fake lokayukta officer :ಲೋಕಾಯುಕ್ತ ಅಧಿಕಾರಿ ಸೋಗಿನಲ್ಲಿ ಬಂದು ತಹಶೀಲ್ದಾರ್​ ಕಚೇರಿಯಲ್ಲಿ ತಲಾಶ್​ : ದಾಖಲೆ ಕೇಳುತ್ತಿದ್ದಂತೆಯೇ ಎಸ್ಕೇಪ್​

ಚಿಕ್ಕಬಳ್ಳಾಪುರ : fake lokayukta officer : ಇತ್ತಿಚೇಗಷ್ಟೆ ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದುಗೊಳಿಸಿ ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ ನೀಡಿ ಮರಳಿ ಶಕ್ತಿ ನೀಡಲಾಗಿದೆ. ಈಗಾಗಲೇ ಎಸಿಬಿಯಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಹಸ್ತಾಂತರ ನಡೆಸುವ ಪ್ರಕ್ರಿಯೆ ನಡೆಯುತ್ತಿದೆ. ಈ ನಡುವೆ ಭ್ರಷ್ಟರ ಭೇಟೆಯಾಡುವುದಕ್ಕೆ ಲೋಕಾಯುಕ್ತ ಅಧಿಕಾರಿಗಳು ಸಿದ್ದತೆಗಳನ್ನು ನಡೆಸಲಾಗಿದೆ.‌ ಆದ್ರೆ ಇದೆಲ್ಲದರ ನಡುವೆ ಲೋಕಾಯುಕ್ತ ಅಧಿಕಾರಿ‌ ತಹಶೀಲ್ದಾರ್ ಕಚೇರಿಗೆ ದಾಳಿ ನಡೆಸಿದ್ದಾರೆ. ಟಿಪ್ ಟಾಪ್ ಆಗಿ ಬಂದು ತಹಶೀಲ್ದಾರ್ ನ್ನು ವಿಚಾರಣೆ ನಡೆಸಿದ ಅಧಿಕಾರಿ ಅನುಮಾನಸ್ಪದವಾಗಿ ನಡೆದುಕೊಂಡಿದ್ದಾರೆ. ಹೀಗಾಗಿ ಅಧಿಕಾರಿಯ ಹಿನ್ನೆಲೆಯನ್ನು ಕೆದಕಿದಾಗ ಈತ ನಕಲಿ ಲೋಕಾಯುಕ್ತ ಎಂಬುದು ಗೊತ್ತಾಗಿದೆ.

ಈ‌ ಘಟನೆ ನಡೆದಿರೋದು ಚಿಕ್ಕಬಳ್ಳಾಪುರದಲ್ಲಿ. ಟಿಪ್ ಟಾಪ್ ಆಗಿ ಬಂದು ಲೋಕಾಯುಕ್ತ ಅಧಿಕಾರಗಳ ಸೋಗಿನಲ್ಲಿ ಚಿಕ್ಕಬಳ್ಳಾಪುರ ತಾಲೂಕು ಕಚೇರಿಗೆ ದಾಳಿ ಮಾಡಿದ್ದಾನೆ. ಕಾಲ್‌ಮೇಲೆ ಕಾಲ್ ಹಾಕಿಕೊಂಡು ಧಿಮಾಕಿನ ಶೈಲಿಯಲ್ಲಿ ತಹಶೀಲ್ದಾರರ ವಿಚಾರಣೆಯನ್ನು ಈ ವ್ಯಕ್ತಿ ಮಾಡಿದ್ದಾನೆ. ಆದ್ರೆ ಲೋಕಾಯುಕ್ತ ಸೋಗಿನಲ್ಲಿದ್ದ ವ್ಯಕ್ತಿಯ ಚಲನವಲನದಿಂದ ತಹಶೀಲ್ದಾರರಿಗೆ ಅನುಮಾನ ಬಂದಿದೆ. ಅನುಮಾನಗೊಂಡ ಚಿಕ್ಕಬಳ್ಳಾಪುರ ತಹಶೀಲ್ದಾರ್ ಗಣಪತಿ ಶಾಸ್ತ್ರಿ ವ್ಯಕ್ತಿಯಿಂದ ದಾಖಲೆ ನೀಡುವಂತೆ ಸೂಚನೆ ನೀಡಿದ್ದಾರೆ. ಆದ್ರೆ ದಾಖಲೆ ಕೇಳುತ್ತಿದ್ದಂತೆ ಎದ್ನೋ ಬಿದ್ನೋ ಅಂತ ನಕಲಿ ಲೋಕಾಯುಕ್ತ ಅಧಿಕಾರಿ ಓಟಕಿತ್ತಿದ್ದಾನೆ.

ತಹಶೀಲ್ದಾರ್ ಗಣಪತಿ ಶಾಸ್ತ್ರಿ ಈ ಬಗ್ಗೆ ಚಿಕ್ಕಬಳ್ಳಾಪುರ ನಗರ ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಇನ್ನು ಈ ನಕಲಿ‌‌ ಅಧಿಕಾರಿ ಬೆದರಿಸಿ ಹಣ ವಸೂಲಿಗೆ ಬಂದಿದ್ನಾ ಎಂಬ ಅನುಮಾನವನ್ನು‌ ಸೃಷ್ಟಿಸಿದ್ದಾನೆ. ಕೈಯಲ್ಲಿ ಫೈಲ್ ಹಿಡಿದು ‌ಬೆದರಿಸುವ ತಂತ್ರಗಾರಿಕೆಯನ್ನು ಈ ನಕಲಿ‌ ಅಧಿಕಾರಿ ಮಾಡಿದ್ದ ಎಂದು ಗೊತ್ತಾಗಿದೆ. ಆದ್ರೆ ಸೇನಾಧಿಕಾರಿಯಾಗಿ ನಿವೃತ್ತರಾದ ಬಳಿಕ ತಹಶೀಲ್ದಾರ್ ಹುದ್ದೆ ಅಲಂಕರಿಸಿರುವ ಗಣಪತಿ ಶಾಸ್ತ್ರಿ ದಕ್ಷ, ಪ್ರಾಮಾಣಿಕಯಿಂದ ಹೆಸರು ಗಳಿಸಿದ್ದರು. ಎಲ್ಲರಂತೆ ಈ ಅಧಿಕಾರಿ ಎಂದು ಬೆದರಿಸಲು ಬಂದು ನಕಲಿ ಲೋಕಾಯುಕ್ತ‌ ಅಧಿಕಾರಿ ಪೇಚಿಗೆ ಒಳಗಾಗಿದ್ದಾನೆ‌.

ಇನ್ನು ತಹಶೀಲ್ದಾರ್ ಗಣಪತಿ ಶಾಸ್ತ್ರಿ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸಿದ್ದರು. ಬೆಳ್ತಂಗಡಿ ತಾಲೂಕಿನ ದಿಡುಪೆ, ಬಂಜಾರುಮಲೆ ಭಾಗದಲ್ಲಿ ಕಾಡಿದ ಭಾರೀ ಪ್ರವಾಹದ ಸಂದರ್ಭ ಅವಿರತವಾಗಿ ಜನ ಸೇವೆಯನ್ನು ಮಾಡಿದ್ದರು. ಪಶ್ಚಿಮಘಟ್ಟದ ತಪ್ಪಲಿನಲ್ಲೇ ಇರುವ ಬಂಜಾರು ಮಲೆ ಎಂಬ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮುರಿದು ಬಿದ್ದು ಹೊರಜಗತ್ತಿನೊಂದಿಗೆ ಸಂಪೂರ್ಣ ಸಂಪರ್ಕ ಕಡಿತಗೊಂಡಾಗ ಜನರ ನೆರವಿಗೆ ಬಂದಿದ್ದರು. ಆ ಭಾಗದ ಸಂತ್ರಸ್ಥರಿಗೆ ಆಹಾರ ಸಾಮಾಗ್ರಿಗಳನ್ನು ನೀಡುವ ಸಂದರ್ಭ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಸಾಮಾಗ್ರಿಯನ್ನು ಸ್ವತಃ ತಮ್ಮ ತಲೆಯಲ್ಲಿ ಹೊತ್ತು ಸಾಗಿದ್ದರು. ಯಾವುದೇ ಲಂಚವನ್ನು ಪಡೆಯದೇ ಸರ್ಕಾರಿ ಕೆಲಸ ದೇವರ ಕೆಲಸ ಎಂಬ ಮಾತಿನಂತೆ ನಡೆದುಕೊಂಡಿದ್ದರು. ಒಟ್ಟಿನಲ್ಲಿ ಈ ರೀತಿಯ ವ್ಯಕ್ತಿತ್ವ ಹೊಂದಿದ ತಹಶೀಲ್ದಾರ್ ಅವರನ್ನೆ ಮಂಗ ಮಾಡಲು ಹೋಗಿ ನಕಲಿ ಅಧಿಕಾರಿಯೇ ಮಂಗ ಆಗಿದ್ದಾನೆ.

ಇದನ್ನು ಓದಿ : Savings accounts:ಒಂದಕ್ಕಿಂತ ಹೆಚ್ಚು ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆ ತೆರೆಯಬಹುದೇ ? ಇಲ್ಲಿದೇ ಕಂಪ್ಲೀಟ್‌ ಡಿಟೇಲ್ಸ್‌

ಇದನ್ನೂ ಓದಿ : Rahul Dravid Plan : ಟಿ20 ವಿಶ್ವಕಪ್ ಗೆಲ್ಲಲು ಕೋಚ್ ದ್ರಾವಿಡ್ ಜಬರ್ದಸ್ತ್ ಪ್ಲಾನ್; ದ್ರೋಣಾಚಾರ್ಯನ ಬೊಂಬಾಟ್ ಪ್ಲಾನ್’ಗೆ ಬಿಸಿಸಿಐ ಗ್ರೀನ್ ಸಿಗ್ನಲ್

fake lokayukta officer came to tahasildar office for investigation: Escape as soon as he asked for the document

Comments are closed.