಖಾತೆಗೆ ಟ್ವೀಟ್ ಮಾಡಿದ್ದಾರೆ. ಸೌಮ್ಯ ಮಾಡಿರುವ ಟ್ವೀಟ್ ಗಮನಿಸಿರೋ ಕರ್ನಾಟಕ ನಗರಾಭಿವೃದ್ದಿ ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಕೂಡಲೇ ಸಂಸದ ನಳೀನ್ ಕುಮಾರ್ ಕಟೀಲು ನೇತೃತ್ವದ ವಾರ್ ರೂಮ್ ಗೆ ಸಂದೇಶ ಕಳುಹಿಸಿದ್ದಾರೆ.

ಹೀಗಾಗಿ ಅಧಿಕಾರಿಗಳು ವೈದ್ಯಕೀಯ ವಿದ್ಯಾರ್ಥಿನಿಯ ಬೇಡಿಕೆ ಸ್ಪಂಧಿಸಿದ್ದು, ಆಕೆಗೆ ಒಂದು ಡಜನ್ ಮೊಟ್ಟೆ ಹಾಗೂ 6 ಪ್ಯಾಕ್ ಮ್ಯಾಗಿಯನ್ನು ತಂದುಕೊಟ್ಟಿದ್ದಾರೆ. ಅಧಿಕಾರಿಗಳ ಸ್ಪಂದನೆಗೆ ವಿದ್ಯಾರ್ಥಿ ಸಂತಸ ವ್ಯಕ್ತಪಡಿಸಿದ್ದಾಳೆ.

Leave A Reply

Your email address will not be published.