Rohit Sharma World Record: ದಾಖಲೆಯ ಹೊಸ್ತಿಲ್ಲಿ ರೋಹಿತ್ ಶರ್ಮಾ.. ಇನ್ನೊಂದು ಸಿಕ್ಸರ್ ಬಾರಿಸಿದರೆ ಈ ವಿಶ್ವದಾಖಲೆ ನಂದೇ

ನಾಗ್ಪುರ: (Rohit Sharma World Record)ಟೀಮ್ ಇಂಡಿಯಾ ನಾಯಕ, ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ (Rohith Sharma)ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅಮೋಘ ವಿಶ್ವದಾಖಲೆಯೊಂದರ ಹೊಸ್ತಿಲಲ್ಲಿ ನಿಂತಿದ್ದಾರೆ.ಆಸ್ಟ್ರೇಲಿಯಾ ವಿರುದ್ಧ ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಶುಕ್ರವಾರ ನಡೆಯಲಿರುವ 2ನೇ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಆ ವಿಶ್ವದಾಖಲೆ ಬರೆಯುವ ಸಾಧ್ಯತೆಯಿದೆ. ಆಸೀಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ (Rohith Sharma)ಒಂದು ಸಿಕ್ಸರ್ ಬಾರಿಸಿದರೆ ಸಾಕು, ವಿಶ್ವದಾಖಲೆ ವೀರನಾಗಿ ಮಿಂಚಲಿದ್ದಾರೆ. ಹಾಗಾದ್ರೆ ರೋಹಿತ್ ಶರ್ಮಾ ಅವರಿಗಿಗಾಗಿ ಕಾದು ಕೂತಿರುವ ಆ ವಿಶ್ವದಾಖಲೆ ಯಾವುದು? ಅದೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಸಿಕ್ಸರ್’ಗಳ ದಾಖಲೆ.

(Rohit Sharma World Record)ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಸಿಕ್ಸರ್’ಗಳ ವಿಶ್ವದಾಖಲೆ ನಿರ್ಮಿಸಲು ರೋಹಿತ್ ಶರ್ಮಾ (Rohith Sharma)ಅವರಿಗೆ ಬೇಕಿರುವುದು ಇನ್ನು ಒಂದೇ ಒಂದು ಸಿಕ್ಸರ್. ಸದಸ್ಯ 137 ಪಂದ್ಯಗಳಿಂದ 172 ಸಿಕ್ಸರ್’ಗಳನ್ನು ಬಾರಿಸಿರುವ ಹಿಟ್’ಮ್ಯಾನ್, ನ್ಯೂಜಿಲೆಂಡ್’ನ ಆರಂಭಿಕ ಬ್ಯಾಟ್ಸ್’ಮನ್ ಮಾರ್ಟಿನ್ ಗಪ್ಟಿಲ್ ಜೊತೆ ವಿಶ್ವದಾಖಲೆಯನ್ನು ಜಂಟಿಯಾಗಿ ಹಂಚಿಕೊಂಡಿದ್ದಾರೆ. ಕಿವೀಸ್ ದಾಂಡಿಗ ಗಪ್ಟಿಲ್ 121 ಪಂದ್ಯಗಳಿಂದ 172 ಸಿಕ್ಸರ್ಸ್ ಸಿಡಿಸಿದ್ದಾರೆ. ಆಸೀಸ್ ವಿರುದ್ಧ ಆರಂಭಿಕನಾಗಿ ಕಣಕ್ಕಿಳಿಯಲಿರುವ ರೋಹಿತ್ ಶರ್ಮಾ ಒಂದು ಸಿಕ್ಸರ್ ಬಾರಿಸಿದ್ರೆ ಸಾಕು, ವಿಶ್ವದಾಖಲೆ ಹಿಟ್’ಮ್ಯಾನ್ ಪಾಲಾಗಲಿದೆ.

ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಅಂತಾರಾಷ್ಟ್ರೀಯ ಟಿ20ಯಲ್ಲಿ ಅತೀ ಹೆಚ್ಚು ಸಿಕ್ಸರ್ಸ್ ಬಾರಿಸಿದವರ ಸಾಲಿನಲ್ಲಿ 9ನೇ ಸ್ಥಾನದಲ್ಲಿದ್ದಾರೆ. 97 ಟಿ20 ಇನ್ನಿಂಗ್ಸ್’ಗಳಿಂದ ಕೊಹ್ಲಿ 104 ಸಿಕ್ಸರ್ಸ್ ಸಿಡಿಸಿದ್ದಾರೆ. ಭಾರತದ ಮತ್ತೊಬ್ಬ ಆರಂಭಿಕ ಬ್ಯಾಟ್ಸ್’ಮನ್ ಕೆ.ಎಲ್ ರಾಹುಲ್ 58 ಟಿ20 ಇನ್ನಿಂಗ್ಸ್’ಗಳಿಂದ 82 ಸಿಕ್ಸರ್’ಗಳನ್ನು ಬಾರಿಸಿದ್ದಾರೆ.

ಅಂತಾರಾಷ್ಟ್ರೀಯ ಟಿ20: ಅತೀ ಹೆಚ್ಚು ಸಿಕ್ಸರ್ಸ್ (ಟಾಪ್-5):

  • 172: ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್): 121 ಪಂದ್ಯ, 117 ಇನ್ನಿಂಗ್ಸ್
  • 172: ರೋಹಿತ್ ಶರ್ಮಾ (ಭಾರತ): 137 ಪಂದ್ಯ, 129 ಇನ್ನಿಂಗ್ಸ್
  • 124: ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್): 79 ಪಂದ್ಯ, 75 ಇನ್ನಿಂಗ್ಸ್
  • 120: ಐಯಾನ್ ಮಾರ್ಗನ್ (ಇಂಗ್ಲೆಂಡ್): 115 ಪಂದ್ಯ, 107 ಇನ್ನಿಂಗ್ಸ್
  • 118: ಆರೋನ್ ಫಿಂಚ್ (ಆಸ್ಟ್ರೇಲಿಯಾ): 93 ಪಂದ್ಯ, 93 ಇನ್ನಿಂಗ್ಸ್

ಅಂತಾರಾಷ್ಟ್ರೀಯ ಟಿ20: ಭಾರತ ಪರ ಅತೀ ಹೆಚ್ಚು ಸಿಕ್ಸರ್ಸ್ (ಟಾಪ್-5):

  • 172: ರೋಹಿತ್ ಶರ್ಮಾ: 137 ಪಂದ್ಯ, 129 ಇನ್ನಿಂಗ್ಸ್
  • 104: ವಿರಾಟ್ ಕೊಹ್ಲಿ: 105 ಪಂದ್ಯ, 97 ಇನ್ನಿಂಗ್ಸ್
  • 82: ಕೆ.ಎಲ್ ರಾಹುಲ್ : 62 ಪಂದ್ಯ, 58 ಇನ್ನಿಂಗ್ಸ್
  • 74: ಯುವರಾಜ್ ಸಿಂಗ್: 58 ಪಂದ್ಯ, 51 ಇನ್ನಿಂಗ್ಸ್
  • 58: ಸುರೇಶ್ ರೈನಾ: 78 ಪಂದ್ಯ, 66 ಇನ್ನಿಂಗ್ಸ್

ಇದನ್ನೂ ಓದಿ : ಮಹಿಳಾ ಏಷ್ಯಾ ಕಪ್ ಟಿ20 ಟೂರ್ನಿಗೆ ಟೀಮ್ ಇಂಡಿಯಾ ಪ್ರಕಟ… ತಂಡದಲ್ಲಿ ಓರ್ವ ಕನ್ನಡತಿ

ಇದನ್ನೂ ಓದಿ : ಟಿ20 ವಿಶ್ವಕಪ್ ಗೆಲ್ಲಲು ಕೋಚ್ ದ್ರಾವಿಡ್ ಜಬರ್ದಸ್ತ್ ಪ್ಲಾನ್; ದ್ರೋಣಾಚಾರ್ಯನ ಬೊಂಬಾಟ್ ಪ್ಲಾನ್’ಗೆ ಬಿಸಿಸಿಐ ಗ್ರೀನ್ ಸಿಗ್ನಲ್

ಇದನ್ನೂ ಓದಿ : T20 Cricket ನಲ್ಲಿ ಬೌಂಡರಿ, ಸಿಕ್ಸರ್‌ಗಳ ಮೂಲಕವೇ 2328 ರನ್ ; ಹಿಟ್‌ಮ್ಯಾನ್ ರೋಹಿತ್ ಜಗತ್ತಿಗೇ ನಂ.1

Rohit Sharma on the threshold of the record.. If he hits another six, this world record will be mine

Comments are closed.